
ಕಟ್ಟಡ ನಿರ್ಮಾಣ ಸ್ಥಳವೊಂದರಲ್ಲಿ 26 ಸಾವಿರ ವರ್ಷಗಳಷ್ಟು ಹಳೆಯ ಮಾನವ ಹಾಗೂ ಪ್ರಾಣಿಗಳ ಹೆಜ್ಜೆ ಗುರುತು ಪತ್ತೆಯಾಗಿದೆ. ಮ್ಯಾಡ್ರಿಡ್‌ನ ಪುರಾತತ್ತ್ವಜ್ಞರು ಈ ಸ್ಥಳದಲ್ಲಿ ಬರೀ ಹೆಜ್ಜೆ ಗುರುತು ಮಾತ್ರವಲ್ಲದೇ ವಿವಿಧ ಪ್ರಾಚೀನ ಕಲ್ಲಿನ ಕಲಾಕೃತಿಗಳನ್ನು ಕೂಡ ಪತ್ತೆ ಮಾಡಿದ್ದಾರೆ. ವಸತಿ ಯೋಜನೆಯ ಭಾಗವಾಗಿ ಸ್ಪೇನ್‌ನ ಮೆಂಡೆಜ್ ಅಲ್ವಾರೊ ಪ್ರದೇಶದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಈ ಅಪರೂಪದ ಪುರಾತನ ಕಾಲದ ಮಾನವ ಹೆಜ್ಜೆ ಗುರುತುಗಳ ಪುರಾವೆ ಸಿಕ್ಕಿದೆ.
ಈ ಆಶ್ಚರ್ಯಕರ ಅವಿಷ್ಕಾರವೂ ಈಗ ಈ ಸ್ಥಳದಲ್ಲಿ ಪುರಾತತ್ವ ವಸ್ತುಗಳ ಶೋಧಕ್ಕೆ ನಾಂದಿ ಹಾಡಿದ್ದು, ಈ ಸಾಮಾನ್ಯ ನಿರ್ಮಾಣ ಸ್ಥಳವೀಗ ಐತಿಹಾಸಿಕ ಪ್ರಾಮುಖ್ಯತೆಯ ತಾಣವಾಗಿ ಬದಲಾಗಿದೆ. ಜೊತೆಗೆ ಸ್ಥಳದಲ್ಲಿ ನಡೆಯುತ್ತಿದ್ದ ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ ಈ ಅಮೂಲ್ಯ ಸ್ಮಾರಕವನ್ನು ರಕ್ಷಿಸಲು ಇದನ್ನು ಅಮೂರ್ತ ಸಂಸ್ಕೃತಿಯ ಆಸ್ತಿ (Intangible Cultural Property) ಎಂದು ಘೋಷಿಸಲಾಗಿದೆ. ಅಲ್ಲದೇ ಪೂರ್ಣ ಪ್ರಮಾಣದ ಪುರಾತತ್ವ ಶೋಧಕ್ಕೆ ಮ್ಯಾಡ್ರಿಡ್ ಪುರಾತತ್ವ ಇಲಾಖೆ ಮುಂದಾಗಿದೆ.
ಭೋಜಶಾಲಾ ಸಂಕೀರ್ಣದಲ್ಲಿರುವ ಕಟ್ಟಡವು ಮಂದಿರವೋ ಮಸೀದಿಯೋ? -2000 ಪುಟಗಳ ವರದಿ ಸಲ್ಲಿಕೆ
ಹೀಗಾಗಿ ಈಗ ಅಲ್ಲಿ ಭೂವಿಜ್ಞಾನಿಗಳು, ಪುರಾತತ್ವಶಾಸ್ತ್ರಜ್ಞರು ಮತ್ತು ಪ್ರಾಗ್ಜೀವಶಾಸ್ತ್ರಜ್ಞರು (palaeontologists) ಸೇರಿದಂತೆ 30 ತಜ್ಞರ ತಂಡವು ಈ ಸ್ಥಳದಲ್ಲಿ ಸರಿಯಾಗಿ ಉತ್ಖನನ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದೆ. ಅಲ್ಲದೇ ಮುಂದಿನ ತನಿಖೆಗಳಿಗಾಗಿ ಈ ಪ್ರದೇಶವನ್ನು ಪುರಾತತ್ವ ಮೀಸಲು ಪ್ರದೇಶವಾಗಿ ಘೋಷಿಸಲು ಈ ತಜ್ಞರ ತಂಡವು ಮ್ಯಾಡ್ರಿಡ್ ಸಿಟಿ ಕೌನ್ಸಿಲ್ ಅನ್ನು ಕೇಳಬಹುದು ಎಂದು ಪ್ರಮುಖ ಸಂಶೋಧಕ ಜುವಾನ್ ಸಾಂಗುನೋಸ್ (Juan Sangunos) ಹೇಳಿದ್ದಾರೆ.
ವರದಿಗಳ ಪ್ರಕಾರ, ಈ ಇಲ್ಲಿ ಕಂಡುಬಂದ ಈ ಪುರಾತತ್ವದ ಗುರುತುಗಳನ್ನು 26 ಸಾವಿರ ವರ್ಷಗಳಿಗೂ ಹಳೆಯದಾದ ಸಮುದಾಯದ ಗುರುತುಗಳು ಎಂದು ಗುರುತಿಸಲಾಗಿದೆ. ಪುರಾತನ ಹೆಜ್ಜೆಗುರುತುಗಳು ನೀರಿಗಾಗಿ ನಿಂತ ಪ್ರಾಣಿಗಳ ಉಪಸ್ಥಿತಿಯನ್ನು ಸಹ ಸೂಚಿಸುತ್ತವೆ. ಮತ್ತಷ್ಟು ಉತ್ಖನನದ ವೇಳೆ ಈ ಜಾಗ ಕೇವಲ ನೀರಿನ ಕೊಳಕ್ಕಿಂತ ದೊಡ್ಡದು ಎಂದು ತಿಳಿದು ಬಂದಿದೆ. ಉತ್ಖನನದ ನೇತೃತ್ವ ವಹಿಸಿದ ಪಿಲಾರ್ ಓನೇಟ್, ದಿ ಆಲಿವ್ ಪ್ರೆಸ್‌ಗೆ ನೀಡಿದ ಮಾಹಿತಿ ಪ್ರಕಾರ, ಈ ಜಾಗವೂ ಕುಡಿಯುವ ನೀರಿನ ಬಾವಿಗಿಂತ ಹೆಚ್ಚು ದೊಡ್ಡದಾದ ಆದರೆ 'ವಿಶಿಷ್ಟವಾದ ಪ್ರದೇಶ' ಐಬೇರಿಯನ್ ಪೆನಿನ್ಸುಲಾದ (Iberian Peninsula) ಮಧ್ಯಭಾಗದಲ್ಲಿ ಈ ರೀತಿಯ ರಚನೆಯನ್ನು ಎಲ್ಲೂ ನೋಡಿರಲಿಲ್ಲ ಎಂದು ಹೇಳಿದ್ದಾರೆ.
ರಬ್ಬರ್ ತೋಟದಲ್ಲಿ ಇಂಗು ಗುಂಡಿ ತೆಗೆಯುತ್ತಿದ್ದಾಗ 200 ವರ್ಷಗಳಿಗೂ ಹಳೆಯ ನಿಧಿ ಪತ್ತೆ
ಈ ಹಿಂದೆ, ಇಟಲಿಯ ಸರೋವರದ ಕೆಳಭಾಗದಲ್ಲಿ ಕಬ್ಬಿಣದ ಯುಗ ಅಥವಾ ಲೋಹಯುಗವ ಪ್ರತಿಮೆಯೊಂದು ಪತ್ತೆಯಾಗಿತ್ತು. ಇಟಲಿಯ ಅಯೋಲಾದಲ್ಲಿರುವ ಗ್ರ್ಯಾನ್ ಕ್ಯಾರೊ ಡಿ ಬೊಲ್ಸೆನಾ ಎಂಬ ನೀರೊಳಗಿನ ಪುರಾತತ್ವ ಸ್ಥಳದಲ್ಲಿ ನಡೆಯುತ್ತಿರುವ ಕೆಲಸದ ಸಮಯದಲ್ಲಿ ಇದು ಕಂಡುಬಂದಿತ್ತು. 10 ನೇ ಮತ್ತು 9 ನೇ ಶತಮಾನದ ನಡುವಿನ ಅಪೂರ್ಣವಾದ ಪ್ರತಿಮೆಯು ಪೂರ್ಣಗೊಂಡ ಕಲಾಕೃತಿಗಿಂತ ಒರಟು ಕರಡುಗಳಂತೆ ಕಾಣುತ್ತಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ