ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದ್ದಂತೆ, ಡೊನಾಲ್ಡ್ ಟ್ರಂಪ್ ಅವರ 43 ಅಡಿ ಎತ್ತರದ ಬೆತ್ತಲೆ ಪ್ರತಿಮೆಯನ್ನು ಲಾಸ್ ವೇಗಾಸ್‌ನಲ್ಲಿ ಪ್ರತಿಷ್ಠಾಪಿಸಲಾಗಿದೆ.
ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಕೇವಲ ಒಂದು ತಿಂಗಳಷ್ಟೇ ಬಾಕಿ ಇದೆ. ಹೀಗಿರುವಾಗ ರಿಪಬ್ಲಿಕನ್ ಪಕ್ಷದಿಂದ ಮಾಜಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೆ, ಇತ್ತ ಡೆಮಾಕ್ರಟಿಕ್ ಪಕ್ಷದಿಂದ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಕಣಕ್ಕಿಳಿದಿದ್ದಾರೆ. ಚುನಾವಣೆಗೆ ಕೇವಲ ತಿಂಗಳಷ್ಟೇ ಇರುವುದರಿಂದ ಇಬ್ಬರೂ ನಾಯಕರು ದೇಶಾದ್ಯಂತ ಸಂಚರಿಸಿ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಡೊನಾಲ್ಡ್ ಟ್ರಂಪ್ ಅವರ ಬೃಹತ್ ಗಾತ್ರದ ಬೆತ್ತಲೆ ಪ್ರತಿಮೆಯೊಂದನ್ನು ಲಾಸ್ ವೇಗಾಸ್‌ನಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಡೊನಾಲ್ಡ್ ಟ್ರಂಪ್ ಅರು ಹುಟ್ಟುಡುಗೆಯಲ್ಲಿರುವಂತಹ 43 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದ್ದು, ನೋಡುಗರನ್ನು ಮುಜುಗರಕ್ಕೀಡು ಮಾಡುತ್ತಿದೆ.
ಡೊನಾಲ್ಡ್ ಟ್ರಂಪ್ ಅವರನ್ನು ಹೋಲುವ ಅವರ ಜೀವಕ್ಕಿಂತಲೂ ಬಹು ಎತ್ತರವಾದ ಈ ನಗ್ನ ಪ್ರತಿಮೆಯನ್ನು ಲಾಸ್ ವೇಗಾಸ್‌ನ , ನೆವಾಡಾದ ಇಂಟರ್‌ಸ್ಟೇಟ್ 15 ನಾರ್ತ್ ಬಳಿ ಫೋಮ್‌ನಿಂದ ನಿರ್ಮಿಸಲಾಗಿದ್ದು, ಅಂದಾಜು 6 ಸಾವಿರ ಪೌಂಡ್ ಎಂದರೆ 2722 ಕೇಜಿ ತೂಗುತ್ತಿದೆ. ಈ ದೈತ್ಯಾಕಾರದ ಬೆತ್ತಲೆ ಪ್ರತಿಮೆಯನ್ನು 'ಕ್ರೂಕ್ಡ್ ಅಂಡ್ ಅಬ್ಸೆನ್ ಟೂರ್' ಭಾಗವಾಗಿ ನಿರ್ಮಿಸಲಾಗಿದೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೆ ಕಮಲಾ ಹ್ಯಾರಿಸ್ ಅವರು ಸೆಪ್ಟೆಂಬರ್ 29ರಂದು ಈ ಪ್ರದೇಶಕ್ಕೆ ಭೇಟಿ ನೀಡುವವರಿದ್ದರು. ಅದಕ್ಕೂ ಮೊದಲು ಸೆಪ್ಟೆಂಬರ್ 28ರಂದು ಈ ಬೆತ್ತಲೆ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲಾಗಿದೆ.
ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಕಚೇರಿ ಮೇಲೆ ಗುಂಡಿನ ದಾಳಿ!
ಈ ಕಲಾಕೃತಿಗೆ 'ವಕ್ರ ಮತ್ತು ಅಶ್ಲೀಲ' (Crooked and Obscene)ಎಂದು ಹೆಸರಿಡಲಾಗಿದೆ. ಸದಾ ವಿವಾದಗಳಿಂದ ಕೂಡಿದ ರಾಜಕಾರಣಿಯನ್ನು ಪ್ರತಿಮೆಯ ರೂಪದಲ್ಲಿ ಉತ್ತಾಹ್‌ಗೆ ಹೋಗುವ ಮಾರ್ಗದಲ್ಲಿ ಇಂಟರ್‌ಸ್ಟೇಟ್ 15ರಲ್ಲಿ ಚಿತ್ರಿಸಲಾಗಿದೆ ಎಂದು ಮೂಲವನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.
ತಂತಿಯಿಂದ ಅತ್ತಿತ್ತ ಅಲ್ಲಾಡುವ ತೊಗಲು ಗೊಂಬೆಯಂತೆ ಈ ಬೆತ್ತಲೆ ಪ್ರತಿಮೆಯನ್ನು ನಿರ್ಮಿಸಲಾಗಿದೆ. 2016ರಲ್ಲಿಯೂ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡೆದ ಸಮಯದಲ್ಲೂ ಇದೇ ರೀತಿಯ ಬೆತ್ತಲೆ ಪ್ರತಿಮೆಯನ್ನು ಅನಾವರಣ ಮಾಡಲಾಗಿತ್ತು. ಆದರೆ ಅದಕ್ಕೆ ಹೋಲಿಸಿದರೆ ಇದೂ ತುಂಬಾ ದೊಡ್ಡದಾದ ಪ್ರತಿಮೆಯಾಗಿದೆ. ಸೆಪ್ಟೆಂಬರ್ 27ರ ಸಂಜೆ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಆದರೆ ಇದು ಎಷ್ಟು ಸಮಯದವರೆಗೆ ಹೀಗೆ ಪ್ರದರ್ಶಿಸಲ್ಪಡುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಜನ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಟ್ರಂಪ್ ಪ್ರಚಾರದ ವೇಳೆ ತೆರೆದ ಎದೆ ಪ್ರದರ್ಶನ ಮಾಡಿದ ಯುವತಿ, ಸಭೆಯಿಂದ ಹೊರಹಾಕಿದ ಪೊಲೀಸ್!
: Protestors erected a 43-foot naked statue of Donald Trump next to Kamala Harris rally in Las Vegas. pic.twitter.com/qHi1XMDBKv
— upuknews (@upuknews1)