97 ಬಲಿ ಪಡೆದ ಪಾಕ್‌ ವಿಮಾನ ದುರಂತಕ್ಕೆ ಕೊರೋನಾ ಕಾರಣ!

By Suvarna News  |  First Published Jun 25, 2020, 2:44 PM IST

97 ಬಲಿ ಪಡೆದ ಪಾಕ್‌ ವಿಮಾನ ದುರಂತಕ್ಕೆ ಕೊರೋನಾ ಕಾರಣ!| ತನಿಖೆಯಲ್ಲಿ ಬಯಲಾಯ್ತು ಅಚ್ಚರಿಯ ಅಂಶ


ಇಸ್ಲಾಮಾಬಾದ್(ಜೂ.25): ಕಳೆದ ತಿಂಗಳು ಪಾಕಿಸ್ತಾನದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ‘ಕೊರೋನಾ ವೈರಸ್‌’ ಕಾರಣ ಎಂಬ ಅಚ್ಚರಿಯ ಅಂಶ ಹೊರಬಿದ್ದಿದೆ.

ಪಾಕ್‌ ವಿಮಾನ ದುರಂತದಿಂದ ಅನೇಕರನ್ನು ಕಾಪಾಡಿದ ನಮಾಜ್‌!

Latest Videos

undefined

ಹೌದು, ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ (ಪಿಐಎ)ಗೆ ಸೇರಿದ ವಿಮಾನ ಚಲಾಯಿಸುತ್ತಿದ್ದ ಪೈಲಟ್‌ಗಳು ಅತಿಯಾದ ವಿಶ್ವಾಸದಲ್ಲಿ ವಿಮಾನ ಚಲಾಯಿಸುತ್ತಲೇ ಕೆಲಸದ ಬಗ್ಗೆ ಗಮನ ಕೊಡದೆ ಕೊರೋನಾ ಬಗ್ಗೆ ಚರ್ಚೆಯಲ್ಲಿ ಮುಳುಗಿದ್ದರಿಂದಲೇ ಈ ವಿಮಾನ ದುರಂತ ಸಂಭವಿಸಿದೆ ಎಂದು ಪಾಕಿಸ್ತಾನ ವಿಮಾನಯಾನ ಸಚಿವ ಗುಲಾಂ ಸರ್ವರ್‌ ಖಾನ್‌ ಬುಧವಾರ ಸಂಸತ್ತಿನಲ್ಲಿ ಹೇಳಿದ್ದಾರೆ.

ಪಾಕಿಸ್ತಾನದ ತನಿಖಾ ತಂಡವು ಪತನಗೊಂಡ ವಿಮಾನದ ವಾಯ್‌್ಸ ರೆಕಾರ್ಡನ್ನು ಬಿಡುಗಡೆ ಮಾಡಿದ್ದು, ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷವಿರಲಿಲ್ಲ, ಮನುಷ್ಯರಿಂದಲೇ ಆಗಿರುವ ತಪ್ಪು ಎಂಬುದು ದೃಢಪಟ್ಟಿದೆ.

ಕರಾಚಿ ವಿಮಾನ ದುರಂತ ನೋಡಿ ನಕ್ಕ ಭಾರತೀಯರನ್ನು ಸ್ಯಾಡಿಸ್ಟ್ ಎಂದ ಪಾಕ್ ನೆಟ್ಟಿಗರು

ಮೇ 22ರಂದು ಲಾಹೋರ್‌ನಿಂದ ಕರಾಚಿಗೆ ಹಾರುತ್ತಿದ್ದ ದೇಶೀಯ ವಿಮಾನ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ವಸತಿ ಪ್ರದೇಶದಲ್ಲಿ ಅವಘಡಕ್ಕೆ ತುತ್ತಾಗಿತ್ತು. ಈ ದುರಂತದಲ್ಲಿ 97 ಜನರು ಮೃತಪಟ್ಟು, ಕೇವಲ ಇಬ್ಬರು ಅಚ್ಚರಿಯ ರೀತಿಯಲ್ಲಿ ಬದುಕುಳಿದಿದ್ದರು.

click me!