ಇಸ್ರೇಲ್‌ ಭಾರಿ ದಾಳಿ ಮಾಡಿದ್ರೂ ಹಮಾಸ್‌ ಸುರಂಗ ಸೇಫ್‌: ಪೂರ್ಣ ಪ್ರಮಾಣದ ಭೂದಾಳಿ ಹಿಂದೇಟಿಗೂ ಇದೇ ಕಾರಣ!

By Kannadaprabha News  |  First Published Oct 28, 2023, 9:25 AM IST

ಇಸ್ರೇಲ್‌ನ ವೈಮಾನಿಕ ಸಾಮರ್ಥ್ಯವನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಉಗ್ರರು ಹಲವು ವರ್ಷಗಳಿಂದ ನೆಲದಾಳದಲ್ಲಿ ಭಾರೀ ಸುರಕ್ಷತೆ ಜೇಡರ ಬಲೆಯ ರೀತಿ ಸುರಂಗ ನಿರ್ಮಿಸಿಕೊಂಡಿದ್ದಾರೆ. ಇದು ಇಡೀ ಗಾಜಾ ಪಟ್ಟಿಗೆ ನೆಲದಾಳದಲ್ಲೇ ಸಂಪರ್ಕ ಕಲ್ಪಿಸುವ ಜೊತೆಗೆ ನೆರೆಯ ಈಜಿಪ್ಟ್‌ವರೆಗೂ ಚಾಚಿಕೊಂಡಿದೆ.


ಟೆಲ್‌ ಅವಿವ್‌ (ಅಕ್ಟೋಬರ್ 28, 2023): ಇಸ್ರೇಲ್‌ ಸೇನಾ ಪಡೆಗಳು ಕಳೆದ 2 ವಾರಗಳಿಂದ ನಿರಂತರವಾಗಿ ವೈಮಾನಿಕ ದಾಳಿ ನಡೆಸುತ್ತಿದ್ದ ಹಮಾಸ್‌ ಉಗ್ರರನ್ನು ಪೂರ್ಣ ಮಟ್ಟ ಹಾಕಲು ಸಾಧ್ಯವಾಗಿಲ್ಲ, ಜೊತೆಗೆ ದೊಡ್ಡ ಪ್ರಮಾಣದ ಭೂದಾಳಿಗೂ ಹಿಂದೇಟು ಹಾಕುತ್ತಿದೆ. ಇದಕ್ಕೆ ಪ್ರಮುಖ ಕಾರಣ, ಹಮಾಸ್‌ ಉಗ್ರರು 80 ಅಡಿ ನೆಲದಾಳದಲ್ಲಿ ನಿರ್ಮಿಸಿರುವ 500 ಕಿ.ಮೀಗೂ ಹೆಚ್ಚಿನ ಉದ್ದದ ಸುರಂಗಗಳು.

ನಿಜ. ಇಸ್ರೇಲ್‌ನ ವೈಮಾನಿಕ ಸಾಮರ್ಥ್ಯವನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಉಗ್ರರು ಹಲವು ವರ್ಷಗಳಿಂದ ನೆಲದಾಳದಲ್ಲಿ ಭಾರೀ ಸುರಕ್ಷತೆ ಜೇಡರ ಬಲೆಯ ರೀತಿ ಸುರಂಗ ನಿರ್ಮಿಸಿಕೊಂಡಿದ್ದಾರೆ. ಇದು ಇಡೀ ಗಾಜಾ ಪಟ್ಟಿಗೆ ನೆಲದಾಳದಲ್ಲೇ ಸಂಪರ್ಕ ಕಲ್ಪಿಸುವ ಜೊತೆಗೆ ನೆರೆಯ ಈಜಿಪ್ಟ್‌ವರೆಗೂ ಚಾಚಿಕೊಂಡಿದೆ. ದೊಡ್ಡ ಪ್ರಮಾಣದ ವೈಮಾನಿಕ ದಾಳಿ ಕೂಡಾ ಈ ಸುರಂಗಗಳನ್ನು ಏನೂ ಮಾಡಲಾಗಿಲ್ಲ.

Tap to resize

Latest Videos

ಇದನ್ನು ಓದಿ: ಗಾಜಾದಲ್ಲಿ ಇಸ್ರೇಲ್‌ ಸೇನೆಯಿಂದ ಭಾರಿ ಪ್ರಮಾಣದಲ್ಲಿ ಭೂದಾಳಿ, ವಾಯುದಾಳಿ: ಇಂಟರ್ನೆಟ್‌, ಮೊಬೈಲ್‌ ಸ್ತಬ್ಧ

ಉಗ್ರರು ತಮ್ಮ ಪ್ರಮುಖ ನೆಲೆಯನ್ನಾಗಿ, ರಾಕೆಟ್‌ ಉಡ್ಡಯನದ ತಾಣವನ್ನಾಗಿ, ಒತ್ತೆಯಾಳುಗಳನ್ನು ಅಡಗಿಸಿಡುವ ತಾಣವಾಗಿ, ಶಸ್ತ್ರಾಸ್ತ್ರ ಕೋಠಿಯನ್ನಾಗಿ ಇದನ್ನೇ ಬಳಸುತ್ತಿದ್ದಾರೆ. ಹೀಗಾಗಿ ಇಸ್ರೇಲ್‌ ಎಷ್ಟೇ ವೈಮಾನಿಕ ದಾಳಿ ನಡೆಸಿದರೂ ಹಮಾಸ್‌ ಉಗ್ರರ ಆಟ ಇನ್ನೂ ಮುಂದುವರೆದಿದೆ.

ಈ ಸುರಂಗ ಮಾರ್ಗಗಳಲ್ಲೇ ಹಲವು ಕಡೆ ಉಗ್ರರು ರಾಕೆಟ್‌ ಉಡ್ಡಯನ ಕೇಂದ್ರ ಸೇರಿದಂತೆ ದಾಳಿಗೆ ಅಗತ್ಯ ಮೂಲಸೌಕರ್ಯ ರಚಿಸಿಕೊಂಡಿದ್ದಾರೆ. ಹೀಗಾಗಿ ಏಕಾಏಕಿ ದಾಳಿ ನಡೆಸಿದರೆ ಭಾರೀ ಹಾನಿ ಎದುರಿಸಬೇಕಾಗಬಹುದು ಎಂಬ ಭೀತಿ ಇಸ್ರೇಲಿ ಪಡೆಗಳನ್ನು ಕಾಡುತ್ತಿದೆ. ಹೀಗಾಗಿಯೇ ಅದು ಹಂತಹಂತವಾಗಿ ಉಗ್ರರ ಮೂಲಸೌಕರ್ಯ ನಾಶಪಡಿಸಿ ಬಳಿಕ ಬೃಹತ್‌ ದಾಳಿಯ ಯೋಜನೆ ರೂಪಿಸಿದೆ ಎನ್ನಲಾಗಿದೆ.

ಇದನ್ನು ಓದಿ: 2024ಕ್ಕೆ ಮತ್ತೊಂದು ಯುದ್ಧ ಕಾದಿದೆಯಾ? ಹಮಾಸ್ ದಾಳಿ ಹಿಂದಿದೆ ಸೌದಿ - ಇಸ್ರೇಲ್‌ ದೋಸ್ತಿ ತರ್ಕ!

ಗಾಜಾ ಅಂದು ಹೀಗಿತ್ತು.. ಈಗ ಹೀಗಾಗಿದೆ
ಇಸ್ರೇಲ್‌ ಹಮಾಸ್‌ ಯುದ್ಧದಲ್ಲಿ ಗಾಜಾಪಟ್ಟಿಯಲ್ಲಿ ಇಸ್ರೇಲ್‌ ದಾಳಿಯಿಂದ ಹಾನಿಗೊಂಡಿರುವ ಸ್ಥಳಗಳ ಉಪಗ್ರಹ ಚಿತ್ರಗಳನ್ನು ಮ್ಯಾಕ್ಸರ್‌ ಟೆಕ್ನಾಲಜಿ ಬಿಡುಗಡೆ ಮಾಡಿದೆ. ಈ ಕಂಪನಿ ಸ್ಯಾಟಲೈಟ್‌ ಮೂಲಕ ಯುದ್ಧಕ್ಕೂ ಮುನ್ನ ಹಾಗೂ ಯುದ್ಧದ ನಂತರ ಆದ ಬಾರಿ ಬದಲಾವಣೆಗಳನ್ನು ಬಾಹ್ಯಾಕಾಶದಿಂದ ಸೆರೆಹಿಡಿದಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಗಾಜಾದಲ್ಲಿ 2 ಲಕ್ಷಕ್ಕೂ ಹೆಚ್ಚು ಮನೆಗಳು ಇಸ್ರೇಲ್‌ ದಾಳಿಯಲ್ಲಿ ಧ್ವಂಸಗೊಂಡಿವೆ ಎಂದು ಗಾಜಾ ಸರ್ಕಾರ ಹೇಳಿದೆ.

ಇದನ್ನು ಓದಿ: ಉತ್ತರ ಗಾಜಾ ತೊರೆಯಲು ಇಸ್ರೇಲ್‌ ಎಚ್ಚರಿಕೆ: ದಕ್ಷಿಣಕ್ಕೆ ಹೋಗದಿದ್ದರೆ ಉಗ್ರರೆಂದು ಪರಿಗಣಿಸುತ್ತೇವೆ ಎಂದು ವಾರ್ನಿಂಗ್‌

click me!