
ಪ್ರೀತಿಯಿಂದ ಸಾಕಿದ ಶ್ವಾನಗಳ ಸಾವು ಅನೇಕರಿಗೆ ತಡೆದುಕೊಳ್ಳಲಾಗದ ನೋವು ನೀಡುತ್ತದೆ. ಯಾವುದೇ ನಿರೀಕ್ಷೆಗಳಿಲ್ಲದೇ ಮನುಷ್ಯನನ್ನು ಪ್ರೀತಿಸುವ ಜೀವಗಳೆಂದರೆ ಶ್ವಾನಗಳು. ಮನೆಗೆ ಬಂದ ಕೂಡಲೇ ಪುಟ್ಟ ಮಕ್ಕಲಂತೆ ಮೇಲೆ ಹಾರುವ ನಮಗಾಗಿಯೇ ಕಾದು ಕುಳಿತುಕೊಳ್ಳುವ ಶ್ವಾನಗಳ ಪ್ರೀತಿಯನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಹೀಗಿರುವಾಗ ಅವುಗಳ ಹಠಾತ್ ಸಾವನ್ನು ಬಹುತೇಕ ಯಾವ ಮಾಲೀಕನಿಗೂ ಸಹಿಸಲು ಕಷ್ಟವಾಗುತ್ತದೆ. ಇತ್ತೀಚೆಗಂತೂ ಅನೇಕರ ಪಾಲಿಗೆ ಶ್ವಾನಗಳು ಕುಟುಂಬದ ಓರ್ವ ಸದಸ್ಯನಂತೆ ಅನೇಕರು ಶ್ವಾನಗಳ ಜೊತೆಯೇ ಅವುಗಳನ್ನು ತಬ್ಬಿಕೊಂಡೆ ನಿದ್ರೆಗೆ ಜಾರುತ್ತಾರೆ. ಹೀಗಿರುವಾಗ ಅವುಗಳ ಸಾವನ್ನು ಅನೇಕರಿಗೆ ಅರಗಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ಅನೇಕರು ತಮ್ಮ ಪ್ರೀತಿಯ ಶ್ವಾನದ ಸಾವಿನ ನಂತರ ಖಿನ್ನತೆಗೆ ಜಾರುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಯುವತಿಯೊಬ್ಬಳು ತನ್ನ ಪ್ರೀತಿಯ ಶ್ವಾನದ ಸಾವಿನ ನಂತರ ತಾನು ಸಾವಿಗೆ ಶರಣಾಗಿದ್ದಾಳೆ.
ಗಾಯಕಿ ಹಾಗೂ ಹಾಡಿನ ಬರಹಗಾರ್ತಿಯಾಗಿದ್ದ ಲೈನಾ ಗಲಿಯಾರ ಶ್ವಾನದ ಸಾವಿನ ನಂತರ ತಾನು ಸಾವಿಗೆ ಶರಣಾದವರು. ನಾಯಿಯ ಜೊತೆಗೆ ತಾವು ಕೂಡ ಒಂದೇ ಹಾಸಿಗೆ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ತನಗೆ ಭಾವನಾತ್ಮಕವಾಗಿ ಬೆಂಬಲಿಸುತ್ತಿದ್ದ ಪ್ರೀತಿಯ ಶ್ವಾನ ಸಾವಿಗೀಡಾದ ನಂತರ ಇವರು ಬದುಕಿಗೆ ಗುಡ್‌ಬಾಯ್ ಹೇಳಿದ್ದಾರೆ. ತನಗೆ ಶ್ವಾನವಿಲ್ಲದೇ ಬದುಕಲಾಗದು ಎಂದು ಆಕೆ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದಳು ಎಂದು ವರದಿಯಾಗಿದೆ.
ಲೈನಾ ಗಲಿಯಾರ ಗಾಯಕಿಯಾಗಿದ್ದು, ಈಕೆಯ ಕೆಲಸವನ್ನು ಬಿಬಿಸಿ ಡಾಕ್ಯುಮೆಂಟ್ ಮಾಡಿತ್ತು. ಆದರೆ ಆಕೆಗೆ ತನ್ನ ಶ್ವಾನದ ಮೇಲೆ ಇನ್ನಿಲ್ಲದ ಪ್ರೀತಿ ಇತ್ತು. ತನ್ನ ಜಪಾನೀಸ್ ಚಿನ್ ಬ್ರೀಡ್ ಆಗಿರುವ ಶ್ವಾನ ಅಬುವಿನಿಂದ ಆಕೆ ಬೇರ್ಪಡಿಸಲಾಗದಂತಾಗಿದ್ದಳು ಎಂದು ಆಕೆಯ ಕುಟುಂಬದವರು ಹೇಳಿದ್ದಾರೆ. ಶ್ವಾನ ಅಬು ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿತ್ತು. ಅದಕ್ಕೆ ಕೆಮ್ಮಿನ ತೀವ್ರತೆ ಹೆಚ್ಚಾದ ಕಾರಣ ಅದಕ್ಕೆ ಶ್ವಾಸನಾಳದ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಗಲಿಯಾರಾಗೆ ಮಾಹಿತಿ ನೀಡಲಾಗಿತ್ತು.
34 ವರ್ಷದ ಗಲಿಯಾರ ಅವರ ಸಹೋದರಿ ತಾನ್ಯಾ ಅವರಿಗೆ ತನ್ನ ಸಹೋದರಿಯ ಮಾನಸಿಕ ಆರೋಗ್ಯ ಹಾಳಾಗಿರುವ ಬಗ್ಗೆ 2014ರಲ್ಲಿಯೇ ಮೊದಲಿಗೆ ಮಾಹಿತಿ ಸಿಕ್ಕಿತ್ತು. ಇದರಿಂದ ಗಲಿಯಾರ ಈ ಹಿಂದೆ ಎರಡರಿಂದ ಮೂರು ಬಾರಿ ಸಾವಿಗೆ ಶರಣಾಗಲು ಯತ್ನಿಸಿದ್ದರು. ಆದರೆ 2015ರಲ್ಲಿ ಆಕೆ ಜಪಾನೀಸ್ ಶ್ವಾನ ಅಬುವನ್ನು ದತ್ತು ಪಡೆದ ನಂತರ ಆಕೆಯ ಸ್ಥಿತಿ ಸುಧಾರಿಸಿತ್ತು. ಆಕೆ ಬೇಗನೇ ಹುಷಾರಾಗಿದ್ದಳು. ಆದರೆ ನಂತರ ಈ ವರ್ಷದ ಜೂನ್‌ನಲ್ಲಿ ಅಬುವಿನ ಆರೋಗ್ಯ ತೀವ್ರ ಹದಗೆಟ್ಟ ನಂತರ ಆಕೆಯ ಶವ ಶ್ವಾನದ ಶವದ ಜೊತೆಗೆಯೇ ಲಂಡನ್‌ನ ಹಕ್ನಿಯಲ್ಲಿದ್ದ ಅವರ ಮನೆಯಲ್ಲಿ ಶವ ಪತ್ತೆಯಾಗಿದೆ.
ಇದನ್ನೂ ಓದಿ: ಪುಟ್ಟ ಬಾಲೆಯ ಬ್ಯಾಟಿಂಗ್‌ಗೆ ಫಿದಾ ಆದ ಡೆಲ್ಲಿ ಕ್ಯಾಪಿಟಲ್ಸ್: ಧೋನಿಯಿಂದಲೂ ಮೆಚ್ಚುಗೆ: ವೀಡಿಯೋ
2022ರಲ್ಲಿ ಗಲಿಯಾರ ಅವರ ತಂದೆ ತೀರಿಕೊಂಡಿದ್ದರು ಇದಾದ ನಂತರ ಆಕೆಯ ತಾಯಿ ಕೂಡ ಅನಾರೋಗ್ಯಕ್ಕೀಡಾಗಿದ್ದರು. ಇದಾದ ನಂತರ ಆಕೆಯ ಕುಟುಂಬದವರು ಆಕೆಯ ಜೊತೆ ಸಂಪರ್ಕ ಸಾಧಿಸುವುದಕ್ಕೆ ಕಷ್ಟಪಟ್ಟಿದರು. ನಂತರ ನಂತರ ಮಾರ್ಚ್ ಏಪ್ರಿಲ್ ಮೇ ತಿಂಗಳಲ್ಲಿ ಕುಟುಂಬದವರು ಸಮೀಪದ ಹೊಟೇಲ್‌ನಲ್ಲಿ ಜೊತೆಯಾಗಿ ಭೇಟಿಯಾಗುವುದಕ್ಕೆ ನಿರ್ಧರಿಸಿದ್ದರು. ಆದರೆ ಕಳೆದ ಜೂನ್‌ನಲ್ಲಿ ಆಕೆಯ ತಾಯಿ ಹಾಗೂ ಸೋದರಿ ತಾನ್ಯಾ ಅವರು ಆಕೆಯನ್ನು ಭೇಟಿ ಮಾಡುವುದಕ್ಕೆ ನಿರ್ಧರಿಸಿ ಆಕೆ ಇದ್ದ ಮನೆಗೆ ಹೋದಾಗ ಅಲ್ಲಿ ಆಕೆ ಕಾಣಿಸಲಿಲ್ಲ, ಕರೆದಾಗ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ನಂತರ ಅವರು ಪೊಲೀಸರಿಗೆ ವಿಚಾರ ತಿಳಿಸಿದ್ದರು. ಇದಾದ ನಂತರ ಮಾರನೇ ದಿನ ಪೊಲೀಸ್ ಅಧಿಕಾರಿಗಳು ಮನೆಯ ಬಾಗಿಲಿನ ಲಾಕ್ ಒಡೆದಾಗ ತನ್ನ ಶ್ವಾನದ ಜೊತೆಗೆ ತಾನು ಸಾವಿಗೆ ಶರಣಾಗಿರುವುದು ತಿಳಿದು ಬಂದಿದೆ.
ಇದನ್ನೂ ಓದಿ: ಆನ್‌ಲೈನ್ ಗ್ರಾಹಕನ ಸೂಚನೆಯನ್ನು ತಪ್ಪಾಗಿ ಅರ್ಥೈಸಿದ ಜೊಮ್ಯಾಟೋ: ಕೇಕ್ ಮೇಲೆ ಬರೆದಿದ್ದೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ