
ಬರ್ನ್(ಆ.18): ದುಬಾರಿ ಕಾರುಗಳು ಎಂದ ಕೂಡಲೇ ಮರ್ಸಿಡಿಸ್, ಬುಗಾಟ್ಟಿಹಾಗೂ ಪೋರ್ಷೆ ಕಾರುಗಳ ಹೆಸರು ನೆನಪಾಗುತ್ತದೆ. ಈ ಕಾರುಗಳು ಎಷ್ಟು ದುಬಾರಿಯೋ ಅಪಘಾತಕ್ಕೀಡಾದರೂ ಅಷ್ಟೇ ಬೆಲೆ ತೆರಬೇಕು. ಇದಕ್ಕೆ ಪ್ರತ್ಯಕ್ಷ ನಿದರ್ಶನವೊಂದು ಸ್ವಿಜರ್ಲೆಂಡ್‌ನಲ್ಲಿ ನಡೆದಿದೆ.
ಬೆಳಗಾವಿ: ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ, ಮೂಕ ಪ್ರಾಣಿಗಳು ಸಜೀವ ದಹನ
ಈ ಮೂರು ಕಾರುಗಳು ಸರಣಿ ಅಪಘಾತಕ್ಕೀಡಾಗಿದ್ದರಿಂದ ಸುಮಾರು 30 ಕೋಟಿ ರು. ನಷ್ಟಸಂಭವಿಸಿದೆಯಂತೆ. ಸ್ವಿಸ್ ಆಲ್‌್ಫ$್ಸನ ಗಾಟ್ಹಾರ್ಡ್ ಪಾಸ್‌ನಲ್ಲಿ ವಾಹನಗಳು ನಿಧಾನವಾಗಿ ಸಾಗುತ್ತಿದ್ದರಿಂದ ವೇಗವಾಗಿ ಬಂದ ಬುಗಾಟ್ಟಿಕಾರು ಮತ್ತು ಮರ್ಸಿಡಿಸ್ ಮಧ್ಯೆ ಡಿಕ್ಕಿ ಸಂಭವಿಸಿತ್ತು.
ಇದರಿಂದ ಟ್ರಾಫಿಕ್ ಜಾಮ್ ಆಗಿದ್ದರಿಂದ ಹಿಂದಿನಿಂದ ಬರುತ್ತಿದ್ದ ಪೋರ್ಷೆ ಕಾರು ಕೂಡ ಅಪಘಾತಿಕ್ಕೀಡಾಗಿದೆ. ಈ ಸರಣಿ ಅಪಘಾತದಲ್ಲಿ ಪ್ರಾಣಾಪಾಯ ಆಗದೇ ಇದ್ದರೂ ಕೋಟಿಗಟ್ಟೆಲೆ ನಷ್ಟಸಂಭವಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ