ಬರೋಬ್ಬರಿ 1,435 ಅಡಿ ಎತ್ತರದ ಕಟ್ಟಟದ ತುತ್ತ ತುದಿಯಲ್ಲಿ ನಿಂತ ಸಾಹಸಿ ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಭಯಾನಕ ವಿಡಿಯೋ ನೋಡಲು ಗುಂಡಿಗೆ ಗಟ್ಟಿ ಬೇಕು.
ನ್ಯೂಯಾರ್ಕ್(ಆ.01) ಸೋಶಿಯಲ್ ಮೀಡಿಯಾಗಳ ವಿಡಿಯೋಗಾಗಿ ಹಲವರು ಹುಚ್ಚು ಸಾಹಸ ಮಾಡಿ ಗಮನಸೆಳೆಯುತ್ತಾರೆ. ಜೊತೆಗೆ ಅಪಾಯಕ್ಕೂ ಆಹ್ವಾನ ನೀಡುತ್ತಾರೆ. ಇದೀಗ ಯುವಕನೊಬ್ಬ ಬರೋಬ್ಬರಿ 1,435 ಎತ್ತರದ ಕಟ್ಟಡದ ತುತ್ತ ತುದಿಗೆ ಹತ್ತಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ವಿಡಿಯೋ ನೋಡಲು ಗಂಡಿಗೆ ಗಟ್ಟಿ ಇರಬೇಕು. ಇದೀಗ ಮೈ ಜುಮ್ಮೆನಿಸುವ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನ್ಯೂಯಾರ್ಕ್ ನಗರದಲ್ಲಿರುವ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮೇಲೆ ಹತ್ತಿ ಈ ಸಾಹಸ ಮಾಡಿದ್ದಾನೆ. ಕಟ್ಟದ ತುದಿಯಲ್ಲಿ ಅಳವಡಿಸಿರುವ ಆ್ಯಂಟಿನಾ ಮೇಲೆ ಹತ್ತಿ ಎರಡೂ ಕೈಗಳನ್ನು ಬಿಟ್ಟು ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಸೆಲ್ಫಿ ಸ್ಟಿಕ್ ಹಿಡಿದು ಕಟ್ಟಡದ ಮೇಲೆ ಹತ್ತಿದ ಈ ಸಾಹಸ ಮಾಡಿದ್ದಾನೆ. livejn ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
undefined
ಫೋಟೋಶೂಟ್ ವೇಳೆ ರೈಲಿನಿಂದ ಪ್ರಾಣಉಳಿಸಲು 90 ಅಡಿ ಎತ್ತರದ ಹಳಿಯಿಂದ ಹಾರಿದ ಜೋಡಿ!
ಎಂಪೈರ್ ಸ್ಟೇಟ್ ಬಿಲ್ಡಿಂಗ್ ಎತ್ತರ 1,435 ಅಡಿ. ಕಟ್ಟದ ಮೇಲೆ ಏರಿಯಲ್ ಅಳವಡಿಸಲಾಗಿದೆ. ಈ ಕಬ್ಬಿಣದ ಏರಿಯಲ್ ಹತ್ತಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಹುಚ್ಚು ಸಾಹಸದ ವಿಡಿಯೋ ಬರೋಬ್ಬರಿ 49 ಮಿಲಿಯನ್ ವೀಕ್ಷಣೆ ಪಡೆದಿದೆ. ಹಲವರು ಈತನ ಸಾಹಸವನ್ನು ಮೆಚ್ಚಿಕೊಂಡಿದ್ದರೆ,ಮತ್ತೆ ಕೆಲವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ರೀತಿ ಹುಚ್ಚು ಸಾಹಸ ಮಾಡಲು ಅವಕಾಶ ನೀಡಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.
ಈ ವಿಡಿಯೋ ನೋಡಿದ ಹಲವರು ಸುರಕ್ಷಿತವಾಗಿ ಕೆಳಗೆ ಇಳಿಯಲಾಗಿದೆಯಾ ಎಂದು ಪ್ರಶ್ನಿಸಿದ್ದರೆ. ಬಹುತೇಕರು ಈ ವಿಡಿಯೋ ನೋಡುವಾಗಲೇ ಮೈ ಜುಮ್ಮೆನಿಸುತ್ತಿದೆ. ಅಷ್ಟು ಎತ್ತರದಲ್ಲಿ ಗಾಳಿ ರಭಸದಲ್ಲೂ ಈತ ಕೈಗಳನ್ನು ಬಿಟ್ಟು ನಿಂತಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಈ ರೀತಿಯ ಸಾಹಸ ವಿಡಿಯೋ ಮಾಡಬೇಡಿ. ನಿಮಗೆ ಅಭ್ಯಾಸವಾಗಿರಬಹುದು. ಆದರೆ ಅಚಾನಕ್ಕಾಗಿ ವಿಡಿಯೋ ನೋಡಿ ನಾವು ಚೇತರಿಸಿಕೊಳ್ಳಲು ಕೆಲ ಸಮಯ ಹಿಡಿಯಲಿದೆ ಎಂದು ಕಮೆಂಟ್ ಮಾಡಿದ್ದಾರೆ.
ಈ ರೀತಿ ಅಪಾಯಕಾರಿ ವಿಡಿಯೋಗೆ ಅವಕಾಶ ನೀಡಬಾರದು ಅನ್ನೋ ಚರ್ಚೆಗಳು ಶುರುವಾಗಿದೆ. ಈ ಬಾರಿ ಸುರಕ್ಷಿತವಾಗಿ ಇಳಿದಿರಬಗುದು. ಆದರೆ ಈ ರೀತಿ ಮತ್ತೆ ಮತ್ತೆ ಸಾಹಸ ಮಾಡಿದರೆ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಕಟ್ಟಡ, ಟವರ್ ಮೇಲ ಹತ್ತಿ ಸಾಹಸ ಮಾಡಲು ಅಧಿಕಾರಿಗಳು ಅವಕಾಶ ನೀಡಬಾರದು. ಈ ವಿಡಿಯೋ ಆಧರಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರೈನ್ ಡ್ಯಾನ್ಸ್ ರೀಲ್ಸ್ ಮಾಡುತ್ತಿದ್ದ ವೇಳೆ ಬಡಿದ ಸಿಡಿಲು, ಕೊದಲೆಳೆ ಅಂತರದಲ್ಲಿ ಯವತಿ ಪಾರು!