ಇಸ್ರೇಲ್ ಹಮಾಸ್ ನಡುವಣ ಯುದ್ಧ 12ನೇ ದಿನಕ್ಕೆ ಕಾಲಿರಿಸಿದೆ. ಈ ಮಧ್ಯೆ ಹಮಾಸ್ ದಾಳಿ ವೇಳೆ ತನ್ನ ಪ್ರಜೆಗಳನ್ನು ರಕ್ಷಿಸಿದ ಭಾರತದ ಇಬ್ಬರು ಕೇರ್ ಟೇಕರ್‌ಗಳಿಗೆ ಇಸ್ರೇಲ್ ರಾಯಭಾರ ಕಚೇರಿ ಧನ್ಯವಾದ ಹೇಳಿದೆ.
ಟೆಲ್ ಅವಿವಾ: ಇಸ್ರೇಲ್ ಹಮಾಸ್ ನಡುವಣ ಯುದ್ಧ 12ನೇ ದಿನಕ್ಕೆ ಕಾಲಿರಿಸಿದೆ. ಈ ಮಧ್ಯೆ ಹಮಾಸ್ ದಾಳಿ ವೇಳೆ ತನ್ನ ಪ್ರಜೆಗಳನ್ನು ರಕ್ಷಿಸಿದ ಭಾರತದ ಇಬ್ಬರು ಕೇರ್ ಟೇಕರ್‌ಗಳಿಗೆ ಇಸ್ರೇಲ್ ರಾಯಭಾರ ಕಚೇರಿ ಧನ್ಯವಾದ ಹೇಳಿದೆ. ಇಸ್ರೇಲ್‌ನಲ್ಲಿ ಕೇರ್ ಗೀವರ್‌ಗಳಾಗಿ ಕೆಲಸ ಮಾಡುತ್ತಿದ್ದ ಭಾರತದ ಕೇರಳ ಮೂಲದ ಇಬ್ಬರು ಮಹಿಳೆಯರು ಹಮಾಸ್ ದಾಳಿಯ ವೇಳೆ ಇಸ್ರೇಲ್‌ನ ನಾಗರಿಕರನ್ನು ರಕ್ಷಿಸಿ ಧೈರ್ಯ ಮೆರೆದಿದ್ದು, ಇವರನ್ನು ಈಗ ಭಾರತದಲ್ಲಿರುವ ಇಸ್ರೇಲ್‌ನ ರಾಯಭಾರ ಕಚೇರಿಯ ಅಧಿಕಾರಿಗಳು 'ಇಂಡಿಯನ್ ಸೂಪರ್ ವುಮನ್' ಎಂದು ಕರೆದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆ ರಕ್ಷಣಾ ಕಾರ್ಯದ ವೀಡಿಯೋವನ್ನು ಕೂಡ ಇಸ್ರೇಲ್ ಎಂಬೆಸಿ ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ಆರೈಕೆದಾರರಲ್ಲಿ ಒಬ್ಬರು ಬಾಗಿಲಿನ ಹಿಡಿಕೆಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಹಮಾಸ್ ಉಗ್ರರು ಅಲ್ಲಿನ ನಾಗರಿಕನ್ನು ತಲುಪದಂತೆ ತಡೆಯುವ ದೃಶ್ಯವಿದೆ.
ಕೇರಳದ ಸಬಿತಾ ಹಾಗೂ ಮೀರಾ ಮೋಹನನ್ ಎಂಬುವವರೇ ಹಮಾಸ್ ಉಗ್ರರಿಂದ ಇಸ್ರೇಲ್ ನಾಗರಿಕರನ್ನು ರಕ್ಷಿಸಿದ ಭಾರತೀಯ ವೀರ ನಾರಿಯರು. ಸಬಿತಾ ಹಾಗೂ ಮೀರಾ ಮೋಹನನ್ ಅವರು ಇಸ್ರೇಲ್‌ನ ಕಿಬ್ಜುತ್ ಪ್ರದೇಶದ ನಿರ್ ಓಜ್ ಪ್ರದೇಶದಲ್ಲಿ ಇಸ್ರೇಲ್ ನಿವಾಸಿಯಾದ ವೃದ್ಧ ಮಹಿಳೆ ರಾಹಿಲ್ ಎಂಬುವವರ ಆರೈಕೆ ಕೆಲಸ ಮಾಡುತ್ತಿದ್ದರು. ಈ ರಾಹಿಲ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ನಾನು ಮೂರು ವರ್ಷಗಳಿಂದ ಇಲ್ಲಿ ಗಡಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ನಾವಿಬ್ಬರು ಇಲ್ಲಿ ಮನೆಯಲ್ಲಿ ಕೆಲಸ ಮಾಡುತ್ತಿದ್ದೇವೆ, ಎಎಲ್‌ಎಸ್ ಕಾಯಿಲೆಯಿಂದ ಬಳಲುತ್ತಿರುವ ವಯಸ್ಸಾದ ಮಹಿಳೆಯನ್ನು ನೋಡಿ ಕೊಳ್ಳುತ್ತಿದ್ದೇವೆ. ಇಲ್ಲಿ ನಾನು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಸಂಜೆ 6:30 ರ ಸುಮಾರಿಗೆ ನಾವು ಹೊರಡಬೇಕಾಗಿತ್ತು. ಆದರೆ ಅಷ್ಟು ಹೊತ್ತಿಗೆ ಸೈರನ್ ಕೇಳಿ ಸುರಕ್ಷತಾ ಕೊಠಡಿಗೆ ಓಡಿಹೋದರು. ಅದು (ಸೈರನ್) ನಿರಂತರವಾಗಿತ್ತು ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.
ಇನ್ನೂ ಹೆಣ ಬೀಳೋದಿದೆ, ಎಲ್ಲ ಒಟ್ಟಿಗೆ ಹೂಳ್ತೀವಿ.. ಇಸ್ರೇಲ್ ಮಹಿಳಾ ಯೋಧೆಯ ಕಿಡಿನುಡಿ
ಈ ವೇಳೆ ರಾಹೆಲ್ ಅವರ ಮಗಳು ನಮಗೆ ಕರೆ ಮಾಡಿ ಪರಿಸ್ಥಿತಿ ನಮ್ಮ ಕೈಲಿಲ್ಲ ಎಂದು ಹೇಳಿದರು, ನಮಗೆ ಏನು ಮಾಡಬೇಕೆಂದು ತಿಳಿದಿರಲಿಲ್ಲ. ಅವರು ಮುಂಭಾಗ ಮತ್ತು ಹಿಂಬದಿಯ ಬಾಗಿಲುಗಳನ್ನು ಲಾಕ್ ಮಾಡುವಂತೆ ಹೇಳಿದರು. ಅವರು ನೆಲದ ಮೇಲೆ ಹೆಚ್ಚು ಹಿಡಿತ ಹೊಂದಲು ತಮ್ಮ ಚಪ್ಪಲಿಗಳನ್ನು ತೆಗೆದರು. ಇದಾಗಿ ಕೆಲವೇ ನಿಮಿಷಗಳಲ್ಲಿ, ಭಯೋತ್ಪಾದಕರು ನಮ್ಮ ಮನೆಗೆ ನುಗ್ಗಿ, ಗುಂಡು ಹಾರಿಸುವುದು ಕೇಳಿಸಿತ್ತು ಮನೆಯ ಗಾಜುಗಳು ಒಡೆದವು. ಮಗಳಿಗೆ ಕರೆ ಮಾಡಿದಾಗ ಆಕೆ ಬಾಗಿಲನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಹೇಳಿದಳು, ನಾವು ಬಾಗಿಲುಗಳನ್ನು ಹಿಡಿದು ನಾಲ್ಕೈದು ಗಂಟೆಗಳ ಕಾಲ ನಿಂತೆವು. ಸುಮಾರು 7.30ರವರೆಗೂ ಉಗ್ರರು ಮನೆಯಲ್ಲೇ ಇದ್ದರು. ಅವರು ಒಂದೇ ಸಮನೇ ಬಾಗಿಲನ್ನು ತೆಗೆಯಲು ಯತ್ನಿಸುತ್ತಿದ್ದರು. ಆದರೆ ನಾವು ಬಾಗಿಲನ್ನು ಹಿಡಿದಿಡಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಆದರೆ ಅವರು ಬಾಗಿಲಿಗೆ ಹೊಡೆಯುತ್ತಾ ಅದರ ಮೇಲೆ ಗುಂಡು ಹಾರಿಸಿದರು ಎಂದು ಸಬಿತಾ ಹೇಳಿಕೊಂಡಿದ್ದಾರೆ.
ಗಾಜಾ ಆಸ್ಪತ್ರೆ ಮೇಲೆ ದಾಳಿಯಿಂದ ಭುಗಿಲೆದ್ದ ವಿವಾದ, ಅರಬ್ ಜೊತೆ ಬೈಡೆನ್ ಮಾತುಕತೆ ರದ್ದು!
ಹಮಾಸ್ ಉಗ್ರರು ಎಲ್ಲವನ್ನೂ ನಾಶಪಡಿಸಿದರು ಇತ್ತ ಹೊರಗೆ ಏನಾಗುತ್ತಿದೆ ಎಂಬುದು ನಮಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದರು. ಕೆಲವು ಗಂಟೆಗಳ ನಂತರ, ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಗುಂಡಿನ ಸದ್ದು ಕೇಳಿಸಿತು. ನಮ್ಮನ್ನು ರಕ್ಷಿಸಲು ಇಸ್ರೇಲಿ ಸೈನ್ಯ ಬಂದಿದೆ ಎಂದು ಮನೆಯ ಹಿರಿಯರಾದ ಶ್ಮುಲಿಕ್ ನಮಗೆ ತಿಳಿಸಿದರು. ಅವರು ಹೊರಗೆ ಹೋಗಿ ನೋಡಿದಾಗ ಎಲ್ಲವೂ ಸರ್ವನಾಶವಾಗಿತ್ತು. ಅವರು ಎಲ್ಲವನ್ನು ದೋಚಿದ್ದರು, ಮೀರಾಳ ಪಾಸ್‌ಪೋರ್ಟ್ ಕೂಡ ಅವರು ಕಸಿದುಕೊಂಡಿದ್ದರು. ನನ್ನ ಬಳಿ ಇದ್ದ ಎಮರ್ಜೆನ್ಸಿ ಬ್ಯಾಗನ್ನು ಅವರು ಕಸಿದುಕೊಂಡಿದ್ದರು. ನಾವು ಎಂದಿಗೂ ಭಯೋತ್ಪಾದಕ ದಾಳಿಯನ್ನು ನಿರೀಕ್ಷಿಸಿರಲಿಲ್ಲ ಆದರೆ ಕ್ಷಿಪಣಿಗಳು ಬೀಳುತ್ತವೆ ಎಂಬುದು ನಮಗೆ ತಿಳಿದಿತ್ತು ಮತ್ತು ಅದು ಸಂಭವಿಸಿದಾಗ ನಾವು ಸುರಕ್ಷತಾ ಕೋಣೆಗೆ ಹೋಗುತ್ತಿದ್ದೆವು. ಅದು ಮುಗಿದ ನಂತರ ನಾವು ಹಿಂತಿರುಗುತ್ತಿದ್ದೆವು. ಆದರೆ ಆ ದಿನ , ನಮಗೆ ಏನನ್ನೂ ಮಾಡಲು ಸಮಯವಿರಲಿಲ್ಲ ಎಂದು ಸಬೀತಾ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಆಸ್ಪತ್ರೆ ಮೇಲೆ ದಾಳಿಗೆ 500 ಬಲಿ: ಇಸ್ರೇಲ್ ಪ್ರಧಾನಿ ಮಹಾ ಸುಳ್ಳುಗಾರ: ಪ್ಯಾಲೇಸ್ತೇನ್ ರಾಯಭಾರಿ ಆಕ್ರೋಶ
ಇದರ ಜೊತೆಗೆ ಬುಲೆಟ್‌ನಿಂದ ಸಂಪೂರ್ಣ ತೂತುಬಿದ್ದ ಬಾಗಿಲು ಹಾಗೂ ಗೋಡೆಯ ಚಿತ್ರಗಳನ್ನು ಕೂಡ ಅವರು ಹಂಚಿಕೊಂಡಿದ್ದಾರೆ. ಈ ಪೋಸ್‌ನ್ನು ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಅಧಿಕೃತ ಟ್ವಿಟ್ಟರ್ ಖಾತೆ ಶೇರ್ ಮಾಡಿದ್ದು, ಈ ಇಬ್ಬರು ಭಾರತೀಯ ನಾರಿಯರಿಗೆ ಧನ್ಯವಾದ ಹೇಳಿದ್ದಾರೆ. ಇವರು ಭಾರತೀಯ ಸೂಪರ್ ವುಮೆನ್, ಕೇರಳದ ಆರೈಕೆದಾರರಾದ ಸಬಿತಾ ಮಾತನ್ನು ಆಲಿಸಿ, ತಮ್ಮ ಸಹಕೆಲಸಗಾತಿ ಮೀರಾ ಮೋಹನನ್ ಅವರು ಬಾಗಿಲಿನ ಹಿಡಿಕೆಯನ್ನು ಹಿಡಿದುಕೊಳ್ಳುವ ಮೂಲಕ ಮತ್ತು ಹಮಾಸ್‌ನಿಂದ ಇಸ್ರೇಲಿ ನಾಗರಿಕರನ್ನು ಹೇಗೆ ರಕ್ಷಿಸಿದರು ಎಂಬುದನ್ನು ಹೇಳಿಕೊಂಡಿದ್ದಾರೆ ಎಂದು ಬರೆದುಕೊಂಡಿದೆ.
भारतीय वीरांगनाएं ! 🇮🇳🇮🇱
मूलतः केरला की रहने वाली सबिता जी, जो अभी इजराइल में सेवारत हैं, बता रही हैं कि कैसे इन्होने और मीरा मोहन जी ने मिलकर इसरायली नागरिकों कि जान बचाई। हमास आतंकवादी हमले के दौरान इन वीरांगनाओं ने सेफ हाउस के दरवाजे को खुलने ही नहीं दिया क्योंकि आतंकवादी… pic.twitter.com/3vu9ba4q0d