ಮೊಸಳೆ ಎಂದರೆ ಯಾರಿಗೆ ಭಯ ಇರಲ್ಲ ಹೇಳಿಲ್ಲ. ಮೊಸಳೆ ಬಂತೆಂದರೆ ಎಲ್ಲರೂ ದೂರ ಓಡುವವರೇ ಹೆಚ್ಚು. ಭಯಾನಕ ಸರೀಸೃಪ ಹಾಗೂ ಉಭಯವಾಸಿಯಾದ ಮೊಸಳೆ ಯಾವಾಗ ದಾಳಿ ಮಾಡುತ್ತದೆ ಎಂದು ಹೇಳಲಾಗದು, ಅಂತಹದ್ದರಲ್ಲಿ ಇಲ್ಲೊಬ್ಬ ವ್ಯಕ್ತಿ ಮೊಸಳೆ ಮೇಲೆಯೇ ಸವಾರಿ ಮಾಡಿದ್ದಾನೆ. ಹೌದು ಇಂತಹ ಭಯಾನಕ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎದೆ ನಡುಗಿಸುತ್ತಿದೆ.
ಈ ವೀಡಿಯೋ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಆಗಿದೆ. ವೀಡಿಯೋದಲ್ಲಿ ಕೆರೆಯೊಂದರ ಸಮೀಪ ವ್ಯಕ್ತಿಯೊಬ್ಬ ಮೊಸಳೆಯ ಮೇಲೆ ಆನೆ ಮೇಲೆ ಸವಾರಿ ಮಾಡಿದಂತೆ ಕುಳಿತು ಸವಾರಿ ಮಾಡುತ್ತಿದ್ದಾನೆ. ಮೊಸಳೆ ಕೂಡ ಒಳ್ಳೆ ಮೂಡ್‌ನಲ್ಲಿತ್ತೋ ಏನೋ ತನ್ನ ಮೇಲೆಯೇ ಸವಾರಿ ಮಾಡಿದ ಈ ಹುಲು ಮಾನವನನ್ನು ಸುಮ್ಮನೇ ಬಿಟ್ಟು ಸೀದಾ ಕೆರೆಗಿಳಿದಿದೆ. ಮೊಸಳೆಯ ಮೇಲೆ ಮೊದಲಿಗೆ ಕುಳಿತು ನಂತರ ಮಲಗಿ ಆತ ಸವಾರಿ ಮಾಡುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.
ಮೊಸಳೆಗಳು ಯಾವ ಸಮಯದಲ್ಲಿ ದಾಳಿ ಮಾಡುತ್ತವೆ ಎಂದು ಹೇಳಲಾಗದು ಹೀಗಿರುವಾಗ ಈತನ ಹುಚ್ಚು ಧೈರ್ಯ ನೋಡಿದ ಜನ ಈತನಿಗೇನಾಗಿದೆ ಎಂದು ಕಾಮೆಂಟ್‌ನಲ್ಲಿ ಕೇಳಿದ್ದಾರೆ. ಸಾವಿರಾರು ಜನ ಈ ವೀಡಿಯೋ ವೀಕ್ಷಿಸಿದ್ದು, ಈ ವ್ಯಕ್ತಿ ಡೈನೋಸಾರ್ ಮೇಲೆಯೂ ರೈಡ್ ಮಾಡ್ಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ವೀಡಿಯೋ ನೋಡಿದ ಕೆಲವರು ವ್ಯಕ್ತಿಯ ಕೃತ್ಯವನ್ನು ಖಂಡಿಸಿದ್ದಾರೆ. ಇದು ವನ್ಯಜೀವಿ ಸುರಕ್ಷತೆ ಹಾಗೂ ಮಾನವ ಸುರಕ್ಷತೆ ಎರಡಕ್ಕೂ ಅಡ್ಡಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇದು ಕೇವಲ ಅಪಾಯಕಾರಿ ಮಾತ್ರವಲ್ಲ ವನ್ಯಜೀವಿಗಳ ನೈಜ ಗುಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮೊಸಳೆಯಂತಹ ಅಪಾಯಕಾರಿ ಪ್ರಾಣಿಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಅಗತ್ಯದ ಬಗ್ಗೆ ಅನೇಕರು ಒತ್ತಿ ಹೇಳಿದ್ದಾರೆ. ಆದರೆ ಮತ್ತೆ ಕೆಲವರು ವ್ಯಕ್ತಿಯ ಕಾರ್ಯವನ್ನು ಸಾಹಸ ಧೈರ್ಯದ ಸಂಕೇತವೆಂಬಂತೆ ಕೊಂಡಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ