ಕೆಲವರಿಗಿರುತ್ತೆ ಮೂರು ಶಿಶ್ನಗಳು, ಇವರ ಲೈಂಗಿಕ ಜೀವನ ಸಹಜವಾಗಿಯೇ ಇರುತ್ತಾ?

By Santosh NaikFirst Published Oct 18, 2024, 2:20 PM IST
Highlights

ಇಂಗ್ಲೆಂಡ್‌ನಲ್ಲಿ ವ್ಯಕ್ತಿಯೊಬ್ಬನಿಗೆ ಮೂರು ಶಿಶ್ನಗಳಿರುವುದು ಪತ್ತೆಯಾಗಿದೆ. ಈ ಅಪರೂಪದ ಜನ್ಮಜಾತ ದೋಷವನ್ನು ಟ್ರಿಫಾಲಿಯಾ ಎಂದು ಕರೆಯಲಾಗುತ್ತದೆ, ಮತ್ತು ಇದು ಅತ್ಯಂತ ಅಪರೂಪದ ಸ್ಥಿತಿಯಾಗಿದೆ.

ಲಂಡನ್‌(ಅ.18): ಜಗತ್ತಲ್ಲಿ ಏನೆಲ್ಲಾ ವಿಸ್ಮಯಗಳಿರುತ್ತದೆ. ಎರಡು ತಲೆ ಇರುವ ವ್ಯಕ್ತಿಗಳು, ಐದಕ್ಕಿಂತ ಹೆಚ್ಚಿನ ಬೆರಳು ಹೊಂದಿರುವ ವ್ಯಕ್ತಿಗಳು. ಇವೆಲ್ಲವೂ ಸಾಮಾನ್ಯ ಎಂಬಂತಾಗಿದೆ. ಆದರೆ, ಇಂಗ್ಲೆಂಡ್‌ನಲ್ಲಿ ವ್ಯಕ್ತಿಯೊಬ್ಬನಿಗೆ ಮೂರು ಶಿಶ್ನಗಳಿರುವುದು ಗೊತ್ತಾಗಿದೆ. ಇನ್ನೂ ಅಚ್ಚರಿಯ ಸಂಗತಿ ಏನೆಂದರೆ, ತನಗೆ ಮೂರು ಶಿಶ್ನಗಳಿರುವುದು ಸ್ವತಃ ಆತನಿಗೂ ಗೊತ್ತಿರಲಿಲ್ಲ ಎನ್ನುವುದು. ಕೆಲ ವರ್ಷಗಳ ಹಿಂದೆ ಸಾವು ಕಂಡಿದ್ದ ವ್ಯಕ್ತಿಯ ದೇಹವನ್ನು ಇಂಗ್ಲೆಂಡ್‌ನ ಬರ್ಮಿಂಗ್‌ ಹ್ಯಾಂನ ವೈದ್ಯಕೀಯ ಸಂಸ್ಥೆಗೆ ದಾನ ಮಾಡಲಾಗಿತ್ತು. ಇತ್ತೀಚೆಗೆ ವಿದ್ಯಾರ್ಥಿ ಸಂಶೋಧಕರು ಪರೀಕ್ಷೆಗಾಗಿ ಈ ದೇಹವನ್ನು ಛೇದನ ಮಾಡುವ ವೇಳೆ, ವ್ಯಕ್ತಿಗೆ ಎರಡು ಹೆಚ್ಚುವರಿ ಶಿಶ್ನಗಳಿರುವುದು ಗೊತ್ತಾಗಿದೆ.ಇದು ಅತ್ಯಂತ ಅಪರೂಪದ ಜನ್ಮಜಾತ ದೋಷದ ಎರಡನೆಯ ನಿದರ್ಶನ ಇದಾಗಿದೆ. ಇದನ್ನು ಟ್ರಿಫಾಲಿಯಾ ಎಂದೂ ಕರೆಯುತ್ತಾರೆ. 2020 ರಲ್ಲಿ ಇರಾಕ್‌ನ ಡುಹೋಕ್‌ನಲ್ಲಿ ಟ್ರಿಫಾಲಿಯಾ ಮೊದಲ ದಾಖಲಾದ ಪ್ರಕರಣ ದಾಖಲಾಗಿತ್ತು. ಅಂದು ಮಗು ಹುಟ್ಟಿದ ಮೂರು ತಿಂಗಳ ಬಳಿಕ ಮೂರು ಶಿಶ್ನಗಳಿರುವುದು ಗೊತ್ತಾಗಿತ್ತು..

ಈ ವಿಚಾರವನ್ನು ಜರ್ನಲ್‌ ಆಫ್‌ ಮೆಡಿಕಲ್‌ ಸೈನ್ಸ್‌ ಕೇಸಸ್‌ಸ ತನ್ನ ಪತ್ರಿಕೆಯ ವರದಿಯಲ್ಲಿ ತಿಳಿಸಿದೆ. ಸಂಶೋಧಕರ ಪ್ರಕಾರ, ಮನುಷ್ಯನಿಗೆ ಮೂರು ಶಿಶ್ನಗಳಿವೆ ಎನ್ನುವುದು ಅವರಿಗೆ ಗೊತ್ತಿರಲಿಲ್ಲ ವೈದ್ಯರು ಹೇಳುವ ಪ್ರಮಾರ 5 ರಿಂದ 6 ಮಿಲಿಯನ್‌ ಜನರಲ್ಲಿ ಒಬ್ಬರಲ್ಲಿ ಟ್ರಿಫಾಲಿಯಾ ಎನ್ನುವ ಜನ್ಮಜಾತ ದೋಷ ಕಂಡುಬರುತ್ತದೆ ಎಂದಿದ್ದಾರೆ.

ಟ್ರಿಫಾಲಿಯಾ ಅನ್ನೋದು ಮೂರು ವಿಭಿನ್ನ ಶಿಶ್ನ ಶಾಫ್ಟ್‌ಗಳ ಉಪಸ್ಥಿತಿಯನ್ನು ವಿವರಿಸುವ ಅಪರೂಪದ ಜನ್ಮಜಾತ ದೋಷವಾಗಿದೆ. ಒಮ್ಮೆ ಮಾತ್ರವೇ ಇದರ ಬಗ್ಗೆ ವರದಿಯಾಗಿದೆ. ದೇಹವನ್ನು ಛೇದಿಸದೆ ಉಳಿದ ಎರಡು ಶಿಶ್ನಗಳನ್ನು ನೋಡಲು ಸಾಧ್ಯವಾಗೋದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

Latest Videos

ಡಿಫಾಲಿಯಾ ಎಂದು ಕರೆಯಲ್ಪಡುವ ಎರಡು ಶಿಶ್ನಗಳನ್ನು ಹೊಂದಿರುವ ಸುಮಾರು 100ಕ್ಕೂ ಅಧಿಕ ಕೇಸ್‌ಗಳಿವೆ. ಪ್ರತಿ 5.5 ಮಿಲಿಯನ್‌ ಜನರ ಪೈಕಿ ಒಬ್ಬರಲ್ಲಿ ಇದು ಕಾಣಿಸಿಕೊರ್ಳಳುತ್ತದೆ. ಬಾಹ್ಯವಾಗಿ ಈ ಶಿಶ್ನ ಕಂಡುಬಂದಲ್ಲಿ ಜನನದ ಸಮಯದಲ್ಲಿ ಇದನ್ನು ತೆಗೆದುಹಾಕುತ್ತಾರೆ. ಆದರೆ, ಅದು ದೇಹದೊಳಗೆ ಇದಲ್ಲಿ ಅದು ವೈದ್ಯರು ಗಮನಕ್ಕು ಬರುವುದಿಲ್ಲ. ಶಾಶ್ವತವಾಗಿ ಉಳಿದುಕೊಂಡು ಬಿಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

78 ವರ್ಷದ ವ್ಯಕ್ತಿಯಲ್ಲಿ ಬಾಹ್ಯವಾಗಿ ಸಾಮಾನ್ಯ ಜನನಾಂಗ ಹೊಂದಿರುವಂತೆ ಕಂಡುಬಂದಿದೆ. ಆದರೆ, ಅವರ ಶಿಶ್ನವನ್ನು ಛೇದಿಸಿದಾಗ, ವಿದ್ಯಾರ್ಥಿಗಳು ಆತನ ಸ್ಕ್ರೋಟಮ್‌ನೊಳಗೆ ಅಡಗಿರುವ ಇತರ ಎರಡು ಶಿಶ್ನಗಳನ್ನು ಕಂಡುಹಿಡಿದಿದ್ದಾರೆ. "ಪರೀಕ್ಷೆಯಲ್ಲಿ ಬಾಹ್ಯ ಜನನಾಂಗಗಳ ಸಾಮಾನ್ಯ ನೋಟದ ಹೊರತಾಗಿಯೂ, 78 ವರ್ಷ ವಯಸ್ಸಿನ ಪುರುಷನ ಛೇದನವು ಗಮನಾರ್ಹವಾದ ಅಂಗರಚನಾ ಬದಲಾವಣೆಯನ್ನು ಬಹಿರಂಗಪಡಿಸಿತು: ಎರಡು ಸಣ್ಣ ಸೂಪರ್ನ್ಯೂಮರರಿ ಶಿಶ್ನಗಳು ಪ್ರಾಥಮಿಕ ಶಿಶ್ನಕ್ಕಿಂತ ಕೆಳಮಟ್ಟದ ಸಗಿಟ್ಟಲ್  ಜೋಡಿಸಲ್ಪಟ್ಟಿವೆ" ಎಂದು ಸಂಶೋಧಕರು ಪತ್ರಿಕೆಯಲ್ಲಿ ಬರೆದಿದ್ದಾರೆ. 

ಕರಾವಳಿಗೆ ಬಿಗ್‌ ನ್ಯೂಸ್‌, ದೀಪಾವಳಿಗೆ ಸ್ಪೆಷಲ್‌ ಟ್ರೇನ್‌ ಘೋಷಿಸಿದ SWR, ಬುಕ್ಕಿಂಗ್‌ ಓಪನ್‌

ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ಮೂತ್ರನಾಳದ ಸೋಂಕುಗಳು ಮತ್ತು ಫಲವತ್ತತೆಯ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳು ಟ್ರಿಫಾಲಿಯಾದಿಂದ ಬರುತ್ತದೆ ಎಂದು ವೈದ್ಯರು ಹೇಳಿದ್ದಾರೆ. ದಾನ ಮಾಡಿದ ದೇಹವನ್ನು ಎಚ್ಚರಿಕೆಯಿಂದ ಛೇದಿಸಿದ ನಂತರ ಈ ಸ್ಥಿತಿಗೆ ಸಂಬಂಧಿಸಿದ ವಿವರಗಳನ್ನು ಮೊದಲ ಬಾರಿಗೆ ಅಧ್ಯಯನ ಮಾಡಬಹುದು. ಸುಮಾರು ಆರು ಅಡಿ ಎತ್ತರದ ವ್ಯಕ್ತಿ ಸಾಮಾನ್ಯ ಬಾಹ್ಯ ಪುರುಷ ಜನನಾಂಗವನ್ನು ಹೊಂದಿದ್ದಾನೆ ಎಂದು ಸಂಶೋಧಕರು ಪರೀಕ್ಷೆಯ ಸಮಯದಲ್ಲಿ ಗಮನಿಸಿದರು.

ರೈಲ್ವೆ ಟಿಕೆಟ್‌ ಬುಕ್ಕಿಂಗ್‌ನಲ್ಲಿ ದೊಡ್ಡ ಬದಲಾವಣೆ, 120 ದಿನಗಳ ಮುಂಚೆ ಮುಂಗಡ ಟಿಕೆಟ್‌ ಮಾಡೋ ಹಾಗಿಲ್ಲ!

ಆದರೆ ಹೆಚ್ಚಿನ ಸಂಶೋಧನೆಯ ನಂತರ, "ವೃಷಣ ಚೀಲದೊಳಗೆ ಎರಡು ಸಣ್ಣ ಹೆಚ್ಚುವರಿ ಶಿಶ್ನಗಳನ್ನು ಪತ್ತೆ ಮಾಡಲಾಗಿದೆ" ಎಂದು ಕಂಡುಹಿಡಿಯಲಾಯಿತು. ವ್ಯಕ್ತಿಯ ಮುಖ್ಯ ಮತ್ತು ದ್ವಿತೀಯಕ ಶಿಶ್ನಗಳು ಸಾಮಾನ್ಯ ಮೂತ್ರನಾಳವನ್ನು ಹೊಂದಿವೆ ಎಂದು ಸಂಶೋಧಕರು ಗಮನಿಸಿದರು. "ಇಂಗ್ಯುನಲ್ ಅಂಡವಾಯುವನ್ನು ಸರಿಪಡಿಸಲು ವ್ಯಕ್ತಿಯು ಶಸ್ತ್ರಚಿಕಿತ್ಸೆಗೆ ಒಳಗಾದ ಇತಿಹಾಸವನ್ನು ಹೊಂದಿರುವುದರಿಂದ, ಈ ಸಂದರ್ಭದಲ್ಲಿ ದೋಷವು ಗಮನಕ್ಕೆ ಬಂದಿಲ್ಲ ಎಂದು ನಾವು ಖಚಿತವಾಗಿ ಹೇಳಲಾಗುವುದಿಲ್ಲ" ಎಂದು ವಿಜ್ಞಾನಿಗಳು ಹೇಳಿದರು.

click me!