ಇತ್ತೀಚಿನ ದಿನಗಳಲ್ಲಿ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರುವ ಟಿಪು ಸುಲ್ತಾನ್ ಬಳಸಿದ್ದ ಖಡ್ಗವನ್ನು ಬ್ರಿಟಿಷರು ಲಂಡನ್‌ನಲ್ಲಿ ಭದ್ರವಾಗಿಟ್ಟಿದ್ದರು. 15 ರಿಂ 20 ಕೋಟಿ ರೂಪಾಯಿ ನಿರೀಕ್ಷೆಯಲ್ಲಿದ್ದ ಕ್ರಿಸ್ಟಿ ಹರಾಜು ಸಂಸ್ಥೆಗೆ ಭಾರಿ ನಿರಾಸೆಯಾಗಿದೆ.
ಲಂಡನ್(ಅ.27) ಟಿಪು ಸುಲ್ತಾನ್ ಬಳಸಿದ್ದ ಖಡ್ಗವನ್ನು ಲಂಡನ್‌ನ ಕ್ರಿಸ್ಟಿ ಸಂಸ್ಥೆ ಹರಾಜಿಗಿಟ್ಟು ಬಾರಿ ನಿರಾಸೆಯಾಗಿದೆ. ಟಿಪು ಸುಲ್ತಾನ್ ಖಡ್ಗವನ್ನು 15 ರಿಂದ 20 ಕೋಟಿ ರೂಪಾಯಿ ಹರಾಜು ಮಾಡಲು ಕ್ರಿಸ್ಟಿ ಸಂಸ್ಥೆ ಎಲ್ಲಾ ತಯಾರಿ ಮಾಡಿಕೊಂಡಿತ್ತು. ಆದರೆ ಹರಾಜು ಆರಂಭಗೊಂಂಡು ಮುಕ್ತಾಯಗೊಂಡರು ಯಾರೂ ಕೂಡ ಟಿಪು ಸುಲ್ತಾನ್ ಖಡ್ಗವನ್ನು ಖರೀದಿಗೆ ಮುಂದೆ ಬರಲಿಲ್ಲ.
1786ರಲ್ಲಿ ನಡೆದ ಆಂಗ್ಲೋ ಮೈಸೂರು ಯುದ್ಧದದಲ್ಲಿ ಟಿಪು ಸುಲ್ತಾನ್ ಸೋಲು ಕಂಡಿದ್ದ. 1799ರಲ್ಲಿ ಟಿಪು ಸುಲ್ತಾನ್ ಅಂತ್ಯಗೊಂಡ ಬೆನ್ನಲ್ಲೇ ಖಡ್ಗವನ್ನು ಅಂದಿನ ಬ್ರಿಟಿಷ್ ಗರ್ವನರ್ ಚಾರ್ಲ್ಸ್ ಕಾರ್ನವಾಲಿಸ್‌ಗೆ ಬ್ರಿಟಿಷ್ ಸರ್ಕಾರ ಉಡುಗೊರೆಯಾಗಿ ನೀಡಲಾಗಿತ್ತು. ಬಳಿಕ ಈ ಖಡ್ಗವನ್ನು ಲಂಡನ್‌ಗೆ ಕೊಂಡೊಯ್ದು ಸಂಗ್ರಹಾಲಯದಲ್ಲಿ ಇಡಲಾಗಿತ್ತು.
ಶಿವಮೊಗ್ಗ ಭಾರತದ ಭಾಗವೋ, ಮುಸ್ಲಿಂ ಸಾಮ್ರಾಜ್ಯವೋ? ಪಾಕಿಸ್ತಾನ, ಸಾಬ್ರು ದ್ವಾರಬಾಗಿಲು ನಿರ್ಮಾಣ!
ಕಳೆದ ವರ್ಷ ಟಿಪು ಸುಲ್ತಾನ್‌ನ ಬೆಡ್ ಚೇಂಬರ್ ಖಡ್ಗ ಎಂದೇ ಕರೆಯಲಾಗುತ್ತಿದ್ದ ಖಡ್ಗವನ್ನು ಹರಾಜು ಮಾಡಲಾಗಿತ್ತು. ಈ ಖಡ್ಗ 141 ಕೋಟಿ ರೂಪಾಯಿಗೆ ಮಾರಾಟವಾಗಿತ್ತು. ಟಿಪ್ಪು ಸುಲ್ತಾನನ ಕೋಟೆಗೆ ಅಂತಿಮ ಮುತ್ತಿಗೆ ಹಾಕಿದ ಮೇಜರ್ ಜನರಲ್ ಬೇರ್ಡ್ ಖಡ್ಗವನ್ನು ಸಂಗ್ರಹಿಸಿದ್ದರು. ಕಳೆದ ವರ್ಷದ ಟಿಪು ಸುಲ್ತಾನ್ ಖಡ್ಗಕ್ಕಿದ್ದ ಬೇಡಿಕೆ ಈ ಬಾರಿ ಇಲ್ಲದಾಗಿದೆ.
ಕಳೆದ ವರ್ಷ ಟಿಪು ಖಡ್ಗ 141 ಕೋಟಿ ರೂಪಾಯಿಗೆ ಮಾರಾಟವಾಗಿತ್ತು. ಇದೇ ರೀತಿಯ ಬೇಡಿಕೆಯನ್ನು ಈ ಬಾರಿಯೂ ನಿರೀಕ್ಷಿಸಲಾಗಿತ್ತು. ಕನಿಷ್ಠ 80 ರಿಂದ 100 ಕೋಟಿ ರೂಪಾಯಿಗೆ ಖಡ್ಗ ಬಿಕರಿಯಾಗಲಿದೆ ಅನ್ನೋ ಲೆಕ್ಕಾಚಾರವನ್ನು ತಜ್ಞರು ನಿರೀಕ್ಷಿಸಿದ್ದರು. ಆದರೆ ಯಾರೂ ಕೂಡ ಖರೀದಿಗೆ ಮುಂದೆ ಬರಲಿಲ್ಲ. ಟಿಪು ಸುಲ್ತಾನ್ ಭಾರತದಲ್ಲಿ ವಿವಾದಿತ ವಿಷಯವಾಗಿದ್ದರೂ, ಕೆಲ ಅರಬ್ ರಾಷ್ಟ್ರಗಳಲ್ಲಿ ಭಾರಿ ಬೇಡಿಕೆಯ ಸುಲ್ತಾನ್ ಆಗಿ ಹೊರಹೊಮ್ಮಿದ್ದರು. ಇತ್ತ ಪ್ಯಾಲೆಸ್ತಿನ್ ಮೇಲಿನ ಯುದ್ದಗಳಿಂದ ಅರಬ್ ರಾಷ್ಟ್ರದ ಗಮನ ಇದೀಗ ಪ್ಯಾಲೆಸ್ತಿನ್ ಮೇಲೆ ನೆಟ್ಟಿದೆ. ಹೀಗಾಗಿ ಅರಬ್ ರಾಷ್ಟ್ರದ ಉದ್ಯಮಿಗಳು ಖಡ್ಗ ಖರೀದಿಸಲು ಮುಂದೆ ಬರಲಿಲ್ಲ.
ಶಿವಮೊಗ್ಗ ಈದ್ ಮಿಲಾದ್ ಮೆರವಣಿಗೆಯಲ್ಲಿ ತಲ್ವಾರ್, ಚೂರಿ ಝಳಪಿಸಿದ ಜಿಹಾದಿಗಳು: ವಿಡಿಯೋ ಹರಿಬಿಟ್ಟ ಬಿಜೆಪಿ!