ಪ್ಯಾಲೆಸ್ತೇನಿಯನ್ನರ ಕಲ್ಲುತೂರಾಟ, ಜೆರುಸಲೇಂನ ಮಸೀದಿಗೆ ನುಗ್ಗಿದ ಇಸ್ರೇಲ್ ಪೊಲೀಸ್!

By Santosh NaikFirst Published Apr 22, 2022, 7:29 PM IST
Highlights


ಯಹೂದಿಗಳು ಮತ್ತು ಮುಸ್ಲಿಮರಿಗೆ ಪವಿತ್ರವಾದ ಜೆರುಸಲೆಮ್ ಪವಿತ್ರ ಸ್ಥಳವಾದ ಅಲ್ ಅಕ್ಸಾ ಮಸೀದಿಯ ಬಳಿ ಶುಕ್ರವಾರ ಇಸ್ರೇಲಿ ಪೊಲೀಸರು ಮತ್ತು ಪ್ಯಾಲೆಸ್ತೀನ್ ಯುವಕರು ನಡುವೆ ಘರ್ಷಣೆ ನಡೆದಿದೆ. ಇದರ ಬೆನ್ನಲ್ಲಿಯೇ ಇಸ್ರೇಲ್ ಪೊಲೀಸರು ಸಂಪೂರ್ಣ ಭದ್ರತಾ ವ್ಯವಸ್ಥೆಯೊಂದಿಗೆ ಅಲ್ ಅಕ್ಸಾ ಮಸೀದಿಗೆ ನುಗ್ಗಿದ್ದಾರೆ.
 

ಟೆಲ್ ಅವೀವ್ (ಏ.22): ಯಹೂದಿಗಳು (Jews) ಮತ್ತು ಮುಸ್ಲಿಮರಿಗೆ  (Muslims) ಪವಿತ್ರ ಸ್ಥಳವಾದ ಸೂಕ್ಷ್ಮ ಜೆರುಸಲೇಂನ ಪವಿತ್ರ ಸ್ಥಳದ (Holy Site) ಬಳಿ ಪ್ಯಾಲಿಸ್ತೇನಿ (Palestinians ) ಯುವಕರು ಮತ್ತೆ ಕಲ್ಲು ತೂರಾಟ ನಡೆಸಿದ್ದರಿಂದ, ಜೆರುಸಲೇಂ ಬಳಿಯ ಅಲ್ ಅಕ್ಸಾ ಮಸೀದಿಗೆ (al Aqsa mosque ) ಸಂಪೂರ್ಣ ಭದ್ರತೆಯೊಂದಿಗೆ ಇಸ್ರೇಲ್ ಪೊಲೀಸ್ ನುಗ್ಗಿದೆ.

ಯಹೂದಿಗಳು ಮತ್ತು ಮುಸ್ಲಿಮರಿಗೆ ಪವಿತ್ರವಾದ ಸ್ಥಳದಲ್ಲಿ ಹೊಸದಾಗಿ ಹಿಂಸಾಚಾರ ನಡೆದಿದೆ. ಇಸ್ರೇಲ್ ತಾತ್ಕಾಲಿಕವಾಗಿ ಯಹೂದಿ ಭೇಟಿಗಳನ್ನು ನಿಲ್ಲಿಸಿದ ಹೊರತಾಗಿಯೂ ಈ ಹಿಂಸಾಚಾರ ನಡೆದಿದೆ. ಪವಿತ್ರ ಸ್ಥಳಕ್ಕೆ ಯಹೂದಿಗಳ ಭೇಟಿಯನ್ನು ಪ್ಯಾಲಿಸ್ತೇನಿಯನ್ನರು ಪ್ರಚೋದನೆಯನ್ನಾಗಿ ನೋಡುತ್ತಾರೆ. ಘರ್ಷಣೆಗಳು ಕಡಿಮೆಯಾಗುವ ಮುನ್ನ ಎರಡು ಡಜನ್ ಗಿಂತೂ ಹೆಚ್ಚು ಪ್ಯಾಲಿಸ್ತೇನಿಯನ್ನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ವೈದ್ಯರು ತಿಳಿಸಿದ್ದಾರೆ.

ಇಸ್ರೇಲ್‌ನೊಳಗೆ ಮಾರಣಾಂತಿಕ ದಾಳಿಗಳು ಮತ್ತು ಆಕ್ರಮಿತ ಪಶ್ಚಿಮ ದಂಡೆಯಲ್ಲಿನ ಬಂಧನಗಳ ಬೆನ್ನಲ್ಲಿಯೇ ಪ್ಯಾಲಿಸ್ತೇನಿಯನ್ನರು ಹಾಗೂ ಇಸ್ರೇಲ್ ಪೊಲೀಸರು ನಿರಂತರವಾಗಿ ಜೆರೆಸಲೇಂನ ಸ್ಥಳದಲ್ಲಿ ಘರ್ಷಣೆ ನಡೆಸುತ್ತಿದ್ದಾರೆ. ಇಸ್ಲಾಮಿಕ್ ಉಗ್ರಗಾಮಿ ಗುಂಪು ಹಮಾಸ್‌ನಿಂದ ನಿಯಂತ್ರಿಸಲ್ಪಡುವ ಗಾಜಾ ಪಟ್ಟಿಯಿಂದ ಮೂರು ರಾಕೆಟ್‌ಗಳನ್ನು ಈಗಾಗಲೇ ಇಸ್ರೇಲ್‌ಗೆ ಹಾರಿಸಲಾಗಿದೆ.

ಅಲ್ ಅಕ್ಸಾ ಮಸೀದಿಯ ಕಂಪೌಂಡ್ ನ ಬಳಿ ಇತ್ತೀಚೆಗೆ ನಡೆದ ಹಿಂಸಾಚಾರದ ಬಳಿಕ ಈ ಸಂಘರ್ಷವು ವ್ಯಾಪಕವಾಗುವ ಭಯವನ್ನು ಹುಟ್ಟುಹಾಕಿದೆ. ಒಂದು ವರ್ಷದ ಹಿಂದೆ ಇದೇ ರೀತಿಯ ಘಟನೆಯ ಬಳಿಕ ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ 11 ದಿನಗಳ ಭೀಕರ ಯುದ್ಧ ನಡೆದಿತ್ತು. ಹಿರಿಯ ವಿದೇಶಾಂಗ ಇಲಾಖೆಯ ಅಧಿಕಾರಿ ಯೆಲ್ ಲೆಂಪರ್ಟ್ ನೇತೃತ್ವದ ಅಮೆರಿಕದ ನಿಯೋಗವು ಈ ವಾರ ಮಧ್ಯಪ್ರಾಚ್ಯ ಪ್ರವಾಸವನ್ನು ಕೈಗೊಂಡಿತು. 

ಗುರುವಾರ ಇಸ್ರೇಲಿ ಅಧಿಕಾರಿಗಳನ್ನು ಭೇಟಿಯಾದ ಅಮೆರಿಕದ ರಾಯಭಾರಿಗಳು "ಪೂರ್ವ ಜೆರುಸಲೆಮ್‌ನ ಪವಿತ್ರ ಸ್ಥಳಗಳಲ್ಲಿ ಐತಿಹಾಸಿಕ ಯಥಾಸ್ಥಿತಿಯನ್ನು ಎತ್ತಿಹಿಡಿಯುವ ಪ್ರಾಮುಖ್ಯತೆ ಮತ್ತು ಇಸ್ರೇಲ್‌ನಲ್ಲಿ ರಾಕೆಟ್‌ಗಳ ಸ್ವೀಕಾರಾರ್ಹವಲ್ಲದ ಗುಂಡಿನ ದಾಳಿ" ಎಂದು ಒತ್ತಿ ಹೇಳಿದರು. ಅಲ್ ಅಕ್ಸಾ ಮಸೀದಿಯು ಇಸ್ಲಾಂ ಧರ್ಮದಲ್ಲಿ ಮೂರನೇ ಪವಿತ್ರ ಸ್ಥಳವಾಗಿದೆ ಮತ್ತು ಇದನ್ನು ಯಹೂದಿಗಳು ಪೂಜಿಸುತ್ತಾರೆ.

ಕರ್ನಾಟಕದ ನವೋದ್ಯಮ ಬೆಳೆವಣಿಗೆಗೆ ಮೆಚ್ಚುಗೆ: ಐಟಿ-ಬಿಟಿ ಸಚಿವರನ್ನು ಭೇಟಿಯಾದ ಇಸ್ರೇಲ್ ನಿಯೋಗ

ಜೆರುಸಲೇಂನ ಪವಿತ್ರ ಸ್ಥಳದಲ್ಲಿ ಮುಸ್ಲೀಮರು ರಂಜಾನ್ ಅನ್ನು ಆಚರಿಸಿದರೆ, ಯಹೂದಿಗಳು ಪಾಸೋವರ್ ಅನ್ನು ಆಚರಿಸುತ್ತಾರೆ. ಕ್ರಿಶ್ಚಿಯನ್ನರು ಈ ಸ್ಥಳದಲ್ಲಿ ಈಸ್ಟರ್ ಅನ್ನು ಆಚರಣೆ ಮಾಡುವ ಕಾರಣ ಇದು ಪ್ರಸಿದ್ಧ ಕ್ಷೇತ್ರ ಎನಿಸಿಕೊಂಡಿದೆ.

ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಗೆ ಕೋವಿಡ್ ಪಾಸಿಟಿವ್, ಭಾರತ ಪ್ರವಾಸ ಅನುಮಾನ!

ಭದ್ರತಾ ಪರಿಸ್ಥಿತಿಯಿಂದಾಗಿ ವಾಷಿಂಗ್ಟನ್ ತನ್ನ ರಾಯಭಾರಿ ಕಚೇರಿಯ ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ರಾತ್ರಿಯ ವೇಳೆ ಓಲ್ಡ್ ಸಿಟಿಗೆ ಭೇಟಿ ನೀಡುವುದನ್ನು ನಿಷೇಧಿಸಿದೆ. ಪ್ಯಾಲಿಸ್ತೇನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರು ಗುರುವಾರ "ಇಸ್ರೇಲ್ ಆಕ್ರಮಣವನ್ನು ನಿಲ್ಲಿಸುವಂತೆ" ಅಮೆರಿಕ ರಾಯಭಾರಿಗಳನ್ನು ಒತ್ತಾಯಿಸಿದ್ದಾರೆ ಎಂದು ಪ್ಯಾಲೆಸ್ತೀನ್ ಅಧಿಕಾರಿ ಹುಸೇನ್ ಅಲ್ ಶೇಖ್ ಹೇಳಿದ್ದಾರೆ. 1967 ರ ಅರಬ್-ಇಸ್ರೇಲಿ ಯುದ್ಧದ ನಂತರ ಪೂರ್ವ ಜೆರುಸಲೆಮ್ ಅನ್ನು ಆಕ್ರಮಿಸಿಕೊಂಡಿರುವ ಇಸ್ರೇಲ್, "ಹಿಂಸಾಚಾರವನ್ನು ತಡೆಗಟ್ಟಲು ಮತ್ತು ಪ್ರಾರ್ಥನೆಯನ್ನು ಸಾಮಾನ್ಯ ರೀತಿಯಲ್ಲಿ ಮುಂದುವರಿಸಲು ಮಾತ್ರ" ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ. ಇಸ್ರೇಲ್ ಪೊಲೀಸ್, ಅಲ್‌ ಅಕ್ಸಾ ಮಸೀದಿಯ ಪ್ರದೇಶದಲ್ಲಿ ರಬ್ಬರ್ ಬುಲೆಟ್ ಗಳು ಹಾಗೂ ಅಶ್ರುವಾಯು ಪ್ರಯೋಗ ಮಾಡಿದ್ದನ್ನು, ಈ ಸ್ಥಳದ ಉಸ್ತುವಾರಿ ವಹಿಸಿಕೊಂಡಿರುವ ಜೋರ್ಡನ್ ಖಂಡಿಸಿದ್ದು, ಅರಬ್ ದೇಶಗಳ ತುರ್ತು ಸಭೆಗೆ ಅಗ್ರಹಿಸಿತ್ತು. ಅರಬ್ ರಾಷ್ಟ್ರಗಳು ಕೂಡ ಇಸ್ರೇಲಿ ಭದ್ರತಾ ಪಡೆಗಳ ಕ್ರಮಗಳನ್ನು ಖಂಡಿಸಿದ್ದು ಮುಸ್ಲಿಮರಿಗೆ ಮಾತ್ರ ಕಾಂಪೌಂಡ್‌ನಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕೆಂದು ಕರೆ ನೀಡಿದರು.

click me!