ಬಾಂಗ್ಲಾದೇಶ(ಆ.04): ಭಾರತ ಸೇರಿದಂತೆ ಏಷ್ಯಾದಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಇದರ ನಡುವೆ ಮಿಂಚು-ಸಿಡಿಲು ಕೂಡ ಆತಂಕ ಹೆಚ್ಚಿಸುತ್ತಿದೆ. ಇದೀಗ ಶಿಬ್‍ಗಂಜ್ ವಲಯದಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದ ವೇಳೆ ಸಿಡಿಲು ಬಡಿದ ಘಟನೆ ನಡೆದಿದೆ. ಪರಿಣಾಮ 16 ಮಂದಿ ಸಾವನ್ನಪ್ಪಿದ್ದಾರೆ.
3 ಮಕ್ಕಳು ಸೇರಿ ಐವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಬಡಿದ ಸಿಡಿಲು; ಭಯಾನಕ ವಿಡಿಯೋ!
undefined
ನದಿ ತಟದಲ್ಲಿರುವ ಶಿಬ್‌ಗಂಜ್ ವಲಯದಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಭಾರಿ ಮಳೆ ನಡುವೆ ನಡೆಯುತ್ತಿದ್ದ ಸಮಾರಂಭಕ್ಕೆ ಸಿಡಿಲು ಆಘಾತ ನೀಡಿದೆ. ಸಮಾರಂಭ ನಡೆಯುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಸಿಡಿಲಿನ ಹೊಡೆತಕ್ಕೆ ಮದುವೆ ಸಮಾರಂಭದಲ್ಲಿದ್ದ 16 ಮಂದಿ ಸಾವನ್ನಪ್ಪಿದ್ದಾರೆ.
ಸಿಡಿಲಿನ ಹೊಡೆತಕ್ಕೆ ವರ ಗಾಯಗೊಂಡಿದ್ದಾರೆ. ಆದರೆ ವಧು ಸುರಕ್ಷಿತರಾಗಿದ್ದಾರೆ. ಇತ್ತ ವರ ಸೇರಿದಂತೆ ಸುಮಾರು 20ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದ ಹಲವೆಡೆ ಭಾರೀ ಮಳೆ: ಗದಗದಲ್ಲಿ ಸಿಡಿಲಿಗೆ 3 ಬಲಿ
ಇನ್ನು ಬಾಂಗ್ಲಾದೇಶದ ಕಾಕ್ಸಿ ಬಜಾರ್ ಪ್ರದೇಶದಲ್ಲೂ ಸಿಡಿಲು ಬಡಿದಿದೆ. ಇಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ. 2016ರ ಬಳಿಕ ಬಾಂಗ್ಲಾದೇಶದಲ್ಲಿ ಸಿಡಿಲಿನ ಹೊಡೆತಕ್ಕೆ ಸಾವನ್ನಪ್ಪಿದವರ ಸಂಖ್ಯೆ ಈ ವರ್ಷ ಹೆಚ್ಚಾಗಿದೆ. 2016ರಲ್ಲಿ 200 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ. ಅದರಲ್ಲೂ ಮೇ ತಿಂಗಳ ಒಂದೇ ದಿನ 82 ಮಂದಿ ಸಾವನ್ನಪ್ಪಿದ್ದರು.
ಸರ್ಕಾರಿ ದಾಖಲೆಗಳಲ್ಲಿ 200 ಸಾವು ಆದರೆ 349 ಮಂದಿ 2016ರಲ್ಲಿ ಸಿಡಿಲಿಗೆ ಬಲಿಯಾಗಿದ್ದಾರೆ ಎಂದು ಬಾಂಗ್ಲಾದೇಶ ಹೇಳುತ್ತಿದೆ. ಇದೀಗ ಮತ್ತೆ ಸಿಡಿಲಿನ ಆರ್ಭಟ ಹೆಚ್ಚಾಗಿದೆ. ಹೊರಹೋಗುವಾಗ ಎಚ್ಚರ ವಹಿಸಬೇಕು ಎಂದು ಬಾಂಗ್ಲಾದೇಶ ಸ್ಥಳೀಯ ಆಡಳಿತ ಗ್ರಾಮಸ್ಥರಲ್ಲಿ ಮನವಿ ಮಾಡಿದೆ.