Kiss challenge in x ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲಾ ಒಂದು ರೀತಿಯ ಚಾಲೆಂಜ್‌ಗಳು ಬರುತ್ತಲೇ ಇರುತ್ತದೆ. ಈಗ ಹೊಸ ಮಾದರಿಯ ಕಿಸ್ ಚಾಲೆಂಜ್ ಟ್ರೆಂಡ್ ಆಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೆಟ್ಟರ್ ಗೇಮ್‌ಗಳು ಬರುತ್ತಲೇ ಇರುತ್ತವೆ. ಐಸ್ ಬಾತ್ ಚಾಲೆಂಜ್, ಕಿಕಿ ಚಾಲೆಂಜ್... ಸೋಶಿಯಲ್ ಮೀಡಿಯಾದಿಂದಲೇ ವೈರಲ್ ಆದಂತವುಗಳು. ಒಮ್ಮೆ ಇಂತಿಂದ ಚಾಲೆಂಜ್ ಅಂತಾ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರೆ ಮುಗಿಯಿತು. ಜನ ಇಷ್ಟಪಟ್ಟಲ್ಲಿ ಅದು ತನ್ನಿಂತಾನೇ ವೈರಲ್ ಆಗುತ್ತದೆ. ಟಿಕ್‌ಟಾಕ್, ಟ್ವಿಟರ್, ಇನ್ಸ್‌ಟಾಗ್ರಾಮ್‌ಗಳಲ್ಲಿ ಇಂತ ಚಾಲೆಂಜ್ ಟ್ರೆಂಡ್‌ಗಳು ಬೇಕಾದಷ್ಟು ಸಿಗುತ್ತವೆ. ಹೊಸದು ಯಾವುದಾದರೂ ಚಾಲೆಂಜ್ ಬಂದಾಗ ಅದರ ಕಂಟೆಂಟ್ ಕ್ರಿಯೆಟ್ ಮಾಡುವ ದೊಡ್ಡ ಬಳಗವೇ ಇದೆ. ಬಟ್ ಇಂಥ ಚಾಲೆಂಜ್‌ಗಳನ್ನು ಮಾಡುವಾಗ ಪ್ರಾಣಹಾನಿಯಾಗುವ ಅಪಾಯವೂ ಇರುತ್ತದೆ. ಹಾಗಾಗಿ ಎಚ್ಚರಿಕೆ ವಹಿಸಿಯೇ ಈ ಚಾಲೆಂಜ್‌ಗಳನ್ನು ಮಾಡಬೇಕಾಗುತ್ತದೆ. ಇನ್ನೂ ಕೆಲವೊಮ್ಮೆ ಇಂಥ ಯಾವ ಸಾಹಸಗಳಿಲ್ಲದೆ, ಸುಲಭವಾಗಿ ಮಾಡಬಹುದಾದ ಚಾಲೆಂಜ್‌ಗಳೂ ಇರುತ್ತದೆ. ಈಗ ಅಂಥದ್ದೊಂದು ಚಾಲೆಂಜ್ ಸೋಶಿಯಲ್ ಮೀಡಿಯಾಗೆ ಬಂದಿದೆ.
ಕಿಸ್ ಚಾಲೆಂಜ್. ಇದರಲ್ಲಿ ನಿಮ್ಮ ಎದುರಿಗೆ ಇದ್ದ ವ್ಯಕ್ತಿಗೆ ಮುತ್ತು ಕೊಡುವುದೇ ಚಾಲೆಂಜ್. ನೋ ಕಾಂಟೆಕ್ಸ್ಟ್ ಹ್ಯೂಮನ್ಸ್ ಎನ್ನುವ ಎಕ್ಸ್ ಪೇಜ್ ಸೋಮವಾರ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಅದರಂತೆ ಇಬ್ಬರು ವ್ಯಕ್ತಿಗಳನ್ನು ಕುರ್ಚಿಯಲ್ಲಿ ಎದುರಾಗಿ ಕೂರಿಸುತ್ತಾರೆ. ಇಬ್ಬರ ಮುಖ ನೇರಾನೇರವಾಗಿ ಇರಬೇಕು. ಈ ವೇಳೆ ಅವರಿಬ್ಬರ ನಡುವಿನಿಂದ ಮೂರನೇ ವ್ಯಕ್ತಿ ಒಂದು ಪೇಪರ್‌ಅನ್ನು ಮೇಲಿಂದ ಕೆಳಗೆ ಬಿಡುತ್ತಾರೆ. ಆಗ ಈ ವ್ಯಕ್ತಿಗಳು ಈ ಪೇಪರ್‌ಅನ್ನು ತಮ್ಮ ತುಟಿಯಿಂದ ಹಿಡಿಯಬೇಕು. ಹಿಡಿದವರು ಗೆದ್ದಂತೆ ಲೆಕ್ಕ. ಹಿಡಿಯದೇ ಇದ್ದವರಿಗೆ ಕಿಸ್ ಅಂತೂ ಸಿಗೋದು ಖಂಡಿತ.
undefined
ಈವರೆಗೂ ವಿಡಿಯೋ ಎಷ್ಟು ವೈರಲ್ ಆಗಿದೆಯೆಂದರೆ, 9.1 ಮಿಲಿಯನ್ ಮಂದಿ ಇದನ್ನು ವೀಕ್ಷಣೆ ಮಾಡಿದ್ದಾರೆ. 20 ಸಾವಿರ ಮಂದಿ ಇದನ್ನು ಲೈಕ್ ಮಾಡಿದ್ದಾರೆ. ಸಾಕಷ್ಟು ಕಾಮೆಂಟ್‌ಗಳೂ ಕೂಡ ಇದಕ್ಕೆ ಬಂದಿದ್ದು, ಇದೊಂದು ಕ್ರೇಜಿ ಗೇಮ್ ಅಂತಾ ಹೇಳ್ತಿದ್ದಾರೆ.
'ಅಂಬಾನಿ ಸೊಸೆಯೇ ತಾಳಿ ಹಾಕೊಂಡು ತಿರುಗಾಡ್ತಾರೆ.. ನಿಮಗೇನಾಗಿದೆ?..' ಸುಶ್ಮಿತಾ ಜಗ್ಗಪ್ಪ ಲುಕ್‌ಗೆ ನೆಟ್ಟಿಗರ ಕಿಡಿ!
ಇಂಥ ಗೇಮ್‌ಗಳು ನನ್ನ ಕಾಲೇಜಿನ ಕ್ಯಾಂಪಸ್‌ಗಳಿಗೆ ಯಾಕ್ ಬರೋದಿಲ್ಲ.. ಸಖತ್ ಆಗಿದೆ ಎಂದು ಯೂಸರ್ ಒಬ್ಬ ಪೋಸ್ಟ್ ಮಾಡಿದ್ದಾನೆ. ಪಾಕಿಸ್ತಾನದಲ್ಲಿ ಇದನ್ನ ಟೀಮ್ ಬಿಲ್ಡಿಂಗ್ ಟ್ರೇನಿಂಗ್‌ನಲ್ಲಿ ಇಂಥ ಗೇಮ್‌ಗಳನ್ನು ಆಡಿಸದರೆ ವರ್ಕ್‌ಔಟ್ ಆಗಬಹುದು ಎಂದು ಕಾಲೆಳೆದಿದ್ದಾರೆ.ಎದುರು ಎಷ್ಟು ಚಂದದ ಹುಡುಗಿ ಇದ್ದಾಳೆ ಅನ್ನೋದರ ಮೇಲೆ ಈ ಗೇಮ್‌ನ ಭವಿಷ್ಯ ಇರುತ್ತದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಗೇಮ್ ಆಡುವಾಗ ನಮ್ಮ ಹಲ್ಲುಗಳ ಬಗ್ಗೆಯೇ ಜಾಗ್ರತೆ ವಹಿಸಬೇಕು ಎಂದು ಕಾಮೆಂಟ್ ಮಾಡಲಾಗಿದೆ.
ಜೋಡಿಯಾಗ್ತಾರಾ ಮನು ಭಾಕರ್-ನೀರಜ್ ಚೋಪ್ರಾ? ಸೋಶಿಯಲ್ ಮೀಡಿಯಾದಲ್ಲಿ ನ್ಯೂಸ್ ಫುಲ್ ವೈರಲ್!
This game is crazy pic.twitter.com/FKF0CmAH3V
— NO CONTEXT HUMANS (@HumansNoContext)