ಏಡಿಯ ಜೊತೆ ಆಟವಾಡಲು ಹೋದವನಿಗೆ ಏನಾಯ್ತು ನೋಡಿ

Published : Mar 26, 2023, 05:54 PM ISTUpdated : Mar 26, 2023, 05:56 PM IST
ಏಡಿಯ ಜೊತೆ ಆಟವಾಡಲು ಹೋದವನಿಗೆ ಏನಾಯ್ತು ನೋಡಿ

ಸಾರಾಂಶ

ಏಡಿಯೂ ಕೂಡ ಒಂದು ಜಲಚರ. ತನ್ನಷ್ಟಕ್ಕೆ ತಾನಿರುವ ಮೂಕಜೀವಿ ಆದಾಗಿದ್ದರೂ, ಮನುಷ್ಯ ಅದನ್ನು ತನ್ನಷ್ಟಕ್ಕೆ ಬಿಡದೇ ಉಪಟಳ ನೀಡಲು ಹೋಗಿದ್ದಾನೆ. 

ಕೈಗಳ ಐದು ಬೆರಳುಗಳು ಹೇಗೆ ಒಂದೇ ರೀತಿ ಇರುವುದಲ್ಲವೋ ಹಾಗೆಯೇ ಪ್ರಪಂಚದಲ್ಲಿ ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಒಬ್ಬರೊಬ್ಬರ ವರ್ತನೆ ಒಂದೊಂದು ರೀತಿ ಇರುವುದು. ಅದರಲ್ಲೂ ಕೆಲವರಂತೂ ತುಂಬಾ ವಿಲಕ್ಷಣ, ಹೀಗೆ ಎಂದೂ ಹೇಳಲಾಗದು.  ಮೈ ತುಂಬಾ ಟ್ಯಾಟೂ ಹಾಕಿಸಿಕೊಂಡು ವಿಚಿತ್ರವಾಗಿ ಕಾಣುವುದು, ಮೂಗು ಹೊಕ್ಕಳು ಹುಬ್ಬಿನ ಮೇಲೆಲ್ಲಾ ರಿಂಗ್ ಸಿಕ್ಕಿಸಿಕೊಳ್ಳುವುದು ಇವೆಲ್ಲಾ ನೋಡಲು ವಿಚಿತ್ರ ಎನಿಸಿದರೂ ಅದು ಮಾಡುವವರಿಗೆ ಇಷ್ಟವಾಗುತ್ತದೆ. ಅಲ್ಲದೇ ಫ್ಯಾಷನ್‌ ಎಂದು ಕರೆಯಲ್ಪಡುತ್ತದೆ. ಇದೇ ಕಾರಣಕ್ಕೆ ಇಂತಹ ವಿಚಿತ್ರಗಳು ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇಲ್ಲೊಬ್ಬನಿಗೆ ಏಡಿಯ ಜೊತೆ ಆಡಲು ಹೋಗಿ ಏನಾಯ್ತು ಅನ್ನೋದನ್ನ ನೀವೇ ನೋಡಬಹುದು.

ಸಾಮಾನ್ಯವಾಗಿ ವನ್ಯಜೀವಿಗಳು ಜಲಚರಗಳು ಅಪಾಯಕಾರಿಯಾಗಿರುತ್ತವೆ. ಅವು ಯಾವಾಗ ನಿಮ್ಮ ಮೇಲೆ ದಾಳಿ ಮಾಡಬಹುದು ಎಂದು ಹೇಳಲಾಗುವುದಿಲ್ಲ. ಹಸಿವಾಗದ ಹೊರತು ಪರಭಕ್ಷಕ ಪ್ರಾಣಿಗಳ್ಯಾವುದು ನಿಮ್ಮ ಮೇಲೆ ದಾಳಿ ಮಾಡುವುದಿಲ್ಲ. ಆದರೆ ಕ್ರಿಮಿ ಕೀಟಗಳನ್ನು ಹೇಳಲಾಗುವುದಿಲ್ಲ.  ಏಡಿಯೂ ಕೂಡ ಒಂದು ಜಲಚರ. ತನ್ನಷ್ಟಕ್ಕೆ ತಾನಿರುವ ಮೂಕಜೀವಿ ಆದಾಗಿದ್ದರೂ, ಮನುಷ್ಯ ಅದನ್ನು ತನ್ನಷ್ಟಕ್ಕೆ ಬಿಡದೇ ಉಪಟಳ ನೀಡಲು ಹೋಗಿದ್ದಾನೆ. ಅದನ್ನು ಕೈಯಲ್ಲಿ ಹಿಡಿದು ಮುದ್ದು ಮಾಡಲು ಹೊರಟನೋ ಏನೋ ಗೊತ್ತಿಲ್ಲ, ಅದು ಮಾತ್ರ ಆತನ ಮೂಗನ್ನು ಹಿಡಿದು ತನ್ನ ಕೈಗಳಲ್ಲಿ ಕುಟುಕಿ ಜಾಮರ್‌ನಂತೆ ಒತ್ತಿ ಹಿಡಿದಿದೆ. ಪರಿಣಾಮ ಏಡಿಯಾ ಜೊತೆ ಆಟವಾಡಲು ಹೋದವ ಮೂಗು ಹಿಡಿದು ಕೂರುವಂತಹ ಸ್ಥಿತಿ ಬಂದಿದೆ.  

Vela Bandhavya: ಯಲ್ಲಾಪುರದಲ್ಲಿ ನೂತನ ಏಡಿ ಪತ್ತೆ; ಮಗಳ ಹೆಸರನ್ನಿಟ್ಟ ತಜ್ಞ

Weird and Terrifying Things ಎಂಬ ಟ್ವಿಟ್ಟರ್‌ ಪೇಜ್‌ನಿಂದ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು,  15 ಸೆಕೆಂಡ್‌ಗಳ ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.  ಬಿಳಿಗಡ್ಡಧಾರಿಯಾದ ವೃದ್ಧರೊಬ್ಬರು  ಒಂದು ಕೈಯಲ್ಲಿ ಬೀಡಿ ಸೇದುತ್ತಿದ್ದು, ಮತ್ತೊಂದು ಕೈಯಲ್ಲಿ ಏಡಿಯನ್ನು ಹಿಡಿದುಕೊಂಡು ತಮ್ಮ ಮೂಗಿನ ಬಳಿ ತೆಗೆದುಕೊಂಡು ಹೋಗಿದ್ದಾರೆ.  ಈ ವೇಳೆ ಗಾಬರಿಗೊಂಡ ಏಡಿ ಅವರಿಗೆ ಕಚ್ಚಿದ್ದು ಆತ ಬೀಡಿಯನ್ನು ಮತ್ತೊಂದು ಕಡೆ ಎಸೆದು ಜೋರಾಗಿ ಕಿರಿಚಿಕೊಳ್ಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ. ಇರಲಾರದೇ ಇರುವೆ ಬಿಟ್ಟುಕೊಂಡರು ಎಂಬ ಗಾದೆಯಂತಾಗಿದೆ ವೃದ್ಧನ ಸ್ಥಿತಿ. 

ಹನಿಮೂನ್ ಹೊರಟ ಏಡಿಗಳು... ಮಹಾ ವಲಸೆಗೆ ರಸ್ತೆಯೇ ಸ್ತಬ್ಧ

ವಿಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿದ್ದಾರೆ. ಏಡಿಯನ್ನು ಮತ್ತೆ ನೀರಿಗೆ ಬಿಡುವಂತೆ ಕೇಳಿದ್ದಾರೆ. 

ಸಾಲಗಾರರಿಂದ ತಪ್ಪಿಸಿಕೊಳ್ಳಲು ಮೂಗಿಗೆ ಹತ್ತಿ ಇಟ್ಟು ಫೇಸ್‌ಬುಕ್‌ಗೆ ಫೋಟೋ ಹಾಕಿದ ಮಹಿಳೆ

ಹಣ ಕಂಡ್ರೆ ಹೆಣ ಕೂಡ ಬಾಯ್ಬಿಡುತ್ತೆ ಎಂಬ ಗಾದೆಯನ್ನು ನೀವು ಕೇಳಿರಬಹುದು. ಅದೇ ರೀತಿ ಇಲ್ಲೊಬ್ಬಳು ಮಹಿಳೆ ಮೈತುಂಬಾ ಸಾಲ ಮಾಡಿ ಅದನ್ನು ತೀರಿಸಲಾಗದೇ ಸಾಲದಿಂದ ಪಾರಾಗುವ ಸಲುವಾಗಿ ತನ್ನ ಮೂಗಿಗೆ ತಾನೇ ಹತ್ತಿ ಇಟ್ಟುಕೊಂಡಿದ್ದಾಳೆ. ಇದೇನು ಸುಸೈಡ್ ಮಾಡ್ಕೊಂಡ್ಲ ಅಂತ ಗಾಬರಿಯಾಗ್ಬೇಡಿ ಅಂತದ್ದೇನು ಆಕೆ ಮಾಡ್ಕೊಂಡಿಲ್ಲ. ತನ್ನೆರಡು ಮೂಗಿಗೆ ಹತ್ತಿ ಇಟ್ಟುಕೊಂಡು ಮುಖ ಹೊರತುಪಡಿಸಿ ಇಡೀ ದೇಹಕ್ಕೆ ಶವದಂತೆ ಬಿಳಿವಸ್ತ್ರ ಸುತ್ತಿಕೊಂಡು ಹೆಣದಂತೆ ಮಲಗಿದ್ದಾಳೆ. ಅಲ್ಲದೇ ಯಾರದೋ ಸಹಾಯದಿಂದ ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾಳೆ. ಆದರೆ ಈಕೆಯ ಈ ನಾಟಕ ಸಾಲ ನೀಡಿದವಳಿಗೂ ತಿಳಿದಿದ್ದು, ಈಗ ಖತರ್ನಾಕ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಂದಹಾಗೆ ಈ ಘಟನೆ ನಡೆದಿದ್ದು, ನಮ್ಮ ದೇಶದಲ್ಲಿ ಅಲ್ಲ, ಇಂಡೋನೇಷ್ಯಾದಲ್ಲಿ. 

ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗನು ಬಂದು ಎಳೆವಾಗ  ಕಿಬ್ಬದಿಯ ಕೀಲು ಮುರಿದಂತೆ ಎಂದು ಸರ್ವಜ್ಞರ ವಚನವನ್ನು ನೀವು ಕೇಳಿರಬಹುದು. ಸಾಲದ ಮಹಿಮೆ ಅಂಥದ್ದು, ಅದೇ ರೀತಿ ಇಲ್ಲಿ ಮಹಿಳೆ ಸಾಲವನ್ನು ಖುಷಿ ಖುಷಿಯಿಂದಲೇ ಮಾಡಿದ್ದು, ಸಾಲ ನೀಡಿದವರು ಆಕೆಯ ಬಳಿ ಹಣ ಮರಳಿ ಕೇಳಿದಾಗ ಈ ರೀತಿ ನಾಟಕವಾಡಿದ್ದಾಳೆ. ಲಿಝಾ ದೇವಿ ಪ್ರಮೀತಾ(Liza Dewi Pramita) ಎಂಬಾಕೆಯೇ ಹೀಗೆ ನಾಟಕ ಮಾಡಿದ ಮಹಿಳೆ. ಇವಳ ನಾಟಕವನ್ನು ಸಾಲ ಕೊಟ್ಟ ಮಾಯಾ ಗುಣವನ್ (Maya Gunawan) ಎಂಬುವವರು ಬಯಲು ಮಾಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ