
ಬೆಲ್ಜಿಯಂ (ಮೇ 18) ಇದೊಂದು ಶಾಂತ ಪ್ರತಿಭಟನೆ, ದೇಶದ ಪ್ರಧಾನಿ ಬಂದಾಗ ವೈದ್ಯರು ಬೆನ್ನು ತಿರುಗಿಸಿ ನಿಂತಿದ್ದಾರೆ. ಹೌದು ಬೆಲ್ಜಿಯಂನ ಶಾಂತ ಪ್ರತಿಭಟನೆ ದೊಡ್ಡ ಸುದ್ದಿ ಮಾಡುತ್ತಿದೆ.
ಬೆಲ್ಜಿಯಂ ದೇಶದ ಬ್ರುಸೆಲ್ಸ್‌ನ ಘಟನೆ ಸೋಶಿಯಲ್ ಮೀಡಿಯಾದ ಸದ್ಯದ ಟಾಕ್. ಬೆಲ್ಜಿಯಂ ಪ್ರಧಾನ ಮಂತ್ರಿ ಸೋಫಿ ವಿಲ್ಮ್ಸ್ ಅವರು ಅಲ್ಲಿನ ಆಸ್ಪತ್ರೆಯೊಂದಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಮೊದಲೇ ಕೊರೊನಾ ವೈರಸ್‌ನಿಂದ ತತ್ತರಿಸಿರುವ ದೇಶದಲ್ಲಿ ವೈದ್ಯರು ಸೌಕರ್ಯಗಳ ಕೊರತೆಯಿಂದ ಬೇಸತ್ತು ಹೋಗಿದ್ದರು. ಪ್ರಧಾನಿ ವಿರುದ್ಧದ ತಮ್ಮ ಆಕ್ರೋಶ ವ್ಯಕ್ತಪಡಿಸಲು ಸಿಕ್ಕ ಅವಕಾಶವನ್ನು ವೈದ್ಯರು ಬಳಸಿಕೊಂಡರು.
ಕೊರೋನಾ ವಾರಿಯರ್ಸ್ ಜತೆ ಭಾರತದ 10 ವರ್ಷದ ಬಾಲಕಿಗೆ ಟ್ರಂಪ್ ಸನ್ಮಾನ
ಪ್ರಧಾನಿ ಆಸ್ಪತ್ರೆಗೆ ಬರುವ ಮುನ್ನವೇ ರಸ್ತೆಯ ಎರಡೂ ಬದಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಲಾಗಿ ನಿಂತಿದ್ದ ವೈದ್ಯರು, ಪ್ರಧಾನಿಗಳ ಬೆಂಗಾವಲು ಪಡೆ ಹಾಗೂ ಪ್ರಧಾನಿ ವಾಹನ ಆಗಮಿಸಿದ ಕೂಡಲೇ ಅವರಿಗೆ ಬೆನ್ನು ತಿರುಗಿಸಿ ನಿಂತರು. ಈ ದೃಶ್ಯ ಇದೀಗ ವೈರಲ್ ಆಗುತ್ತಿದ್ದು ಪರ ವಿರೋಧದ ಕಮೆಂಟ್ ಗಳು ಹರಿದು ಬರುತ್ತಿವೆ.
ಬೆಲ್ಜಿಯಂಲ್ಲಿ ಈವರೆಗೆ 9 ಸಾವಿರ ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಪ್ರಧಾನಿ ಸೋಫಿ ಅವರು ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸೋತಿದ್ದಾರೆ ಎಂದು ವೈದ್ಯ ಸಿಬ್ಬಂದಿ ಆರೋಪ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ