ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್‌ನಲ್ಲಿ ಹಿಂದೂ ದೇವಲಾಯ ನಿರ್ಮಾಣವಾಗಲಿದೆ. ಇಲ್ಲಿಯವರೆಗೂ ಯಾವುದೇ ಧಾರ್ಮಿಕ ಕಾರ್ಯಕ್ಕೆ ನಗರದ ಹೊರಭಾಗಕ್ಕೆ ಹೋಗುತ್ತಿದ್ದ ಜನರಿಗೆ ಇನ್ನು ತಮ್ಮ ನಗರದಲ್ಲಿಯೇ ದೇವಾಲಯ ಹಾಗೂ ಸ್ಮಶಾನ ಎರಡೂ ಸಿಗಲಿವೆ.
ಇಸ್ಲಮಾಬಾದ್(ಜೂ.25): ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್‌ನಲ್ಲಿ ಹಿಂದೂ ದೇವಲಾಯ ನಿರ್ಮಾಣವಾಗಲಿದೆ. ಇಲ್ಲಿಯವರೆಗೂ ಯಾವುದೇ ಧಾರ್ಮಿಕ ಕಾರ್ಯಕ್ಕೆ ನಗರದ ಹೊರಭಾಗಕ್ಕೆ ಹೋಗುತ್ತಿದ್ದ ಜನರಿಗೆ ಇನ್ನು ತಮ್ಮ ನಗರದಲ್ಲಿಯೇ ದೇವಾಲಯ ಹಾಗೂ ಸ್ಮಶಾನ ಎರಡೂ ಸಿಗಲಿವೆ.
ಇಸ್ಲಮಾಬಾದ್‌ನ ಎಚ್ 9ಸೆಕ್ಟರ್‌ನಲ್ಲಿ ಭೂಭಾಗ ಗುರುತಿಸಿದ್ದು, 20 ಸಾವಿರ ಸ್ವೇರ್ ಫೀಟ್‌ನಲ್ಲಿ ಕೃಷ್ಣ ದೇವಾಲಯ ನಿರ್ಮಾಣವಾಗಲಿದೆ. ಇಸ್ಲಮಾಬಾದ್ ಹಿಂದೂ ಪಂಚಾಯತ್ ಇದನ್ನು ಕೃಷ್ಣ ಮಂದಿರ ಎಂದು ನಾಮಕರಣ ಮಾಡಿದೆ.
undefined
ಕೊರೋನಾ ಹೋರಾಟಕ್ಕೆ ಬಾಷ್ ಮತ್ತಷ್ಟು ನೆರವು; ಮಾಸ್ಕ್ ಉತ್ಪಾದನಾ ಘಟಕಕ್ಕೆ ಚಾಲನೆ!
ದೇವಾಲಯ ನಿರ್ಮಾಣಕ್ಕೆ 10 ಕೋಟಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಖರ್ಚನ್ನು ಸರ್ಕಾರ ಭರಿಸಲಿದೆ. ಪಾಕ್ ಧಾರ್ಮಿಕ ಇಲಾಖೆ ಸಚಿವ ಪಿರ್ ನೂರುಲ್ ಹಖ್ ಖಾದ್ರಿ ತಿಳಿಸಿದ್ದಾರೆ.
ಸಂಸದೀಯ ಕಾರ್ಯದರ್ಶಿ ಲಾಲ್ ಚಂದ್ ಮಾಲ್ಹಿ ಅವರು ಮಂಗಳವಾರ ದೇವಾಲಯಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಈ ಸಂದರ್ಭ ಅವರು 1947ರಲ್ಲಿ ಇದ್ದ ದೇವಾಲಯ ಹಾಗೂ ಅವುಗಳ ನಾಶದ ಬಗ್ಗೆ ಮಾತನಾಡಿ, ಆ ನಂತರ ಪಾಕಿಸ್ತಾನದ ರಾಜಧಾನಿಯಲ್ಲಿ ಹಿಂದೂಗಳ ಸಂಖ್ಯೆ ಕಳೆದ 20 ವರ್ಷದಲ್ಲಿ ಗಣನೀಯವಾಗಿ ಹೆಚ್ಚಾಗಿದ್ದು, ದೇವಾಲಯ ನಿರ್ಮಾಣ ಅಗತ್ಯವಾಗಿದೆ ಎಂದಿದ್ದಾರೆ.
97 ಬಲಿ ಪಡೆದ ಪಾಕ್ ವಿಮಾನ ದುರಂತಕ್ಕೆ ಕೊರೋನಾ ಕಾರಣ!
ಇಸ್ಲಮಾಬಾದ್‌ನಲ್ಲಿರುವ ಹಿಂದೂಗಳು ಬಹುಕಾಲದಿಂದ ದೇವಾಲಯ ನಿರ್ಮಾಣ ಬೇಕೆಂದು ಆಗ್ರಹಿಸಿದ್ದರು. ಹಾಗೆಯೇ ಇಲ್ಲಿ ಹಿಂದೂ ರುದ್ರ ಭೂಮಿಯೂ ಇರಲಿಲ್ಲ. ಇಲ್ಲಿ ದೇವಾಲಯ ಹಾಗೂ ಧಾರ್ಮಿಕ ಕೆಲಸಗಳಿಗಾಗಿ ಕಟ್ಟಡ ನಿರ್ಮಾಣ ಹಾಗೂ ರುದ್ರಬೂಮಿಯೂ ಇರಲಿದೆ.