ಅಮೆರಿಕಾ ರಾಜಕೀಯ: ಕಮಲಾ ಹ್ಯಾರಿಸ್ ಧರಿಸಿದ್ದ ಕಿವಿಯೊಲೆ ಬಗ್ಗೆಯೇ ಚರ್ಚೆ, ಬೆಲೆ ಎಷ್ಟು?

Published : Sep 12, 2024, 01:39 PM IST
ಅಮೆರಿಕಾ ರಾಜಕೀಯ: ಕಮಲಾ ಹ್ಯಾರಿಸ್ ಧರಿಸಿದ್ದ ಕಿವಿಯೊಲೆ ಬಗ್ಗೆಯೇ ಚರ್ಚೆ, ಬೆಲೆ ಎಷ್ಟು?

ಸಾರಾಂಶ

ಅಮೆರಿಕ ಅಧ್ಯಕ್ಷೀಯ ಚುನಾವಣಾ ಚರ್ಚೆಯಲ್ಲಿ ಕಮಲಾ ಹ್ಯಾರಿಸ್ ಧರಿಸಿದ್ದ ಕಿವಿಯೊಲೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಲಕ್ಷ ಲಕ್ಷ ಬೆಲೆಬಾಳುವ ಈ ಕಿವಿಯೊಲೆಗೆ ಡೊನಾಲ್ಡ್ ಟ್ರಂಪ್ ಬಳಕೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣದಲ್ಲಿರುವ ಭಾರತ ಮೂಲದ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಚರ್ಚೆ ಮುಕ್ತಾಯವಾಗಿದೆ. ಫಿಲಡೆಲ್ಫಿಯಾದ ನ್ಯಾಷನಲ್ ಕಾನ್ಸಿಟ್ಯೂಟಷನ್ ಸೆಂಟರ್‌ನಲ್ಲಿ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಚರ್ಚಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.  ಈ ಚರ್ಚೆಯಲ್ಲಿ ಡೊನಾಲ್ಡ್ ಟ್ರಂಪ್‌ಗೆ ಕಮಲಾ ಹ್ಯಾರಿಸ್ ಹಲವು ಟಕ್ಕರ್‌ಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ. ಇದೀಗ ಚರ್ಚೆಯಲ್ಲಿ ಕಮಲಾ ಹ್ಯಾರಿಸ್ ಧರಿಸಿದ್ದ ಕಿವಿಯೊಲೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
 
ಡೊನಾಲ್ಡ್ ಟ್ರಂಪ್ ಪರವಾಗಿರುವ ಜನರು ಕಮಲಾ ಹ್ಯಾರಿಸ್ ಧರಿಸಿದ್ದ ಕಿವಿಯೊಲೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚರ್ಚೆ ವೇಳೆ ಕಮಲಾ ಹ್ಯಾರಿಸ್ ಕಿವಿಯೊಲೆ ಮಾದರಿಯ ಇಯರ್‌ ಫೋನ್ ಧರಿಸಿದ್ದರು ಎಂದು ಆರೋಪಿಸಲಾಗಿದೆ. ಟ್ರಂಪ್ ಜೊತೆ ಮುಖಾಮುಖಿಯಾಗಿ ಚರ್ಚೆ ನಡೆಸಲು ಕಮಲಾ ಹ್ಯಾರಿಸ್ ಕಿವಿಯೊಲೆ ಮೂಲಕ ಸಹಾಯ ಪಡೆದುಕೊಂಡಿದ್ದಾರೆ. ಹ್ಯಾರಿಸ್ ಧರಿಸಿದ್ದ ಕಿವಿಯೊಲೆಯಲ್ಲಿ ಒಂದು ಆಡಿಯೋ ಹಿಯರಿಂಗ್ ಡಿವೈಸ್ ರೀತಿ ಕಾಣಿಸುತ್ತಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 

ಕಮಲಾ ಹ್ಯಾರಿಸ್ ಧರಿಸಿದ್ದ ಕಿವಿಯೊಲೆಗಳು ನೋಡಲು ಮಾತ್ರ ಸಾಮಾನ್ಯ ಓಲೆಯಂತೆ ಎಲ್ಲರಿಗೂ ಕಾಣಿಸುತ್ತವೆ. ಚರ್ಚೆಯಲ್ಲಿ ತಿರುಗೇಟು ಕೊಡಲು ಈ ಇಯರ್ ಫೋನ್ ಮೂಲಕ ಕಮಲಾ ಹ್ಯಾರಿಸ್ ಮಾಹಿತಿ ಪಡೆದುಕೊಂಡಿದ್ದಾರೆ. ಈ ಇಯರ್‌ ಫೋನ್ ಹೇಗೆ ಬಳಕೆ ಮಾಡಬೇಕು ಎಂಬುದರ ಬಗ್ಗೆ ಕಮಲಾ ಹ್ಯಾರಿಸ್ ತರಬೇತಿ ಪಡೆದುಕೊಂಡಿರುವ ಸಾಧ್ಯತೆಗಳಿವೆ ಎಂದು ಡೊನಾಲ್ಡ್ ಟ್ರಂಪ್ ಸಮರ್ಥಕರು ಹೇಳುತ್ತಾರೆ. 

ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ಒಂದೇ ವಾರದಲ್ಲಿ ದಾಖಲೆಯ 1650 ಕೋಟಿ ರೂ ದೇಣಿಗೆ!

ಡೊನಾಲ್ಡ್ ಟ್ರಂಪ್ ಸಮರ್ಥಕರ ಆರೋಪಕ್ಕೆ ಕಮಲಾ ಹ್ಯಾರಿಸ್ ಬೆಂಬಲಿಗರು ತಿರುಗೇಟು ನೀಡಿದ್ದಾರೆ. ಓರ್ವ ಬಳಕೆದಾರ, ಕಮಲಾ ಹ್ಯಾರಿಸ್ ಧರಿಸಿರುವ ಕಿವಿಯೋಲೆ ಟಿಫಾನಿ ಹಾರ್ಡ್‌ವೇರ್ ಪರ್ಲ್ ಎಂದು ಹೇಳಿದ್ದಾರೆ. ಆದ್ರೆ ಟಿಫಾನಿ ಹಾರ್ಡ್‌ವಿಯರ್ ಪರ್ಲ್ ಎಂಬುದನ್ನು ಅವರನ್ನು ಖಚಿತಪಡಿಸಿಲ್ಲ. ಅದು ಸಾಮಾನ್ಯ ಕಿವಿಯೊಲೆ ಎಂದು ಡೊನಾಲ್ಡ್ ಟ್ರಂಪ್ ಬೆಂಬಲಿಗರ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಕೆಲ ಬಳಕೆದಾರರು ಟಿಫಾನಿ ಹಾರ್ಡ್‌ವೇರ್ ಪರ್ಲ್ ಕಿವಿಯೊಲೆ ಫೋಟೋ ಹಂಚಿಕೊಂಡು, ಇವುಗಳ ಬೆಲೆ 3,300 ಯುಎಸ್ ಡಾಲರ್ (2,77,129 ರೂಪಾಯಿ) ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

ಕೆಲ ಮಹಿಳಾ ಬಳಕೆದಾರರು ಕಿವಿಯೊಲೆ ಸಿಂಪಲ್ ಆಗಿದ್ದರೂ, ಕ್ಲಾಸಿಯಾಗಿವೆ ಎಂಬುದರ ಕುರಿತು ಚರ್ಚೆ ನಡೆಸಿದ್ದಾರೆ. ಕೆಲವರು ಟಿಫಾನಿ ವೆಬ್‌ಸೈಟ್‌ನಲ್ಲಿ ಸಿಂಪಲ್ ಕಿವಿಯೊಲೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಒಂದಿಷ್ಟು ಜನರು ಕಮಲಾ ಹ್ಯಾರಿಸ್ ಸದಾ ವಿವಿಧ ರೀತಿಯ ಸಿಂಪಲ್ ವಿನ್ಯಾಸ ಇರೋ ಆಭರಣಗಳನ್ನು ಧರಿಸುವ ಮೂಲಕ ಅಟ್ರಾಕ್ಟಿವ್ ಅಗಿ ಕಾಣಿಸುತ್ತಾರೆ. ಡೊನಾಲ್ಡ್ ಟ್ರಂಪ್ ಜೊತೆಗಿನ ಚರ್ಚೆ ಬಳಿಕವಂತೂ ಸೋಶಿಯಲ್ ಮೀಡಿಯಾದಲ್ಲಿ ಟಿಫಾನಿ ಹಾರ್ಡ್‌ವೇರ್ ಪರ್ಲ್ ಕಿವಿಯೊಲೆಯ ಬಗ್ಗೆ ಚರ್ಚೆ ಶುರುವಾಗಿದೆ. ಚರ್ಚೆಯ ಸಮಯದಲ್ಲಿ ಕಮಲಾ ಹ್ಯಾರಿಸ್ ಕಿವಿಯೋಲೆ ಮಾದರಿಯ ಇಯರ್ ಫೋನ್ ಬಳಸಿದ್ದಾರೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ವರದಿಯಾಗಿದೆ. ಸೆಪ್ಟೆಂಬರ್ 10ರಂದು ಈ ಚರ್ಚೆ ನಡೆದಿತ್ತು.

ಅಮೆರಿಕಾ ಚುನಾವಣೆಗೂ ಮೊದಲು ಭಾರತೀಯ ಮೂಲದ ಅಜ್ಜ ಅಜ್ಜಿಯ ನೆನೆದ ಕಮಲಾ ಹ್ಯಾರಿಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ