
ಕ್ಯಾನ್‌ಬೆರಾ(ನ.21): ಒಂದು ಸುಳ್ಳು ಏನೆಲ್ಲಾ ಅನಾಹುತಗಳಿಗೆ ಕಾರಣವಾಗುತ್ತೆ ಎಂಬುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೊಂದು ಇರ್ಲಿಕ್ಕಿಲ್ಲ. ವ್ಯಕ್ತಿಯೊಬ್ಬನ ಸುಳ್ಳಿನಿಂದಾಗಿ ಇಡೀ ಸೌತ್ ಅಸ್ಟ್ರೇಲಿಯಾದಲ್ಲಿ 6 ದಿನಗಳ ಲಾಕ್‌ಡೌನ್ ವಿಧಿಸಲಾದ ಘಟನೆ ನಡೆದಿದೆ.
"
ಕೊರೋನಾವೈರಸ್ ವಿರುದ್ಧ ಆಸ್ಟ್ರೇಲಿಯಾ ಅಕ್ಷರಶ: ಸಮರವನ್ನೇ ಸಾರಿದೆ. ಪ್ರತಿಯೊಂದು ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸುತ್ತಿದೆ. ಆ ಹಿನ್ನೆಲೆಯಲ್ಲಿ ಕಾಂಟಾಕ್ಟ್ ಟ್ರೇಸಿಂಗ್‌ಗೆ ಈಗಲೂ ಬಹಳ ಒತ್ತುಕೊಟ್ಟು ಕ್ರಮಕೈಗೊಳ್ಳಲಾಗುತ್ತಿದೆ. ಕಾಂಟಾಕ್ಟ್ ಟ್ರೇಸಿಂಗ್ ತಂಡಕ್ಕೆ ವ್ಯಕ್ತಿಯೊಬ್ಬ ನೀಡಿದ ಸುಳ್ಳು ಮಾಹಿತಿ ಲಾಕ್‌ಡೌನ್‌ಗೆ ಕಾರಣವಾಗಿದೆ.
ಸೌತ್ ಆಸ್ಟ್ರೇಲಿಯಾದಲ್ಲಿರುವ ಪಿಝ್ಝಾ ಔಟ್‌ಲೆಟ್ ಸಿಬ್ಬಂದಿಗೆ ಕೊರೋನಾ ದೃಢಪಟ್ಟಿತ್ತು. ತಾನು ಕೂಡಾ ಆ ಶಾಪ್‌ಗೆ ಒಮ್ಮೆ ಸಣ್ಣ ಭೇಟಿ ಕೊಟ್ಟಿದ್ದೆ, ಎಂದು ಕೊರೋನಾ ಸೋಂಕು ದೃಢಪಟ್ಟ ವ್ಯಕ್ತಿಯೊಬ್ಬ ಹೇಳಿದ್ದ.
ಒಂದು ಸಣ್ಣ ಭೇಟಿಯಿಂದಾಗಿ ಕೊರೋನಾ ಹರಡಿದೆ, ಈ ಕೊರೋನಾ ಅಷ್ಟೊಂದು ಡೇಂಜರಸ್ ಸ್ವರೂಪ ಪಡೆದುಕೊಂಡಿದೆ ಎಂದು ಭಾವಿಸಿದ ಅಧಿಕಾರಿಗಳು 6 ದಿನಗಳ ಲಾಕ್‌ಡೌನ್ ಘೋಷಿಸಿದ್ದರು.
ಆದರೆ ಮತ್ತಷ್ಟು ವಿಚಾರಣೆ ಬಳಿಕ, ಆ ವ್ಯಕ್ತಿ ಆ ಪಿಝ್ಝಾ ಶಾಪ್‌ನಲ್ಲೇ ಕೆಲ ದಿನ ಕೆಲಸ ಮಾಡಿದ್ದ, ಹಾಗಾಗಿ ಕೊರೋನಾ ತಗುಲಿದೆ ಎಂದು ತಿಳಿದುಬಂದಿದೆ. ಒಂದು ಸುಳ್ಳು, ಇಡೀ ಸೌತ್ ಆಸ್ಟ್ರೇಲಿಯಾ ಜನರ ವ್ಯಾಪಾರ-ವಹಿವಾಟು, ನೆಮ್ಮದಿಯನ್ನು ಕಂಗೆಡಿಸಿದ್ದು ಸುಳ್ಳಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ