ಎಂಥೆಂಥಾ ಜನ ಇರ್ತಾರಪ್ಪಾ! ಈ ಮಹಿಳೆ ಮಾಡಿದ ಕೆಲಸ ನೋಡಿ.. ಸಹೋದ್ಯೋಗಿ ಮೆಟರ್ನಿಟಿ ಲೀವ್ ತಗೊಂಡು ಮನೆಯಲ್ಲಿ ಕೂತರೆ ತನಗೆ ಕೆಲಸ ಹೆಚ್ಚಾಗುತ್ತೆ ಎಂದು ಗರ್ಭಿಣಿಗೆ ವಿಷ ಹಕಲು ಯತ್ನಿಸಿದ್ದಾಳೆ ಈಕೆ.
ಸಹೋದ್ಯೋಗಿಯು ಹೆರಿಗೆ ರಜೆ ತಗೊಂಡು ಮನೆಯಲ್ಲಿ ಕುಳಿತ್ರೆ ತನಗೆ ಆಫೀಸಲ್ಲಿ ಎಕ್ಸ್ಟಾ ಕೆಲ್ಸ ಹೆಚ್ಚುತ್ತೆ ಅಂತ ಮಹಿಳೆಯೊಬ್ಬಳು ಸಹೋದ್ಯೋಗಿಗೆ ವಿಷ ಬೆರೆಸಿ ಮಗುವನ್ನು ಕೊಲ್ಲಲು ಪ್ರಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.
ಚೀನಾದ ಹುಬೈನಲ್ಲಿರುವ ಸರ್ಕಾರಿ ಸಂಸ್ಥೆಯಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಹೌದು, ಗರ್ಭಿಣಿ ಸಹೋದ್ಯೋಗಿಯನ್ನು ಹೆರಿಗೆ ರಜೆ ತೆಗೆದುಕೊಳ್ಳದಂತೆ ತಡೆಯಲು ಸಹೋದ್ಯೋಗಿಯೊಬ್ಬರು ವಿಷವನ್ನು ಆಕೆ ಕುಡಿವ ನೀರಿಗೆ ಬೆರೆಸಿದ ಘಟನೆಯಿದು. ಇದರ ವಿಡಿಯೋ ಹರಿದಾಡುತ್ತಿದ್ದು, ಕೆಲಸದಲ್ಲಿ ಹೆಚ್ಚಿನ ಒತ್ತಡವನ್ನು ಅನುಭವಿಸಿದಾಗ ಕೆಲವರು ಹೇಗೆ ವಿಪರೀತ ಕೆಲಸಗಳನ್ನು ಮಾಡಬಹುದು ಎಂಬುದನ್ನು ಈ ವೀಡಿಯೊ ಎತ್ತಿ ತೋರಿಸುತ್ತದೆ.
undefined
ಕೇಂದ್ರ ಹುಬೈ ಪ್ರಾಂತ್ಯದ ಸ್ವಾಯತ್ತ ಪ್ರಿಫೆಕ್ಚರ್‌ನಲ್ಲಿರುವ ಹೈಡ್ರಾಲಜಿ ಮತ್ತು ಜಲಸಂಪನ್ಮೂಲ ತನಿಖಾ ಬ್ಯೂರೋದಲ್ಲಿ ಈ ಮಹಿಳೆಯರು ಕೆಲಸ ಮಾಡುತ್ತಿದ್ದರು. ಇದು ಸರ್ವೋಚ್ಚ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದ್ದು, ಅಂತಹ ಸಂಸ್ಥೆಗಳಲ್ಲಿ ನೇಮಕಗೊಳ್ಳಲು, ಅಭ್ಯರ್ಥಿಗಳು ಬೇಡಿಕೆಯ ಪರೀಕ್ಷೆಗಳು ಮತ್ತು ಸಂದರ್ಶನಗಳಲ್ಲಿ ಉತ್ತೀರ್ಣರಾಗಿರಬೇಕು. ಅವರು ನೀಡುವ ಉದ್ಯೋಗ ಭದ್ರತೆ ಮತ್ತು ಸ್ಥಿರತೆಯಿಂದಾಗಿ ಬಹಳಷ್ಟು ಜನ ಇಲ್ಲಿ ಉದ್ಯೋಗ ಪಡೆಯಲು ಶ್ರಮ ಹಾಕುತ್ತಾರೆ. ಆದರೆ, ಕೆಲವರಿಗೆ ಮಾತ್ರ ಆ ಅದೃಷ್ಟ ಸಿಗುತ್ತದೆ. ಆದರೆ, ಈ ಅದೃಷ್ಟದ ಜೊತೆ ಇರುವ ಒತ್ತಡವನ್ನು ಮಹಿಳೆ ಮಾಡಿದ ಕೆಲಸ ಬಹಿರಂಗಪಡಿಸುತ್ತದೆ.
ವೀಡಿಯೊದಲ್ಲಿ, ಕಪ್ಪು ಉಡುಪನ್ನು ಧರಿಸಿದ ಮಹಿಳೆ ತನ್ನ ಸಹೋದ್ಯೋಗಿಯ ಮೇಜಿನ ಬಳಿಗೆ ಹೋಗುತ್ತಾಳೆ. ಅವಳು ಸಣ್ಣ ಬಾಟಲಿಯನ್ನು ತೆರೆದು ಮೇಜಿನ ಮೇಲಿರುವ ಪಾನೀಯಕ್ಕೆ ಸ್ವಲ್ಪ ಪುಡಿಯನ್ನು ಸುರಿಯುತ್ತಾಳೆ. ನಂತರ ಅವಳು ಅವಸರದಿಂದ ಹೊರಟು ಹೋಗುತ್ತಾಳೆ.
ಸಂತ್ರಸ್ತ ಮಹಿಳೆ ತನ್ನ ನೀರಿನಲ್ಲಿ ಅಸಾಮಾನ್ಯ ರುಚಿಯನ್ನು ಗಮನಿಸಿದಾಗ ಘಟನೆಯ ಬಗ್ಗೆ ಅರಿವಾಯಿತು ಎಂದು WeChat ನ ಸಂದೇಶದಲ್ಲಿ ಹೇಳಿದ್ದಾಳೆ. ಮೊದಲಿಗೆ, ಕಚೇರಿಯ ನೀರಿನ ಸಮಸ್ಯೆ ಇರಬಹುದೆಂದು ಅವಳು ಅನುಮಾನಿಸಿದಳು. ಸುರಕ್ಷಿತವಾಗಿರಲು, ಅವಳು ಬೇರೆ ಬಾಟಲ್ ನೀರನ್ನು ಕುಡಿಯಲು ಪ್ರಾರಂಭಿಸಿದಳು. ಆದರೆ ಆಗಲೂ ಅವಳು ವಿಚಿತ್ರವಾದ ರುಚಿಯನ್ನು ಗಮನಿಸಿದಳು.
ಅನುಮಾನಗೊಂಡ ಅವಳು ತನ್ನ ಡೆಸ್ಕ್ ಹತ್ತಿರ ಬಂದವರನನು ರೆಕಾರ್ಡ್ ಮಾಡಲು ತನ್ನ ಐಪ್ಯಾಡ್ ಅನ್ನು ಬಳಸಿದಳು. ಈ ನಿರ್ಧಾರವು ಅವಳ ಸಹೋದ್ಯೋಗಿಯನ್ನು ಹಿಡಿಯಲು ಸಹಾಯ ಮಾಡಿತು.
ಹೆಚ್ಚುವರಿ ಕೆಲಸವನ್ನು ತಾನೇ ನಿಭಾಯಿಸಬೇಕಾಗುತ್ತದೆ ಎಂದು ಗರ್ಭಿಣಿ ಮಹಿಳೆ ಹೆರಿಗೆ ರಜೆಗೆ ಹೋಗುವುದು ಇಷ್ಟವಿಲ್ಲದ ಕಾರಣ ಸಹೋದ್ಯೋಗಿ ವಿಷ ಬೆರೆಸಿದ್ದಾಳೆ. ಘಟನೆ ಕುರಿತು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮಾರ್ಚ್ 18 ರಂದು ಘಟನೆ ನಡೆದಿದ್ದು, ಜಲವಿಜ್ಞಾನ ಮತ್ತು ಜಲಸಂಪನ್ಮೂಲ ತನಿಖಾ ಬ್ಯೂರೋದ ಅಧಿಕಾರಿಗಳು ಘಟನೆಯನ್ನು ತೀವ್ರ ಎಚ್ಚರಿಕೆಯಿಂದ ಪರಿಗಣಿಸುತ್ತಿದ್ದಾರೆ ಮತ್ತು ಕ್ರಮ ತೆಗೆದುಕೊಳ್ಳುವ ಮೊದಲು ಪೊಲೀಸ್ ತನಿಖೆಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ ಎಂದು ವರದಿ ಹೇಳಿದೆ.