ದೇಶದ ಅಧ್ಯಕ್ಷರ ಮೀಟಿಂಗ್‌ನಲ್ಲೇ ಬೆತ್ತಲೆ ಸ್ನಾನ, ಇವ್ನ ಮನೆ ಹಾಳಾಗ!

Published : May 18, 2020, 09:11 PM ISTUpdated : May 18, 2020, 09:13 PM IST
ದೇಶದ ಅಧ್ಯಕ್ಷರ ಮೀಟಿಂಗ್‌ನಲ್ಲೇ ಬೆತ್ತಲೆ ಸ್ನಾನ, ಇವ್ನ ಮನೆ ಹಾಳಾಗ!

ಸಾರಾಂಶ

ವಿಶ್ವಕ್ಕೆ ಅಟಕಾಯಿಸಿಕೊಂಡ ಕೊರೋನಾ/ ಇದು ವಿಡಿಯೋ ಕಾಲಿಂಗ್ ಎಡವಟ್ಟು/ ಬೆತ್ತಲೆ ಓಡಾಡಿದ ಆಕೃತಿ/ ಸ್ನಾನ ಮಾಡಲು ಇನ್ಯಾವ ಸಮಯವೂ ಸಿಗಲಿಲ್ವ

ಬ್ರೆಜಿಲ್(ಮೇ 18)  ಈ ಕೊರೋನಾ ಎಂಬದೊಂದು ಭೂತ ಅಟಕಾಯಿಸಕೊಂಡ ಮೇಲೆ ಆಫೀಸುಗಳೆಲ್ಲ ಬಾಗಿಲು ಮುಚ್ಚಿವೆ. ಶಟರ್ ಎಳೇಯೋರು ಇಲ್ಲ.. ಕಸ ಗುಡಿಸೋರು ಇಲ್ಲ.. ಊಟ-ತಿಂಡಿ-ಕೆಲಸ ಎಲ್ಲವೂ ಮನೆಯಲ್ಲೆ .. ಮನೆಯೇ ಮಂತ್ರಾಲಯ, ಮನೆಯೇ ಕಚೇರಿಯಾಲಯ, ಮನೆಯೇ ದೇವಾಲಯ

ಆಫಿಸಿನವರು ವಾರಕ್ಕೊಂದು ಮೀಟಿಂಗ್ ಮಾಡಿ ಠಸ್ಸು-ಪುಸ್ಸು ಎಂದು ಹೇಳಲು ಆನ್ ಲೈನ್ ಎಂಬ ಜಾಲಕ್ಕೆ ಜೋತುಬಿದ್ದಿದ್ದಾರೆ. ಅದ್ಯಾವುದೋ ಜೂಮ್ ಆಪ್ ಎಲ್ಲರ ಮುಖವನ್ನು ತೋರಿಸುತ್ತದೆ.. ಮೀಟೀಂಗ್  ಮಾಡುತ್ತಾರೆ.. ಟೀ ಮಾತ್ರ ನಮ್ಮ ಮನೆಯದೇ.

ಕನ್ನಡ ಸಿನಿಮಾ ನಟಿಯ ಬೆತ್ತಲೆ ಅವತಾರ ಕಂಡು ದಂಗಾದ ಅಭಿಮಾನಿಗಳು

ಇಂಥದ್ದೇ ಒಂದು ಮೀಟಿಂಗ್ ಅನ್ನು ಬ್ರೇಜಿಲ್ ಅಧ್ಯಕ್ಷ ಜಾಯಿರ್ ಬೊಲ್ಸಾನಾರೋ ಕರೆದಿದ್ದರು.  ತಮ್ಮ ಸಂಪುಟದ ಸಿಬ್ಬಂದಿಯೊಂದಿಗೆ ಮಾತನಾಡಲು ಆನ್ ಲೈನ್ ಮೀಟಿಂಗ್ ಜೋರಾಗಿಯೇ ನಡೆದಿತ್ತು.  ಲಾಕ್ ಡೌನ್ ಕುರಿತ ಚರ್ಚೆ ಮಾತು-ಕತೆ ಎಲ್ಲವೂ ಇತ್ತು. ಆಗ ಇದ್ದಕ್ಕಿದ್ದಂತೆ ಬೆತ್ತಲೆ ಆಕೃತಿಯೊಂದು ಪ್ರತ್ಯಕ್ಷವಾಗಿ ಎಲ್ಲರಿಗೂ ದರ್ಶನ ನೀಡಿತು!

ಗಂಭೀರ ಮೀಟಿಂಗ್ ಮುಜುಗರದ ಮೀಟಿಂಗ್ ಆಯಿತು.  ಮೀಟಿಂಗ್ ನಡೆಯುತ್ತಿದ್ದಾಗ ಮನೆಯಲ್ಲಿದ್ದ ವ್ಯಕ್ತಿಯ ಬೆತ್ತಲೆ ಸ್ನಾನ ಆರಂಭವಾಯಿತು. ಆ ಪುಣ್ಯಾತ್ಮ ಕ್ಯಾಮರಾ ಆಫ್ ಮಾಡಲು ಮರೆತಿದ್ದ.. ಈ ವಿಡಿಯೋ ಸೋಶಿಯಲ್ ಮೀಡಿಯಾಕ್ಕೆ ಬಿದ್ದ ಮೇಲೆ ಕೇಳಬೇಕೆ!

ಪ್ರಧಾನಿ ಬಂದಾಗ ಬೆನ್ನು ತಿರುಗಿಸಿ ನಿಂತ ವೈದ್ಯರು

ಬೆತ್ತಲೇ ಆಕೃತಿ ಕಾಣಿಸಿಕೊಂಡ ಮೇಲೆ ಕೈಗಾರಿಕಾ ವಿಭಾಗದ ಅಧ್ಯಕ್ಷ ಪಾಲ್ವೊ ಸ್ಕಾಪ್ ಮಧ್ಯ ಪ್ರವೇಶ ಮಾಡಿದರು. ಮುಜುಗರದ ಸನ್ನಿವೇಶದಿಂದ ಹೊರತರಲು ಪ್ರಯತ್ನ ಮಾಡಿದರು. ಆದರೆ ಅಷ್ಟರಲ್ಲಿ ಎಲ್ಲವೂ ಮುಗಿದೇ ಹೋಗಿತ್ತು.

ನಮ್ಮ ಮೀಟಿಂಗ್ ಗಂಭೀರವಾಗಿದ್ದು ಚರ್ಚೆ ಬಿಸಿಯಾದ್ದರಿಂದ ಆತ ತಣ್ಣಿರು ಸ್ನಾನ ಮಾಡಲು ತೆರಳಿರಬೇಕು ಎಂದು ಮಧ್ಯೆ ಹಾಸ್ಯ ಚಟಾಕಿಯೂ ಹರಿದು ಹಾರಿ ಪಾಸಾಯಿತು. ಹೌದು ಎಚ್ಚರಿಕೆ ಸ್ವಾಮಿ.. ಆಫೀಸವರು ಆನ್ ಲೈನ್ ಮೀಟಿಂಗ್ ಇಟ್ಟುಕೊಂಡಾಗ ಕ್ಯಾಮರಾ ಆಫ್ ಮಾಡೋದ ಮರಿಬೇಡಿ!

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ