Israel–Hamas war: ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್  ಇರಾನ್‌ನಲ್ಲಿ  ಹತ್ಯೆ

By Gowthami K  |  First Published Jul 31, 2024, 9:38 AM IST

ಹಮಾಸ್ ರಾಜಕೀಯ ನಾಯಕ ಇಸ್ಮಾಯಿಲ್ ಹನಿಯೆಹ್ ನನ್ನು ಟೆಹ್ರಾನ್‌ನಲ್ಲಿ ಕೊಲ್ಲಲಾಗಿದೆ ಎಂದು ಇರಾನ್ ಸರ್ಕಾರಿ ಸ್ಪಷ್ಟಪಡಿಸಿದೆ.


ಇರಾನ್ (ಜು.31): ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್  ಇರಾನ್‌ನಲ್ಲಿ  ಹತ್ಯೆಯಾಗಿದ್ದಾನೆ ಎಂದು ಹಮಾಸ್‌ ಉಗ್ರಗಾಮಿ ಸಂಘಟನೆ ತನ್ನ ಹೇಳಿಕೆಯಲ್ಲಿ ಖಚಿತಪಡಿಸಿದೆ.  ಇರಾನ್‌ನ ಹೊಸ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ  ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರು ಇರಾನ್‌ನಲ್ಲಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ  ಟೆಹ್ರಾನ್‌ನಲ್ಲಿರುವ ಅವರ ನಿವಾಸದ ಮೇಲೆ ಇಸ್ರೇಲಿ ನಡೆಸಿದ ದಾಳಿಯಲ್ಲಿ ಹನಿಯೆಹ್ ಕೊಲ್ಲಲ್ಪಟ್ಟರು ಎಂದು ಹಮಾಸ್   ಉಗ್ರಗಾಮಿ ಸಂಘಟನೆ ಹೇಳಿದೆ.

ಹಮಾಸ್ ರಾಜಕೀಯ ನಾಯಕ ಇಸ್ಮಾಯಿಲ್ ಹನಿಯೆಹ್ ನನ್ನು ಟೆಹ್ರಾನ್‌ನಲ್ಲಿ ಕೊಲ್ಲಲಾಗಿದೆ ಎಂದು ಇರಾನ್ ಸರ್ಕಾರಿ ಮಾಧ್ಯಮವು ಬುಧವಾರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅನ್ನು ಉಲ್ಲೇಖಿಸಿ ವರದಿ ಮಾಡಿದೆ. ಹನಿಯೆಹ್ ಅವರ ನಿವಾಸದ ಮೇಲೆ ದಾಳಿ ಮಾಡಿ ಕೊಲ್ಲಲಾಗಿದೆ ಎಂದು ತಿಳಿಸಿದೆ. ಘಟನೆಯಲ್ಲಿ ಅವರ ಅಂಗ ರಕ್ಷಕ ಕೂಡ ಹತರಾಗಿದ್ದಾರೆ.

Tap to resize

Latest Videos

undefined

wayanad landslide ಮನ ಕಲುಕಿದ ಶವಗಳ ನಡುವೆ ತಮ್ಮವರಿಗಾಗಿ ಹುಡುಕಾಟ, ಸಿಕ್ಕಿದವರ ಕಣ್ಣಲ್ಲಿ ನೀರು

1980 ರ ಸಮಯದಲ್ಲಿ  ಹಮಾಸ್‌ ಉಗ್ರಸಂಘಟನೆಗೆ ಸೇರಿದ ನಂತರ  ಗುಂಪಿನಲ್ಲಿ ಹನಿಯೆಹ್ ದೀರ್ಘಕಾಲದ ಹಿರಿಯ ನಾಯಕರಾಗಿದ್ದರು. ಆತ್ನಿಗೆ 62 ವರ್ಷ ವಯಸ್ಸಾಗಿತ್ತು. 1989 ರಲ್ಲಿ ಮೊದಲ ಪ್ಯಾಲೆಸ್ತೀನ್ ದಂಗೆಯನ್ನು ಹತ್ತಿಕ್ಕಿದ ಆರೋಪದಲ್ಲಿ ಇಸ್ರೇಲ್ ಹನಿಯೆಯನ್ನು ಮೂರು ವರ್ಷಗಳ ಕಾಲ ಜೈಲಿನಲ್ಲಿಟ್ಟಿತು. ನಂತರ   1992 ರಲ್ಲಿ ಹಲವಾರು ಹಮಾಸ್ ನಾಯಕರೊಂದಿಗೆ ಇಸ್ರೇಲ್ ಮತ್ತು ಲೆಬನಾನ್ ನಡುವೆ ಯಾರೂ ಇಲ್ಲದ ದೇಶಕ್ಕೆ ಗಡಿಪಾರು ಮಾಡಲಾಗಿತ್ತು.

wayanad landslide: ಯಾರಾದರೂ ಬಂದು ನಮ್ಮನ್ನು ಕಾಪಾಡಿ....! ಸಂಬಂಧಿಕರಿಗೆ ಕರೆ ಮಾಡಿ ಮಹಿಳೆಯ ಆರ್ತನಾದ

ಹಮಾಸ್ ರಾಷ್ಟ್ರೀಯ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದ ಬಳಿಕ ಅಧ್ಯಕ್ಷ ಮಹಮೂದ್ ಅಬ್ಬಾಸ್,  2006 ರಲ್ಲಿ ಪ್ಯಾಲೇಸ್ತೀನಿಯನ್ ಪ್ರಧಾನಿಯಾಗಿ ಹನಿಯೆಹ್ ನನ್ನು ನೇಮಿಸಿದರು. ಆದರೆ ಒಂದು ವಾರಗಳ ಕಾಲ ಗಾಜಾ ಪಟ್ಟಿಯಲ್ಲಿ ನಡೆದ ಮಾರಣಾಂತಿಕ ಹಿಂಸಾಚಾರದ ಆರೋಪದ ಮೇಲೆ ಒಂದು ವರ್ಷಗಳ ನಂತರ ಆತನನ್ನು ಹನಿಯೆಹ್ ನನ್ನು ಪ್ರಧಾನಿ ಸ್ಥಾನದಿಂದ ಉಚ್ಚಾಟಿಸಲಾಯಿತು. ಆದರೆ ಇದನ್ನು ಅಸಂವಿಧಾನಿಕ ಎಂದು ಹೇಳಿದ ಹನಿಯೆಹ್ ಗಾಜಾದಲ್ಲಿ ಆಳ್ವಿಕೆಯನ್ನು ಮುಂದುವರೆಸಿದನು.

click me!