ಮಿಲಿಯನ್‌ಗಿಂತಲೂ ಹೆಚ್ಚು ಕಪ್ಪೆ ಸಾಕಿರುವ ವ್ಯಕ್ತಿ : ವಿಡಿಯೋ ನೋಡಿ

Published : Jun 17, 2022, 02:38 PM IST
ಮಿಲಿಯನ್‌ಗಿಂತಲೂ ಹೆಚ್ಚು ಕಪ್ಪೆ ಸಾಕಿರುವ ವ್ಯಕ್ತಿ : ವಿಡಿಯೋ ನೋಡಿ

ಸಾರಾಂಶ

ವ್ಯಕ್ತಿಯೊಬ್ಬ ರಾಶಿ ರಾಶಿ ಕಪ್ಪೆಗಳನ್ನು ಸಾಕಿದ್ದು ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಮ್ಮಲ್ಲಿ ಕೋಳಿ ನಾಯಿ ಹಂದಿ, ದನ ಮುಂತಾದ ಜಾನುವಾರುಗಳನ್ನು ಸಾಕುವುದನ್ನು ನಾವು ನೋಡಿದ್ದೇವೆ. ಆದರೆ ಕಪ್ಪೆ ಸಾಕೋದಾ! ನಮ್ಮ ಭಾರತದಲ್ಲಿ ಮಳೆ ಬಾರದೇ ಇದ್ದಾಗ ಕಪ್ಪೆಗಳಿಗೆ ಮದ್ವೆ ಮಾಡಿದ್ದಿದೆ. ಆದರೆ ಎಲ್ಲೂ ಯಾರೂ ಕಪ್ಪೆಗಳನ್ನು ಸಾಕಿದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ವ್ಯಕ್ತಿಯೊಬ್ಬ ತಾನು ಗಾರ್ಡನ್‌ನಲ್ಲಿ ಕೋಟ್ಯಾಂತರ ಕಪ್ಪೆಗಳನ್ನು ಸಾಕಿದ್ದಾಗಿ ಹೇಳಿದ್ದಾನೆ. ಅಷ್ಟೇ ಅಲ್ಲದೇ ರಾಶಿ ರಾಶಿ ಕಪ್ಪೆಗಳಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ನೋಡುಗರಿಗೆ ಅಸಹ್ಯದ ಜೊತೆ ಭಯವನ್ನು ಈ ಮೂಡಿಸುತ್ತಿವೆ. 

ಈ ವಿಡಿಯೋ ಪೋಸ್ಟ್ ಮಾಡಿದ ವ್ಯಕ್ತಿ ಆರಂಭದಲ್ಲಿ ಟಿಕ್‌ಟಾಕ್‌ನಲ್ಲಿ ಕಪ್ಪೆಗಳ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ನಂತರ ಈ ವಿಡಿಯೋ ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಣಿಸಿಕೊಂಡಿವೆ.  @thinfrog ಎಂಬ ಖಾತೆಯಿಂದ ಈ ವ್ಯಕ್ತಿ ಈಗ ತಾನು 1.4 ಮಿಲಿಯನ್ ಕಪ್ಪೆಗಳನ್ನು ಹೊಂದಿರುವುದಾಗಿ ಹೇಳಿದ್ದಾನೆ. ವೀಡಿಯೊದಲ್ಲಿ, ಮನುಷ್ಯನು ಕಪ್ಪೆ ಮರಿಗಳ ಸಂಪೂರ್ಣ ಹೊರೆಯನ್ನು ರಕ್ಷಿಸುವ ಬಗ್ಗೆ ಮಾತನಾಡಿದ್ದಾನೆ. ಗೊದಮೊಟ್ಟೆಯಿಂದ ಶುರುವಾಗಿ ಪೂರ್ಣ ಪ್ರಮಾಣದ ಕಪ್ಪೆಗಳವರೆಗೆ ಅವುಗಳ ಬೆಳವಣಿಗೆಯನ್ನು ಆತ ವೀಕ್ಷಿಸುತ್ತಾನೆ ಎಂದು ಆತ ಹೇಳಿಕೊಂಡಿದ್ದಾನೆ. 

ವೈರಲ್ ವೀಡಿಯೊದಲ್ಲಿ, ಮನುಷ್ಯ ಮೊದಲು ಕಪ್ಪೆಯ ಮೊಟ್ಟೆಗಳನ್ನು ನೀರಿರುವ ಜಾಗಕ್ಕೆ ಬಿಡುತ್ತಾನೆ. ಅದು ಗೊದಮೊಟ್ಟೆಯಾಗಿ ಬದಲಾಗುತ್ತದೆ. ನಂತರ ವ್ಯಕ್ತಿ ಗೊದಮೊಟ್ಟೆಯು ಹೇಗೆ ಎಳೆಯ ಕಪ್ಪೆಗಳಾಗಿ ಬೆಳೆದಿದೆ ಮತ್ತು ಅವನ ಹಿತ್ತಲನ್ನು ಸಂಪೂರ್ಣವಾಗಿ ಆವರಿಸಿದೆ ಎಂಬುದನ್ನು ವಿಡಿಯೋದಲ್ಲಿ ಪ್ರದರ್ಶಿಸಿದ್ದಾನೆ. 

95 ದಿನಗಳ ಹಿಂದೆ ನಾನು 1.4 ಮಿಲಿಯನ್ ಕಪ್ಪೆ ಮೊಟ್ಟೆಗಳನ್ನು ರಕ್ಷಿಸಿದೆ ಮತ್ತು ಕಪ್ಪೆ ಸೈನ್ಯಕ್ಕಾಗಿ ಅವುಗಳನ್ನು ಕೊಳದಲ್ಲಿ ಹಾಕಿದೆ. ಮತ್ತು ಈಗ ಅವುಗಳು ಕೊಳವನ್ನು ಬಿಡುತ್ತಿವೆ. ಒಂದು ಮಿಲಿಯನ್ ಪುಟ್ಟ ಕಪ್ಪೆಗಳು ಉದ್ಯಾನದ ಸುತ್ತಲೂ ಜಿಗಿಯುತ್ತಿವೆ. ನಾನು ಇನ್ನು ಮುಂದೆ ಹುಲ್ಲಿನ ಮೇಲೆ ನಡೆಯಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ಅತ್ಯಂತ ದೊಡ್ಡ ಕಪ್ಪೆ ಸೈನ್ಯವಾಗಿದೆ. ಆದರೆ ಹೀಗೆ ಮಾಡಿರುವುದಕ್ಕೆ ನಾನು ಈಗ ವಿಷಾದಿಸುತ್ತೇನೆ ಎಂದು ಅವರು ವೀಡಿಯೊದಲ್ಲಿ (video) ಹೇಳಿದ್ದಾರೆ. 

ಮುಂಗಾರು ಆರಂಭ: ಸಂಗಾತಿಯನ್ನು ಆಕರ್ಷಿಸಲು ಹಳದಿ ಬಣ್ಣ ಪಡೆದ ಗಂಡು ಕಪ್ಪೆಗಳು

ಗಾರ್ಡನ್‌ಗೆ ಯಾರೂ ಹೋಗಲು ಸಾಧ್ಯವಿಲ್ಲ. ಸಂಪೂರ್ಣ ಗಾರ್ಡನ್‌ (Gurden) ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕೂಡ ಲಕ್ಷಾಂತರ ಮರಿ ಕಪ್ಪೆಗಳು ವ್ಯಾಪಿಸಿಕೊಂಡಿವೆ.  ಅರ್ಧ ಮಿಲಿಯನ್ ಗೊದಮೊಟ್ಟೆಗಳು ಬೆಳೆದಲ್ಲಿ ದೈತ್ಯ ಕಪ್ಪೆ ಸೈನ್ಯವು  (Frog) ಯಶಸ್ವಿಯಾಗುವುದು ಎಂದು ಅವರು ಹೇಳಿದ್ದಾರೆ. ಈ ವೀಡಿಯೊವನ್ನು ಟ್ವಿಟರ್‌ನಲ್ಲಿ (twitter)  2.8 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ರಾಮ್ಸೆ ಬೋಲ್ಟಿನ್ (Ramsey Boltin) ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ ಮನುಷ್ಯನ ಈ ಚಿಕ್ಕ ಪ್ರಯೋಗದ ಬಗ್ಗೆ ನೋಡುಗರು ಮಾತ್ರ ಚಿಂತೆಗೀಡಾಗಿದ್ದಾರೆ. ಕಪ್ಪೆಯ ಜನಸಂಖ್ಯೆಯು ತನ್ನನ್ನು ತಾನೇ ಆನಂದಿಸುತ್ತಿದೆ ಆದರೆ 1,000,000 ಗೊದಮೊಟ್ಟೆಗಳ ರಕ್ಷಣೆಯ ಮೂಲಕ ಈ ವ್ಯಕ್ತಿ ಪರಿಸರ ವಿಪತ್ತನ್ನು ಉಂಟು ಮಾಡಲಿದ್ದಾನೆ ಎಂದು ಒಬ್ಬರು ಹೇಳಿದ್ದಾರೆ. 

ಕೊರೋನಾದಿಂದಾಗಿ ಕಪ್ಪೆಗಳ ಜೀವ ಉಳೀತು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು