ಐರನ್‌ ಡೋಮ್‌ ಬಳಿಕ ಇಸ್ರೇಲ್‌ನಿಂದ ಐರನ್‌ ಬೀಮ್‌ ವ್ಯವಸ್ಥೆ?

ತನ್ನತ್ತ ತೂರಿ ಬರುವ ಕ್ಷಿಪಣಿ ಅಥವಾ ರಾಕೆಟ್‌ಗಳಂಥ ಚಲಿಸುವ ಸ್ಫೋಟಕಗಳನ್ನು ಶಕ್ತಿಯುತ ಲೇಸರ್ ಕಿರಣಗಳಿಂದ ನಾಶಪಡಿಸುವ ‘ಐರನ್‌ ಬೀಮ್‌’ ವಾಯುರಕ್ಷಣಾ ವ್ಯವಸ್ಥೆಯೇ ಇಸ್ರೇಲ್‌ನ ಹೊಸ ಸಂಭಾವ್ಯ ಸಮರ ಸಾಧನವಾಗಿದೆ. ಇದು ಹಾಲಿ ‘ಐರನ್‌ ಡೋಮ್‌’ ವ್ಯವಸ್ಥೆಗಿಂತ ಕೊಂಚ ಭಿನ್ನವಾಗಿದೆ.

Missile rocket destruction system by laser beam after Iron Dome Technology Israel prepared Iron Beam system akb

ಟೆಲ್‌ ಅವಿವ್‌: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಸೋಮವಾರ 10 ನೇ ದಿನಕ್ಕೆ ಕಾಲಿಟ್ಟಿರುವ ನಡುವೆಯೇ ಇಸ್ರೇಲಿ ರಕ್ಷಣಾ ಪಡೆಗಳು ಯುದ್ಧಭೂಮಿಯಲ್ಲಿ ಲೇಸರ್ ಶಸ್ತ್ರಾಸ್ತ್ರಗಳನ್ನು ನಿಯೋಜಿಸಬಹುದು ಎಂಬ ಮಾಹಿತಿ ಹೊರಬಿದ್ದಿದೆ. ತನ್ನತ್ತ ತೂರಿ ಬರುವ ಕ್ಷಿಪಣಿ ಅಥವಾ ರಾಕೆಟ್‌ಗಳಂಥ ಚಲಿಸುವ ಸ್ಫೋಟಕಗಳನ್ನು ಶಕ್ತಿಯುತ ಲೇಸರ್ ಕಿರಣಗಳಿಂದ ನಾಶಪಡಿಸುವ ‘ಐರನ್‌ ಬೀಮ್‌’ ವಾಯುರಕ್ಷಣಾ ವ್ಯವಸ್ಥೆಯೇ ಇಸ್ರೇಲ್‌ನ ಹೊಸ ಸಂಭಾವ್ಯ ಸಮರ ಸಾಧನವಾಗಿದೆ. ಇದು ಹಾಲಿ ‘ಐರನ್‌ ಡೋಮ್‌’ ವ್ಯವಸ್ಥೆಗಿಂತ ಕೊಂಚ ಭಿನ್ನವಾಗಿದೆ.

ಇದನ್ನು ಮೊದಲು 2025ರಲ್ಲಿ ಸೇನಾ ಸೇವೆಗೆ ಪರಿಚಯಿಸಲು ನಿರ್ಧರಿಸಲಾಗಿತ್ತು. ಆದರೆ ಯುದ್ಧದ ಪ್ರಾರಂಭದ ನಂತರ , ಇಸ್ರೇಲಿ ರಕ್ಷಣಾ ಸಚಿವಾಲಯವು ಅದನ್ನು ಶೀಘ್ರವಾಗಿ ನಿಯೋಜಿಸಲು ಚಿಂತಿಸುತ್ತಿದೆ. ಇಸ್ರೇಲಿ ಪಡೆಗಳು ಈಗ ಐರನ್ ಬೀಮ್‌ನ ನಿಯೋಜನೆಗೆ ಸಿದ್ಧತೆ ತೀವ್ರಗೊಳಿಸಿದ್ದು, ಪರೀಕ್ಷೆಗಳನ್ನು ಆರಂಭಿಸುತ್ತಿವೆ ಎಂದ ಪಾಶ್ಚಾತ್ಯ ಮಾಧ್ಯಮವೊಂದು ವರದಿ ಮಾಡಿದೆ.

ಪ್ಯಾಲೆಸ್ತಿನ್ ರಾಯಭಾರ ಅಧಿಕಾರಿ ಭೇಟಿಯಾಗಿ ಬೆಂಬಲ ಘೋಷಿಸಿದ ವಿಪಕ್ಷ ಸಂಸದರು!

ಐರನ್ ಬೀಮ್ ಲೇಸರ್ ಸಿಸ್ಟಮ್ ಎಂದರೇನು?:

ವಿಶ್ವದಲ್ಲಿ ಐರನ್ ಬೀಮ್ ಅನ್ನು ಮೊದಲ ಬಾರಿಗೆ 2014ರಲ್ಲಿ ಅನಾವರಣಗೊಳಿಸಲಾಯಿತು. ಆದರೆ ಇಸ್ರೇಲ್‌ನಲ್ಲಿ ಇನ್ನೂ ಇದನ್ನು ಅಳವಡಿಸಿಕೊಂಡಿಲ್ಲ. ರಫೇಲ್‌ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ನಿರ್ಮಿಸಿದ, ಐರನ್ ಬೀಮ್ ವ್ಯವಸ್ಥೆಯು ‘ಶಸ್ತ್ರಾಸ್ತ್ರ ವಾಯು ರಕ್ಷಣಾ ವ್ಯವಸ್ಥೆ’ಯಾಗಿದ್ದು ಅದು ಶಕ್ತಿಯುತವಾದ ಬೆಳಕಿನ ಕಿರಣಗಳನ್ನು ಹಾರಿಸುತ್ತದೆ. ಇದರಿಂದ ವೈರಿಗಳ ಕ್ಷಿಪಣಿ, ರಾಕೆಟ್‌ನಂಥ ಚಲಿಸುವ ಸ್ಫೋಟಕಗಳು ನಾಶವಾಗ್ತವೆ.

ಇಸ್ರೇಲ್ ದಾಳಿಗೆ ಕಂಗಾಲಾದ ಹಮಾಸ್, ಏರ್‌ಸ್ಟ್ರೈಕ್ ನಿಲ್ಲಿಸಿದರೆ ಒತ್ತೆಯಾಳುಗಳ ಬಿಡುಗಡೆ ಸೂತ್ರ!

ಐರನ್ ಡೋಮ್‌ಗಿಂತ ಐರನ್ ಬೀಮ್ ಹೇಗೆ ಭಿನ್ನ?:

ಐರನ್ ಡೋಮ್ ರಫೇಲ್‌ ಕಂಪನಿ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ನಿರ್ಮಿಸಿದ ಇಸ್ರೇಲ್‌ನ ಸಂಚಾರಿ ವಾಯುರಕ್ಷಣಾ ವ್ಯವಸ್ಥೆಯಾಗಿದೆ. ಇದರ ಜತೆ ಜತೆಗೇ ಐರನ್‌ ಬೀಮ್‌ ಕೂಡ ಕೆಲಸ ಮಾಡಬಹುದು. ಇದು ಐರನ್‌ ಡೋಮ್‌ಗಿಂತ ಅಗ್ಗವಾದ ವ್ಯವಸ್ಥೆ. ಐರನ್‌ ಡೋಮ್‌ನಿಂದ ಹಾರಿಸಲಾಗುವ ಪ್ರತಿ ಪ್ರತಿಬಂಧಕಕ್ಕೆ 60 ಸಾವಿರ ಡಾಲರ್‌ ವೆಚ್ಚವಾಗುತ್ತದೆ. ಆದರೆ ಅದೇ ಐರನ್‌ ನೀಮ್‌ನಿಂದ ಹಾರಿಸುವ ಪ್ರತಿಬಂಧಕಕ್ಕೆ ಕೆಲವೇ ಕೆಲವು ಡಾಲರ್‌ ವೆಚ್ಚವಾಗುತ್ತದೆ. ಐರನ್ ಬೀಮ್, ಐರನ್ ಡೋಮ್‌ಗಿಂತ ಚಿಕ್ಕದಾಗಿದೆ ಮತ್ತು ಹಗುರವಾಗಿರುತ್ತದೆ. ಇದು ಚಲಿಸಲು ಮತ್ತು ಮರೆಮಾಡಲು ಸುಲಭವಾಗಿರುತ್ತದೆ.

ಇಸ್ರೇಲ್ ಯುದ್ಧ: ವೈದ್ಯಕೀಯ ಸೌಲಭ್ಯ ಅನ್ನಾಹಾರವಿಲ್ಲದೇ ಸಾವಿರಾರು ಜನ ಸಾವನ್ನಪ್ಪುವ ಆತಂಕ

ಅನಾನುಕೂಲಗಳು:

ಐರನ್ ಬೀಮ್ ಆರ್ದ್ರ ಸ್ಥಿತಿಯಲ್ಲಿ (ಮಳೆ ವಾತಾವರಣದಲ್ಲಿ) ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಸೂಕ್ತವಾದ ಪರಿಸ್ಥಿತಿಗಳಲ್ಲಿಯೂ ಸಹ, ಗುರಿಯನ್ನು ಹೊಡೆಯುವ ಮೊದಲು ಲೇಸರ್ ಕಿರಣಗಳು ತಮ್ಮ ಸಂಭಾವ್ಯ ಶಕ್ತಿಯ ಶೇ.30ರಿಂದ 40ರಷ್ಟನ್ನು ವಾತಾವರಣದ ತೇವಾಂಶದಿಂದ ಕಳೆದುಕೊಳ್ಳುತ್ತವೆ.  ಐರನ್‌ ಬೀಮ್‌ ಅನ್ನು ಗುರಿಗೆ ನೇರವಾಗಿ ಸಂಯೋಜಿಸಿ ಇಡಬೇಕಾಗುತ್ತದೆ. ಇಲ್ಲದಿದ್ದರೆ ಗುರಿ ತಪ್ಪುತ್ತದೆ. ಆದರೆ ಐರನ್‌ ಡೋಮ್‌ಗೆ ಈ ಸಮಸ್ಯೆ ಇಲ್ಲ. ಐರನ್ ಬೀಮ್ ಬೆಂಕಿ ಉಗುಳುವಾಗ ನಿಧಾನ ಗತಿ ಹೊಂದಿರುತ್ತದೆ. ತನ್ನ ಗುರಿಯನ್ನು ನಾಶಮಾಡುವಾಗ ಸಾಕಷ್ಟು ಶಕ್ತಿಯನ್ನು ರವಾನಿಸಲು 5 ಸೆಕೆಂಡುಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಬೇಕಾಗುತ್ತದೆ.

ಇಸ್ರೇಲಿ ಪ್ರಜೆಗಳನ್ನ ಕೊಲ್ಲಲು ಬಂದ ಹಮಾಸ್ ಜಿಹಾದಿಗಳ ಬಳಿ ಯುನಿಸೆಫ್ ಪ್ರಥಮ ಚಿಕಿತ್ಸಾ ಬ್ಯಾಗ್ ಪತ್ತೆ!

 

Latest Videos
Follow Us:
Download App:
  • android
  • ios