
ಗ್ಯಾಲ್ವೆಸ್ಟನ್ ಬೆ(ಡಿ.23) ಸುಟ್ಟುಗಾಯಗಳಿಂದ ಗಂಭೀರವಾಗಿದ್ದ 2 ವರ್ಷದ ಮಗುವನ್ನು ತುರ್ತಾಗಿ ಆಸ್ಪತ್ರೆ ದಾಖಲಿಸಲು ಸಾಗಿಸುತ್ತಿದ್ದ ಮೆಕ್ಸಿಕಿನ್ ನೌಕಾ ವಿಮಾನ ಪತನಗೊಂಡಿದೆ. ಗ್ಯಾಲ್ವೆಸ್ಟನ್ ಬೇ ಬಳಿ ವಿಮಾನ ಪತನಗೊಂಡಿದೆ. 2 ವರ್ಷದ ಮಗು ಸೇರಿದಂತೆ ಐವರು ನಾಗರೀಕರು ಹಾಗೂ ನಾಲ್ವರು ನೌಕಾಪಡೆ ಸಿಬ್ಬಂದಿಗಳು ಈ ವಿಮಾನದಲ್ಲಿದ್ದರು. ವಿಮಾನ ಗ್ಯಾಲ್ವೆಸ್ಟನ್‌ನಲ್ಲಿ ಆಸ್ಪತ್ರೆಗೆ ಮಗು ಸೇರಿ ಇತರ ಗಾಯಾಳುಗಳನ್ನು ಹೊತ್ತು ಸಾಗಿತ್ತು. ಈ ವೇಳೆ ಸಮುದ್ರ ಭಾಗದಲ್ಲಿ ಪತನಗೊಂಡಿದೆ. ಈ ಪೈಕಿ ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಐವರು ಮೃತಪಟ್ಟಿರುವುದಾಗಿ ವರದಿ ಮಾಡಿದೆ.
ಮಿಚು ಆ್ಯಂಡ್ ಮಾ ಫೌಂಡೇಶನ್ ಸಂಸ್ಥೆ ತೀವ್ರವಾಗಿ ಸುಟ್ಟ ಗಾಯದಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡುವ, ಆರೈಕೆ ಮಾಡುವ ಕೆಲಸ ಮಾಡುತ್ತದೆ. ಇದು ಎನ್‌ಜಿಒ ಸಂಸ್ಥೆ. ಈ ಸಂಸ್ಥೆ ತೀವ್ರವಾಗಿ ಸುಟ್ಟ ಗಾಯಗಳಿಂದ ಅಸ್ವಸ್ಥಗೊಂಡಿದ್ದ 2 ವರ್ಷದ ಮಗು ಹಾಗೂ ಇತರ ರೋಗಿಗಳನ್ನು ಮೆಕ್ಸಿಕಿನ್ ನೌಕಾಪಡೆ ವಿಮಾನ ಮೂಲಕ ಗ್ಯಾಲ್ವೆಸ್ಟನ್ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಈ ವಿಮಾನದಲ್ಲಿ ಮಿಚು ಆ್ಯಂಡ್ ಮಾ ಫೌಂಡೇಶನ್ ಸಂಸ್ಥೆಯ ಇಬ್ಬರು ಸಿಬ್ಬಂದಿಗಳಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಅಮೆರಿಕ ಕೋಸ್ಟ್ ಗಾರ್ಡ್ ಸ್ಥಳಕ್ಕೆ ಧಾವಿಸಿ ನಾಲ್ವರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ ದುರಂತದಲ್ಲಿ ಐವರು ಮೃತಪಟ್ಟಿದ್ದಾರೆ. ರಕ್ಷಿಸಿದ ನಾಲ್ವರಲ್ಲಿ 2 ವರ್ಷದ ಮಗು ಇದೆಯಾ ಅನ್ನೋ ಕುರಿತು ಯಾವುದೇ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ.
ದಟ್ಟ ಮಂಜು ಕವಿದ ಕಾರಣ ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದೆ.ಈ ಪೈಕಿ ಓರ್ವ ಮಹಿಳೆಯನ್ನು ನೀರಿನಲ್ಲಿ ತೇಲುತ್ತಿದ್ದ ವಿಮಾನದ ಅವಶೇಷಗಳಡಿಯಿಂದ ರಕ್ಷಿಸಲಾಗಿದೆ. ಓರ್ವ ನಾಪತ್ತೆ ಅನ್ನೋ ವರದಿಗಳು ಬಂದಿದೆ. ಹೀಗಾಗಿ ರಕ್ಷಣಾ ತಂಡಗಳು ಸ್ಥಳದಲ್ಲೆ ಭಾರಿ ಕಾರ್ಯಾಚರಣೆ ನಡೆಸುತ್ತಿದೆ.
ಮೆಕ್ಸಿನ್ ನೌಕಾ ಪಡೆ ವಿಮಾನ ಪತನಕ್ಕೆ ಕಾರಣ ತಿಳಿದುಬಂದಿಲ್ಲ. ಘಟನೆ ಕುರಿತು ತನಿಖೆಗೆ ಆದೇಶ ನೀಡಲಾಗಿದೆ. ತುರ್ತಾಗಿ ಸಾಗುತ್ತಿದ್ದ ವಿಮಾನ ಗ್ಯಾಲ್ವೆಸ್ಟನ್ ಬೇ ಬಳಿ ಬರುತ್ತಿದ್ದಂತೆ ವಿಮಾನ ಸಂಪೂರ್ಣ ನಿಯಂತ್ರಣ ಕಳೆದುಕೊಂಡು ಸಮುದ್ರದಲ್ಲಿ ಪತನಗೊಂಡಿದೆ. ಮಿಚು ಆ್ಯಂಡ್ ಮಾ ಫೌಂಡೇಶನ್ ಮನವಿ ಮೇರೆಗೆ ಮೆಕ್ಸಿನ್ ನೌಕಾ ಪಡೆ ಗಾಯಾಳುಗಳನ್ನು ಆಸ್ಪತ್ರೆ ಸಾಗಿಸಲು ನೆರವು ನೀಡಿತ್ತು. ಮೆಕ್ಸಿಕನ್ ದೇಶದಲ್ಲಿ ಮಕ್ಕಳ ಆರೋಗ್ಯ ಹಾಗೂ ಆರೈಕೆ ಮಾಡುವ ಈ ಸಂಸ್ಥೆ ಮೆಕ್ಸಿನ್ ಸೇನಾ ಪಡೆ, ಪೊಲೀಸ್ ಸೇರಿದಂತೆ ಹಲವು ಸಂಸ್ಥೆಗಳ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿದೆ. ಇದೀಗ ಮಗುವಿಗೆ ತುರ್ತು ಚಿಕಿತ್ಸೆಗೆ ಕೊಂಡೊಯ್ಯುತ್ತಿರುವಾಗಲೇ ದುರಂತ ಸಂಭವಿಸಿದೆ.
ವಾತಾವರಣದ ಕಾರಣದಿಂದ ವಿಮಾನ ಪತನಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ದಟ್ಟ ಮಂಜು ಕವಿದ ವಾತಾವರಣ ಮೆಕ್ಸಿಕನ್, ಗ್ಯಾಲ್ವೆಸ್ಟನ್ ಬೇ, ಅಮೆರಿಕ ತೀರ ಪ್ರದೇಶಗಳಲ್ಲಿ ಸಾಮಾನ್ಯವಾಗಿದೆ. ಈ ಬಾರಿ ಅತೀ ಹೆಚ್ಚಿನ ಚಳಿ ಹಾಗೂ ಮಂಜು ಕವಿದ ವಾತಾವರಣವಿದೆ. ಇದೇ ಕಾರಣದಿಂದ ಮೆಕ್ಸಿಕನ್ ನೌಕಾ ಪಡೆ ವಿಮಾನ ಪತನಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ