ಇಸ್ರೇಲ್ ರಾಜತಾಂತ್ರಿಕನ ವಜಾ: ಗಾಜಾಪಟ್ಟಿ ಕ್ಲೀನ್ ಸ್ವಿಪ್‌ ಮಾಡುವ ಇಸ್ರೇಲ್‌ ಯತ್ನಕ್ಕೆ ಅಮೆರಿಕಾದಿಂದಲೂ ವಿರೋಧ

By Anusha Kb  |  First Published Oct 17, 2023, 9:52 AM IST

 ಅಕ್ಟೋಬರ್‌ 7 ರಂದು ಹಮಾಸ್‌ ಉಗ್ರರು ನೆಲ, ಜಲ ವಾಯು ಮಾರ್ಗದ ಮೂಲಕ ಇಸ್ರೇಲ್ ಮೇಲೆ ದಾಳಿ ನಡೆಸಿ ಮಾರಣಹೋಮ ನಡೆಸಿದಾಗ ಇಸ್ರೇಲ್ ಪರ ನಿಂತಿದ್ದ ಬಹುತೇಕ ಪಾಶ್ಚಾತ್ಯ ರಾಷ್ಟ್ರಗಳು ಈಗ ಇಸ್ರೇಲ್‌ಗೆ  ವಿರೋಧ ವ್ಯಕ್ತಪಡಿಸುತ್ತಿವೆ.


ನವದೆಹಲಿ: ಆಕ್ಟೋಬರ್‌ 7 ರಂದು ಹಮಾಸ್‌ ಉಗ್ರರು ನೆಲ, ಜಲ ವಾಯು ಮಾರ್ಗದ ಮೂಲಕ ಇಸ್ರೇಲ್ ಮೇಲೆ ದಾಳಿ ನಡೆಸಿ ಮಾರಣಹೋಮ ನಡೆಸಿದಾಗ ಇಸ್ರೇಲ್ ಪರ ನಿಂತಿದ್ದ ಬಹುತೇಕ ಪಾಶ್ಚಾತ್ಯ ರಾಷ್ಟ್ರಗಳು ಈಗ ಇಸ್ರೇಲ್‌ಗೆ  ವಿರೋಧ ವ್ಯಕ್ತಪಡಿಸುತ್ತಿವೆ. ಅದರ ಭಾಗವಾಗಿ ಈಗ ಕೊಲಂಬಿಯಾ ಸರ್ಕಾರ ಇಸ್ರೇಲ್ ರಾಜತಾಂತ್ರಿಕ ಅಧಿಕಾರಿಯನ್ನು ವಜಾಗೊಳಿಸಿದ್ದು,  ದೇಶ ಬಿಟ್ಟು ಹೋಗುವಂತೆ ಹೇಳಿದೆ.  ನಾವು ನರಹತ್ಯೆ ಅಥವಾ ನರಮೇಧವನ್ನು ಬೆಂಬಲಿಸುವುದಿಲ್ಲ, ನಾವು ಇಸ್ರೇಲ್‌ನೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಸಸ್ಥಗಿತಗೊಳಿಸುತ್ತೇವೆ ಇದಕ್ಕಾಗಿ ನಾವು ಅವರ ರಾಜತಾಂತ್ರಿಕ ಅಧಿಕಾರಿಯನ್ನು ಅಮಾನತು ಮಾಡುತ್ತೇವೆ ಎಂದು ಕೊಲಂಬಿಯಾ ಸರ್ಕಾರ ಹೇಳಿದೆ. 

“ನಾವು ಇಸ್ರೇಲ್‌ನೊಂದಿಗಿನ (Israel) ವಿದೇಶಿ ಸಂಬಂಧಗಳನ್ನು ಸ್ಥಗಿತಗೊಳಿಸಬೇಕಾದರೆ, ನಾವು ಅವರನ್ನು ಅಮಾನತುಗೊಳಿಸುತ್ತೇವೆ. ನಾವು ನರಮೇಧಗಳನ್ನು (Genocide)  ಬೆಂಬಲಿಸುವುದಿಲ್ಲ. ಕೊಲಂಬಿಯಾದ ಅಧ್ಯಕ್ಷರನ್ನು ಅವಮಾನಿಸಲಾಗುವುದಿಲ್ಲ. ಕೊಲಂಬಿಯಾದ ಇಸ್ರೇಲಿ ರಾಯಭಾರಿ ಗಾಲಿ ದಗನ್ ಅವರು ನರಮೇಧಕ್ಕೆ  ಕನಿಷ್ಠ ಕ್ಷಮೆ ಕೇಳಿ ದೇಶ ತೊರೆಯಬೇಕು ಎಂದು ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರು ಹೇಳಿದ್ದಾರೆ. ಹಮಾಸ್ ದಾಳಿಯ (Hamas Attack) ನಂತರ ಇಸ್ರೇಲ್ ಗಾಜಾಪಟ್ಟಿಯಲ್ಲಿ ನಡೆಸಿದ ಆಕ್ರಮದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು. 

Tap to resize

Latest Videos

4 ದಿಕ್ಕುಗಳಿಂದ ಇಸ್ರೇಲ್ ಸುತ್ತುವರಿದ ಶತ್ರು ರಾಷ್ಟ್ರಗಳು: ಗಾಜಾ ಸಿರಿಯಾ ಲೆಬನಾನ್‌ ಮೂಲಕ ದಾಳಿ

ಕೊಲಂಬಿಯಾದ ಅಧ್ಯಕ್ಷ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯನ್ನು ನಾಜಿಗಳು (Nazi) ಯಹೂದಿಗಳಿಗೆ (Jewis) ನೀಡಿದ ಚಿತ್ರಹಿಂಸೆ ಹಾಗೂ ನರಮೇಧಕ್ಕೆ ಹೋಲಿಸಿದ್ದರು, ಇದಾದ ನಂತರ ಪೆಟ್ರೋ ಬಗ್ಗೆ ಇಸ್ರೇಲ್‌ ರಾಜತಾಂತ್ರಿಕ ಅಧಿಕಾರಿ ಆಲಿ ದಗನ್ (Ali dagan) ಅಸಮಾಧಾನ ವ್ಯಕ್ತಪಡಿಸಿದ್ದರು. ಇದಾದ ನಂತರ ಈ ಬೆಳವಣಿಗೆ ನಡೆದಿದೆ. ಪ್ರಜಾಪ್ರಭುತ್ವದಲ್ಲಿ ಜನರು ನಾಜಿಸಂ ಅನ್ನು ಅಂತಾರಾಷ್ಟ್ರೀಯ  ಮಟ್ಟದಲ್ಲಿ ಪುನರ್‌ ಆರಂಭಿಸಲು ಸಮ್ಮತ್ತಿಸುವುದಿಲ್ಲ, ಗಾಜಾವನ್ನು ಸಂತ್ರಸ್ತರ ಕ್ಯಾಂಪ್ ಆಗಿ ಪರಿವರ್ತಿಸುವುದನ್ನು  ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರ ಒಪ್ಪುವುದಿಲ್ಲ ಎಂದು ಅವರು ಹೇಳಿದ್ದರು. ಇದರ ಜೊತೆಗೆ ಜನಾಂಗೀಯ ಹತ್ಯೆಗಳನ್ನು ಬೆಂಬಲಿಸುವುದಿಲ್ಲ ಎಂದ ಪೆಟ್ರೋ ಇದಕ್ಕಾಗಿ ಕೊಲಂಬಿಯಾ ಇಸ್ರೇಲ್‌ನೊಂದಿಗಿನ ವಿದೇಶಿ ಸಂಬಂಧಗಳನ್ನು ಸ್ಥಗಿತಗೊಳಿಸುತ್ತದೆ ಎಂದು ಹೇಳಿದರು. 

ಇಸ್ರೇಲ್ ಪ್ಯಾಲೇಸ್ತೇನ್ ಯುದ್ಧ: ಹಮಾಸ್ ಉಗ್ರರಿಗೆ ಚೀನಾದಿಂದ ಶಸ್ತ್ರಾಸ್ತ್ರ ಪೂರೈಕೆ?

ಮತ್ತೊಂದೆಡೆ ಯುದ್ಧ ಆರಂಭವಾದ ವೇಳೆ ಇಸ್ರೇಲ್‌ಗೆ ಟ್ಯಾಂಕರ್, ಹಾಗೂ ಯುದ್ದೋಪಕರಣಗಳನ್ನು ನೀಡಿದ ಬೆಂಬಲಿಸಿದ್ದ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಕೂಡ ಈಗ ಇಸ್ರೇಲ್‌ನ ಗಾಜಾಪಟ್ಟಿಯ ಕ್ಲೀನ್ ಸ್ವಿಪ್‌ ಯತ್ನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಾಜಾ ಪಟ್ಟಿ ಪ್ರದೇಶದ ಮೇಲೆ ಭೂದಾಳಿ ನಡೆಸಿ ಅದರ ವಶಕ್ಕೆ ಇಸ್ರೇಲ್‌ ಸಜ್ಜಾಗಿದೆ ಎಂಬ ವರದಿಗಳ ನಡುವೆಯೇ, ಗಾಜಾ ವಶದ ಯತ್ನವನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ವಿರೋಧಿಸಿದ್ದಾರೆ. ಉಗ್ರರನ್ನು ಸದೆಬಡಿಯುವ ಉದ್ದೇಶದಿಂದ ಸಂಪೂರ್ಣ ದೇಶ ಹಾಳು ಮಾಡುವುದು ತಪ್ಪು ನಿರ್ಧಾರ. ಗಾಜಾ಼ ಮೇಲೆ ದಾಳಿ ಮಾಡುವಾಗ ಇಸ್ರೇಲ್‌ ಯುದ್ಧ ನೀತಿ ಗಮನದಲ್ಲಿಟ್ಟುಕೊಳ್ಳಬೇಕು. ಗಾಜಾಕ್ಕೆ ಇಸ್ರೇಲ್‌ ನೀರಿನ ಪೂರೈಕೆಯನ್ನೂ ನಿಲ್ಲಿಸಿದ್ದು ಬಹಳ ಅಮಾನವೀಯ ಕೃತ್ಯ. ಜೊತೆಗೆ ಗಾಜಾ ಪ್ರದೇಶವನ್ನು ಮರು ಆಕ್ರಮಿಸುವ ಇಸ್ರೇಲ್‌ ನಿರ್ಧಾರ ತಪ್ಪು ಎಂದಿದ್ದಾರೆ.

ಐರನ್‌ ಡೋಮ್‌ ಬಳಿಕ ಇಸ್ರೇಲ್‌ನಿಂದ ಐರನ್‌ ಬೀಮ್‌ ವ್ಯವಸ್ಥೆ?

ಈ ಮೂಲಕ ಪಾಶ್ಚಾತ್ಯ ರಾಷ್ಟ್ರಗಳು ಮಾನವೀಯತೆಯ ಹೆಸರಲ್ಲಿ ಇಬ್ಬಗೆಯ ನೀತಿ ತೋರುತ್ತಿದ್ದು, ಇದು ಇಸ್ರೇಲ್ ಅನ್ನು ಸಂಕಷ್ಟಕ್ಕೆ ದೂಡಿದೆ. 

BREAKING: 🇮🇱 🇨🇴 Colombia EXPELLED the ambassador and told the ambassador to "apologize and leave the country.”

“If we have to suspend foreign relations with Israel, we will suspend them. We do not support genocides. The president of Colombia will not be insulted.” pic.twitter.com/5XgtyJDIxi

— Israel & Palestine War (@IsraelHamasWarr)

ಅಮೆರಿಕದಲ್ಲಿ ಮುಸ್ಲಿಂ ಬಾಲಕನ ಕೊಲೆ

ಚಿಕಾಗೊ: ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಯುದ್ಧದಿಂದ ಪ್ರೇರಿತಗೊಂಡ ವ್ಯಕ್ತಿಯೊಬ್ಬ 6 ವರ್ಷದ ಓರ್ವ ಮುಸ್ಲಿಂ ಬಾಲಕನನ್ನು ಕೊಲೆ ಮಾಡಿ, ಮಹಿಳೆಯೋರ್ವಳ ಮೇಲೆ ತೀವ್ರ ಹಲ್ಲೆ ನಡೆಸಿರುವ ಘಟನೆ ಅಮೆರಿಕದಲ್ಲಿ ಷಿಕಾಗೊದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಜೋಸೆಫ್‌ ಎಂ. ಕ್ಜುಬಾ (71) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಷಿಕಾಗೋ ಬಳಿಯ ಪ್ಲೇನ್‌ಫೀಲ್ಡ್ ಟೌನ್‌ಶಿಪ್‌ನಲ್ಲಿರುವ ಮನೆಯಲ್ಲಿ ಬಾಲಕ ಮತ್ತು 31 ವರ್ಷದ ಮಹಿಳೆಗೆ ಆರೋಪಿಯು ಚಾಕುವಿನಿಂದ ಹತ್ತಾರು ಬಾರಿ ಚುಚ್ಚಿ ಹಲ್ಲೆ ನಡೆಸಿದ್ದಾನೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬಾಲಕ ಸಾವನ್ನಪ್ಪಿ, ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!