ಟೊಪೆಕಾ(ಮಾ.25): ಉತ್ತಮ ಮನೆ ಇರಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಕಡಿಮೆ ಬೆಲೆಗೆ ಮನೆ ಸಿಕ್ಕರೆ ಹೇಗಾದರೂ ಮಾಡಿ ಖರೀದಿಸಲು ಜನ ಮುಂದಾಗುತ್ತಾರೆ. ಆದರೆ ಇಲ್ಲೊಂದು ಮನೆಯಿದೆ. 3 ಬೆಡ್ ರೂಂ ಹೊಂದಿರುವ ಉತ್ತಮ ಮನೆ. ವಾಸಿಸಲು ಯೋಗ್ಯವಾಗಿರುವ ಹಾಗೂ ಉತ್ತಮ ಸ್ಥಿತಿಯಲ್ಲಿರುವ ಮನೆ ಇದಾಗಿದೆ. ಈ ಮನೆ ಖರೀದಿಸುವವರಿಗೆ ಬಂಪರ್ ಆಫರ್ ಇದೆ. ಅಂದರೆ ಈ ಮನೆ ಸಂಪೂರ್ಣವಾಗಿ ಉಚಿತ. ಒಂದು ರೂಪಾಯಿ ನೀಡಬೇಕಿಲ್ಲ.
ಎಲ್ಲಾದರೂ ಸರಿ ಫ್ರಿ ಅಂದಮೇಲೆ ಇರಲಿ ಬಿಡಿ ಅಂತಾ ಯೋಜನೆ ಮಾಡುತ್ತಾ ಇದ್ದೀರಾ? ಈ ಉಚಿತ ಮನೆ ಇರುವುದು ಅಮೆರಿಕದ ಕನ್ಸಾಸ್‌ನಲ್ಲಿ. ಲಿಂಕೋಲನ್‌ನಲ್ಲಿ 1910ರಿಂದ ಈ ಮನೆ ಇದೆ. ಹಾಗಂತ ಇದು ಹಳೆ ಮನೆ, ಮುರಿದು ಬೀಳುವ ಕಾರಣದಿಂದ ಮಾರಾಟ ಮಾಡುತ್ತಿದ್ದಾರೆ ಎಂದುಕೊಳ್ಳಬೇಡಿ. ಮೊದಲೇ ಹೇಳಿದಂತೆ ಈ ಮನೆ ಕಂಡೀಷನ್ ಬಗ್ಗೆ ಅನುಮಾನ ಬೇಡ. ಇನ್ನೂ ಸಂಪೂರ್ಣ ಉಚಿತ ಅನ್ನೋದರಲ್ಲೂ ಸಂಶಯ ಬೇಡ. ಆದರೆ ಒಂದು ಕಂಡೀಷನ್ ಇದೆ ಅನ್ನೋದು ಮಾತ್ರ ಮರೆಯುವುದು ಬೇಡ.
ಹೊಸ ಮನೆಗೆ ಶಿಫ್ಟ್ ಆದ ನಟಿ ಮಾಧುರಿ ದೀಕ್ಷಿತ್; ತಿಂಗಳ ಬಾಡಿಗೆ ಕೇಳಿದ್ರೆ ಅಚ್ಚರಿ ಪಡುತ್ತೀರಿ
ಲಿಂಕೋಲನ್‌ನಲ್ಲಿರುವ ಈ ಮನೆ ಖರೀದಿಸಿದರೆ ನೀವು ನೇರವಾಗಿ ಮನೆ ಗೃಹ ಪ್ರವೇಶ ಮಾಡುವಂತಿಲ್ಲ. ಬದಲಿಗೆ ಈ ಮನೆಯನ್ನು ಆ ಜಾಗದಿಂದ ಸ್ಥಳಾಂತರ ಮಾಡಬೇಕು. ಲಿಂಕೋಲನ್‌ನಿಂದ ಈ ಮನೆಯನ್ನು ನಿಮ್ಮಿಷ್ಟದ ಸ್ಥಳಕ್ಕೆ ಅಥವಾ ನಿಮ್ಮ ಜಾಗಕ್ಕೆ ಸ್ಥಳಾಂತರ ಮಾಡಬೇಕು. ದೊಡ್ಡ ಮಿಷನ್‌ಗಳು, ಕ್ರೇನ್, ಜೆಸಿಬಿ ತಂದು ಈ ಮನೆಯನ್ನು ಆ ಜಾಗದಿಂದ ತೆಗೆದು ಬೇರೆಡೆ ಸ್ಥಳಾಂತರ ಮಾಡಬೇಕು. ಸ್ಥಳಾಂತರದ ಖರ್ಚು ವೆಚ್ಚಗಳಲ್ಲಿ ಆಸ್ಪತ್ರೆ ಫೌಂಡೇಶನ್ ಕೂಡ ನೆರವು ನೀಡಲಿದೆ.
ಈ ಮನೆಯ ಪಕ್ಕದಲ್ಲಿ ಕೌಂಟಿ ಆಸ್ಪತ್ರೆ ಹಾಗೂ ಹೆಲ್ತ್‌ಕೇರ್ ಫೌಂಡೇಶನ್ ಇದೆ. ಈ ಮನೆ ಇರುವ ಸ್ಥಳವನ್ನು ಆಸ್ಪತ್ರೆ ಆಡಳಿತ ಮಂಡಳಿ ಖರೀದಿಸಿದೆ. ಈ ಜಾಗದಲ್ಲಿ ಆಸ್ಪತ್ರೆ ಕಟ್ಟಡ ವಿಸ್ತರಿಸಲು ಬಯಸಿದೆ. ಸದ್ಯ ಈ ಜಾಗದಲ್ಲಿರುವ ಮನೆಯನ್ನು ಕೆಡುವಲು ಆಸ್ಪತ್ರೆ ಆಡಳಿತ ಮಂಡಳಿಗೆ ಮನಸ್ಸಾಗಿಲ್ಲ. ಹೀಗಾಗಿ ಮನೆಯನ್ನು ಇಲ್ಲಿಂದ ಸ್ಛಳಾಂತರ ಮಾಡುವುದಾದರೆ ಮಾಡಬಹುದು. ಸಂಪೂರ್ಣವಾಗಿ ಟೀಕ್ ವುಡ್ ಹಾಗೂ ಅತ್ಯುತ್ತಮ ಮರಗಳಿಂದ ನಿರ್ಮಿಸಲಾಗಿರುವ ಅತೀ ಸುಂದರ ಮನೆಗೆ ನಯಾ ಪೈಸೆ ನೀಡದೇ ಸ್ಥಳಾಂತರ ಮಾಡಬಹುದು ಎಂದು ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ.
ನಿರ್ಮಾಣ ಕಾರ್ಯದಲ್ಲಿ ವಿಘ್ನ ಬರಬಾರದೆಂದರೆ ಪಾಲಿಸಬೇಕಾದ 10 Vastu tips
2,023 ಚದರ ಅಡಿ ಹೊಂದಿರುವ ಈ ಮನೆ ಎರಡು ಮಹಡಿ ಹೊಂದಿದೆ. ಕೆಲ ವರ್ಷಗಳ ಹಿಂದೆ ಈ ಮನೆಯ ಮಾಲೀಕರು ಸ್ಥಳವನ್ನು ಮಾರಾಟ ಮಾಡಿದ್ದಾರೆ. ಅಲ್ಲೀವರೆಗೆ ಮನೆಯ ಮಾಲೀಕರೇ ವಾಸವಾಗಿದ್ದರು. ಮನೆಯ ಒಳಗಡೆ ಮರದ ಹಲವು ಪಿಠೋಪಕರಗಳು ಇವೆ. ಮನೆಯನ್ನು ಸ್ಥಳಾಂತರ ಮಾಡಿ ಕೇವಲ ಬಣ್ಣ ಬಳಿದರೆ ಸಾಕು. ಎರಡು ಮಹಡಿಯ ಅಮೆಕನ್ ಬಂಗ್ಲೋ ನಿಮ್ಮದಾಗಲಿದೆ.
ಈ ವರ್ಷದ ಅಂತ್ಯದವರೆಗೆ ಕಾಯಲಾಗುತ್ತದೆ. ಬಳಿಕ ಈ ಮನೆ ಖರೀದಿಸಲು ಯಾರೂ ಮುಂದೆ ಬರದಿದ್ದರೆ ಬೇರೆ ದಾರಿಯಿಲ್ಲ. ಅನಿವಾರ್ಯವಾಗಿ ಕೆಡವಬೇಕು ಎಂದು ಕೌಂಟಿ ಆಸ್ಪತ್ರೆ ಹಾಗೂ ಹೆಲ್ತ್ ಕೇರ್ ಫೌಂಡೇಶನ್ ಹೇಳಿದೆ.
ಕನ್ಸಾಸ್ ಜನಸಾಂದ್ರತೆ ಕಡಿಮೆ ಇರುವ ಪ್ರದೇಶವಾಗಿದೆ. ಪ್ರತಿ ಮನೆಗಳು ವಿಶಾಲ ಪ್ರದೇಶದಲ್ಲಿ ತಲೆ ಎತ್ತಿ ನಿಂತಿದೆ. ಕನ್ಸಾಸ್ ನದಿಯಿಂದ ಈ ಹೆಸರು ಬಂದಿದೆ. ಅಮೆರಿದ ಮೂಲ ನಿವಾಸಿಗಳು ಇದೇ ನದಿ ತಟದಲ್ಲಿ ವಾಸವಾಗಿದ್ದರು. ಕನ್ಸಾಸ್‌ನಲ್ಲಿ ಅಮೆರಿಕದ ಆದಿವಾಸಿಗಳ ಈಗಲೂ ವಾಸಿಸುವ ಕಾಡುಗಳಿವೆ. 1850ರಲ್ಲಿ ಕನ್ಸಾಸ್ ಅಮೆರಿಕದ ಜೊತೆ ವೀಲಿನಗೊಂಡಿದೆ. ಕನ್ಸಾಸ್ ಪ್ರತ್ಯೇಕ ರಾಜ್ಯವೇ ಆಗಿದ್ದರೂ ಇದೀಗ ಅಮೆರಿಕದ ಅಂಗವಾಗಿದೆ. ಇದಕ್ಕೂ ಮೊದಲು ಇಂಗ್ಲೆಂಡ್ ಆಳ್ವಿಕೆಯಲ್ಲಿತ್ತು. 2015ರಲ್ಲಿ ಕನ್ಸಾಸ್ ಅತೀ ಹೆಚ್ಚು ಕೃಷಿ ಆಧಾರಿತ ಪ್ರದೇಶ ಎಂದು ಘೋಷಿಸಲಾಗಿದೆ.