ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ನಡೆಸಲು ಆದೇಶಿಸಿದ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಗಾಜಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಾವು ಕಂಡಿದ್ದಾನೆ ಎಂದು ಇಸ್ರೇಲ್ ಹೇಳಿದೆ.
ನವದೆಹಲಿ (ಅ.17): ಕಳೆದ ವರ್ಷದ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ನಡೆಸಲು ಆದೇಶಿಸಿದ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್, ಇಸ್ರೇಲಿ ಕಾರ್ಯಾಚರಣೆಯಲ್ಲಿ ಸಾವು ಕಂಡಿದ್ದಾನೆ ಎಂದು ಇಸ್ರೇಲಿ ರಕ್ಷಣಾ ಪಡೆಗಳು (IDF) ಹೇಳಿದೆ. ಗುಪ್ತಚರ ಸಂಸ್ಥೆಗಳು ಸುದ್ದಿಯನ್ನು ಪರಿಶೀಲಿಸಿ ಅಧಿಕೃತವಾಗಿ ತಿಳಿಸಿದೆ. ಅಕ್ಟೋಬರ್ 7 ರ ದಾಳಿಯಲ್ಲಿ 1,200 ಇಸ್ರೇಲಿಗಳು ಸಾವು ಕಂಡಿದ್ದರು. ಇದು ಯಹೂದಿ ದೇಶದ ಮೇಲೆ ನಡೆದ ಅತ್ಯಂತ ಮಾರಣಾಂತಿಕ ಭಯೋತ್ಪಾದಕ ದಾಳಿಯಾಗಿತ್ತು.ಅಲ್ಲದೆ, ಇಡೀ ಮಧ್ಯಪ್ರಾಚ್ಯದಲ್ಲಿ ಶಾಂತಿ ಕದಡಲು ಕಾರಣವಾಗಿತ್ತು. "ಗಾಜಾದಲ್ಲಿ IDF ಕಾರ್ಯಾಚರಣೆಗಳ ಸಮಯದಲ್ಲಿ, ಮೂವರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಯಿತು. IDF ಮತ್ತು ISA [ಇಸ್ರೇಲ್ ಸೆಕ್ಯುರಿಟೀಸ್ ಅಥಾರಿಟಿ] ಭಯೋತ್ಪಾದಕರಲ್ಲಿ ಒಬ್ಬರು ಯಾಹ್ಯಾ ಸಿನ್ವಾರ್ ಆಗಿದ್ದಾರೆ ಎಂದಿದೆ. ಈ ಹಂತದಲ್ಲಿ, ಭಯೋತ್ಪಾದಕರ ಗುರುತನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ' ಎಂದು ಗುರುವಾರ ಐಡಿಎಫ್ ತಿಳಿಸಿದೆ.
"ಭಯೋತ್ಪಾದಕರನ್ನು ಹೊಡೆದುರುಳಿಸಿದ ಕಟ್ಟಡದಲ್ಲಿ, ಪ್ರದೇಶದಲ್ಲಿ ಒತ್ತೆಯಾಳುಗಳ ಉಪಸ್ಥಿತಿಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಡೆಗಳು ಅಗತ್ಯ ಎಚ್ಚರಿಕೆಯಿಂದ ಕಾರ್ಯಾಚರಣೆಯನ್ನು ಮುಂದುವರೆಸುತ್ತಿವೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಹಲವಾರು ಭದ್ರತಾ ಅಧಿಕಾರಿಗಳು ಇಸ್ರೇಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆಗಾಗಿ ಇಸ್ರೇಲ್‌ಗೆ ಕೊಂಡೊಯ್ಯಲಾಗಿದೆ ಎಂದು ಹೇಳಿದರು ಮತ್ತು ಕೊಲ್ಲಲ್ಪಟ್ಟವರಲ್ಲಿ ಒಬ್ಬರು ಯಾಹ್ಯಾ ಸಿನ್ವಾರ್ ಎಂದು IDF ತಿಳಿಸಿದೆ.
Breaking: ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ
ಯಾಹ್ಯಾ ಸಿನ್ವಾರ್, ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಗಾಜಾ ಮೆಟ್ರೋ ಎಂದೂ ಕರೆಯಲ್ಪಡುವ ಗಾಜಾದ ಸುರಂಗಗಳಲ್ಲಿ ಅಡಗಿಕೊಂಡಿದ್ದಾನೆ ಎಂದು ಹೇಳಲಾಗಿತ್ತು. "ಈ ಹಂತದಲ್ಲಿ, ಭಯೋತ್ಪಾದಕರ ಗುರುತನ್ನು ದೃಢೀಕರಿಸಲು ಸಾಧ್ಯವಿಲ್ಲ" ಎಂದು ಇಸ್ರೇಲಿ ಮಿಲಿಟರಿ ವರದಿ ಮಾಡಿದೆ ಎಂದು ರಾಯಿಟರ್ಸ್ ತಿಳಿಸಿದೆ. ಇಸ್ರೇಲ್‌ನ ಕಾನ್ ರೇಡಿಯೋ ಹಮಾಸ್ ನಾಯಕನನ್ನು "ಆಕಸ್ಮಿಕವಾಗಿ" ಕೊಲ್ಲಲಾಯಿತು ಎಂದು ವರದಿ ಮಾಡಿದೆ. ಆತ ಅಲ್ಲಿದ್ದಾನೆ ಎನ್ನುವ ಬಗ್ಗೆ ಯಾವುದೇ ಗುಪ್ತಚರ ಮಾಹಿತಿಯೂ ಇದ್ದಿರಲಿಲ್ಲ ಎಂದಿದ್ದಾರೆ.
Anti-Cheating ಬ್ರಾ ಡಿಸೈನ್ ಮಾಡಿದ ಜಪಾನ್ ಸಂಶೋಧಕ, ಫಿಂಗರ್‌ಪ್ರಿಂಟ್ ಇದ್ರೆ ಮಾತ್ರೆ ಓಪನ್ ಆಗುತ್ತೆ!