ಭಾರತೀಯ ಮೂಲದ ನತಾಶಾ ವಿಶ್ವದಲ್ಲೇ ಪ್ರತಿಭಾನ್ವಿತ ವಿದ್ಯಾರ್ಥಿ!

Published : Aug 04, 2021, 08:33 AM ISTUpdated : Aug 04, 2021, 08:47 AM IST
ಭಾರತೀಯ ಮೂಲದ ನತಾಶಾ ವಿಶ್ವದಲ್ಲೇ ಪ್ರತಿಭಾನ್ವಿತ ವಿದ್ಯಾರ್ಥಿ!

ಸಾರಾಂಶ

* ಭಾರತೀಯ ಮೂಲದ ಅಮೆರಿಕನ್‌ ಬಾಲಕಿ, 11 ವರ್ಷದ ನತಾಶಾ ಪೆರಿ * ಭಾರತೀಯ ಮೂಲದ ನತಾಶಾ ವಿಶ್ವದಲ್ಲೇ ಪ್ರತಿಭಾನ್ವಿತ ವಿದ್ಯಾರ್ಥಿ * ಅದ್ವಿತೀಯ ಸಾಧನೆ ಮಾಡಿದ ನತಾಶಾ

ವಾಷಿಂಗ್ಟನ್‌(ಅ.04): ಭಾರತೀಯ ಮೂಲದ ಅಮೆರಿಕನ್‌ ಬಾಲಕಿ, 11 ವರ್ಷದ ನತಾಶಾ ಪೆರಿ ವಿಶ್ವದ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಒಬ್ಬಳು ಎಂದು ಗುರುತಿಸಿಕೊಂಡಿದ್ದಾಳೆ.

ನ್ಯೂಜೆರ್ಸಿಯಲ್ಲಿ ವಿದ್ಯಾರ್ಥಿನಿಯಾಗಿರುವ ನತಾಶಾ ಕಾಲೇಜು ಪ್ರವೇಶಾತಿಗಾಗಿ ನಡೆದ ಸ್ಕಾಲಸ್ಟಿಕ್‌ ಅಸ್ಸೆಸ್ಸೆಮೆಂಟ್‌ ಟೆಸ್ಟ್‌ (ಎಸ್‌ಎಟಿ), ಅಮೇರಿಕನ್‌ ಕಾಲೇಜ್‌ ಟೆಸ್ಟಿಂಗ್‌ (ಎಸಿಟಿ)ಗೆ ಹಾಜರಾಗಿದ್ದಳು. ಇದರಲ್ಲಿ ಅದ್ವಿತೀಯ ಸಾಧನೆ ಮಾಡಿದ ನತಾಶಾ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಎಂಬ ಮಾನ್ಯತೆ ಪಡೆದಿದ್ದಾಳೆ. ಜಾನ್‌ ಹಾಪ್ಕಿನ್ಸ್‌ ಸೆಂಟರ್‌ ಫಾರ್‌ ಟ್ಯಾಲೆಂಟೆಡ್‌ ಯೂತ್‌ ಟ್ಯಾಲೆಂಟ್‌(ಸಿಟಿವೈ) ಆಯೋಜಿಸಿದ ಈ ಟೆಸ್ಟ್‌ನಲ್ಲಿ ಜಗತ್ತಿನ 84 ದೇಶಗಳ 19 ಸಾವಿರ ವಿದ್ಯಾರ್ಥಿಗಳು ಹಾಜರಾಗಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ನತಾಶಾ, ಇದು ಇನ್ನಷ್ಟುಸಾಧನೆ ಮಾಡಲು ಪ್ರೇರಣೆ ಎಂದು ತಿಳಿಸಿದ್ದಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶವಗಾರದಲ್ಲಿ 50ಕ್ಕೂ ಹೆಚ್ಚು ಕೊಳೆತ ಮೃತದೇಹ ಬಚ್ಚಿಟ್ಟ ಸಿಬ್ಬಂದಿ.. ಇಲಿ, ಹುಳುಗಳ ಮಧ್ಯೆ ರಾಶಿರಾಶಿ ಬಾಡಿಗಳು
Mecca Joint Defence Agreement: ಪಾಕಿಸ್ತಾನ ಮೇಲೆ ದಾಳಿ ಆದರೆ ಬೆಂಬಲಕ್ಕೆ ಇನ್ನು ಸೌದಿ, ಟರ್ಕಿ! ಏನಿದು ಮೆಕ್ಕಾ ಒಪ್ಪಂದ?