ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಗೆ ಪಾಕ್‌ನಿಂದ ಡ್ರೋನ್‌ ಬಳಕೆ!

By Suvarna News  |  First Published Aug 18, 2020, 10:15 AM IST

ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಗೆ ಪಾಕ್‌ನಿಂದ ಡ್ರೋನ್‌ ಬಳಕೆ| ಚೀನಾ ನಿರ್ಮಿತ ಯುಎವಿ ನಿಯೋಜನೆಗೆ ಸಿದ್ಧತೆ| ಇವುಗಳ ಮೂಲಕ ಶಸ್ತ್ರಾಸ್ತ್ರ ಸಾಗಣೆ?


ನವದೆಹಲಿ(ಆ.18): ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ನಿರಂತರ ಯತ್ನ ನಡೆಸುತ್ತಿರುವ ಪಾಕಿಸ್ತಾನ, ಪರಿಸ್ಥಿತಿಯನ್ನು ಮತ್ತಷ್ಟುಹದಗೆಡಿಸಲು ಸಂಚು ರೂಪಿಸಿದೆ. ಇದಕ್ಕಾಗಿ ಮಧ್ಯಮ ಎತ್ತರದ ಮಟ್ಟಕ್ಕೆ ಬಹುಕಾಲ ಹಾರಾಡಬಲ್ಲ ಯುಎವಿ (ಮಾನವ ರಹಿತ ವಿಮಾನ)ಗಳನ್ನು ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಮೇಲಾಗಿ ಭಾರತದ ಇನ್ನೊಂದು ಶತ್ರು ದೇಶ ಚೀನಾದಿಂದ ‘ಕೈ ಹಾಂಗ್‌-4’ ಎಂಬ ಯುಎವಿಯನ್ನು ಖರೀದಿಸುತ್ತಿದೆ ಎಂದು ಭದ್ರತಾ ಪಡೆ ಮೂಲಗಳು ಹೇಳಿವೆ.

ಪ್ರೇಕ್ಷಕರಿಲ್ಲದೆ ವಾಘಾ ಬೀಟಿಂಗ್‌ ರಿಟ್ರೀಟ್‌: 61 ವರ್ಷದಲ್ಲೇ ಮೊದಲು!

Tap to resize

Latest Videos

ಪಾಕಿಸ್ತಾನದ ಸೇನಾ ಬ್ರಿಗೇಡಿಯರ್‌ ಮೊಹಮ್ಮದ್‌ ಇಕ್ಬಾಲ್‌ ನೇತೃತ್ವದ 10 ಜನರ ನಿಯೋಗ ಇತ್ತೀಚೆಗೆ ಚೀನಾಗೆ ಭೇಟಿ ನೀಡಿತ್ತು. ಈ ವೇಳೆ ಕೆಲವು ರಕ್ಷಣಾ ಸಲಕರಣೆಗಳ ಖರೀದಿ ಕುರಿತ ಪ್ರಕ್ರಿಯೆ ನಡೆದಿದೆ. ಇದೇ ಇಕ್ಬಾಲ್‌ ಅವರು 2019ರ ಡಿಸೆಂಬರ್‌ನಲ್ಲಿ ‘ಕೈ-ಹಾಂಗ್‌-4’ ಡ್ರೋನ್‌ ತಯಾರಿಸುವ ಎಎಲ್‌ಐಟಿ ಕಂಪನಿಗೆ ಭೇಟಿ ನೀಡಿದ್ದರು. 2020ರಲ್ಲಿ ಈ ಡ್ರೋನ್‌ ಪಾಕಿಸ್ತಾನಕ್ಕೆ ಹಸ್ತಾಂತರ ಆಗಬೇಕಿದೆ.

1200-1300 ಕೇಜಿಯಷ್ಟು ಭಾರದ ವಸ್ತುಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಇದಕ್ಕಿದೆ. ಇವುಗಳ ಮೂಲಕ ಶಶಾತ್ರಸ್ತ್ರ ಸಾಗಿಸಲಾಗುತ್ತದೆ ಎಂದು ಹೇಳಲಾಗಿದೆ. ಇದೇ ಯುಎವಿ ಈಗಾಗಲೇ ಇರಾಕ್‌ ಸೇನೆ ಹಾಗೂ ಜೋರ್ಡಾನ್‌ ವಾಯುಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಎಕನಾಮಿಕ್ ಕಾರಿಡಾರ್; ಪಾಕಿಸ್ತಾನ ಭದ್ರತೆ ಕುರಿತು ಚೀನಾ ಅಸಮಧಾನ!

ಇತ್ತೀಚೆಗೆ ಪಾಕಿಸ್ತಾನ ಸೇನೆಯು ತಾಲಿಬಾನಿಗಳಿಗೆ ತರಬೇತಿ ನೀಡುತ್ತಿರುವುದಾಗಿ ವರದಿಯಾಗಿತ್ತು. ಅದರ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.

click me!