
ವಾಷಿಂಗ್ಟನ್(ಜ.08): ಇರಾಕ್‌ನಲ್ಲಿರುವ ತನ್ನ ಸೇನಾ ನೆಲೆಗಳ ಮೇಲೆ ಇರಾನ್ ನಡೆಸಿರುವ ಕ್ಷಿಪಣಿ ದಾಳಿಯನ್ನು ಖಂಡಿಸಿರುವ ಅಮೆರಿಕ, ನಮ್ನನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕದಂತೆ ಎಚ್ಚರಿಕೆ ನೀಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ನಾವು ಇರಾನ್‌ನೊಂದಿಗೆ ಯುದ್ಧ ಆರಂಭಿಸಲ್ಲ, ಬದಲಿಗೆ ಮುಗಿಸುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಇರಾನ್ ಮಿಸೈಲ್ ದಾಳಿಗೆ 80 'ಅಮೆರಿಕನ್ ಭಯೋತ್ಪಾದಕರ' ಸಾವು?: ಏನಾಗಿಲ್ಲ ಎಂದ ಟ್ರಂಪ್!
ಇರಾನ್‌ನೊಂದಿಗೆ ಯುದ್ಧ ಆರಂಭಿಸುವ ಯಾವುದೇ ಇರಾದೆ ಅಮೆರಿಕಕ್ಕೆ ಇಲ್ಲ. ಆದರೆ ಯುದ್ಧವಾದರೆ ಅದಕ್ಕೆ ತಾರ್ಕಿಕ ಅಂತ್ಯ ಕಾಣಿಸುವತ್ತ ಅಮೆರಿಕ ಗಮನಹರಿಸಿದೆ ಎಂದು ಎಸ್ಪರ್ ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಮಿಲಿಟರಿ ಶಕ್ತಿಯ ಅರಿವಿರದ ಇರಾನ್, ಕ್ಷಿಪಣಿ ದಾಳಿಯ ಮೂಲಕ ನಮ್ಮನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕಿದೆ. ಯುದ್ಧ ಆರಂಭಿಸುವುದು ಇರಾನ್ ಬಯಕೆಯಾದರೆ ಯುದ್ಧ ಮುಗಿಸುವುದು ಅಮೆರಿಕದ ಬಯಕೆ ಎಂದು ಎಸ್ಪರ್ ನುಡಿದಿದ್ದಾರೆ.
ಇದೇ ವೇಳೆ ಇರಾಕ್‌ನಿಂದ ಅಮೆರಿಕದ ಸೇನಾಪಡೆಗಳನ್ನು ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದಿರುವ ಎಸ್ಪರ್, ಇರಾಕ್ ಸಂಸತ್ತಿನಲ್ಲಿ ಈ ಕುರಿತು ಕೈಗೊಂಡ ನಿರ್ಣಯದಲ್ಲಿ ಸ್ಪಷ್ಟತೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ