ಹೊಟ್ಟೆ ಪಾಡಿಗಾಗಿ ಬೀದಿ ಬದಿ ಆಹಾರ ಮಾರುತ್ತಿರುವ ಅಫ್ಘಾನಿಸ್ತಾನದ TV Anchor

By Anusha Kb  |  First Published Jun 17, 2022, 12:34 PM IST

ತಾಲಿಬಾನ್ ಉಗ್ರರು ಅಫ್ಘಾನ್ ದೇಶದ ಮೇಲೆ ಹಿಡಿತ ಸಾಧಿಸಿದಾಗಿನಿಂದ ಅಫ್ಘಾನಿಸ್ತಾನವು ಸಾಕಷ್ಟು ಆರ್ಥಿಕ ಸಂಕಷ್ಟ ಮತ್ತು ರಾಜಕೀಯ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ.  ಮಧ್ಯೆ ಟಿವಿ ನಿರೂಪಕನಾಗಿ ಕೆಲಸ ಮಾಡಿದ್ದ ಯುವಕ ದೇಶದಲ್ಲಿ ಎದುರಾದ ಆರ್ಥಿಕ ಸಂಕಷ್ಟದಿಂದ ಕೆಲಸ ಕಳೆದಕೊಂಡಿದ್ದಾನೆ. ನಿರೂಪಕನಾಗಿದ್ದ ಈತ ಬೀದಿ ಬದಿ ಆಹಾರ ಮಾರಿ ಹೊಟ್ಟೆ ಹೊರೆಯುವ ಸ್ಥಿತಿ ತಲುಪಿದ್ದಾನೆ.


ಕಾಬೂಲ್‌: ತಾಲಿಬಾನ್ ಉಗ್ರರು ಅಫ್ಘಾನ್ ದೇಶದ ಮೇಲೆ ಹಿಡಿತ ಸಾಧಿಸಿದಾಗಿನಿಂದ ಅಫ್ಘಾನಿಸ್ತಾನವು ಸಾಕಷ್ಟು ಆರ್ಥಿಕ ಸಂಕಷ್ಟ ಮತ್ತು ರಾಜಕೀಯ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ. ಹೆಣ್ಣು ಮಕ್ಕಳ ಸ್ಥಿತಿಯಂತೂ ತೀವ್ರ ಶೋಚನೀಯವಾಗಿದೆ. ಮಹಿಳಾ ಟಿವಿ ನಿರೂಪಕರಿಗೆ ಮುಖ ಮುಚ್ಚಿಯೇ ನಿರೂಪಣೆ ಮಾಡುವಂತೆ ಈ ಹಿಂದೆ ಖಡಕ್ ಆದೇಶ ಹೊರಡಿಸಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಮಧ್ಯೆ ಟಿವಿ ನಿರೂಪಕನಾಗಿ ಕೆಲಸ ಮಾಡಿದ್ದ ಯುವಕ ದೇಶದಲ್ಲಿ ಎದುರಾದ ಆರ್ಥಿಕ ಸಂಕಷ್ಟದಿಂದ ಕೆಲಸ ಕಳೆದಕೊಂಡಿದ್ದಾನೆ. ನಿರೂಪಕನಾಗಿದ್ದ ಈತ ಬೀದಿ ಬದಿ ಆಹಾರ ಮಾರಿ ಹೊಟ್ಟೆ ಹೊರೆಯುವ ಸ್ಥಿತಿ ತಲುಪಿದ್ದಾನೆ. ಇದು ಅಫ್ಘಾನ್‌ನಲ್ಲಿ ತಾಲಿಬಾನ್ ಆಡಳಿತದ ನಂತರ ನಾಗರಿಕರ ಸ್ಥಿತಿ ಹೇಗಿದೆ ಎಂಬುದನ್ನು ತೋರಿಸುತ್ತಿದೆ. 

ಈ ಹಿಂದೆ ಹಮೀದ್ ಕರ್ಜಾಯ್ ಸರ್ಕಾರದೊಂದಿಗೆ ಕೆಲಸ ಮಾಡಿದ ಕಬೀರ್ ಹಕ್ಮಲ್ ಅವರ ತಮ್ಮ ಇತ್ತೀಚಿನ ಟ್ವಿಟರ್ ಪೋಸ್ಟ್‌ನಲ್ಲಿ ಬೀದಿ ಬದಿ ಆಹಾರ ಮಾರುತ್ತಿರುವ ಟಿವಿ ನಿರೂಪಕನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ರಾಷ್ಟ್ರದಲ್ಲಿ ಎಷ್ಟು ಪ್ರತಿಭಾವಂತ ವೃತ್ತಿಪರರು ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ ಎಂಬುದನ್ನು ಇದು ತೋರಿಸುತ್ತಿದೆ. ಹಕ್ಮಲ್ ಅವರು ಅಫ್ಘಾನ್ ಪತ್ರಕರ್ತ ಮೂಸಾ ಮೊಹಮ್ಮದಿ ಅವರ ಫೋಟೋವನ್ನು ಪೋಸ್ಟ್ ಮಾಡಿದ್ದು, ಮೊಹಮ್ಮದಿ ಹಲವು ವರ್ಷಗಳ ಕಾಲ ಮಾಧ್ಯಮ ಕ್ಷೇತ್ರದ ಭಾಗವಾಗಿದ್ದರು. ಆದಾಗ್ಯೂ, ಅಫ್ಘಾನಿಸ್ತಾನದಲ್ಲಿ ಉಂಟಾದ ಭೀಕರ ಆರ್ಥಿಕ ಪರಿಸ್ಥಿತಿಯ ನಡುವೆ, ಅವರು ಈಗ ತಮ್ಮ ಜೀವನವನ್ನು ನಡೆಸಲು ಆಹಾರವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಬರೆದಿದ್ದಾರೆ.

Latest Videos

undefined

ಮೂಸಾ ಮೊಹಮ್ಮದಿ (Musa Mohammadi) ಅವರು ವಿವಿಧ ಟಿವಿ ಚಾನೆಲ್‌ಗಳಲ್ಲಿ ಆಂಕರ್ ಮತ್ತು ವರದಿಗಾರರಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. ಆದರೆ ಈಗ ಅವರ ಕುಟುಂಬವನ್ನು ಪೋಷಿಸಲು ಅವರಿಗೆ ಯಾವುದೇ ಆದಾಯವಿಲ್ಲ. ಮತ್ತು ಸ್ವಲ್ಪ ಹಣವನ್ನು ಗಳಿಸಲು ಬೀದಿಯಲ್ಲಿ ಆಹಾರವನ್ನು ಮಾರಾಟ ಮಾಡುತ್ತಾರೆ. ಗಣರಾಜ್ಯದ ಪತನದ ನಂತರ ಆಫ್ಘನ್ನರು ಭಾರಿ ಬಡತನವನ್ನು ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು.

‘ಮುಖ ಮುಚ್ಕೊಂಡ್ ಸುದ್ದಿ ಓದಿ’: ತಾಲಿಬಾನಿಗಳ ತಲೆಬೇನೆ: ಅಬ್ಬೇಪಾರಿಯಾದ ಟಿವಿ ಆ್ಯಂಕರ್ಸ್‌

ಮೊಹಮ್ಮದಿ ಅವರ ಈ ಸ್ಥಿತಿ ಈಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಇದು ರಾಷ್ಟ್ರೀಯ ರೇಡಿಯೋ ಮತ್ತು ದೂರದರ್ಶನದ ಮಹಾನಿರ್ದೇಶಕ ಅಹ್ಮದುಲ್ಲಾ ವಾಸಿಕ್ ಅವರ ಗಮನವನ್ನು ಸೆಳೆದಿದೆ. ಅವರು ಟ್ವೀಟ್‌ಗೆ ಪ್ರತಿಕ್ರಿಯಿಸಿ ಅಹ್ಮದುಲ್ಲಾ ವಾಸಿಕ್ (Ahmadullah Wasiq) ಅವರು ಮೂಸಾ ಮೊಹಮ್ಮದಿ ಅವರನ್ನು ತಮ್ಮ ಇಲಾಖೆಗೆ ನೇಮಿಸುವುದಾಗಿ ತಿಳಿಸಿದ್ದಾರೆ.

ಖಾಸಗಿ ಟಿವಿ ಚಾನೆಲ್‌ನಲ್ಲಿ ಸುದ್ದಿ ನಿರೂಪಕರಾಗಿದ್ದ ಮೂಸಾ ಮೊಹಮ್ಮದಿ ಅವರ ನಿರುದ್ಯೋಗ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೀಡಾಗಿದೆ. ವಾಸ್ತವವಾಗಿ ರಾಷ್ಟ್ರೀಯ ರೇಡಿಯೋ ಮತ್ತು ದೂರದರ್ಶನದ ನಿರ್ದೇಶಕರಾಗಿ, ನಾವು ಅವರಿಗೆ ಭರವಸೆ ನೀಡುತ್ತೇವೆ. ರಾಷ್ಟ್ರೀಯ ರೇಡಿಯೋ ಮತ್ತು ದೂರದರ್ಶನದ ಚೌಕಟ್ಟಿನೊಳಗೆ ಅವರನ್ನು ನೇಮಿಸಿಕೊಳ್ಳುತ್ತೇವೆ ನಮಗೆ ಎಲ್ಲಾ ಅಫ್ಘಾನ್ ವೃತ್ತಿಪರರು ಬೇಕು ಎಂದು ಅವರು ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. 

ಸಾರ್ವಜನಿಕ ಸ್ಥಳಗಳಲ್ಲಿ ಅಡಿಯಿಂದ ಮುಡಿವರೆಗೆ ಮಹಿಳೆಯರಿಗೆ ಬುರ್ಖಾ ಕಡ್ಡಾಯ ಮಾಡಿದ ತಾಲಿಬಾನ್!

ತಾಲಿಬಾನ್  ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಂದಿನಿಂದ, ದೇಶವು ಮಾನವೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಪತ್ರಕರ್ತರು, ವಿಶೇಷವಾಗಿ ಮಹಿಳೆಯರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.  ತಾಲಿಬಾನ್ ಉಗ್ರರು ಮಾಧ್ಯಮಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ.

ರಾಯಿಟರ್ಸ್ ಪ್ರಕಾರ, 2021 ರ ಕೊನೆಯ ನಾಲ್ಕು ತಿಂಗಳುಗಳಲ್ಲಿ ಅಫ್ಘಾನಿಸ್ತಾನದ ತಲಾ ಆದಾಯವು ಮೂರನೇ ಒಂದು ಭಾಗದಷ್ಟು ಕುಸಿದಿರುವುದರಿಂದ ಅಫ್ಘಾನಿಸ್ತಾನದ ಆರ್ಥಿಕತೆಯ ದೃಷ್ಟಿಕೋನವು ಭೀಕರವಾಗಿದೆ ಎಂದು ವಿಶ್ವ ಬ್ಯಾಂಕ್ ಇತ್ತೀಚೆಗೆ ಹೇಳಿದೆ. ವಿಶ್ವದ ಬಡ ದೇಶಗಳಲ್ಲಿ ಒಂದು ಮತ್ತಷ್ಟು ಹೆಚ್ಚು ಬಡವಾಗಿದೆ ಎಂದು ಅಫ್ಘಾನಿಸ್ತಾನದ ವಿಶ್ವಬ್ಯಾಂಕ್‌ನ (World Bank) ಹಿರಿಯ ಅರ್ಥಶಾಸ್ತ್ರಜ್ಞ ಟೋಬಿಯಾಸ್ ಹಕ್ (Tobias Haque) ಹೇಳಿದ್ದಾರೆ.
 

click me!