ಸಾಮಾಜಿಕ ಜಾಲತಾಣಗಳಲ್ಲಿ ಹಲವು ಚಿತ್ರವಿಚಿತ್ರ ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಅದೇ ರೀತಿ ಇಲ್ಲೊಂದು ವಿಡಿಯೋದಲ್ಲಿ ಮಗುವೊಂದು ಬೃಹತ್ ಗಾತ್ರದ ಹಾವಿನೊಂದಿಗೆ ಓಡಾಡುತ್ತಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾವೆಲ್ಲಾ ಸಾಮಾನ್ಯವಾಗಿ ಹಾವು ಕಂಡರೆ ಹೆದರಿ ಹೌಹಾರಿ ಬದುಕಿದೆನೋ ಬಡಜೀವ ಎಂದು ಓಡುವುದೇ ಹೆಚ್ಚು ಆದರೆ ಇಲ್ಲೊಂದು ಪುಟ್ಟ ಬಾಲಕಿ ಹಾವಿನೊಂದಿಗೆ ಸರಸವಾಡುತ್ತಿದ್ದು, ನೋಡುಗರೇ ಭಯಗೊಂಡಿದ್ದಾರೆ. ಈಕೆಯ ಇನಸ್ಟಾಗ್ರಾಮ್ ಪೇಜ್‌ಗೆ ಹೋದರೆ ಇಂತಹ ನೂರಾರು ವಿಡಿಯೋಗಳಿದ್ದು, ಈಕೆಗೆ ಹಾವಿನೊಂದಿಗೆ ಆಟ ಅದರೊಂದಿಗೆ ಊಟ ನಿದ್ದೆ ಎಲ್ಲವೂ ಆಗಿದೆ.
ಸಾಮಾನ್ಯವಾಗಿ ಮನೆಯಲ್ಲಿ ಬೆಕ್ಕು ನಾಯಿ ಕೋಳಿ ಮುಂತಾದ ಪ್ರಾಣಿಗಳನ್ನು ಸಾಕುವುದು ಮಾಮೂಲಿ ಮನೆಯಲ್ಲಿ ಇಂತಹ ಸಾಕುಪ್ರಾಣಿಗಳಿದ್ದರೆ(Pet Animal) ಪುಟ್ಟ ಮಕ್ಕಳು ಅವುಗಳೊಂದಿಗೆ ಆತ್ಮೀಯವಾದ ಒಡನಾಟವನ್ನು ಹೊಂದಿರುತ್ತವೆ. ಅವುಗಳೊಂದಿಗೆ ಆಟವಾಡಿಕೊಂಡು ಮುದ್ದಾಡಿಕೊಂಡು ಉತ್ತಮ ಒಡನಾಡಿಗಳಾಗುತ್ತಾರೆ. ಆದರೆ ವಿಷಕಾರಿ (Poisions Snake) ಹಾವುಗಳೊಂದಿಗೆ ಈ ರೀತಿಯ ಒಡನಾಟ ಎಂದರೆ ಎಂತವರಿಗೂ ಅಚ್ಚರಿಯ ಜೊತೆ ಭಯ ಆವರಿಸುತ್ತದೆ. ಈಕೆ ಹಾವುಗಳನ್ನು ಕೊರಳಿಗೆ ಸುತ್ತಿಕೊಂಡು ಕೈಯಲ್ಲಿ ಹಿಡಿದುಕೊಂಡು ಅವುಗಳಿಗೆ ಮುತ್ತಿಕ್ಕುತ್ತಾ ಆಟವಾಡುತ್ತಿರುವುದನ್ನು ನೋಡುತ್ತಿದ್ದರೆ, ಒಂದು ಕ್ಷಣ ಮೈ ಜುಮ್ಮೆನಿಸುತ್ತದೆ. ಆದರೆ ಈ ಹುಡುಗಿಗೆ (Girl) ಮಾತ್ರ ಯಾವುದೇ ಭಯ ಇಲ್ಲ.
ಸ್ನೇಕ್ ಮಾಸ್ಟರ್ ಎಕ್ಸೋಟಿಕ್ (snakemasterexotics) ಹೆಸರಿನಲ್ಲಿ ಬಾಲಕಿಯ ಇನ್ಸ್ಟಾಗ್ರಾಮ್ ಖಾತೆ ಇದ್ದು, 51 ಸಾವಿರಕ್ಕೂ ಹೆಚ್ಚು ಜನ ಫಾಲೋವರ್ಸ್‌ಗಳು ಈಕೆಗೆ ಇದ್ದಾರೆ. ಇಲ್ಲಿ ಬಾಲಕಿ ವಿವಿಧ ರೀತಿಯ ಹಾವುಗಳೊಂದಿಗೆ ಆಟವಾಡುತ್ತಾ ಸಮಯ ಕಳೆಯುವುದನ್ನು ನೋಡಬಹುದಾಗಿದೆ. ಹಲವು ಪ್ರಬೇಧಗಳ (breed) ಹಾವುಗಳು ಈಕೆಯ ಬಳಿ ಇದ್ದು, ಎಲ್ಲ ಹಾವುಗಳೊಂದಿಗೆ ಆಕೆ ಉತ್ತಮ ಒಡನಾಟ ಹೊಂದಿದ್ದಾಳೆ. ಬರೀ ಇಷ್ಟೇ ಅಲ್ಲ ಒಂದು ಹಾವಿನೊಂದಿಗೆ ಆಕೆ ಬೆಡ್ (Bed) ಮೇಲೆ ಮಲಗಿ ನಿದ್ರಿಸುತ್ತಿರುವ ವಿಡಿಯೋ ಇದೆ. ಮತ್ತೊಂದು ವಿಡಿಯೋದಲ್ಲಿ ಹಾವುಗಳು ಸ್ಟ್ಯಾಂಡ್ ಒಂದರ ಮೇಲಿಂದ ನೇತಾಡುತ್ತಿದ್ದರೆ, ಬಾಲಕಿ ಅವುಗಳಿಗೆ ಮುತ್ತಿಕ್ಕುತ್ತಿದ್ದಾಳೆ.
ಸ್ಮಗ್ಲರ್ ಪ್ಯಾಂಟ್‌ನೊಳಗಿತ್ತು 60 ಹಾವು, ಹಲ್ಲಿ ಮತ್ತು ಸರಿಸೃಪಗಳು!
ಸ್ವಲ್ಪವೂ ಭಯವಿಲ್ಲದೇ ಬಾಲಕಿ ಹಾವುಗಳೊಂದಿಗೆ ಆಟವಾಡುತ್ತಿದ್ದಾಳೆ. ಕಪ್ಪು ಬಣ್ಣದ ಪೈಥಾನ್ (python) ಕೂಡ ಈಕೆಯ ಬೆಡ್‌ರೂಮ್‌ನಲ್ಲಿ(Bedroom) ವಾಸವಾಗಿದೆ. ಆಕೆಗಿಂತ ನಾಲ್ಕು ಪಾಲು ಉದ್ದವಿರುವ ಈ ಹಾವು ಆಕೆ ಎಳೆದಾಡಿದರು ಸುಮ್ಮನೆ ತನ್ನ ಪಾಡಿಗೆ ತಾನಿದ್ದು, ಬೆಡ್ ಕೆಳಗಿನ ಜಾಗದತ್ತ ಹೋಗಲು ನೋಡುತ್ತಿದೆ. ಈ ವಿಡಿಯೋವನ್ನು 77,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈಕೆಯ ಇನ್ಸ್ಟಾ ಬಯೋದಲ್ಲಿ ಹಾವುಗಳ ಬಗ್ಗೆ ಆಸಕ್ತಿ ಹೊಂದಿರುವ ಹುಡುಗಿ ಎಂದು ಬರೆದುಕೊಂಡಿದ್ದಾಳೆ.ಇನ್ನು ಈಕೆಯ ತಂದೆಯೂ ಕೂಡ ಹಾವುಗಳ ಬಗ್ಗೆ ಅತೀವವಾದ ವ್ಯಾಮೋಹ ಹೊಂದಿದವರಾಗಿದ್ದು ಇದೇ ಕಾರಣಕ್ಕೆ ಪುತ್ರಿ ಇಷ್ಟೊಂದು ನಿರ್ಭಿತವಾಗಿ ಹಾವಿನೊಂದಿಗೆ ಆಟವಾಡುತ್ತಿದ್ದಾಳೆ ಎಂದೆನಿಸುತ್ತಿದೆ. ಈಕೆಯ ತಂದೆಯ (ariellimaxarboreals) ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಪ್ರಾಣಿಗಳ ಅದರಲ್ಲೂ ಮುಖ್ಯವಾಗಿ ಹಾವುಗಳ ಫೋಟೋ ಹಾಗೂ ವಿಡಿಯೋಗಳೇ ಸಾಕಷ್ಟು ರಾರಾಜಿಸುತ್ತಿವೆ.
ಮಲಗಿದ್ದ ಮಹಿಳೆ ಮೇಲೆರಿ ಹೆಡೆ ಎತ್ತಿದ ನಾಗರ: ಮಲ್ಲಯ್ಯ ಮಲ್ಲಯ್ಯ ಎಂದು ಜಪಿಸಿದ ಮಹಿಳೆಗೆ ಸರ್ಪ ಮಾಡಿದ್ದೇನು?
ವಿಡಿಯೋಗಾಗಿ ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಳ್ಳುವ ಸಲುವಾಗಿ ಕೆಲವರು ಹಾವುಗಳ ಜೊತೆ ಸಾಹಸ ಮಾಡಲು ಮುಂದಾಗುತ್ತಾರೆ. ಹೀಗೆ ಫೇಮಸ್ ಆಗುವ ಹುಚ್ಚಿನಿಂದ ಮನೆಯಲ್ಲೇ ಆರು ಹಾವು ಹಾಗೂ ಊಸರವಳ್ಳಿಗಳನ್ನು ಸಾಕಿಕೊಂಡಿದ್ದ ಅವುಗಳನ್ನು ಬಳಸಿಕೊಂಡು ವಿಡಿಯೋ ಮಾಡುತ್ತಿದ್ದ ಯುವಕನನ್ನು ಕೆಲ ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು. 31 ವರ್ಷದ ಯೂಟ್ಯೂಬರ್ ರಾಮಚಂದ್ರ ರಾಣಾ ಬಂಧಿತ ವ್ಯಕ್ತಿ. ಒಡಿಶಾದ ಸಂಬಾಲ್‌ಪುರ ಜಿಲ್ಲೆಯ ಕಂರಂಜುಲಾ ಪ್ರದೇಶದಲ್ಲಿ ಈತನನ್ನು ಒಡಿಶಾದ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದರು. ಈತ ವಿಡಿಯೋ ಮಾಡುವುದಕ್ಕೋಸ್ಕರ ಮನೆಯಲ್ಲಿ ಆರು ಹಾವುಗಳನ್ನು ಸಾಕಿದ್ದ. ಇವುಗಳಲ್ಲಿ ನಾಗರಹಾವುಗಳು ಇದ್ದವು, ಜೊತೆಗೆ ಈತ ನಾಲ್ಕು ಊಸರವಳ್ಳಿಗಳನ್ನು ಕೂಡ ತನ್ನೊಂದಿಗೆ ಇರಿಸಿಕೊಂಡಿದ್ದ. ಆರೋಪಿ ರಾಮಚಂದ್ರ ರಾಣಾ, ಪಶ್ಚಿಮ ಒಡಿಶಾದ ರೆಡಾಖೋಲೆ ಪ್ರದೇಶದ ನಿವಾಸಿ. ಈತ ಜನರನ್ನು ಸೆಳೆಯುವ ಸಲುವಾಗಿ ತನ್ನ ವಿಡಿಯೋಗಳಲ್ಲಿ ಹಾವುಗಳು, ಊಸರವಳ್ಳಿಗಳು ಹಾಗೂ ಇತರ ಸರೀಸೃಪಗಳು ಹಾಗೂ ವನ್ಯಜೀವಿಗಳನ್ನು ಬಳಸಿಕೊಂಡಿದ್ದ. ಈತನಿಗೆ ಈತನ ಯುಟ್ಯೂಬ್ ಚಾನಲ್‌ನಲ್ಲಿ ಒಂದು ಲಕ್ಷ ಜನ ಸಬ್‌ಸ್ಕ್ರೈಬರ್‌ಗಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ