ಚಳಿಗೆ ಬೆಂಕಿ ಕಾಯಿಸಲು ಒಲೆಯಲ್ಲಿ ನೋಟುಗಳನ್ನು ಸುಟ್ಟ ಅಸಾಮಿ; ಇವನಿಗೇನು ಹುಚ್ಚು ಹಿಡಿದಿದೆಯಾ?

By Sathish Kumar KH  |  First Published Dec 13, 2024, 12:41 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಮನೆಯ ಚಿಮಣಿಯಲ್ಲಿ ಹಣವನ್ನು ಸುಟ್ಟು ಬೆಂಕಿ ಕಾಯಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಈ ವ್ಯಕ್ತಿ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ಫೆಡರ್ ಬಾಲ್ವನೋವಿಚ್ ಎಂದು ಗುರುತಿಸಲಾಗಿದೆ.


ವೈರಲ್ ಸುದ್ದಿ: ಮನೆಯ ಹೊರಗಡೆ ತುಂಬಾ ಚಳಿ ಆಗುತ್ತಿದೆಯೆಂದು ಮನೆಯಲ್ಲಿದ್ದ ಒಲೆಯಲ್ಲಿ (ಚಿಮಣಿ) ಹಣವನ್ನು ಸುಡುತ್ತಾ ಬೆಂಕಿ ಕಾಯಿಸಿಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶ್ರೀಮಂತರಿಗೆ ಹಣದ ಬೆಲೆಯೇ ಗೊತ್ತಿರುವುದಿಲ್ಲ. ಅವರು ತಮ್ಮ ಸುಖಕ್ಕಾಗಿ, ಶೋಕಿ ಜೀವನಕ್ಕಾಗಿ ಮತ್ತು ತಮ್ಮನ್ನು ತಾವು ತೋರಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ, ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಹೀಗೆ ಚಳಿ ಕಾಯಿಸಲು ಹಣದ ಕಂತೆ ಕಂತೆ ನೋಟುಗಳನ್ನು ಸುಡುತ್ತಿರುವ ವ್ಯಕ್ತಿ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ಫೆಡರ್ ಬಾಲ್ವನೋವಿಚ್ ಎಂಬಾತನಾಗಿದ್ದಾನೆ. ಶ್ರೀಮಂತರಿಗೆ ಹಣದ ಬೆಲೆ ಇರಲ್ಲ, ಅವ್ರ ಸುಖಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ. ಅದರಲ್ಲಿಯೂ ಕಷ್ಟ ಪಡದೇ ಬಂದ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬ ಜ್ಞಾನವೂ ಇಲ್ಲದವರು ಹೀಗೆ ಮಾಡುತ್ತಾರೆ. ಇಲ್ಲಿ ನಾವು ಅಂಥದ್ದೇ ಒಬ್ಬ ವ್ಯಕ್ತಿಯ ಬಗ್ಗೆ ನಾವು ಇಲ್ಲಿ ನಿಮಗೆ ಹೇಳುತ್ತಿದ್ದೇವೆ ನೋಡಿ..

Tap to resize

Latest Videos

ಫೆಡರ್ ಬಾಲ್ವನೋವಿಚ್ ತೀವ್ರ ಚಳಿಗೆ ನಡುಗುತ್ತಾ ಮನೆಯಲ್ಲಿದ್ದ ಚಿಮಣಿಗೆ ನೋಟುಗಳ ಕಟ್ಟುಗಳನ್ನೇ ಹಾಕಿ ಸುಟ್ಟು ಬೆಂಕಿ ಕಾಯಿಸಿಕೊಂಡಿದ್ದಾನೆ. 70-80ರ ದಶಕದ ಸಿನಿಮಾಗಳಲ್ಲಿ ಶ್ರೀಮಂತರ ಬಂಗಲೆಗಳಲ್ಲಿ ಚಿಮಣಿ ನೋಡಿರುತ್ತೀರಿ ಅಲ್ವಾ?,ಅದರಲ್ಲಿ ಸಿನಿಮಾ ಹೀರೋ, ಹಿರೋಯಿನ್ ರೊಮ್ಯಾನ್ಸ್ ಮಾಡುತ್ತಿರುತ್ತಾರೆ. ಇಲ್ಲದೇ ಖಳನಾಯಕ ಮನೆಯ ಚಿಮಣಿಯ ಬಳಿ ಕುಳಿತು ಸಿಗರೇಟ್ ಸೇದುತ್ತಾ ನಾಯಕನ ಮೇಲೆ ಕುತಂತ್ರ ಮಾಡುವುದರ ಡೈಲಾಗ್ ಹೊಡೆಯುತ್ತಾನೆ. ಆದರೆ, ಈ ಚಿಮಣಿಗಳು ಹೊರಗಿನ ಚಳಿ ವಾತಾವರಣ ತಡೆಗಟ್ಟಿ ಮನೆಯಲ್ಲಿ ಬೆಚ್ಚಗಿಡಲು ಬಳಸುತ್ತಾರೆ.

undefined

ಇನ್ನು ಕೆಲವು ಸಂದರ್ಭದಲ್ಲಿ ದೇಹದ ತಾಪ ತೋರಿಸವುದಕ್ಕೆ, ಕೋಪದ ಸಂಕೇತವಾಗಿ ತೋರಿಸುವುದಕ್ಕೆ ಬಳಕೆ ಮಾಡುತ್ತಿದ್ದರು. ಆದರೆ ಪ್ರತಿಸಲ ಚಿಮಣಿಯಲ್ಲಿ ಉರುವಲು ಅಥವಾ ಕಲ್ಲಿದ್ದಲು ಇರೋದೇ ತೋರಿಸುತ್ತಿದ್ದರು. ಈಗ ಅದೇ ಚಿಮಣಿ ವಿಡಿಯೋ ವೈರಲ್ ಆಗುತ್ತಿದೆ. ಆದರೆ, ಇಲ್ಲಿ ಬೆಂಕಿ ಉರಿಯೋಕೆ ನೋಟುಗಳ ಕಟ್ಟುಗಳನ್ನ ಬಳಸಿದ್ದಾರೆ.

ಇದನ್ನೂ ಓದಿ: ಗೋಡ್ಸೆ ಜೀವನಾಧಾರಿತ ಸಿನಿಮಾಗೆ ರಿಷಭ್ ಶೆಟ್ಟಿಯೇ ಸೂಕ್ತ ವ್ಯಕ್ತಿ!

ಮನೆ ಬಿಸಿ ಮಾಡೋಕೆ ಕೋಟಿ ಕೋಟಿ ರೂಪಾಯಿ ಸುಟ್ಟರಾ?:
@mr.good.luck_ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರೋ ಈ ವಿಡಿಯೋದಲ್ಲಿ ಕಪ್ಪು ಕೋಟ್, ಸ್ಟೈಲಿಶ್ ಟೋಪಿ ಮತ್ತು ಸನ್‌ಗ್ಲಾಸ್ ಹಾಕಿರೋ ಯುವಕನ ಮನೆಯಲ್ಲಿ ಚಿಮಣಿ ಉರಿಯುತ್ತಿದೆ. ಈತ ಮೇಜಿನ ಮೇಲೆ ನೋಟುಗಳ ಕಟ್ಟುಗಳನ್ನ ಇಟ್ಟು ಒಂದೊಂದಾಗಿ ಬೆಂಕಿಗೆ ಹಾಕುತ್ತಿದ್ದಾನೆ. ಮೇಜಿನ ಮೇಲಿರೋ ಹಣ ಕೋಟಿ ಕೋಟಿ ಇರಬಹುದು. ಅದೆಲ್ಲವನ್ನೂ ಸುಟ್ಟು ಹಾಕಿ ಚಳಿ ಕಾಯಿಸಿಕೊಂಡಿದ್ದಾನೆ.

ನೋಟು ಸುಡುವ ವಿಡಿಯೋ ವೈರಲ್: ಇನ್ನು ನೋಟುಗಳಿಂದ ಬೆಂಕಿ ಕಾಯಿಸಿಕೊಂಡ ಈ ವ್ಯಕ್ತಿ ಫೆಡರ್ ಬಾಲ್ವನೋವಿಚ್ ಆಗಿದ್ದಾನೆ. ಅಮೆರಿಕದಲ್ಲಿ ವಾಸವಾಗಿರೋ ಈತ ಸಾಮಾಜಿಕ ಜಾಲತಾಣದ ಪ್ರಭಾವಿ ವ್ಯಕ್ತಿಯಾಗಿದ್ದಾನೆ. ವಿಚಿತ್ರ ವಿಡಿಯೋಗಳನ್ನ ಹಂಚಿಕೊಳ್ಳುವುದರಲ್ಲಿ ಈತ ಭಾರೀ ಫೇಮಸ್ ಆಗಿದ್ದಾನೆ. ನೋಟುಗಳ ಜೊತೆ ಆಟ ಆಡುತ್ತಿರುವುದು ಕೂಡ ಇದೇ ಮೊದಲಲ್ಲ. ಈ ಹಿಂದೆಯೂ ರಸ್ತೆಯಲ್ಲಿ ನೋಟುಗಳನ್ನ ಚೆಲ್ಲಾಪಿಲ್ಲಿಯಾಗಿ ಬೀಸಾಡಿ ಅದನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದನು. @mr.good.luck_ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರೋ ಈ ವಿಡಿಯೋಗೆ 13 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಸಿಕ್ಕಿದೆ. ಈ ವಿಡಿಯೋವನ್ನು 44 ಸಾವಿರ ಜನ ಲೈಕ್ ಮಾಡಿದ್ದಾರೆ.

ಇದನ್ನೂ ಓದಿ: ಶವ ಪೆಟ್ಟಿಗೆ ಒಳಗಿನಿಂದಲೇ ಕಣ್ತೆರೆದು ನೋಡಿದ ಮೃತ ಮಹಿಳೆ: ವಿಡಿಯೋ ವೈರಲ್!

click me!