ಪತ್ನಿಯನ್ನು ಬಾಂಗ್ಲಾ ಪ್ರಧಾನಿ ಮಾಡುತ್ತೇನೆ, ಶೇಕ್ ಹಸೀನಾ ಸೀರೆ ಸೂಟ್ ಕದ್ದವನ ವೀರಾವೇಶದ ಮಾತು!

By Chethan Kumar  |  First Published Aug 6, 2024, 3:39 PM IST

ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಶೇಕ್ ಹಸೀನಾ ಪರಾರಿಯಾದ ಬಳಿಕ ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಪ್ರಧಾನಿ ನಿವಾಸದಲ್ಲಿನ ಎಲ್ಲಾ ವಸ್ತು ದೋಚಿದ್ದಾರೆ. ಈ ಪೈಕಿ ಹಸೀನಾ ಸೀರೆ ಸೂಟ್ ಕೇಸ್ ಕದ್ದವನ ಮಾತು ಮಾತ್ರ ಇದೀಗ ಎಲ್ಲಾ ದೇಶದಲ್ಲಿ ಭಾರಿ ವೈರಲ್ ಆಗಿದೆ.


ಢಾಕ(ಆ.06)  ಶೇಕ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾಂಗ್ಲಾದೇಶ ತೊರೆಯುತ್ತಿದ್ದಂತೆ ಇತ್ತ ಪ್ರತಿಭಟನಾಕಾರರು ಏಕಾಏಕಿ ನಿವಾಸಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಪ್ರತಿಭಟನಾಕಾರರು ಬ್ರಾ, ಒಳ ಉಡುಪಿನಿಂದ ಹಿಡಿದು ಎಲ್ಲವನ್ನೂ ದೋಚಿದ್ದಾರೆ. ಈ ಪೈಕಿ ಓರ್ವ ಶೇಕ್ ಹಸೀನಾ ಬೆಲೆಬಾಳುವ ಸೇರಿ ಸೂಟ್ ಕೇಸ್ ಕದ್ದು ಪರಾರಿಯಾಗಿದ್ದಾನೆ. ಅನಾಗರೀಕರಂತೆ ವರ್ತಿಸಿರುವುದು ಒಂದೆಡೆ, ಆದರೆ ಈತನ ಹೇಳಿಕೆ ಮಾತ್ರ ಇದೀಗ ಬಾಂಗ್ಲಾದೇಶಕ್ಕಿಂತ ಇತರ ದೇಶಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಹಸೀನಾ ಸೀರೆ ಸೂಟ್ ಕೇಸ್ ಕದ್ದು ಹೊರಬಂದ ಈತನ ಪ್ರತಿಕ್ರಿಯೆ ನೀಡಿದ್ದಾನೆ. ಈ ಸೀರೆಯಿಂದ ನನ್ನ ಪತ್ನಿಯನ್ನು ಬಾಂಗ್ಲಾದೇಶ ಪ್ರಧಾನಿ ಮಾಡುತ್ತೇನೆ ಎಂದಿದ್ದಾನೆ.

ಶೇಕ್ ಹಸೀನಾ ರಾಜೀನಾಮೆ ನೀಡಿದ ಬೆನ್ನಲ್ಲೇ ಹೆಲಿಕಾಪ್ಟರ್ ಮೂಲಕ ಭಾರತದತ್ತ ಪ್ರಯಾಣ ಬೆಳೆಸಿದ್ದಾರೆ. ಇತ್ತ ಪ್ರತಿಭಟನಾಕಾರರು ಪ್ರಧಾನಿ ನಿವಾಸಕ್ಕೆ ನುಗ್ಗಿದ್ದಾರೆ. ನಿವಾಸದಲ್ಲಿದ್ದ ಆಹಾರ, ಖಾದ್ಯಗಳನ್ನು ಸವಿದಿದ್ದಾರೆ. ಪ್ರಧಾನಿ ಬೆಡ್ ಮೇಲೆ ಕುಳಿತು ವಿಶ್ರಾಂತಿ ಪಡೆದಿದ್ದಾರೆ. ಹಲವರು ನಿವಾಸದಲ್ಲಿನ ಮೀನುಗಳನ್ನು ಕದ್ದೊಯ್ದಿದ್ದಾರೆ. ಬೆಲೆ ಬಾಳುವ ವಸ್ತು ಸೇರಿದಂತೆ ಎಲ್ಲವನ್ನೂ ದೋಚಿದ್ದಾರೆ. ಈ ಪೈಕಿ ಶೇಕ್ ಹಸೀನಾ ಅವರ ಬ್ರಾ, ಒಳ ಉಡುಪುಗಳನ್ನು ಪ್ರತಿಭಟನಾಕಾರರು ದೋಚಿದ್ದಾರೆ. ಇದೇ ವೇಳೆ ಒರ್ವ ತಲೆ ಮೇಲೆ ದೊಡ್ಡ ಸೂಟ್‌ಕೇಸ್ ಹೊತ್ತುಕೊಂಡು ಹೊರಬಂದಿದ್ದಾನೆ. 

Latest Videos

undefined

ಬಾಂಗ್ಲಾ ಭಾರತಕ್ಕಿಂತ ಹೆಚ್ಚು ಸಂತೋಷದ ದೇಶ, ವಿಡಿಯೋ ಮಾಡಿದ್ದ ಧ್ರುವ ರಾಠಿಯನ್ನು ಬಿಜೆಪಿ ಟ್ರೋಲ್!

ಸೂಟ್‌ಕೇಸ್ ಹೊತ್ತುಕೊಂಡೇ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಮಾಡುತ್ತಿದ್ದಾತ, ಈ ಸೂಟ್‌ಕೇಸ್‌ನಲ್ಲಿ ಏನಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಆತ, ಇದು ಶೇಕ್ ಹಸೀನಾ ಅವರ ಸೀರೆ. ಈ ಸೀರೆ ತೆಗೆದುಕೊಂಡು ಹೋಗಿ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಇದು ಬಾಂಗ್ಲಾದೇಶ ಪ್ರಧಾನಿಯ ಸೀರೆಗಳು, ಈ ಸೀರೆಯನ್ನು ನನ್ನ ಪತ್ನಿಗೆ ನೀಡುತ್ತೇನೆ. ಆಕೆಯನ್ನು ಮುಂದಿನ ಬಾಂಗ್ಲಾದೇಶ ಪ್ರಧಾನಿ ಮಾಡತ್ತೇನೆ ಎಂದು ಹೇಳಿದ್ದಾನೆ.

ಈ ವಿಡಿಯೋಗೆ ಭಾರಿ ಕಮೆಂಟ್‌ಗಳು ವ್ಯಕ್ತವಾಗಿದೆ. ಶೇಕ್ ಹಸೀನಾ ಧರಿಸಿದ ಸೀರೆ ಧರಿಸಿ ಪ್ರಧಾನಿಯಾಗುವುದಾದರೆ, ನಿನ್ನ ಪತ್ನಿಗಿಂತ ಮೊದಲು ಬ್ರಾ ಕದ್ದವನ ಪತ್ನಿ ಬಾಂಗ್ಲಾದೇಶ ಪ್ರಧಾನಿಯಾಗುತ್ತಾಳೆ ಎಂದು ಕಮೆಂಟ್ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ಹಿಂದೆ ದೊಡ್ಡ ಷಡ್ಯಂತ್ರ ಕಾಣುತ್ತಿದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶ ಸೇನೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದೆ. 

ಬಾಂಗ್ಲಾ ಪ್ರಧಾನಿ ಮನೆಯಲ್ಲಿ ಪ್ರತಿಭಟನಾಕಾರರ ದರೋಡೆ, ಶೇಖ್‌ ಹಸಿನಾರ 'ಬ್ರಾ..' ಕೂಡ ಬಿಡದ ಲೂಟಿಕೋರರು!


 

: What’s in the bag?

It has sarees of Sheikh Hasina, will make my wife Prime Minister. pic.twitter.com/Q4oYqweiMS

— Pooja Mehta (@pooja_news)
click me!