ದೈತ್ಯ ಹಾವಿನೊಂದಿಗೆ ಯುವಕನ ಚೆಲ್ಲಾಟ: ಫೋಟೋಗೆ ಸಖತ್ ಪೋಸ್

By Suvarna NewsFirst Published Aug 14, 2022, 9:57 AM IST
Highlights

ಹಾವು ಎಂದರೆ ಹೆದರಿ ಹೌಹಾರಿ ಎದ್ನೋ ಬಿದ್ನೋ ಅಂತ ಓಡಿ ಹೋಗೋರೆ ಹೆಚ್ಚು. ಆದರೆ ಇಲ್ಲೊಬ್ಬ ಭೂಪ, ದೈತ್ಯ ಹಾವಿನ ಬಾಲವನ್ನು ಕೈಯಲ್ಲಿ ಹಿಡಿದುಕೊಂಡು ಫೋಟೋಗೆ ಪೋಸ್‌ ನೀಡಿದ್ದು, ಈತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾವು ಎಂದರೆ ಹೆದರಿ ಹೌಹಾರಿ ಎದ್ನೋ ಬಿದ್ನೋ ಅಂತ ಓಡಿ ಹೋಗೋರೆ ಹೆಚ್ಚು. ಆದರೆ ಇಲ್ಲೊಬ್ಬ ಭೂಪ, ದೈತ್ಯ ಹಾವಿನ ಬಾಲವನ್ನು ಕೈಯಲ್ಲಿ ಹಿಡಿದುಕೊಂಡು ಫೋಟೋಗೆ ಪೋಸ್‌ ನೀಡಿದ್ದು, ಈತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರ್ಥ್‌ಫಿಕ್ಸ್ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ವಿಡಿಯೋದಲ್ಲಿ ತನ್ನನ್ನು ತಾನು ವೃತ್ತಿಯಿಂದ ಸೈಂಟಿಸ್ಟ್ ಎಂದು ಹೇಳಿಕೊಂಡಿರುವ ಮೈಕ್ ಹೊಲ್ಟನ್‌ ಎಂಬಾತ ದೈತ್ಯ ಗಾತ್ರದ ಹಾವಿನೊಂದಿಗೆ ಯಾವುದೇ ಹೆದರಿಕೆ ಇಲ್ಲದೇ ಅದರ ಬಾಲವನ್ನು ಕೈಯಲ್ಲಿ ಹಿಡಿದುಕೊಂಡು ಫೋಟೋಗಳಿಗೆ ಫೋಸ್ ನೀಡುತ್ತಿದ್ದಾನೆ. ಈತನ ವರ್ತನೆ ಹಾವನ್ನು ಕೆಣಕುವಂತೆ ಕಾಣುತ್ತಿದ್ದು, ಹಾವು ಕೂಡ ದಾಳಿ ಮಾಡಲು ಯತ್ನಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಬಾಲದ ಭಾಗದಿಂದ ಈತ ಹಾವನ್ನು ಎತ್ತಿಕೊಂಡು ಬರುತ್ತಿದ್ದಂತೆ ಹಾವು ಒಮ್ಮೆಗೆ ಈತನತ್ತ ತಿರುಗಿ ದಾಳಿ ಮಾಡಲು ಮುಂದಾಗುತ್ತದೆ. ಆದರೆ ಈತನ ಅದೃಷ್ಟ ಚೆನ್ನಾಗಿತ್ತೇನೋ ಈತ ಕ್ಷಣದಲ್ಲಿ ಹಾವಿನ ದಾಳಿಯಿಂದ ಪಾರಾಗುತ್ತಾನೆ. ಆದಾಗ್ಯೂ ಆತ ಹಾವನ್ನು ಬಿಟ್ಟು ಬಿಡುವುದಿಲ್ಲ. ಸುಮ್ಮನೆ ಅದರ ಬಾಲವನ್ನು ಮುಟ್ಟುತ್ತಾ ಅದನ್ನು ಮತ್ತೆ ಮತ್ತೆ ಕೆಣಕುತ್ತಾನೆ. 

ಹಾವುಗಳು ಅತ್ಯಂತ ವಿಷಕಾರಿ ಹಾಗೂ ಅಪಾಯಕಾರಿ ಸರೀಸೃಪಗಳಾಗಿದ್ದು, ಕೆಲವೊಮ್ಮೆ ಯಾವಾಗ ದಾಳಿ ಮಾಡುತ್ತವೆ ಎಂದು ಹೇಳಲಾಗದು. ಇಲ್ಲಿಯೂ ಈತನ ವರ್ತನೆ ನೋಡಿದ ಹಾವು ಸಿಟ್ಟಿನಿಂದ ಬುಸಗುಡುತ್ತಾ ಹೆಡೆ ಎತ್ತಿ ದಾಳಿ ಮಾಡಲು ಮುಂದಾಗುತ್ತದೆ. ಆದಾಗ್ಯೂ ಈತನ ಆಯಸ್ಸು ಗಟ್ಟಿ ಇತ್ತು ಎನಿಸುತ್ತೆ. ಸಾವಿನಿಂದ ಪಾರಾಗಿದ್ದಾನೆ. ಆದರೆ ವಿಡಿಯೋ ನೋಡಿದ ಅನೇಕರು ಈತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳನ್ನು ಅವುಗಳಷ್ಟಕ್ಕೆ ನೆಮ್ಮದಿಯಾಗಿ ಇರಲು ಬಿಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ್ದಾರೆ ಸಿಟ್ಟು ಬರುತ್ತಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

 

ಇನ್ನು ಈ ವಿಡಿಯೋದಲ್ಲಿರುವ  ಮೈಕ್ ಹೊಲ್ಟನ್ ನಿಜ ಜೀವನದ ತರ್ಜನ್ ಎಂದು ಪರಿಗಣಿಸಲಾಗುತ್ತಿದೆ. ಏಕೆಂದರೆ ಈತ ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಲವು ಭಯಾನಕ ಹಾಗೂ ಅಪಾಯಕಾರಿಯಾದಂತಹ ಹಾವುಗಳು, ಮೊಸಳೆಗಳು, ಕುಮುಡೊ ಡ್ರಾಗನ್, ಗೊರಿಲ್ಲಾ ಮುಂತಾದ ಪ್ರಾಣಿಗಳ ಜೊತೆ ಒಡನಾಡುತ್ತಿರುವ ಸಾಕಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 

ಬಿಹಾರದ ಶಾಕಿಂಗ್ ಫೋಟೋ ವೈರಲ್, ವಿಷಸರ್ಪಗಳನ್ನು ಹಿಡಿದು ಕುಣಿದ ಜನ, ಮಕ್ಕಳ ಕೈಯ್ಯಲ್ಲೂ ಹಾವುಗಳು!

ಹಾವು ಎಂದ ಕೂಡಲೇ ಪ್ರತಿಯೊಬ್ಬರಿಗೂ ಭಯವಾಗುತ್ತೆ. ಹಾವು ಕಚ್ಚಿದ್ರೆ, ಅದ್ರ ವಿಷ ಮೈಗೆ ಸೇರಿಕೊಂಡ್ರೆ, ಸಾವೇ ಗತಿ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಒಟ್ಟಲ್ಲಿ ಹಾವಿನ ವಿಷವನ್ನು ಸಾಕಷ್ಟು ಮಾರಣಾಂತಿಕವೆಂದು ಪರಿಗಣಿಸಲಾಗಿದೆ. ಆದರೆ ಇದು ಅನೇಕ ಗಂಭೀರ ರೋಗಗಳನ್ನು ಗುಣಪಡಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಹಾವಿನ ಹೆಸರನ್ನು ತೆಗೆದುಕೊಂಡ ತಕ್ಷಣ, ಅದರ ಅಪಾಯಕಾರಿ ವಿಷವು ನಮ್ಮ ಮನಸ್ಸಿನಲ್ಲಿ ಬರುತ್ತದೆ. ಅನೇಕ ಜನರು ಹಾವಿನ ಹೆಸರು ಕೇಳಿದ ಕೂಡಲೇ ತುಂಬಾ ಹೆದರುತ್ತಾರೆ. ಇತರ ಋತುಗಳಿಗಿಂತ ಮಳೆಗಾಲದಲ್ಲಿ ಹಾವುಗಳು ಹೆಚ್ಚು ಹೊರಬರುತ್ತವೆ. ಇದರಿಂದ ಅಪಾಯ ಹೆಚ್ಚಾಗುತ್ತದೆ.

ನಾಗರ ಪಂಚಮಿ: ಹಾವುಗಳ ಕುರಿತ ಈ ವಿಷ್ಯ ಕೇಳಿದ್ರೆ ಅಚ್ಚರಿ ಪಡ್ತೀರಾ..

ಅದೇ ಸಮಯದಲ್ಲಿ, ಈ ಸೀಸನ್ ನಲ್ಲಿ ಹಾವು ಕಡಿತದ ಪ್ರಕರಣಗಳು ಸಹ ಹೆಚ್ಚು. ಭಾರತವನ್ನು 'ಹಾವುಗಳ ದೇಶ' ಎಂದು ಕರೆಯಲಾಗುತ್ತಿತ್ತು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು, ಆದರೆ ಯುಎಸ್‌ನಲ್ಲಿ ಹಾವು ಕಡಿತದ ಪ್ರಕರಣವು  (Snake Bite) ವಿಶ್ವದಲ್ಲೇ ಅತ್ಯಧಿಕವಾಗಿದೆ. ಆದಾಗ್ಯೂ, ಯುಎಸ್ ನಲ್ಲಿ ಸರಿಯಾದ ಸಮಯ ಮತ್ತು ಉತ್ತಮ ಚಿಕಿತ್ಸೆಯಿಂದಾಗಿ ಸಾವಿನ ಸಂಖ್ಯೆ ಭಾರತಕ್ಕಿಂತ ಕಡಿಮೆಯಾಗಿದೆ. 

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ ಪ್ರತಿ ವರ್ಷ ಸುಮಾರು ಐದು ಮಿಲಿಯನ್ ಹಾವು ಕಡಿತದ ಘಟನೆಗಳು ವರದಿಯಾಗುತ್ತವೆ, ಅದರಲ್ಲಿ 100,000 ಕ್ಕೂ ಹೆಚ್ಚು ಜನರು ಸಾಯುತ್ತಾರೆ. ಹಾವಿನ ವಿಷವನ್ನು ಜನರ ದೇಹಕ್ಕೆ ಎಷ್ಟು ಅಪಾಯಕಾರಿಯೋ ಅಷ್ಟೇ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಹೌದು, ಹಾವಿನ ವಿಷವನ್ನು ದೇಹದ ಅನೇಕ ರೋಗಗಳನ್ನು ತೆಗೆದುಹಾಕಲು ಬಳಸಲಾಗುತ್ತದೆ.  ಮೊದಲನೆಯದಾಗಿ ದೇಹದಿಂದ ಹಾವಿನ ವಿಷ ತೆಗೆಯಲು ಹಾವಿನ ವಿಷವೇ (Snake Venom) ಬೇಕಾಗುತ್ತದೆ. ಹೊಲಗದ್ದೆಗಳಲ್ಲಿ ಅಥವಾ ತೋಟಗಳಲ್ಲಿ ಹಾವುಗಳನ್ನು ನೋಡಿದ ತಕ್ಷಣ, ನೀವು ಭಯದಿಂದ ಓಡಿಹೋಗಿರಬಹುದು, ಆದರೆ ಅದು ತೋಟ ಮತ್ತು ಹೊಲಗಳಿಗೆ ಸಾಕಷ್ಟು ಒಳ್ಳೆಯದು ಎಂದು ಪರಿಗಣಿಸಲಾಗಿದೆ. 

click me!