'ನಿಮ್ಮ ಹೆಂಡತಿಯರ ಭಾರತೀಯ ಸೀರೆಗಳನ್ನು ಸುಟ್ಟು ಹಾಕಿ' ಬಾಂಗ್ಲಾ ಪ್ರಧಾನಿ ಕಿಡಿ

Published : Apr 01, 2024, 02:03 PM IST
'ನಿಮ್ಮ ಹೆಂಡತಿಯರ ಭಾರತೀಯ ಸೀರೆಗಳನ್ನು ಸುಟ್ಟು ಹಾಕಿ' ಬಾಂಗ್ಲಾ ಪ್ರಧಾನಿ ಕಿಡಿ

ಸಾರಾಂಶ

ಬಾಂಗ್ಲಾದೇಶದ ವಿರೋಧ ಪಕ್ಷದ ಮೇಲೆ ಸ್ಪೋಟಗೊಂಡ ಪ್ರಧಾನಿ ಶೇಖ್ ಹಸೀನಾ ನಿಮ್ಮ ಹೆಂಡತಿಯರ ಭಾರತೀಯ ಸೀರೆಗಳನ್ನು ಸುಟ್ಟು ಹಾಕಿ ಎಂದಿದ್ದಾರೆ.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಇತ್ತೀಚೆಗೆ ದೇಶದ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ ಸದಸ್ಯರಿಗೆ- 'ನಿಮ್ಮ ಹೆಂಡತಿಯರ ಭಾರತೀಯ ಸೀರೆಗಳನ್ನು ಸುಟ್ಟು ಹಾಕಿ' ಎಂದಿದ್ದಾರೆ.

ವಿರೋಧ ಪಕ್ಷವು ಭಾರತೀಯ ಉತ್ಪನ್ನಗಳ ವಿರುದ್ಧ ಅಭಿಯಾನವನ್ನು ನಡೆಸುತ್ತಿರುವುದರ ಬಗ್ಗೆ ಸಿಡಿಮಿಡಿಗೊಂಡ ಹಸೀನಾ BNP ನಾಯಕರು ನಿಜವಾಗಿಯೂ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿದರೆ, ಅವರು ತಮ್ಮ ಪತ್ನಿಯರ ಭಾರತೀಯ ಸೀರೆಗಳನ್ನು ಸುಡಬೇಕಾಗುತ್ತದೆ ಎಂದರು.

ಹೊಸದಿಲ್ಲಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವ ಹಸೀನಾ, ತಮ್ಮ ಭಾಷಣದಲ್ಲಿ ವಿರೋಧ ಪಕ್ಷದವರಿಗೆ ಸಾಕಷ್ಟು ಪ್ರಶ್ನೆಗಳನ್ನು ಹಾಕಿ- 'ನೀವು ಭಾರತೀಯ ಮಸಾಲೆಗಳಿಲ್ಲದ ಆಹಾರ ತಿನ್ನಬಹುದೇ?  ಬಹಿಷ್ಕಾರ ಪ್ರಚಾರಕರ ಪತ್ನಿಯರು ಎಷ್ಟು ಭಾರತೀಯ ಸೀರೆಗಳನ್ನು ಹೊಂದಿದ್ದಾರೆ? ಅವರು ತಮ್ಮ ಹೆಂಡತಿಯರಿಂದ ಸೀರೆಗಳನ್ನು ತೆಗೆದುಕೊಂಡು ಅವುಗಳನ್ನು ಏಕೆ ಸುಡುವುದಿಲ್ಲ? ಭಾರತದ ಉತ್ಪನ್ನಗಳನ್ನು ವಿರೋಧಿಸುವವರು ನಿಜವಾಗಿಯೂ ಅವರ ಜೀವನದಲ್ಲಿ ಬಹಿಷ್ಕರಿಸಿದ್ದಾರೆಯೇ ಎಂದು ತಿಳಿಯಲು ನಾನು ಬಯಸುತ್ತೇನೆ' ಎಂದಿದ್ದಾರೆ. 

ಈ ವರ್ಷದ ಆರಂಭದಲ್ಲಿ, ಬಾಂಗ್ಲಾದಲ್ಲಿ ಒಬ್ಬ ದೇಶಭ್ರಷ್ಟ ಬ್ಲಾಗರ್‌ ಎಕ್ಸ್‌ನಲ್ಲಿ ಹಾಕಿದ ಪೋಸ್ಟರ್ 'ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿ' ಎಂದಿತ್ತು. ಅಂದಿನಿಂದ, ಈ ಅಭಿಯಾನವು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಲಾರಂಭಿಸಿದೆ. ಬಾಂಗ್ಲಾದೇಶದ ಆಂತರಿಕ ರಾಜಕೀಯದಲ್ಲಿ ಭಾರತದ ಆಪಾದಿತ ಹಸ್ತಕ್ಷೇಪವನ್ನು ವಿರೋಧಿಸಲು ಈ ಅಭಿಯಾನವನ್ನು ಪ್ರಾರಂಭಿಸಲಾಯಿತು.

ಬಾಂಗ್ಲಾದೇಶದ ಪ್ರಸ್ತುತ ಪ್ರಧಾನಿ ಹಸೀನಾ ಅವರ ಅಡಿಯಲ್ಲಿ ನವದೆಹಲಿ ಮತ್ತು ಢಾಕಾ ನಡುವಿನ ಸಂಬಂಧವು ಅಭಿವೃದ್ಧಿಗೊಂಡಿದೆ. ಅಂದ ಹಾಗೆ, BNP ಇತ್ತೀಚಿನ ಸಾರ್ವತ್ರಿಕ ಚುನಾವಣೆಗಳನ್ನು ಬಹಿಷ್ಕರಿಸಿತು, ಹಸೀನಾ ನಾಲ್ಕನೇ ಬಾರಿಗೆ ಮರಳಲು ದಾರಿ ಮಾಡಿಕೊಟ್ಟಿತು.

ಫಾರ್ಮ್‌ನಲ್ಲಿ ಮಕ್ಕಳಿಗೆ ಈಸ್ಟರ್ ಹಂಟ್ ಆಟ ಆಡಿಸಿದ ಯಶ್- ರಾಧಿಕಾ ದಂಪತ ...

'ಕಳೆದ 15 ವರ್ಷಗಳಿಂದ ಬಾಂಗ್ಲಾದೇಶದ ಚುನಾವಣೆಗಳಲ್ಲಿ ಭಾರತವು ಬಹಿರಂಗವಾಗಿ ಹಸ್ತಕ್ಷೇಪ ಮಾಡಿದೆ ಮತ್ತು ಪ್ರಭಾವ ಬೀರಿದೆ. ಭಾರತ ಸರ್ಕಾರದ ತಪ್ಪು ನೀತಿಗಳಿಂದ ಬಾಂಗ್ಲಾದೇಶವು ರಾಜಕೀಯವಾಗಿ ಹೆಚ್ಚು ನಷ್ಟವನ್ನು ಅನುಭವಿಸಿದೆ' ಎಂದು BNP ವಾದಿಸುತ್ತಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!
ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ