4 ದಿಕ್ಕುಗಳಿಂದ ಇಸ್ರೇಲ್ ಸುತ್ತುವರಿದ ಶತ್ರು ರಾಷ್ಟ್ರಗಳು: ಗಾಜಾ ಸಿರಿಯಾ ಲೆಬನಾನ್‌ ಮೂಲಕ ದಾಳಿ

Published : Oct 17, 2023, 09:03 AM ISTUpdated : Oct 17, 2023, 11:50 AM IST
4 ದಿಕ್ಕುಗಳಿಂದ ಇಸ್ರೇಲ್ ಸುತ್ತುವರಿದ ಶತ್ರು ರಾಷ್ಟ್ರಗಳು:  ಗಾಜಾ ಸಿರಿಯಾ ಲೆಬನಾನ್‌ ಮೂಲಕ ದಾಳಿ

ಸಾರಾಂಶ

ಗಾಜಾಪಟ್ಟಿಯಿಂದ  ನಿವಾಸಿಗಳನ್ನು  ಹೊರಟು ಹೋಗುವಂತೆ ಎಚ್ಚರಿಕೆ ನೀಡಿ ಹಮಾಸ್ ಉಗ್ರರ ಸರ್ವನಾಶಕ್ಕೆ ಶಪಥ ಮಾಡಿರುವ ಇಸ್ರೇಲ್‌ ನಿರ್ಧಾರದಿಂದ ಸುತ್ತಲೂ ಇರುವ ಶತ್ರು ರಾಷ್ಟ್ರಗಳು ಕೆಂಡಾಮಂಡಲವಾಗಿದ್ದು, ಇಸ್ರೇಲ್ ಮೇಲೆ 4 ಕಡೆಗಳಿಂದ ಯುದ್ಧ ಮಾಡಲು ಸನ್ನದ್ಧ ಸ್ಥಿತಿಯಲ್ಲಿ ನಿಂತಿವೆ. 

ಟೆಲ್ ಅವಿವಾ: ಗಾಜಾಪಟ್ಟಿಯಿಂದ  ನಿವಾಸಿಗಳನ್ನು  ಹೊರಟು ಹೋಗುವಂತೆ ಎಚ್ಚರಿಕೆ ನೀಡಿ ಹಮಾಸ್ ಉಗ್ರರ ಸರ್ವನಾಶಕ್ಕೆ ಶಪಥ ಮಾಡಿರುವ ಇಸ್ರೇಲ್‌ ನಿರ್ಧಾರದಿಂದ ಸುತ್ತಲೂ ಇರುವ ಶತ್ರು ರಾಷ್ಟ್ರಗಳು ಕೆಂಡಾಮಂಡಲವಾಗಿದ್ದು, ಇಸ್ರೇಲ್ ಮೇಲೆ 4 ಕಡೆಗಳಿಂದ ಯುದ್ಧ ಮಾಡಲು ಸನ್ನದ್ಧ ಸ್ಥಿತಿಯಲ್ಲಿ ನಿಂತಿವೆ. ಈ ಬಗ್ಗೆ ಇಸ್ರೇಲ್ ಸೇನೆ ಮಾಹಿತಿ ನೀಡಿದೆ. 

ಇಸ್ರೇಲ್‌ನ್ನು ನಾಲ್ಕು ದಿಕ್ಕುಗಳಿಂದ ಸುತ್ತುವರಿದಿರುವ ಶತ್ರು ರಾಷ್ಟ್ರಗಳ ಸೇನೆ ಇಸ್ರೇಲ್ ಸೈನದ (Israel Army) ಮೇಲೆ ದಾಳಿ ನಡೆಸುತ್ತಿದೆ. ಲೆಬನಾನ್ ಗಡಿಯಿಂದ ಇಸ್ರೇಲ್ ಟ್ಯಾಂಕ್ ಮೇಲೆ ದಾಳಿ ನಡೆಸಲಾಗಿದ್ದು, ಈ ದಾಳಿಗೆ ಇಸ್ರೇಲ್ ಅರ್ಟಿಲರಿ ಗನ್ ಮೂಲಕ  ಉತ್ತರ ನೀಡುತ್ತಿದ್ದೆ.  ಹಾಗೆಯೇ ಗಾಜಾ ಪಟ್ಟಿ (Gaza Strip) ಸುತ್ತಮುತ್ತ ಸಿರಿಯಾದವರಿಂದ ದಾಳಿ ನಡೆಯುತ್ತಿದ್ದು ಟೆಲ್ ಅವಿವಾದಲ್ಲೂ ಗುಂಡಿನ ಸದ್ದು ಮೊಳಗುತ್ತಿದೆ. ಕಳೆದ 10 ದಿನಗಳಿಂದ ಹಮಾಸ್ ಉಗ್ರರನ್ನು ಬೆಂಬಲಿಸಿ ನಾನಾ ರೀತಿ ದಾಳಿ ಇಸ್ರೇಲ್ ಮೇಲೆ ನಡೆಯುತ್ತಿದೆ ಎಂದು ಇಸ್ರೇಲ್ ಸೇನೆ ಮಾಹಿತಿ ನೀಡಿದೆ.

ಇಸ್ರೇಲ್ ಪ್ಯಾಲೇಸ್ತೇನ್ ಯುದ್ಧ: ಹಮಾಸ್ ಉಗ್ರರಿಗೆ ಚೀನಾದಿಂದ ಶಸ್ತ್ರಾಸ್ತ್ರ ಪೂರೈಕೆ?

ಹಮಾಸ್‌ ಮೇಲಿನ ದಾಳಿಗೆ ಕೆಂಡಾಮಂಡಲವಾದ  ಇರಾನ್‌ 

ಇತ್ತ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹಮಾಸ್‌ ಪಡೆಯನ್ನು ಧ್ವಂಸ ಮಾಡಿ ಎಂದು ಆದೇಶಿಸಿರುವ ಬೆನ್ನಲ್ಲೇ ಕೆಂಡಾಮಂಡಲವಾಗಿರುವ ಇರಾನ್‌ ತಮ್ಮ ಕೈಗಳೂ ಬಂದೂಕಿನ ಮೇಲೆಯೇ ಇದೆ ಎಂಬುದನ್ನು ಮರೆಯದಿರಿ  ಎಂದು ಎಚ್ಚರಿಸಿದೆ. ಇರಾನ್‌ ನಾಯಕ ಹೊಸೀನ್‌ ಅಮಿರ್‌ ಅಬ್ದುಲ್ಲಾಹೈನ್‌ ಅವರು ಹೇಳಿದ್ದಾರೆ ಎನ್ನಲಾದ ವಿಡಿಯೋನಲ್ಲಿ ಇಸ್ರೇಲ್‌ ದೇಶವು ತನ್ನ ಉಗ್ರತನವನ್ನು ನಿಲ್ಲಿಸದಿದ್ದರೆ ಈ ಪ್ರಾಂತ್ಯದ ಸಮಸ್ತ ದೇಶಗಳು ಒಟ್ಟಾಗಿ ಜ಼ಯೋನಿಸ್ಟರ(ಇಸ್ರೇಲಿಗರ) ಮೇಲೆ ದಾಳಿ ಮಾಡಬೇಕಾಗುತ್ತದೆ. ತಾವು ಕಳೆದ ವಾರ ಕತಾರ್‌ನಲ್ಲಿ ಹಮಾಸ್‌ ನಾಯಕರನ್ನು ಭೇಟಿ ಮಾಡಿದ್ದು, ತಮ್ಮ ಸಹಕಾರವು ಹೀಗೆ ಮುಂದುವರೆಯುತ್ತದೆ ಎಂದು ಭರವಸೆ ಕೊಟ್ಟಿದ್ದೇವೆ ಎಂದು ಎಚ್ಚರಿಸಿದ್ದಾರೆ.

ಐರನ್‌ ಡೋಮ್‌ ಬಳಿಕ ಇಸ್ರೇಲ್‌ನಿಂದ ಐರನ್‌ ಬೀಮ್‌ ವ್ಯವಸ್ಥೆ? 

ಮತ್ತೊಂದೆಡೆ ಹಮಾಸ್‌ ಉಗ್ರರನ್ನು ಒಬ್ಬೊಬ್ಬರಾಗಿಯೇ ಇಸ್ರೇಲ್ ಸೇನೆ ಯಮಪುರಿಗೆ ಅಟ್ಟಿದ್ದು, ಅವರ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ
ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್