
ಬೈರೂತ್: ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಉಗ್ರರು ಬಳಸುತ್ತಿದ್ದ ಪೇಜರ್, ವಾಕಿಟಾಕಿ, ರೇಡಿಯೋ ಸೆಟ್‌ಗಳು ಸ್ಫೋಟಗೊಂಡ ಬೆನ್ನಲ್ಲೇ, ಲೆಬನಾನ್ ಮತ್ತು ಇಸ್ರೇಲ್ ನಡುವೆ ಸಂಘರ್ಷ ಆರಂಭವಾಗಿದೆ.ಮಂಗಳವಾರ ಮತ್ತು ಬುಧವಾರದ ಸ್ಫೋಟದ ಬೆನ್ನಲ್ಲೇ ಇಸ್ರೇಲ್ ಸೇನೆ, ನೆರೆಯ ಲೆಬನಾನ್ ಗಡಿಗೆ ತನ್ನ ಹೆಚ್ಚಿನ ಸಂಖ್ಯೆಯ ಯೋಧರ ನಿಯೋಜಿಸಿ ವೈಮಾನಿಕ ದಾಳಿ ನಡೆಸಿತ್ತು. ಜೊತೆಗೆ ಗುರುವಾರ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರುಲ್ಲಾ ದೇಶವನ್ನು ಉದ್ದೇಶಿಸಿ ಮಾತನಾಡುವ ವೇಳೆ ಮತ್ತೊಂದು ಸುತ್ತಿನಲ್ಲಿ ವೈಮಾನಿಕ ದಾಳಿ ನಡೆಸಿದೆ.
ಇನ್ನೊಂದೆಡೆ ಇಸ್ರೇಲ್ ದಾಳಿಗೆ ಪ್ರತಿಯಾಗಿ ಹಿಜ್ಬುಲ್ಲಾ ಉಗ್ರರು ಕೂಡಾ ಗುರುವಾರ ಭಾರೀ ಪ್ರಮಾಣದಲ್ಲಿ ರಾಕೆಟ್ ಬಳಸಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ತನ್ನ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರುವ ಸಾಧ್ಯತೆ ಇದೆ ಎಂಬ ಭೀತಿ ಸೃಷ್ಟಿಯಾಗಿದೆ.
ಇಸ್ರೇಲ್‌ನಿಂದ ಪೇಜರ್ ದಾಳಿ ಬಳಿಕ ಹಿಜ್ಬುಲ್ಲಾ ಉಗ್ರರಿಗೆ ತಿಂಡಿ ತಿನ್ನಲು, ಶೌಚಾಲಯಕ್ಕೆ ಹೋಗಲೂ ಭಯ!
ಲೆಬನಾನ್‌ನಲ್ಲಿ ಪೇಜರ್, ವಾಕಿಟಾಕಿ ಸ್ಫೋಟದ ಬಳಿಕ ರಾಜಧಾನಿ ಬೈರೂತ್ ರಫಿಕ್ ಹರಿರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಎಲ್ಲ ವಿಮಾನಗಳಲ್ಲಿಯೂ ಪೇಜರ್ ಮತ್ತು ವಾಕಿಟಾಕಿ ಬಳಕೆಗೆ ನಿರ್ಬಂಧ ವಿಧಿಸಿ ಲೆಬನಾನ್ ನಾಗರಿಕ ವಿಮಾನಯಾನ ಸಂಸ್ಥೆ ಆದೇಶ ಹೊರಡಿಸಿದೆ, ಮುಂದಿನ ಆದೇಶದವರೆಗೂ ವಿಮಾನಗಳಲ್ಲಿ ಪೇಜರ್ ಮತ್ತು ವಾಕಿಟಾಕಿಗಳನ್ನು ಬಳಸಬಾರದು ವಿಮಾನ ನಿಲ್ದಾಣದ ಅಧಿಕಾರಿಗಳು, ಪ್ರಯಾಣಿಕರಿಗೆ ಈ ಬಗ್ಗೆ ಸೂಚನೆ ನೀಡಬೇಕೆಂದು ನಾಗರಿಕ ವಿಮಾನಯಾನ ಸಂಸ್ಥೆ ಹೇಳಿದೆ. ಅಲ್ಲದೇ ಒಂದು ವೇಳೆ ಪೇಜರ್ , ವಾಕಿಟಾಕಿ ಬಳಕೆ ಕಂಡುಬಂದಲ್ಲಿ ಅಧಿಕಾರಿಗಳು ಅದನ್ನು ವಶ ಪಡಿಸಿಕೊಳ್ಳುತ್ತಾರೆ ಎಂದಿದೆ.
ಲೆಬನಾನ್ ಹಾಗೂ ಸಿರಿಯಾದಲ್ಲಿರುವ ಹಿಜ್ಬುಲ್ಲಾ ಉಗ್ರರು ಬಳಸುತ್ತಿದ್ದ, ಇಸ್ರೇಲ್‌ನಿಂದ ದಾಳಿಗೆ ತುತ್ತಾದ ಪೇಜರ್‌ಗಳು ಹಂಗೇರಿಯ ಬುಡಾಪೆಸ್ಟ್‌ನಲ್ಲಿ ತಯಾರಾಗಿದ್ದವು ಎಂದು ತಿಳಿದುಬಂದಿದೆ. ತೈವಾನ್ ಮೂಲದ ಗೋಲ್ಡ್ ಅಪೋಲೋ ಕಂಪನಿಯ ಪೇಜರ್‌ಗಳನ್ನು ಉಗ್ರರು ಬಳಸುತ್ತಿದ್ದರು. ಆದರೆ ಆ ಬ್ರ್ಯಾಂಡ್ ಬಳಕೆ ಮಾಡಲು ತಾವು ಹಂಗೇರಿಯ ಬಿಎಸಿ ಕನ್ಸಲ್ಟಿಂಗ್ ಕೆಎಫ್‌ಟಿ ಕಂಪನಿಗೆ ಅನುಮತಿ ನೀಡಿದ್ದೆವು ಎಂದು ಗೋಲ್ಡ್ ಅಪೋಲೋ ಹೇಳಿಕೊಂಡಿದೆ. ಉಗ್ರರ ಮೇಲೆ ತಾನು ನಡೆಸಿದ ಪೇಜರ್ ಬಾಂಬ್ ದಾಳಿ ಕುರಿತು ಇಸ್ರೇಲ್ ಸರ್ಕಾರ ಅಮೆರಿಕದ ಅಧಿಕಾರಿಗಳಿಗೆ ಮಂಗಳವಾರವೇ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಇಸ್ರೇಲ್ ಮೈಂಡ್ ಗೇಮ್: ಹಿಜ್ಬುಲ್ಲಾ ಉಗ್ರರಿಗೆ ಮೊಸಾದ್ ಮಣ್ಣು ಮುಕ್ಕಿಸಿದ್ದೇಗೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ