ಕೊರೋನಾ ವೈರಸ್ ಚೀನಾದ ಕೂಸು ಎಂದು ಅಮೆರಿಕ ಹಲವು ರಾಷ್ಟ್ರಗಳು ಆರೋಪ ಮಾಡುತ್ತಿದೆ. ಅಮೆರಿಕ ಹಾಗೂ ಆಸ್ಟ್ರೇಲಿಯಾ ತನಿಖೆ ಮುಂದಾಗಿತ್ತು. ಆದರೆ ಚೀನಾ ತನಿಖೆಗೆ ಸಹಕರಿಸಲು ನಿರಾಕರಿಸಿತ್ತು. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ವೈರಸ್ ಕುರಿತು ಮಾತನಾಡಲು ವಿಶ್ವ ಆರೋಗ್ಯ ಸಂಸ್ಥೆ ಚೀನಾ ಅಧ್ಯಕ್ಷರಿಗೆ ವಿಶೇಷ ಆಹ್ವಾನ ನೀಡಿದೆ.
ಚೀನಾ(ಮೇ.18): ಚೀನಾ ವೈರಸ್, ವುಹಾನ್ ವೈರಸ್ ಎಂದು ಆರಂಭದಲ್ಲೇ ಆರೋಪ ಮಾಡಿದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇದೀಗ ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಕೆಂಡ ಕಾರಿದ್ದಾರೆ. ಇಷ್ಟೇ ಅಲ್ಲ ಕೊರೋನಾ ವೈರಸ್‌ಗೆ ಚೀನಾ ಕಾರಣ ಎಂದ ಅಮೆರಿಕ ತನಿಖೆಗೆ ಮುಂದಾಗಿತ್ತು. ಇತ್ತ ಆಸ್ಟ್ರೇಲಿಯಾ ಕೂಡ ತನಿಖೆಗೆ ಮುಂದಾಗಿದೆ. ಆದರೆ ಚೀನಾ ಮಾತ್ರ ಅಮೆರಿಕಾ ಹಾಗೂ ಆಸ್ಟ್ರೇಲಿಯಾ ತನಿಖಾ ತಂಡಗಳನ್ನು ಚೀನಾ ಪ್ರವೇಶಿಸಲು ನಿರಾಕರಿಸಿತ್ತು.
ಅಮೆರಿಕಾ ಸಂಶೋಧಿಸುತ್ತಿರುವ ಕೋವಿಡ್ 19 ಲಸಿಕೆಯನ್ನು ಹ್ಯಾಕ್ ಮಾಡಿತಾ ಚೀನಾ?
undefined
ಈ ಕುರಿತು ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಯನ್ನು ದೂರಿದ್ದರು. ಇಷ್ಟೇ ಅಲ್ಲ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುವ ಆರ್ಥಿಕ ನೆರವು ನಿಲ್ಲಿಸುವ ಎಚ್ಚರಿಕೆ ನೀಡಿದ್ದರು. ಇತ್ತೀಚೆಗೆ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ಅಸೆಂಬ್ಲಿ ಸಭೆಯಲ್ಲಿ ಅಮೆರಿಕಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ಚೀನಾ ಮೇಲೆ ಗಂಭೀರ ಆರೋಪ ಮಾಡಿವೆ. ತನಿಖೆ ನಡೆಸಲು ಅವಕಾಶ ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯನ್ನು ಕೋರಿತ್ತು.
ಮನವಿ ಆಲಿಸಿದ ವಿಶ್ವ ಆರೋಗ್ಯ ಸಂಸ್ಥೆ, ತನ್ನ ವಾರ್ಷಿಕ ಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಈ ಕುರಿತು ಮಾತನಾಡುಲ ವಿಶೇಷ ಅಹ್ವಾನ ನೀಡಿದೆ. ವಿಡಿಯೋ ಕಾನ್ಫೆರನ್ಸ್ ಮೂಲಕ ನಡೆಯಲಿರುವ ಈ ಸಭೆಯಲ್ಲಿ ಚೀನಾ ಅಧ್ಯಕ್ಷ ಉದ್ಘಟನಾ ಭಾಷಣ ಮಾಡಲಿದ್ದಾರೆ. ಈ ವೇಳೆ ಕೊರೋನಾ ವೈರಸ್ ಕುರಿತು ಮಾತನಾಡಲಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಚೀನಾವನ್ನು ಸಾಧಕನಂತೆ ಪರಿಗಣಿಸುತ್ತಿದೆ. ಇದಕ್ಕಾಗಿ ವಿಶೇಷ ಅಹ್ವಾನ ನೀಡಿ ಭಾಷಣ ಮಾಡಲ ಹೇಳಿದೆ. ನಾವು ತನಿಖೆಗೆ ಆಗ್ರಹಿಸುತ್ತಿದ್ದೇವೆ. ನನ್ಮ ತನಿಖಾ ಸಂಸ್ಥೆಗಳನ್ನು ಚೀನಾ ಪ್ರವೇಶಿಸಲು ಅವಕಾಶ ಮಾಡಿಕೊಡಲು ಸಹಕರಿಸಿ ಎಂದು ಅಮೆರಿಕ ಹಾಗೂ ಆಸ್ಟ್ರೇಲಿಯಾ ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಗುಡುಗಿದೆ.