ಸುಮಾರು 43 ಗ್ರಾಂ ಹೆರಾಯಿನ್ ಕಳ್ಳಸಾಗಣೆ ಆರೋಪದಲ್ಲಿ ದಶಕಗಳ ಕಾಲ ಮರಣದಂಡನೆ ಶಿಕ್ಷೆಯ ಕುರಿತಾಗಿ ಹೋರಾಟ ನಡೆಸಿದ್ದ ಭಾರತೀಯ ಮೂಲದ ನಾಗೇಂದ್ರನ್ ಧರ್ಮಲಿಂಗಂ ಅವರನ್ನು ಸಿಂಗಾಪುರ ಏಪ್ರಿಲ್‌ನಲ್ಲಿ ಗಲ್ಲಿಗೇರಿಸಿತು. ಅದಾದ ಬಳಿಕ ಈಗ 60 ಗ್ರಾಂ ಹೆರಾಯಿನ್ ಜೊತೆ ಸಿಕ್ಕಿಬಿದ್ದ ಕುಲ್ವಂತ್ ಸಿಂಗ್‌ರನ್ನು ನಾಳೆ ಗಲ್ಲಿಗೇರಿಸಲು ಸಜ್ಜಾಗಿದೆ.
ಸಿಂಗಾಪುರ (ಜುಲೈ 4): ಭಾರತೀಯ ಮೂಲದ ಮಲೇಷ್ಯಾದ ಮಾದಕವಸ್ತು (drugs case) ಕಳ್ಳಸಾಗಣೆದಾರ ಕಲ್ವಂತ್ ಸಿಂಗ್ (Kalwant Singh) ಅವರನ್ನು ಗುರುವಾರ ಮುಂಜಾನೆ ಗಲ್ಲಿಗೇರಿಸುವುದಾಗಿ ಸಿಂಗಾಪುರ (Singapore) ಘೋಷಿಸಿದೆ. ಮರಣದಂಡನೆ (Death Penalty) ಶಿಕ್ಷೆಯಿಂದ ಪಾರಾಗುವ ನಿಟ್ಟಿನಲ್ಲಿ ಕೊನೆಯ ಕ್ಷಣದವರೆಗೂ ಹೋರಾಟ ನಡೆಸಿದ್ದ ಕುಲ್ವಂತ್ ಸಿಂಗ್, ಈ ಕುರಿತಾಗಿ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ, ಸಿಂಗಾಪುರ ನ್ಯಾಯಾಲಯ (Singapore Court) ಈ ಅರ್ಜಿಯನ್ನು ವಜಾ ಮಾಡುವುದರೊಂದಿಗೆ ಕುಲ್ವಂತ್ ಸಿಂಗ್‌ರ ಗಲ್ಲು ಶಿಕ್ಷೆ ಜಾರಿಯಾಗಲಿದೆ.
ಇದು ಕಳೆದ ಮೂರು ತಿಂಗಳಲ್ಲಿ ಸಿಂಗಾಪುರದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗುತ್ತಿರುವ ಭಾರತೀಯ ಮೂಲದ 2ನೇ ಡ್ರಗ್ ಪೆಡ್ಲರ್ ಆಗಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ 34 ವರ್ಷದ ನಾಗೇಂದ್ರನ್ ಧರ್ಮಲಿಂಗಮ್ ಅವರನ್ನು ಗಲ್ಲಿಗೇರಿಸಿತ್ತು. ಮಾನಸಿಕವಾಗಿ ಆತ ಅಸ್ವಸ್ಥನಾಗಿರುವ ಕಾರಣ, ಅವರ ಗಲ್ಲು ಶಿಕ್ಷೆಯನ್ನು ರದ್ದು ಮಾಡಬೇಕು ಎಂದು ಧರ್ಮಲಿಂಗಮ್ ಅವರ ಕುಟುಂಬ ಹಾಗೂ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರೂ, ಇದನ್ನು ಕೋರ್ಟ್ ತಿರಸ್ಕರಿಸಿತ್ತು.
32 ವರ್ಷದ ಕುಲ್ವಂತ್ ಸಿಂಗ್ ಅವರನ್ನು ಸಿಂಗಾಪುರಕ್ಕೆ ಹೆರಾಯಿನ್ ಸಾಗಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಈ ವೇಳೆ ಅವರಲ್ಲಿ 60 ಗ್ರಾಮ್ ಹೆರಾಯಿನ್ ಪತ್ತೆಯಾಗಿತ್ತು. 2013ರಲ್ಲಿ ನಡೆದ ಪ್ರಕರಣದಲ್ಲಿ ಬಗ್ಗೆ ವಿಚಾರಣೆ ನಡೆಸಿದ್ದ ಸಿಂಗಾಪುರದ ನ್ಯಾಯಾಲಯ ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಅಲ್ಲಿಂದ ಇಲ್ಲಿಯವರೆಗೂ ಆತ ಶಿಕ್ಷೆಯ ರದ್ದತಿಗೆ ಕೋರಿ ಹೋರಾಟ ನಡೆಸಿದ್ದರು. ಪ್ರಮುಖ ಶಂಕಿತ ಮಾದಕವಸ್ತು ಕಳ್ಳಸಾಗಣೆದಾರನನ್ನು ಬಂಧಿಸಲು ಸಹಾಯ ಮಾಡಿದ ಮಾಹಿತಿಯನ್ನು ನೀಡಿದ ಆಧಾರದ ಮೇಲೆ ಅವರು ಗಲ್ಲು ಶಿಕ್ಷೆ ಮರುಪರಿಶೀಲನೆಗೆ ಅವಕಾಶ ಕೋರಿದ್ದರು ಸಿಂಗ್ ಪರವಾಗಿ ಆ್ಯಂಟಿ ಡೆತ್ ಪೆನಾಲ್ಟಿ ಏಷ್ಯಾ ನೆಟ್‌ವರ್ಕ್ ಸಿಂಗಾಪುರದ ರಾಯಭಾರ ಕಚೇರಿಗೆ ಪತ್ರ ಬರೆದು, ಮರಣದಂಡನೆಯನ್ನು ಅಮಾನತುಗೊಳಿಸುವಂತೆ ಕೇಳಿಕೊಂಡಿದೆ.
Yesterday, the family of , a Malaysian on death row in Singapore, was informed that his execution has been scheduled for next Thursday, 7 July 2022.
Learn more about his case: pic.twitter.com/QZqCGtBGCz
ಫುಟ್‌ಬಾಲ್ ಬೆಟ್ಟಿಂಗ್ ವೇಳೆ ಮಾಡಿದ್ದ ಸಾಲವನ್ನು ಮರುಪಾವತಿಸಲು ಸಿಂಗಾಪುರಕ್ಕೆ ಡ್ರಗ್ ಡೆಲಿವರಿ ಮಾಡುವಂತೆ ಆತನಿಗೆ ಬೆದರಿಕೆ ಹಾಕಿ ಒತ್ತಾಯಿಸಲಾಗಿತ್ತು. ಆತ, ಮಾದಕ ವಸ್ತು ಕಳ್ಳಸಾಗಾಣೆದಾರನಲ್ಲ ಎಂದು ವಾದ ಮಾಡಲಾಗಿತ್ತು.
ಸಿಂಗಾಪುರದಲ್ಲಿ 15 ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಶುದ್ಧ ಹೆರಾಯಿನ್ ಕಳ್ಳಸಾಗಣೆ ಮಾಡಿದ ಅಪರಾಧಿಗಳಿಗೆ ಮರಣದಂಡನೆ ಕಡ್ಡಾಯವಾಗಿದೆ. ಆದರೆ, ಅಪರಾಧಿಯು ಕೊರಿಯರ್ ಆಗಿ ಮಾತ್ರ ಕಾರ್ಯನಿರ್ವಹಿಸಿದರೆ ಮತ್ತು ಅಧಿಕಾರಿಗಳೊಂದಿಗೆ ಸಹಕರಿಸಿದರೆ ನ್ಯಾಯಾಧೀಶರು ಶಿಕ್ಷೆಯನ್ನು ಜೀವಾವಧಿಗೆ ಬದಲಾಯಿಸಬಹುದು. ಕಲ್ವಂತ್ ಸಿಂಗ್ ಪ್ರಕರಣದ ಸಹ-ಆರೋಪಿಗಳಲ್ಲಿ ಒಬ್ಬನಾಗಿರುವ ವ್ಯಕ್ತಿಗೆ ತನಿಖಾಧಿಕಾರಿಗಳೊಂದಿಗೆ ಸಹಕರಿಸಿದ ನಂತರ ಅವರ ಶಿಕ್ಷೆಯನ್ನು ಕಡಿಮೆ ಮಾಡಿದ್ದಾರೆ.
Saudi Arabia: ಸೌದಿಯಲ್ಲಿ ಒಂದೇ ದಿನ 81 ಮಂದಿಗೆ ಗಲ್ಲು ಶಿಕ್ಷೆ
ಶಂಕಿತನನ್ನು ಬಂಧಿಸಲು ಅವರು ಒದಗಿಸಿದ ಯಾವುದೇ ಮಾಹಿತಿಯನ್ನು ಬಳಸಿಲ್ಲ ಎಂದು ಕೇಂದ್ರ ಮಾದಕವಸ್ತು ಬ್ಯೂರೋದ ಅಫಿಡವಿಟ್ ಅನ್ನು ಉಲ್ಲೇಖಿಸಿ ಮೂವರು ನ್ಯಾಯಾಧೀಶರ ಸಮಿತಿಯು ಸಿಂಗ್ ಅವರ ಮನವಿಯನ್ನು ವಜಾಗೊಳಿಸಿತು. "ನಾವು ತಡೆಯಾಜ್ಞೆಯ ಅರ್ಜಿಯನ್ನು ವಜಾಗೊಳಿಸುತ್ತೇವೆ" ಎಂದು ಮುಖ್ಯ ನ್ಯಾಯಮೂರ್ತಿ ಸುಂದರೇಶ್ ಮೆನನ್ ಬುಧವಾರ ಹೇಳಿದ್ದಾರೆ. ಎಪ್ರಿಲ್‌ನಲ್ಲಿ ಸಿಂಗಾಪುರ್ ಒಂದು ದಶಕಕ್ಕೂ ಹೆಚ್ಚು ಕಾಲ ಮರಣದಂಡನೆಯಲ್ಲಿದ್ದ ಧರ್ಮಲಿಂಗಂನನ್ನು ಗಲ್ಲಿಗೇರಿಸಿತ್ತು. ಸುಮಾರು 43 ಗ್ರಾಂ ಹೆರಾಯಿನ್ ಸಾಗಾಣಿಕೆ ಆರೋಪದಲ್ಲಿ ಈತ ಶಿಕ್ಷೆಗೆ ಗುರಿಯಾಗಿದ್ದ.
ವಾರಣಾಸಿ ಸರಣಿ ಸ್ಫೋಟ, ಭಯೋತ್ಪಾದಕ ವಲೀಯುಲ್ಲಾಗೆ ಗಲ್ಲು ಶಿಕ್ಷೆ!
ಚಾಂಗಿ ಜೈಲಿನಲ್ಲಿ ಕುಲ್ವಂತ್‌ರನ್ನು ಭೇಟಿಯಾಗಿದ್ದ ಸಹೋದರಿ: ಕುಲ್ವಂತ್ ಅವರ ಜೀವಾವಧಿ ಶಿಕ್ಷೆ ರದ್ದು ಕೋರಿ ಅವರ ಸಹೋದರಿ ಸೋನಿಯಾ (Sonia) ಸಾಕಷ್ಟು ಹೋರಾಟ ನಡೆಸಿದ್ದರು. ಜೂನ್ ತಿಂಗಳಲ್ಲಿ ಸಹೋದರಿ ಸೋನಿಯಾ, ಸಂಬಂಧಿ ಕೆಲ್ವಿನಾ ಸಿಂಗಾಪುರದ ಚಾಂಗಿ ಜೈಲಿನಲ್ಲಿದ್ದ ಕುಲ್ವಂತ್ ಸಿಂಗ್‌ರನ್ನು ಭೇಟಿಯಾಗಿದ್ದರು. ಮಂಗಳವಾರ ಮತ್ತೆ ಭೇಟಿಗೆ ಅವಕಾಶ ಕೇಳಿದ್ದರೂ ಅದನ್ನು ನಿರಾಕರಿಸಲಾಗಿತ್ತು.