ಮಂದಿರದ ಹುಂಡಿಯ ಹಣ ಎಣಿಸುವಾಗ 1.25 ಲಕ್ಷ ರೂಪಾಯಿ ಕಟ್ಟು ಹಾಗೂ ಕ್ಷಮಾಪಣೆ ಪತ್ರವೊಂದು ಸಿಕ್ಕಿದೆ. ಈ ಪತ್ರದಲ್ಲಿ ಬರೋಬ್ಬರಿ 27 ವರ್ಷ ಹಿಂದೆ ನಡೆದ ಘಟನೆ ಹಾಗೂ ಅದಕ್ಕೆ ಪ್ರಾಯಶ್ಚಿತವನ್ನೂ ವಿವರಿಸಲಾಗಿತ್ತು. ಅಷ್ಟಕ್ಕೂ 27 ವರ್ಷಗಳ ಹಿಂದೆ ಆ ಮಂದಿರದಲ್ಲಿ ಏನಾಗಿತ್ತು?
ದಕ್ಷಿಣ ಕೊರಿಯಾ(ಸೆ.20) ಬರೋಬ್ಬರಿ 27 ವರ್ಷಗಳ ಹಿಂದೆ ನಡೆದ ಘಟನೆಯೊಂದು ಇದೀಗ ಹುಂಡಿಯಲ್ಲಿ ಸಿಕ್ಕ 1.25 ಲಕ್ಷ ರೂಪಾಯಿ ಹಾಗೂ ಕ್ಷಮಾಪಣೆ ಪತ್ರದಿಂದ ಬಯಲಾಗಿದೆ. ಹೌದು, ಬಾಲಕನೊಬ್ಬ ದೇವಸ್ಥಾನದಿಂದ 1,885 ರೂಪಾಯಿ ಕಳ್ಳತನ ಮಾಡಿದ್ದ. ಆದರೆ 27 ವರ್ಷಗಳ ಬಳಿಕ ಅದೇ ಬಾಲಕ ಅದೇ ಮಂದಿರಕ್ಕೆ ಕಳ್ಳತನ ಮಾಡಿದ್ದ ಪ್ರಾಯಶ್ಚಿತಕ್ಕೆ 1.25 ಲಕ್ಷ ರೂಪಾಯಿ ನೀಡಿ ದೇವರಿಗೆ ಕ್ಷಮಾಪಣೆ ಪತ್ರವನ್ನೂ ಹಾಕಿದ್ದಾನೆ. ಈ ವಿಶೇಷ ಘಟನೆ ನಡೆದಿರುವುದು ದಕ್ಷಿಣ ಕೊರಿಯಾದ ಪುರಾತನ ದೇವಾಲಯದಲ್ಲಿ.
ಚೀನಾದ ಸೌತ್ ಮಾರ್ನಿಂಗ್ ಪೋಸ್ಟ್ ಈ ಘಟನೆಯನ್ನು ವರದಿ ಮಾಡಿದೆ. ಸೌತ್ ಕೊರಿಯಾದ ಜಜಂಗಮ್ ಹೆರ್ಮಿಟೇಜ್ ತೊಂಗ್ದೊಸ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. 1997ರಲ್ಲಿ ಏಷ್ಯಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಇದರ ಪರಿಣಾಮ ದಕ್ಷಿಣ ಕೊರಿಯಾದಲ್ಲಿ ತೀವ್ರ ಪರಿಣಾಮ ಬೀರಿತ್ತು. ಜನರು ಕೆಲಸ ಕಳೆದುಕೊಂಡರು, ಜೀವನ ಕಷ್ಟವಾಗಿತ್ತು. ಇಂದಿನಷ್ಟು ಸೌಕರ್ಯಗಳು, ಆಯ್ಕೆಗಳು ಇರಲಿಲ್ಲ. ಹಲವರು ಹಸಿವಿನಿಂದ ಮೃತಪಟ್ಟಿದ್ದರು.
undefined
ಮುಕ್ಕೋಟಿ ದೇವರು ಸಾಲದು ಅಂತಾ ಏಲಿಯನ್ ದೇವರು ಹೆಸರಲ್ಲಿ ದೇವಸ್ಥಾನ ಕಟ್ಟಿದ ಭೂಪ!
ಈ ವೇಳೆ ದಕ್ಷಿಣ ಕೊರಿಯಾದಲ್ಲಿ ಕಳ್ಳತನ ಹೆಚ್ಚಾಗಿತ್ತು. ಇದೀಗ ದೇವಸ್ಥಾನದ ದೇಣಿಗೆ ಬಾಕ್ಸ್‌ಗೆ ಹಾಕಿದ್ದ 1.25 ಲಕ್ಷ ರೂಪಾಯಿ ಹಾಗೂ ಕ್ಷಮಾಪಣಾ ಪತ್ರದಲ್ಲಿ ಈ ಸಂಪೂರ್ಣ ಘಟನೆಯನ್ನು ವ್ಯಕ್ತಿಯನ್ನು ವಿವರಿಸಿದ್ದಾನೆ. 1997ರಲ್ಲಿ ಬಾಲಕನೊಬ್ಬ ಮಂದಿರದಲ್ಲಿನ ದೇಣಿಗೆ ಸಂಗ್ರಹ ಬಾಕ್ಸ್‌ನಿಂದ 1885 ರೂಪಾಯಿ ಕಳ್ಳತನ ಮಾಡಿದ್ದ. ಈ ಹಣವನ್ನು ಮೀನಿನ ಬಲೆಯಲ್ಲಿ ಸುತ್ತಿಕೊಂಡು ಮನೆಗೆ ಸಾಗಿಸಿದ್ದೆ ಎಂದು ಹೇಳಿಕೊಂಡಿದ್ದಾನೆ.
ಮೊದಲ ಕಳ್ಳತನ ಯಶಸ್ವಿಯಾದ ಕಾರಣ ಮತ್ತೆ ಅದೇ ದೇವಾಲಯದಲ್ಲಿ ಕಳ್ಳತನ ಮಾಡಲು ಆಗಮಿಸಿದ್ದೆ, ಈ ಬಾರಿ ದೇವಾಲಯದ ಅರ್ಚಕರು ನನ್ನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ನಾನು ಭಯದಿಂದ ಬೆವತು ಹೋಗಿದ್ದೆ. ಆದರೆ ಅರ್ಚಕರು ನನ್ನ ಕೈಗಳನ್ನು ಹಿಡಿದು ಕಣ್ಣುಮುಚ್ಚಲು ಹೇಳಿದರು. ಬಳಿಕ ನಿಧಾನವಾಗಿ ಜೀವನ ಮೌಲ್ಯಗಳನ್ನು ತಿಳಿಸಿದರು. ಕಳ್ಳತನ, ಪರರ ಸಂಪತ್ತಿಗೆ ಕೈಹಾಕಿದರೆ ಜೀವನದಲ್ಲಿ ಸಂತೋಷವೇ ಇರಲಾರದು ಎಂದು ಬುದ್ಧಿವಾದ ಹೇಳಿದ್ದರು. ಆದರೆ ನನ್ನನ್ನು ಪೊಲೀಸರಿಗಾಗಲಿ, ನನ್ನ ಪೋಷಕರಿಗಾಗಲೇ ನೀಡಲಿಲ್ಲ. ಈ ಘಟನೆ ನನ್ನಲ್ಲಿ ಪರಿವರ್ತನೆ ತಂದಿತ್ತು ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾನೆ.
ಬಳಿಕ ಸತತ ಪರಿಶ್ರಮದ ಮೂಲಕ ನಾನು ಕೆಲಸ ಗಿಟ್ಟಿಸಿಕೊಂಡೆ.ಆದರೆ ಈ ಘಟನೆ ಮಾತ್ರ ನನ್ನನ್ನು ಕಾಡುತ್ತಲೇ ಇತ್ತು. ಹೀಗಾಗಿ ನಾನು ಕದ್ದ ಹಣಕ್ಕಿಂತ 70 ಪಟ್ಟು ಹೆಚ್ಚು ಹಣವನ್ನು ಇದೀಗ ದೇಣಿಗೆಯಾಗಿ ನೀಡುತ್ತಿದ್ದೇನೆ. ನನ್ನ ತಪ್ಪನ್ನು ಕ್ಷಮಿಸಬೇಕು ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾನೆ. ಇಷ್ಟೇ ಅಲ್ಲ ನಾನು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇನೆ. ಕೆಲ ದಿನಗಳಲ್ಲಿ ನಾನು ಅಪ್ಪನಾಗುತ್ತೇನೆ. ನನಗೆ ಆಶೀರ್ವಾದ ಮಾಡಿ ಎಂದು ಕ್ಷಮಾಪಣಾ ಪತ್ರದಲ್ಲಿ ಬರೆದಿದ್ದಾನೆ.
ಈ ಕ್ಷಮಾಪಣೆ ಪತ್ರ ಹಾಗೂ 1.25 ಲಕ್ಷ ರೂಪಾಯಿ ದೇಣಿಗೆ ಮಾಹಿತಿ ವೇಗವಾಗಿ ಎಲ್ಲೆಡೆ ಹರಿದಾಡಿದೆ. ಹಲವು ಮಾಧ್ಯಮಗಳು ದೇವಸ್ಥಾನಕ್ಕೆ ಆಗಮಿಸಿ ಅದೇ ಅರ್ಚಕರ ಬಳಿಯಲ್ಲಿ ಈ ಘಟನೆ ಕುರಿತು ಮಾಹಿತಿ ಪಡೆದಿದೆ. ಈ ವೇಳೆ ಅರ್ಚಕರು 27 ವರ್ಷದ ಹಿಂದಿನ ಘಟನೆ ನನಗೆ ನೆನಪಿದೆ. ಆದರೆ ಈ ಬಾಲಕನ ಕುರಿತು ನೆನಪಿಲ್ಲ. ಈಗ ಪ್ರಾಯಶ್ಚಿತ್ತವಾಗಿ ದೇಣಿಗೆ ನೀಡಿದ್ದಾರೆ. ತಪ್ಪು ಮಾಡಿ ಅದನ್ನು ತಿದ್ದಿಕೊಳ್ಳುವುದೇ ಉತ್ತಮ ಗುಣ. ಆತ ಪರಿವರ್ತನೆಯಾಗಿದ್ದೇನೆ ಅನ್ನೋದು ನನಗೆ ಖುಷಿ. ಪ್ರಾಯಶ್ಚಿತವಾಗಿ 1..25 ಲಕ್ಷ ರೂಪಾಯಿ ದೇಣಿಗೆ ನೀಡಿರುವುದು ಆತನ ಖುಷಿ ಎಂದು ಅರ್ಚಕರು ಹೇಳಿದ್ದಾರೆ.
ಚಾಮರಾಜನಗರ: ಗೋಕುಲಾಷ್ಟಮಿ ಪ್ರಸಾದ ತಿಂದು 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥ