
Viral Video: ಬೋನಿನಲ್ಲಿದ್ದ ಸಿಂಹದ ಜತೆ ಚೇಷ್ಟೆ ಮಾಡಲು ಹೋಗಿ ವ್ಯಕ್ತಿಯೊಬ್ಬ ತನ್ನ ಬೆರಳನ್ನು ಕಳೆದುಕೊಂಡಿರುವ ಘಟನೆ ಆಫ್ರಿಕಾದ ಮೃಗಾಲಯದಲ್ಲಿ ನಡೆದಿದೆ. ಸಿಂಹದ ಜತೆ ತಮಾಷೆ ಮಾಡಲು ಹೋಗಿ ಈ ವ್ಯಕ್ತಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಭಯಾನಕ ವೀಡಿಯೊವನ್ನು ಜಮೈಕಾದ ಮೃಗಾಲಯದ ವಿಡಿಯೋ ಎಂದು ಹೇಳಲಾಗುತ್ತಿದೆ.
ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಕಾಣುತ್ತಿದ್ದು, ಅವರು ಇಲ್ಲಿ ಪ್ರವಾಸಕ್ಕಾಗಿ ಬಂದಿರಬಹುದು. ಎಲ್ಲರೂ ಸಿಂಹದ ಜೊತೆ ತಮ್ಮ ಚಿತ್ರ, ವಿಡಿಯೋ ಮಾಡುತ್ತಿದ್ದಾಗ ಈ ವ್ಯಕ್ತಿ ಒಂದು ಹೆಜ್ಜೆ ಮುಂದೆ ಹೋಗಿ ಸಿಂಹದೊಂದಿಗೆ ಚೆಲ್ಲಾಟವಾಡಿದ್ದಾನೆ.
ಬೆರಳು ಕಚ್ಚಿದ ಸಿಂಹ: ವೈರಲ್ ಆಗುತ್ತಿರುವ (Viral Video) ವೀಡಿಯೋದಲ್ಲಿ, ಸಿಂಹದ ಪಂಜರದ ಹೊರಗೆ ಈ ಧೈರ್ಯಶಾಲಿ ವ್ಯಕ್ತಿ ನಿಂತಿದ್ದಾನೆ ಮತ್ತು ಸಿಂಹವು ಅವನನ್ನು ಪಂಜರದೊಳಗಿಂದ ನೋಡುತ್ತಿದೆ. ವ್ಯಕ್ತಿಗೆ ಸಿಂಹವನ್ನು ಇಷ್ಟು ಹತ್ತಿರದಿಂದ ನೋಡಿದರೂ ಬಹುಶಃ ತೃಪ್ತಿಯಾಗಲಿಲ್ಲ, ಹೀಗಾಗಿ ತನ್ನ ಬೆರಳುಗಳನ್ನು ಪಂಜರದೊಳಗೆ ಇಟ್ಟು ಸಿಂಹದೊಂದಿಗೆ ಆಟವಾಡಲು ಪ್ರಾರಂಭಿಸಿದ್ದಾನೆ.
ಇದನ್ನೂ ಓದಿ: ಮಧ್ಯದಲ್ಲಿ ಕೆಟ್ಟು ನಿಂತ ರೋಲರ್ ಕೋಸ್ಟರ್: 235 ಅಡಿ ಎತ್ತರದಲ್ಲಿ ಪ್ರವಾಸಿಗರ ಪರದಾಟ
ಈ ವರ್ತನೆಗೆ ಕೆಲ ಕಾಲ ಸಿಂಹ ವ್ಯಕ್ತಿಯನ್ನು ನೋಡುತ್ತಾ ಕೇವಲ ಘರ್ಜಿಸಿದೆ, ಆದರೆ ಸ್ವಲ್ಪ ಸಮಯದ ನಂತರ ಕೋಪಗೊಂಡ ಸಿಂಹವು ವ್ಯಕ್ತಿಯ ಬೆರಳನ್ನು ಕಚ್ಚಿ ಹಿಡಿದಿದೆ. ಬಳಿಕ ಸಿಂಹದ ಬಾಯಿಂದ ತಪ್ಪಿಸಿಕೊಳ್ಳಲು ವ್ಯಕ್ತಿ ಹರಸಾಹಸ ಪಟ್ಟಿದ್ದಾನೆ. ಕೆಲ ಸಮಯದ ನಂತರ ಸಿಂಹದ ಬಾಯಿಂದ ಬೆರಳನ್ನು ತೆಗೆದಿದ್ದಾನೆ. ಆದರೆ ಬೆರಳಿನ ಭಾಗವನ್ನು ಸಿಂಹವು ಕಚ್ಚಿದ್ದು, ಮೂಳೆ ಮಾತ್ರ ಉಳಿದಿದೆ.
ವಿಡಿಯೋ ವೈರಲ್: ಈ ಭಯಾನಕ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಲವು ಬಳಕೆದಾರರು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಲಕ್ಷಾಂತರ ವೀವ್ಸ್ ಹಾಗೂ ಕಾಮೆಂಟ್ಸ್ ಪಡೆದಿದೆ. ಈ ಬಗ್ಗೆ ಸಾವಿರಾರು ಮಂದಿ ಕಮೆಂಟ್ ಮಾಡಿ ಈ ವ್ಯಕ್ತಿಯ ಮೂರ್ಖತನದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಬ್ಬಾ ತಡೆಯಲಾರೆ ಈ ಸೆಖೆ : ತುಂಬಿಟ್ಟ ನೀರಲ್ಲಿ ಮುಳುಗೇಳುತ್ತಿರುವ ಶ್ವಾನ
ಇದನ್ನೂ ಓದಿ: ಗಗನ ಸಖಿಯ ಮೋಹಕ ಡ್ಯಾನ್ಸ್‌ಗೆ ಪಡ್ಡೆ ಹೈಕ್ಳು ಫುಲ್ ಫಿದಾ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ