ಪ್ರಾಣಿಗಳು ತುಂಟಾಟದ ಸಾಕಷ್ಟು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಪ್ರಾಣಿಗಳ ವಿಡಿಯೋಗಳು ಯಾವಾಗಲೂ ನಮ್ಮ ಮನಸ್ಸಿಗೆ ಮುದ ನೀಡಿ ಮುಖದಲ್ಲಿ ಮಂದಹಾಸ ಮೂಡಿಸುತ್ತವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಚಿಂಪಾಂಜಿಯೊಂದು ಸ್ಟೈಲ್ ಆಗಿ ಜೀನ್ಸ್ ಪ್ಯಾಂಟ್ ಧರಿಸಿ ಯುವಕನಂತೆ ಪೋಸ್ ಕೊಡುತ್ತಿದೆ. ಜೊತೆಗೆ ಉಯ್ಯಾಲೆಯಲ್ಲಿ ಕುಳಿತು ಯುವತಿಯನ್ನು ತಬ್ಬಿಕೊಂಡು ಮುತ್ತಿಕುತ್ತಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿಂಪಾಜಿಯ ಚೇಷ್ಟೆಗೆ ದಂಗಾಗಿದ್ದಾರೆ.
ಕೇವಲ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಅಪಾರ ಪರೀತಿಯನ್ನು ತೋರುತ್ತವೆ ಎಂಬುದಕ್ಕೆ ನಮ್ಮಲ್ಲಿ ಹಲವು ನಿದರ್ಶನಗಳಿವೆ. ಅದೇ ರೀತಿ ಇಲ್ಲಿ ಚಿಂಪಾಜಿ ಯುವತಿ ಮೇಲೆ ತನ್ನ ಪ್ರೀತಿ ತೋರುತ್ತಿದೆ. ಚಿಂಪಾಂಜಿಗಳು ಕೇವಲ ಮುದ್ದು ಮಾತ್ರವಲ್ಲ, ಮನುಷ್ಯರಿಗೆ ಅಪಾರವಾದ ಪ್ರೀತಿಯನ್ನು ನೀಡುತ್ತವೆ. ಇದಕ್ಕೆ ಈ ವಿಡಿಯೋ ಸಾಕ್ಷಿ. ಯುವಕರಂತೆ ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುವ ಚಿಂಪಾಂಜಿ ಉಯ್ಯಾಲೆಯಾಡುತ್ತಿರುತ್ತದೆ. ಉಯ್ಯಾಲೆಯ ಮೇಲೆ ನಿಂತು ಯುವತಿಗೆ ಪೋಸ್ ಕೊಡುವ ಈ ಚಿಂಪಾಜಿ ಅದರಲ್ಲೇ ಕುಳಿತು ಸಮೀಪದಲ್ಲಿ ಕುಳಿತ ಯುವತಿಗೆ ಮುತ್ತಿಕ್ಕುತ್ತದೆ. ಅಲ್ಲದೇ ಆಕೆಯನ್ನು ತಬ್ಬಿಕೊಳ್ಳುತ್ತದೆ. ಇದು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಸೆರೆಯಾದ ದೃಶ್ಯವಾಗಿದ್ದು, ಸೌಮ್ಯ ಚಂದ್ರಶೇಖರ್ ಎಂಬುವವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು 5.3 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಚಿಂಪಾಜಿ ಜಂಟಲ್ ಮ್ಯಾನ್ ರೀತಿ ಯುವತಿಯ ಕೈಗೆ ಕಿಸ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಬೇರ್ಪಟ್ಟ ಚಿಂಪಾಜಿ ಸಹೋದರರು ಒಂದಾದ ಕ್ಷಣ
ಮನುಷ್ಯರಂತೆ ಪ್ರಾಣಿಗಳು ಕೂಡ ಸಂಬಂಧವನ್ನು ತುಂಬಾ ಸುಂದರವಾಗಿ ನಿಭಾಯಿಸುತ್ತವೆ. ಅವರಿಗೂ ಕೂಡ ಅಕ್ಕ ತಮ್ಮ ಅಮ್ಮ ಅಪ್ಪ ಎಂಬ ಅನುಬಂಧಗಳಿವೆ. ಅದಕ್ಕೆ ನಮ್ಮಲ್ಲಿ ಸಾಕಷ್ಟು ಉದಾಹರಣೆಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿ ಪಕ್ಷಿಗಳು ಪ್ರೀತಿ ತೋರುವ ತಮ್ಮ ಸಹವರ್ತಿಗಳಲ್ಲಿ ಪ್ರೇಮದಿಂದ ವರ್ತಿಸುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಅದೇ ರೀತಿ ಬೇರ್ಪಟ್ಟಿದ್ದ ಎರಡು ಸಹೋದರ ಚಿಂಪಾಜಿಗಳು ಮೊದಲ ಬಾರಿ ಒಂದಾದಾಗ ಪರಸ್ಪರ ಹೃದಯ ತುಂಬಿ ಭಾವುಕವಾಗಿ ಮುದ್ದಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
4 ವರ್ಷದಿಂದ ಚಿಂಪಾಂಜಿ ಜೊತೆ ಅಫೇರ್, ಮಹಿಳೆ ಮೃಗಾಲಯ ಪ್ರವೇಶಕ್ಕೆ ನಿಷೇಧ!
ಬಿಟ್ಟಿಂಗ್ ಬಿಡೆನ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದ್ದು, ನೋಡುಗರು ಈ ಚಿಂಪಾಜಿಗಳ ಪ್ರೀತಿ ನೋಡಿ ಭಾವುಕರಾಗಿದ್ದಾರೆ. ಇವೆರಡು ಚಿಂಪಾಂಜಿ ಮರಿಗಳನ್ನು ಸೆರೆಯಿಂದ ರಕ್ಷಿಸಲಾಗಿದೆ. ಈ ಇಬ್ಬರು ಸಹೋದರರನ್ನು ಎರಡು ವಿಭಿನ್ನ ಸ್ಥಳಗಳಲ್ಲಿ ಚಿಕಿತ್ಸೆಗಾಗಿ ಪ್ರತ್ಯೇಕಿಸಲಾಗಿತ್ತು. ಅವರು ಚೇತರಿಸಿಕೊಂಡ ನಂತರ ಮತ್ತೆ ಒಂದಾಗಿದ್ದಾರೆ ಎಂದು ವಿಡಿಯೋ ಪೋಸ್ಟ್ ಮಾಡಿ ಶೀರ್ಷಿಕೆ ನೀಡಲಾಗಿದೆ. ಕುಟುಂಬದಿಂದ ದೂರವಾದವರಿಗೆ ಕುಟುಂಬದ ಬೆಲೆ ಏನು ಎನ್ನುವುದರ ಅರಿವಿರುತ್ತೆ. ಅದೇ ರೀತಿ ಬೇರ್ಪಟ್ಟ ಚಿಂಪಾಜಿಗಳೆರಡು ತುಂಬಾ ಪ್ರೀತಿಯಿಂದ ಒಂದನ್ನೊಂದು ತಬ್ಬಿಕೊಳ್ಳುತ್ತಿವೆ. ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ನೋಡುಗರು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಾಯದ ಮೇಲೆ ಕೀಟದ ಲೇಪನ ಹಾಕಿದ ಚಿಂಪಾಂಜಿ
ಕೆಲ ತಿಂಗಳ ಹಿಂದೆ ತಾಯಿ ಚಿಂಪಾಜಿಯೊಂದು ತನ್ನ ಮಗ ಚಿಂಪಾಜಿಗೆ ಆಗಿದ್ದ ಗಾಯದ ಮೇಲೆ ಕೀಟದ ಲೇಪನವನ್ನು ಹಚ್ಚಿದ್ದು, ಇದರ ವಿಡಿಯೋ ಎರಡು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಓಝೌಗಾ ಚಿಂಪಾಂಜಿ ಯೋಜನೆಯ ಸಂಶೋಧಕರು ಇದನ್ನು ಪತ್ತೆ ಮಾಡಿದ್ದರು. ಬುದ್ಧಿವಂತರೆನಿಸಿರುವ ಮನುಷ್ಯರಾದ ನಾವು ಗಾಯಗೊಂಡರೆ, ಮೊದಲು ಮಾಡುವ ಕೆಲಸ ಬ್ಯಾಂಡೇಜ್, ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ನಂಜುನಿರೋಧಕ ದ್ರವವನ್ನು ಗಾಯದ ಮೇಲೆ ಸಿಂಪಡಿಸಿ ಸ್ವಚ್ಛಗೊಳಿಸಿ ಬ್ಯಾಂಡೇಜ್ ಕಟ್ಟುವುದು ಸಾಮಾನ್ಯ. ಆದರೆ ಚಿಂಪಾಜಿಗಳು ಕೂಡ ಅದನ್ನೇ ಮಾಡುತ್ತಿವೆ. ಆದರೆ ಅವರು ನಂಜು ನಿವಾರಕ ಔಷಧದ ಬದಲು ಕೀಟವನ್ನು ಲೇಪನವಾಗಿ ಬಳಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ ಚಿಂಪಾಂಜಿಯೊಂದು ತನ್ನ ಮಗನ ಕಾಲಿನಲ್ಲಾದ ಗಾಯಕ್ಕೆ ಮೊದಲ ಬಾರಿಗೆ ಅಪರಿಚಿತ ಕೀಟವೊಂದನ್ನು ಅರೆದು ಹಚ್ಚುವ ವಿಡಿಯೋ ಇದಾಗಿದೆ. ಓಝೌಗಾ ಚಿಂಪಾಂಜಿ ಯೋಜನೆಯ ಸಂಶೋಧಕರು ಇದನ್ನು ಸೆರೆ ಹಿಡಿದಿದ್ದಾರೆ.
ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಚಿಂಪಾಂಜಿ, ಮಂಗ ಜಪ್ತಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ