ಮಗಳಿಗೆ ಕಚ್ಚಿತೆಂದು ಕೋಪ: ಜೀವಂತ ಏಡಿಗಳ ತಿಂದು ಆಸ್ಪತ್ರೆ ಸೇರಿದ ಅಪ್ಪ

By Anusha KbFirst Published Oct 31, 2022, 4:14 PM IST
Highlights

ತನ್ನ ಮಗಳಿಗೆ ಏಡಿಯೊಂದು ಕಚ್ಚಿತೆಂದು ಸಿಟ್ಟಿಗೆದ್ದ ತಂದೆ ಇಡೀ ಏಡಿಗಳ ಕುಲದ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದು, ಇದಕ್ಕಾಗಿ ತನ್ನ ಮಗಳಿಗೆ ಕಚ್ಚಿದ ಏಡಿಯನ್ನು ಆತ ಹಸಿಯಾಗಿಯೇ ಜಗ್ಗಿದು ನುಂಗಿದ್ದು, ಇದರಿಂದ ಆತನ ಆರೋಗ್ಯ ಹದಗೆಟ್ಟಿದೆ. ಚೀನಾದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 

ಚೀನಾ: ಸಾಮಾನ್ಯವಾಗಿ ತನ್ನ ಹೆಣ್ಣು ಮಕ್ಕಳ ಮೇಲೆ ಅಪ್ಪನಿಗಿರುವ ಪ್ರೀತಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮಗಳ ಮೇಲೆ ಅಪ್ಪನಿಗೆ ತುಸು ಹೆಚ್ಚೆ ಪ್ರೀತಿ ಕಾಳಜಿ ಇರುತ್ತದೆ. ಮಗಳಿಗೆ ತುಸು ಹೆಚ್ಚು ಕಡಿಮೆಯಾದರೆ ಅಪ್ಪ ಏನು ಮಾಡಲು ಸಿದ್ಧನಿರುತ್ತಾನೆ. ಅಪ್ಪನ ಪ್ರೀತಿ ಅಂತಹದ್ದು, ಇಲ್ಲೊಂದು ಕಡೆ ಮಗಳ ಮೇಲೆ ಅಪ್ಪನ ಅತಿರೇಕದ ಈ ಪ್ರೀತಿಯೇ ಈಗ ಆತನ ಆರೋಗ್ಯಕ್ಕೆ ಕುತ್ತು ತಂದಿದೆ. ಹೌದು ತನ್ನ ಮಗಳಿಗೆ ಏಡಿಯೊಂದು ಕಚ್ಚಿತೆಂದು ಸಿಟ್ಟಿಗೆದ್ದ ತಂದೆ ಇಡೀ ಏಡಿಗಳ ಕುಲದ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದು, ಇದಕ್ಕಾಗಿ ತನ್ನ ಮಗಳಿಗೆ ಕಚ್ಚಿದ ಏಡಿಯನ್ನು ಆತ ಹಸಿಯಾಗಿಯೇ ಜಗ್ಗಿದು ನುಂಗಿದ್ದು, ಇದರಿಂದ ಆತನ ಆರೋಗ್ಯ ಹದಗೆಟ್ಟಿದೆ. ಚೀನಾದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 

ಹೀಗೆ ಜೀವಂತ ಏಡಿಯನ್ನು ತಿಂದ ವ್ಯಕ್ತಿಯನ್ನು 39 ವರ್ಷದ ಲೂ (Lu) ಎಂದು ಗುರುತಿಸಲಾಗಿದೆ. ಈತ ಪೂರ್ವ ಚೀನಾದ ಝೇಜಿಂಗ್ (Zhejiang) ಪ್ರಾಂತ್ಯದ ನಿವಾಸಿಯಾಗಿದ್ದಾನೆ. ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ಎಂಬ ನ್ಯೂಸ್ ಪೋರ್ಟಲ್ ಪ್ರಕಾರ, ಹೀಗೆ ಏಡಿಗಳನ್ನು ಜೀವಂತವಾಗಿ ತಿಂದ ಎರಡು ತಿಂಗಳ ಬಳಿಕ ಈತನಿಗೆ ತೀವ್ರವಾದ ಬೆನ್ನು ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ (hospital) ದಾಖಲಾಗಿದ್ದಾನೆ. ಆದರೆ ತಾನು ಏಡಿ ತಿಂದಿರುವ ಬಗ್ಗೆ ಹೇಳಿಕೊಳ್ಳಲು ಸಂಕೋಚಕ್ಕೊಳಗಾಗಿದ್ದಾನೆ. ವೈದ್ಯರು ಅಲರ್ಜಿಗೆ ಕಾರಣವಾದಂತಹ ಏನನ್ನಾದರೂ ತಿಂದಿದ್ದೀರೆ ಎಂದು ಆತನನ್ನು ಕೇಳಿದಾಗ ಆತ ವೈದ್ಯರ ಎಲ್ಲ ಪ್ರಶ್ನೆಗಳಿಗೆ ನೋ ಎಂದೇ ಉತ್ತರಿಸಿದ್ದಾನೆ. ಆದರೆ ಆತನ ಪತ್ನಿ ಆತ ಏಡಿಗಳನ್ನು ತಿಂದಿರುವ ಬಗ್ಗೆ ವೈದ್ಯರಿಗೆ ಹೇಳಿದಾಗ ಈ ವಿಚಾರ ಬಹಿರಂಗವಾಗಿದೆ ಎಂದು ಆತನ ವೈದ್ಯ ಕಾವೊ ಕ್ಯೂಯಾನ್ (Cao Qian) ಎಂದು ನ್ಯೂಸ್ ಪೋರ್ಟ್‌ಲ್‌ಗೆ ಹೇಳಿದ್ದಾರೆ. 

ತನ್ನನ್ನು ಕಚ್ಚಿದ ಹಾವನ್ನು ಕೊಂದು ಸೇಡು ತೀರಿಸಿಕೊಂಡ ಟರ್ಕಿಯ 2 ವರ್ಷದ ಮಗು

ಪತ್ನಿ ತನ್ನ ಪತಿ ಏಡಿಗಳನ್ನು ತಿಂದಿರುವುದಾಗಿ ವೈದ್ಯರಲ್ಲಿ ಹೇಳಿದಾಗ ಅವರು ಲು ಬಳಿ ಏಕೆ ಎಂದು ಕೇಳಿದ್ದು, ಮಗಳನ್ನು ಕಚ್ಚಿರುವುದಕ್ಕೆ ಏಡಿಯ ಬಗ್ಗೆ ತೀವ್ರವಾಗಿ ಸಿಟ್ಟುಗೊಂಡು ಸೇಡು ತೀರಿಸಿಕೊಳ್ಳುವುದಕ್ಕಾಗಿ ಜೀವಂತವಾದ ಏಡಿಗಳನ್ನು ತಿಂದಿರುವುದಾಗಿ ಆತ ವೈದ್ಯರ ಬಳಿ ಹೇಳಿದ್ದಾನೆ. ನಂತರ ವೈದ್ಯರು ಲು ವನ್ನು ರಕ್ತ ತಪಾಸಣೆ ಮಾಡಿಸಿಕೊಳ್ಳಲು ಕಳುಹಿಸಿದ್ದಾರೆ. ಈ ವೇಳೆ ಆತನ ದೇಹದ ಮೂರು ಭಾಗಗಳು ಹಾನಿಗೊಳಗಾಗಿರುವುದು ತಿಳಿದು ಬಂದಿದೆ. ಆತನ ಎದೆಯ ಭಾಗ (chest), ಹೊಟ್ಟೆ(abdomen), ಲಿವರ್(liver) ಹಾಗೂ ಜೀರ್ಣಕ್ರಿಯೆಯ ಭಾಗ ಸೋಂಕಿಗೊಳಗಾಗಿರುವುದು ರಕ್ತ ತಪಾಸಣೆ ವೇಳೆ ಕಂಡು ಬಂದಿದೆ. 

ಬರೀ ಮನುಷ್ಯರಲ್ಲ, ಮೀನು - ಏಡಿಗೂ ಚೀನಾದಲ್ಲಿ ಕೋವಿಡ್‌ ಟೆಸ್ಟ್‌ ಕಡ್ಡಾಯ!

2020ರಲ್ಲಿಯೂ ಚೀನಾದ (China) ಹಾಂಗ್ಜೂ (Hangzhou) ಪ್ರಾಂತ್ಯದಲ್ಲಿ ಇಂತಹದ್ದೇ ಘಟನೆಯೊಂದು ನಡೆದಿತ್ತು. ಮಹಿಳೆಯೊಬ್ಬಳು 30 ಜೀವಂತ ಏಡಿಗಳನ್ನು ತಿಂದ ಪರಿಣಾಮ ಆತನ ದೇಹದ ಹಲವು ಭಾಗಗಳು ಸೋಂಕಿಗೆ ಒಳಗಾಗಿದ್ದವು. ಆಕೆಯ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಉಸಿರಾಟಕ್ಕೆ ತೊಂದರೆಯುಂಟು ಮಾಡಿತ್ತು. ಈಕೆ ತನ್ನ ದೇಹದ ಮೂಳೆಗಳು ಸಧೃಡವಾಗುವ ಸಲುವಾಗಿ ಹಳ್ಳಿಮದ್ದು ಸೇವಿಸುತ್ತಿದ್ದು, ಅದರ ಭಾಗವಾಗಿ ಆಕೆ ಜೀವಂತ ಏಡಿಗಳನ್ನು ಅಕ್ಕಿಯಿಂದ ತಯಾರಿಸಿದ ವೈನ್‌ನೊಳಗೆ ಇಟ್ಟು ನಂತರ ಸೇವಿಸಿದ್ದಳಂತೆ. 

ಒಟ್ಟಿನಲ್ಲಿ ಜನ ಸೇಡು ತೀರಿಸಿಕೊಳ್ಳಲು ತಮ್ಮನೇ ತಾವು ಅಪಾಯಕ್ಕೆ ಒಡ್ಡಿಕೊಳ್ಳಲು ಹೇಸುವುದಿಲ್ಲ ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ. 

 

click me!