
ಅತಿ ಬ್ಯುಸಿ ಇರುವವರಲ್ಲಿ ಟೈಲರ್ (Tailor) ಕೂಡ ಒಬ್ಬರು. ಎಂದೂ ಅವರ ಕೈ ಖಾಲಿ ಇರೋದಿಲ್ಲ. ಮದುವೆ ಸೀಸನ್ ಬಂದ್ರೆ ಅವರ ಕೆಲಸ ಡಬಲ್ ಆಗುತ್ತೆ. ನಾಳೇನೇ ಬೇಕು, ಎರಡೇ ದಿನಕ್ಕೆ ಬೇಕು ಎನ್ನುವವರ ಸಂಖ್ಯೆ ಸಿಕ್ಕಾಪಟ್ಟೆ ಇರುತ್ತೆ. ನಾಲ್ಕೈದು ದಿನಕ್ಕೆ ಬಟ್ಟೆ ಹೋಲಿದು ಕೊಡೊ ಚಾನ್ಸೆ ಇಲ್ಲ. ಒಂದು ತಿಂಗಳಾದ್ರೂ ಅನೇಕ ಬಾರಿ ಡ್ರೆಸ್ ಸಿಗೋದಿಲ್ಲ. ಹಾಗಾಗಿಯೇ ಮದುವೆ, ಸಮಾರಂಭಕ್ಕೆ ಮೂರ್ನಾಲ್ಕು ತಿಂಗಳಿದೆ ಅನ್ನೋವಾಗ್ಲೇ ಬಟ್ಟೆಯನ್ನು ಟೈಲರ್ ಕೈಗೆ ನೀಡುವವರಿದ್ದಾರೆ. ಇಲ್ಲ ಅಂದ್ರೆ ತುರ್ತು ಪರಿಸ್ಥಿತಿಯಲ್ಲಿ ಹೊಸ ಬಟ್ಟೆ ಬಿಟ್ಟು ಇರೋ ಬಟ್ಟೆಯಲ್ಲೇ ಅಡ್ಜೆಸ್ಟ್ ಮಾಡಿಕೊಳ್ಬೆಕಾಗುತ್ತೆ. ಟೈಲರ್ ಸರಿಯಾದ ಟೈಂಗೆ ಬಟ್ಟೆ ನೀಡ್ಲಿಲ್ಲ ಅಂದ್ರೆ ನಾವೆಲ್ಲ ಅವರಿಗೆ ಹಿಡಿಶಾಪ ಹಾಕಿ ಬೇರೆ ಮಾರ್ಗ ಏನಿದೆ ಅಂತ ನೋಡ್ತೇವೆ. ಆದ್ರೆ ಈ ವ್ಯಕ್ತಿ ಸ್ವಲ್ಪ ಭಿನ್ನವಾಗಿ ವರ್ತಿಸಿದ್ದಾನೆ. ಟೈಲರ್ ತನ್ನ ಬಟ್ಟೆಯನ್ನು ಸರಿಯಾದ ಟೈಂಗೆ ನೀಡ್ಲಿಲ್ಲ ಎನ್ನುವ ಕಾರಣಕ್ಕೆ ಕೋರ್ಟ್ ಮೊರೆ ಹೋಗಿದ್ದಾನೆ. ತನಗೆ ಪರಿಹಾರ ನೀಡ್ಬೇಕು ಅಂತ ಆಗ್ರಹಿಸಿದ್ದಾನೆ.
ಪಾಕಿಸ್ತಾನ (Pakistan)ದ ಕರಾಚಿಯಲ್ಲಿ ಈ ಘಟನೆ ನಡೆದಿದೆ. ಯುವಕನೊಬ್ಬ ನಿಶ್ಚಿತಾರ್ಥದಲ್ಲಿ ಧರಿಸಲು ಬಟ್ಟೆ ಖರೀದಿಸಿದ್ದ. ಅದನ್ನು ಸ್ಟಿಚ್ ಮಾಡೋಕೆ ಟೈಲರ್ ಕೈಗೆ ನೀಡಿದ್ದಾನೆ. ಆದ್ರೆ ಟೈಲರ್ ಸರಿಯಾದ ಸಮಯಕ್ಕೆ ಬಟ್ಟೆಯನ್ನು ನೀಡಿಲ್ಲ. ನಿಶ್ಚಿತಾರ್ಥದ ದಿನ ಅವನ ಪ್ಲಾನ್ ಉಲ್ಟಾ ಆಗಿದೆ. ಬೇರೆ ಡ್ರೆಸ್ ಧರಿಸಿ ನಿಶ್ಚಿತಾರ್ಥ ಮುಗಿಸುವಂತಾಗಿದೆ. ಇದ್ರಿಂದ ಬೇಸರಗೊಂಡ ವ್ಯಕ್ತಿ, ಕೋರ್ಟ್ ಮೊರೆ ಹೋಗಿದ್ದಾನೆ. ಕೋರ್ಟ್ ನಲ್ಲಿ ಟೈಲರ್ ವಿರುದ್ಧ ಪ್ರಕರಣ ದಾಖಲಿಸಿದ್ದ.
Baby Bonus Plan: ಅಮೇರಿಕಾದಲ್ಲಿ ಮಗು ಮಾಡಿಕೊಂಡರೆ 4.25 ಲಕ್ಷ ಬೋನಸ್; ಟ್ಯಾಕ್ಸ್ ಫ್ರೀ!
ವ್ಯಕ್ತಿ ಪ್ರಕಾರ, ಆತನ ಅಣ್ಣನ ನಿಶ್ಚಿತಾರ್ಥ ಫಿಕ್ಸ್ ಆಗಿತ್ತು. ನಿಶ್ಚಿತಾರ್ಥಕ್ಕೆ ಬಟ್ಟೆ ಖರೀದಿಸಿದ್ದ ವ್ಯಕ್ತಿ, ಅದನ್ನು ಹೊಲಿದುಕೊಡುವಂತೆ ಟೈಲರ್ ಗೆ ಹೇಳಿದ್ದ. ಇಬ್ಬರ ಮಧ್ಯೆ ಮಾತುಕತೆ ನಡೆದಿತ್ತು. ನಿಶಿತಾರ್ಥಕ್ಕೆ ಮೊದಲೇ ಬಟ್ಟೆ ನೀಡುವುದಾಗಿ ಟೈಲರ್ ಹೇಳಿದ್ದ. ಇಬ್ಬರ ಮಧ್ಯೆ ಆಗಾಗ ಮಾತುಕತೆ ಕೂಡ ನಡೆಯುತ್ತಿತ್ತು. ವ್ಯಕ್ತಿ, ಆಗಾಗ ಟೈಲರ್ ಅಂಗಡಿಗೆ ಹೋಗಿ ವಿಚಾರಿಸಿದ್ದಾನೆ. ಇಷ್ಟಾದ್ರೂ ಟೈಲರ್ ನಿರ್ಲಕ್ಷ್ಯ ತೋರಿದ್ದಾನೆ. ಆತ ಸರಿಯಾದ ಸಮಯಕ್ಕೆ ಬಟ್ಟೆ (clothes) ನೀಡಲಿಲ್ಲ. ನಿಶ್ಚಿತಾರ್ಥ (engagement)ದ ದಿನವೂ ವ್ಯಕ್ತಿಗೆ ನಿರಾಸೆಯಾಗಿದೆ. ಅಣ್ಣನ ಎಂಗೇಜ್ಮೆಂಟ್ ದಿನ ತಮ್ಮ, ಮತ್ತ್ಯಾವುದೋ ಡ್ರೆಸ್ ಧರಿಸಿದ್ದಾನೆ. ಅವನಿಷ್ಟದ ಹೊಸ ಬಟ್ಟೆ ಧರಿಸಲು ಸಾಧ್ಯವಾಗ್ಲಿಲ್ಲ. ಇದ್ರಿಂದ ನೊಂದಿದ್ದ ವ್ಯಕ್ತಿ, ಟೈಲರ್ ವಿರುದ್ಧ ಸಮರ ಸಾರಿದ್ದ,. ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ.
Woman Caught Red-Handed: ಚಡ್ಡಿ ಕದ್ದು, ಒಂದರ ಮೇಲೆ ಒಂದು
ಪರಿಹಾರ ಮತ್ತು ಶಿಕ್ಷೆಗೆ ಆಗ್ರಹ : ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವ ವ್ಯಕ್ತಿ, ಟೈಲರ್ ಗೆ 1 ಲಕ್ಷ ರೂಪಾಯಿ ದಂಡ ವಿಧಿಸುವಂತೆ ಒತ್ತಾಯಿಸಿದ್ದಾನೆ. 50 ಸಾವಿರ ರೂಪಾಯಿಯನ್ನು ದಂಡದ ರೂಪದಲ್ಲಿ ನೀಡ್ಬೇಕು ಹಾಗೂ 50 ಸಾವಿರ ರೂಪಾಯಿಯನ್ನು ಮಾನಸಿಕ ಹಿಂಸೆ ಅನುಭವಿಸಿದ್ದಕ್ಕಾಗಿ ನೀಡ್ಬೇಕು ಎಂದು ಆತ ಆಗ್ರಹಿಸಿದ್ದಾನೆ. ಟೈಲರ್ ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸದ ಕಾರಣ ನನ್ನ ಸಹೋದರನ ನಿಶ್ಚಿತಾರ್ಥಕ್ಕೆ ನಾನು ಇನ್ನೊಂದು ಡ್ರೆಸ್ ಖರೀದಿಸಬೇಕಾಯಿತು ಎಂದು ಯುವಕ ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಮಾಹಿತಿಯ ಪ್ರಕಾರ, ಡಿಸೆಂಬರ್ 2024 ಮತ್ತು ಜನವರಿ 2025 ರ ನಡುವೆ ಬಲೂಚಿ ಕಸೂತಿ ಕೆಲಸಕ್ಕಾಗಿ ಟೇಲ್ಗೆ ಬಟ್ಟೆಗಳನ್ನು ನೀಡಿದ್ದ ಎನ್ನಲಾಗಿದೆ. ಅಲ್ಲದೆ ಮುಂಗಡ ಪಾವತಿಯನ್ನು ಸಹ ಮಾಡಿದ್ದನಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ