
ಸಿಂಗಾಪುರ (ಜುಲೈ 7): ಮಾದಕವಸ್ತು ಕಳ್ಳಸಾಗಣೆ (drug trafficking ) ಆರೋಪದಲ್ಲಿ ಮರಣದಂಡನೆ (Death Penalty) ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ಮೂಲದ ಮಲೇಷ್ಯಾ ಪ್ರಜೆ ಕಲ್ವಂತ್ ಸಿಂಗ್‌ಗೆ (Kalwant Singh) ಸಿಂಗಾಪುರದಲ್ಲಿ (Singapore ) ಗಲ್ಲು ಶಿಕ್ಷೆ ಜಾರಿ ಮಾಡಲಾಗಿದೆ. ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಕಲ್ವಂತ್ ಅವರ ಕೊನೆಯ ಕ್ಷಣದ ಪ್ರಯತ್ನವನ್ನು ಸಿಂಗಾಪುರದ ನ್ಯಾಯಾಲಯ ಬುಧವಾರ ತಿರಸ್ಕರಿಸಿದ್ದವು.
ಅವರ ಸಾವನ್ನು ಸಿಂಗಾಪುರದ ಮಾನವ ಹಕ್ಕುಗಳ ಕಾರ್ಯಕರ್ತೆ ಕರ್ಸ್ಟನ್ ಹಾನ್ ಅವರು ತಮ್ಮ ಟ್ವೀಟ್‌ಗಳಲ್ಲಿ ಖಚಿತಪಡಿಸಿದ್ದಾರೆ.ಕಲ್ವಂತ್ ಅವರಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಮತ್ತು ಆರೋಪ ಹೊರಿಸಲಾದ ಸಿಂಗಾಪುರದ ನೋರಾಶರೀ ಗೌಸ್ ಅವರನ್ನೂ ಮಾದಕವಸ್ತು ಕಳ್ಳಸಾಗಣೆಗಾಗಿ ಗಲ್ಲಿಗೇರಿಸಲಾಗಿದೆ ಎಂದು ಹಾನ್ ಖಚಿತಪಡಿಸಿದ್ದಾರೆ.
"ಕಲ್ವಂತ್ ಸಿಂಗ್ ಕುಟುಂಬವು ಇನ್ನೂ ಜೈಲಿನಲ್ಲಿದೆ. ನಾನು ನೋರಾಶರಿಯ ಅಂತ್ಯಕ್ರಿಯೆಗೆ ಹೋಗುತ್ತಿದ್ದೇನೆ" ಎಂದು ಹಾನ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಎರಡೂ ಕುಟುಂಬಕ್ಕೆ ಅವರ ವಸ್ತುಗಳು ಮತ್ತು ಮರಣ ಪ್ರಮಾಣಪತ್ರವನ್ನು ನೀಡಲಾಯಿತು. ಜೂನ್ 30 ರಂದು ಸಿಂಗಾಪುರದ ಅಧಿಕಾರಿಗಳು ಕಲ್ವಂತ್ ಸಿಂಗ್‌ಗೆ ನೀಡಲಾದ ಗಲ್ಲು ಶಿಕ್ಷೆಯನ್ನು ಜುಲೈ 7 ರಂದು ಜಾರಿ ಮಾಡುವುದಾಗಿ ನೋಟಿಸ್ ನೀಡಿದ್ದರು.60 ಗ್ರಾಂ ಡೈಮಾರ್ಫಿನ್ ಕಳ್ಳ ಸಾಗಣೆ ಮಾಡಿದ್ದಕ್ಕಾಗಿ ಕಲ್ವಂತ್ ಅವರನ್ನು 2013 ರಲ್ಲಿ ಸಿಂಗಾಪುರದಲ್ಲಿ ಬಂಧಿಸಿ, ಚಾಂಗಿ ಜೈಲಿಯಲ್ಲಿ ಇಡಲಾಗಿತ್ತು. ಅಂದಾಜು ಮೂರು ವರ್ಷಗಳ ವಿಚಾರಣೆಯ ಬಳಿಕ 2016ರಲ್ಲಿ ಸಿಂಗಾಪುರದ ಕೋರ್ಟ್ ಅವರಿಗೆ ಗಲ್ಲು ಶಿಕ್ಷೆಯನ್ನು ನೀಡಿತ್ತು.
ಬುಧವಾರ ರಾತ್ರಿ, ಮರಣದಂಡನೆಯನ್ನು ತಡೆಯುವ ಪ್ರಯತ್ನದಲ್ಲಿ ಮಲೇಷ್ಯಾದ ಕೌಲಾಲಂಪುರದ ಸಿಂಗಾಪುರ್ ಹೈ ಕಮಿಷನ್ ಮುಂದೆ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು "ಪುತ್ರಜಯ ಸೇವ್ ಕಲ್ವಂತ್" ಮತ್ತು "ನಾವು ಮರಣದಂಡನೆ ಇಲ್ಲದೆ ಬದುಕಬಹುದು" ಎಂಬ ಸಂದೇಶವನ್ನು ಹೊಂದಿರುವ ಫಲಕಗಳನ್ನು ಹಿಡಿದುಕೊಂಡು "ಕಲ್ವಂತನನ್ನು ಉಳಿಸಿ" ಮತ್ತು "ಸಿಂಗಪುರ, ಹತ್ಯೆಯನ್ನು ನಿಲ್ಲಿಸಿ" ಎಂದು ಘೋಷಣೆಗಳನ್ನು ಕೂಗಿದರು ಎಂದು ಹೇಳಲಾಗಿದೆ.
ಏಪ್ರಿಲ್ 27 ರಂದು ಸಿಂಗಾಪುರವು ಸ್ಥಳೀಯ ಮತ್ತು ಅಂತರಾಷ್ಟ್ರೀಯ ಮನವಿಗಳ ಹೊರತಾಗಿಯೂ ಮಾದಕವಸ್ತು ಕಳ್ಳಸಾಗಣೆಗಾಗಿ ಮಲೇಷ್ಯಾದ ಪ್ರಜೆ ಭಾರತೀಯ ಮೂಲದ ಕೈದಿ ನಾಗೇಂದ್ರನ್ ಧರ್ಮಲಿಂಗಂನನ್ನು ಗಲ್ಲಿಗೇರಿಸಿತ್ತು.ಸಿಂಗಾಪುರಕ್ಕೆ 42.72 ಗ್ರಾಂ ಹೆರಾಯಿನ್ ಕಳ್ಳಸಾಗಣೆಗಾಗಿ 2010 ರಲ್ಲಿ ಮರಣದಂಡನೆಗೆ ಗುರಿಯಾದ 34 ವರ್ಷದ ನಾಗೇಂದ್ರನ್, ತನ್ನ ಮಗನ ಅಪರಾಧ ಮತ್ತು ಮರಣದಂಡನೆಯನ್ನು ರದ್ದುಗೊಳಿಸುವಂತೆ ಅವರ ತಾಯಿ ಸಲ್ಲಿಸಿದ ಕೊನೆಯ ಸವಾಲನ್ನು ಮೇಲ್ಮನವಿ ನ್ಯಾಯಾಲಯವು ವಜಾಗೊಳಿಸಿದ ನಂತರ ಗಲ್ಲಿಗೇರಿಸಲಾಗಿತ್ತು.
3 ತಿಂಗಳಲ್ಲಿ ಭಾರತೀಯ ಮೂಲದ 2ನೇ ಡ್ರಗ್ ಪೆಡ್ಲರ್‌ಗೆ ಗಲ್ಲು ಶಿಕ್ಷೆ ವಿಧಿಸಿದ ಸಿಂಗಾಪುರ!
ಅತ್ಯಂತ ಕಠಿಣ ಡ್ರಗ್ ಕಾನೂನು: ಸಿಂಗಾಪುರದಲ್ಲಿ ವಿಶ್ವದಲ್ಲಿಯೇ ಅತ್ಯಂತ ಕಠಿಣ ಎನ್ನಬಹುದಾದ ಡ್ರಗ್ ಕಾನೂನುಗಳಿವೆ. ಸಿಂಗಾಪುರದ ಪ್ರಜೆಯಾಗಿರುವ ವ್ಯಕ್ತಿ, ವಿದೇಶದಲ್ಲೂ ಕೂಡ ಡ್ರಗ್ ಸೇವಿಸಿ ಸಿಕ್ಕಿಬೀಳುವಂತಿಲ್ಲ. ಇನ್ನೇನಾದರೂ ಸಿಂಗಾಪುರ ದೇಶಕ್ಕೆ ಕನಿಷ್ಠ 15 ಗ್ರಾಂ ಡ್ರಗ್ಸ್ ಸಾಗಾಣೆ ಮಾಡಿ ಸಿಕ್ಕಿಬಿದ್ದರೂ, ಅವರಿಗೆ ಕಡ್ಡಾಯ ಗಲ್ಲು ಶಿಕ್ಷೆ ನೀಡಲಾಗುತ್ತದೆ.
Kaali Poster Controversy ಬುದ್ಧಿ ಕಲಿಯದ ಲೀನಾ, ಈಗ ಶಿವ ಪಾರ್ವತಿಗೂ ಅವಮಾನ!
ಉಳಿಸಿಕೊಳ್ಳುವ ಹೋರಾಟ ವಿಫಲ: ಕಲ್ವಂತ್ ಸಿಂಗ್‌ರನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡುವ ವಿಚಾರದಲ್ಲಿ ಕಲ್ವಂತ್ ಅವರ ಸಹೋದರಿ ಸೋನಿಯಾ ನಡೆಸಿದ್ದ ಅಂತಾರಾಷ್ಟ್ರೀಯ ಹೋರಾಟವೂ ವಿಫಲವಾಗಿದೆ. ಕಳೆದ ಮಂಗಳವಾರ ಕಲ್ವಂತ್ ಸಿಂಗ್‌ಗೆ ಕೊನೆಯ ಬಾರಿಗೆ ತನ್ನ ಕುಟುಂಬವನ್ನು ಭೇಟಿ ಮಾಡುವ ಅವಕಾಶ ನೀಡಲಾಗಿತ್ತು. ಈ ವೇಳೆ ಸಹೋದರಿ ಸೋನಿಯಾ ಹಾಗೂ ಕುಟುಂಬಸ್ಥರನ್ನು ನೆನಪಿಸಿಕೊಂಡು ಕಲ್ವಂತ್ ಸಿಂಗ್ ಕಣ್ಣೀರು ಹಾಕಿದ್ದ. ಆ ಬಳಿಕ ಆತನನ್ನು ಭೇಟಿ ಮಾಡುವ ಅವಕಾಶವನ್ನು ಸಿಂಗಾಪುರದ ಕೋರ್ಟ್ ನೀಡಿರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ