ಈ ಒಂದು ದೇಶದ ಜನರು ಮುಗಿಬಿದ್ದು ಸೌತೆಕಾಯಿ ಖರೀದಿ ಮಾಡುತ್ತಿದ್ದಾರೆ. ಕಾರಣ ಯುವಕನೋರ್ವ ತೋರಿಸುತ್ತಿರುವ ಸಲಾಡ್ ರೆಸಿಪಿ ಎಂದು ವರದಿಯಾಗಿದೆ.
ನಮ್ಮಲ್ಲಿ ಸ್ಪೆಷಲ್ ಊಟ ಅಂದ್ರೆ ಕೋಸಂಬರಿ ಇರಲೇಬೇಕು. ಹಬ್ಬ ಹರಿದಿನ, ಮದುವೆ ಅಂತ ಬಂದ್ರೆ ಊಟದ ಜೊತೆಯಲ್ಲಿ ಕೋಸಂಬರಿ ಇದ್ದೇ ಇರುತ್ತದೆ. ಕೋಸಂಬರಿ ಇಲ್ಲಿದೇ ಊಟ ಪರಿಪೂರ್ಣವೇ ಆಗಲ್ಲ. ಮೊಸರಿಗೆ ಕತ್ತರಿಸಿದ ಈರುಳ್ಳಿ, ಸೌತೇಕಾಯಿ, ಹಸಿಮೆಣಸಿನಕಾಯಿ, ಕೋತಂಬರಿ ಸೊಪ್ಪು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದ್ರೆ ರುಚಿಯಾದ ಕೋಸಂಬರಿ ಸವಿಯಲು ಸಿದ್ಧವಾಗುತ್ತದೆ. ಈ ರೆಸಿಪಿ ಎಲ್ಲರ ಮನೆಗಳಲ್ಲಿಯೂ ಸಾಮಾನ್ಯವಾಗಿ ಮಾಡುತ್ತಿರುತ್ತಾರೆ. ಹೋಳಿಗೆ ಅಥವಾ ಮಟನ್ ಊಟವಾಗಿರಲಿ ಕೋಸಂಬರಿ ಬೇಕೇ ಬೇಕು. ಎಲ್ಲಾ ಬಗೆಯ ಊಟಕ್ಕೂ ಕೋಸಂಬರಿ ಅಡ್ಜಸ್ಟ್ ಆಗುತ್ತದೆ. ಇನ್ನು ತೂಕ ಇಳಿಸಲು ಪ್ರಯತ್ನಿಸುವ ಜನರಿಗೆ ಸೌತೆಕಾಯಿ ಮಿತ್ರನಿದ್ದಂತೆ. ಸೌತೆಕಾಯಿಯಲ್ಲಿ ನೀರಿನ ಅಂಶ ಹೆಚ್ಚಾಗಿರುವ ಕಾರಣ ಎಲ್ಲರ ಅಡುಗೆಮನೆಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿರುತ್ತದೆ. ಸಲಾಡ್‌ಗಳಲ್ಲಿಯೂ ಸೌತೆಕಾಯಿಯನ್ನು ಬಳಸಲಾಗುತ್ತದೆ.
ಸೌತೆಕಾಯಿ ಬಳಸಿ ಯಾವೆಲ್ಲಾ ಅಡುಗೆ ಮಾಡಬಹುದು ಅಂದ್ರೆ ಯುಟ್ಯೂಬ್‌ನಲ್ಲಿ ನೂರಾರು ರೆಸಿಪಿಗಳು ಕಣ್ಮುಂದೆ ಬರುತ್ತವೆ. ಅಡುಗೆ ವ್ಲಾಗರ್‌ಗಳು ಸೌತೆಕಾಯಿ ಬಳಸಿ ಬಗೆ ಬಗೆಯ ಅಡುಗೆಗಳನ್ನು ಮಾಡುತ್ತಿರುತ್ತಾರೆ. ಕೆಲವೊಮ್ಮೆ ಸಿಂಪಲ್ ರೆಸಿಪಿಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹವುದೇ ಒಂದು ರೆಸಿಪಿ ವೈರಲ್ ಆದ ಪರಿಣಾಮ, ಮಾರುಕಟ್ಟೆಯಲ್ಲಿ ಸೌತೆಕಾಯಿಗೆ ಬರಗಾಲ ಸೃಷ್ಟಿಯಾಗಿ, ದಿಢೀರ್ ಬೇಡಿಕೆ ಹೆಚ್ಚಳವಾಗಿದೆ.
undefined
ಟಿಕ್‌ಟಾಕ್ ಸ್ಟಾರ್ ಲಾಗನ್ ಮೊಫಿಟ್ ಯುವಕನ ಒಂದು ಟಿಕ್‌ಟಾಕ್ ವಿಡಿಯೋ ಮಾರುಕಟ್ಟೆಯಲ್ಲಿ ಸೌತೆಕಾಯಿಗೆ ಬೇಡಿಕೆಯನ್ನು ಹೆಚ್ಚಳ ಮಾಡಿದೆ. ಅತಿವೃಷ್ಟಿ ಅಥವಾ ಅನಾವೃಷ್ಠಿ ಉಂಟಾದ್ರೆ ತರಕಾರಿಗಳ ಪೂರೈಕೆಯನ್ನು ವ್ಯತ್ಯಯ ಉಂಟಾಗುತ್ತದೆ. ಆದರೆ ಇಲ್ಲಿ ಲಾಗನ್ ಮೊಫಿಟ್ ಮಾಡಿದ ಒಂದು ರೆಸಿಪಿಯಿಂದಾಗಿ ಸೌತೆಕಾಯಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಲಾಗನ್ ಮೊಫಿಟ್ ಏಷ್ಯಾ ಭಾಗದ ಶೈಲಿಯ ಸಲಾಡ್ ತಯಾರಿಸಿದ್ದನು. ಈ ರೆಸಿಪಿ ನೋಡಿದ ಐಸ್‌ಲ್ಯಾಂಡ್ ದೇಶದ ಜನರು ಸಲಾಡ್ ರೆಸಿಪಿ ಮಾಡಲು ಮುಂದಾದ ಪರಿಣಾಮ ಸೌತೆಕಾಯಿಗೆ ಡಿಮ್ಯಾಂಡ್ ಹೆಚ್ಚಳವಾಗಿದೆ.
ಮಗಳ ಸಾವಿಗೆ ಮರುಕಪಡದ ಅಮ್ಮ! ಅಂತ್ಯಸಂಸ್ಕಾರಕ್ಕೂ ಹೊಸ ಡ್ರೆಸ್ ಧರಿಸಿ ರೀಲ್ಸ್ ಮಾಡಿಕೊಂಡೇ ಹೋದ ತಾಯಿ
ಲಾಗನ್ ಮೊಫಿಟ್ ಸಲಾಡ್ ರೆಸಿಪಿ
ಲಾಗನ್ ಮೊಫಿಟ್ ಸಲಾಡ್‌ಗಾಗಿ ಗೋಲಾಕಾರದಲ್ಲಿ ಸೌತೆಕಾಯಿ ಕತ್ತರಿಸಿಕೊಳ್ಳುತ್ತಾನೆ. ನಂತರ ಕತ್ತರಿಸಿದ ಸೌತೆಕಾಯಿಗೆ ಸೋಯಾ ಸಾಸ್, ಎಳ್ಳೆಣ್ಣೆ, ಬೆಳ್ಳುಳ್ಳಿ, ವಿನೇಗರ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸಲಾಡ್ ತಯಾರಿಸಲಾಗುತ್ತದೆ. ಇದೇ ರೀತಿ ಸೌತೆಕಾಯಿ ಬಳಸಿ ಹಲವು ಸಲಾಡ್ ರೆಸಿಪಿ ಮಾಡಿರುವ ವಿಡಿಯೋವನ್ನು ಲಾಗನ್ ಶೇರ್ ಮಾಡಿಕೊಂಡಿದ್ದಾನೆ.
ರೆಸಿಪಿ ಸಿಂಪಲ್ ಆಗಿರುವ ಕಾರಣ ಐಸ್‌ಲ್ಯಾಂಡ್ ದೇಶದ ಜನರು ಸೌತೆಕಾಯಿ ಖರೀದಿಗೆ ಮುಗಿಬಿದ್ದಿದ್ದಾರೆ. ವ್ಯಾಪಾರಿಗಳು ಸೌತೆಕಾಯಿ ಪೂರೈಸಲು ಕಷ್ಟಪಡ್ತಿದ್ದಾರೆ ಎಂದ ವರದಿಯಾಗಿದೆ. ಇನ್‌ಸ್ಟಾಗ್ರಾಂನಲ್ಲಿಯೂ ಲಾಗನ್ ಮೊಫಿಟ್ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾನೆ. ಸೌತೆಕಾಯಿಯ ಬೇಡಿಕೆ ಹೆಚ್ಚಳಕ್ಕೆ ಲಾಗನ್ ಮೊಫಿಟ್ ಕಾರಣ ಎಂದು ಹೇಳಲಾಗುತ್ತಿದೆ.
ನಾಪತ್ತೆಯಾಗಿದ್ದ ಎಂಟು ವರ್ಷದ ಬಾಲಕಿ ಎಟಿಎಂ ಸಹಾಯದಿಂದ ಮನೆ ತಲುಪಿದ್ದು ಹೇಗೆ ನೋಡಿ