ಹಮಾಸ್‌ ಉಗ್ರರು ಪದೇ ಪದೇ ಇಸ್ರೇಲ್ ಮೇಲೆ ದಾಳಿ ಮಾಡೋದ್ಯಾಕೆ? ಯಾಕಿಷ್ಟು ದ್ವೇಷ? ವಿವರ ಇಲ್ಲಿದೆ..

By Vinutha Perla  |  First Published Oct 7, 2023, 3:23 PM IST

ಇಸ್ರೇಲ್ ಮೇಲೆ ಹಮಾಸ್ ಉಗ್ರರು 26/11 ರೀತಿಯಲ್ಲಿ ದಾಳಿ ನಡೆಸಿದ್ದಾರೆ. ಇಸ್ರೇಲ್‌ಗೆ ನುಗ್ಗಿರುವ ಹಮಾಸ್ ಉಗ್ರರು ಇಸ್ರೇಲ್ ಸೈನಿಕರನ್ನು ಕಂಡ ಕಂಡಲ್ಲಿ ಹತ್ಯೆ ಮಾಡುತ್ತಿದ್ದಾರೆ. ಇಷ್ಟಕ್ಕೂ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷಕ್ಕೆ ಕಾರಣವೇನು? ಹಮಾಸ್, ಇಸ್ರೇಲ್ ಮೇಲೆ ದಾಳಿ ಮಾಡ್ತಿರೋದು ಯಾಕೆ? ಇಲ್ಲಿದೆ ಮಾಹಿತಿ.


ಇಸ್ರೇಲ್‌: ಗಾಜಾ ಪಟ್ಟಿಯ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಸುಮಾರು 5,000 ರಾಕೆಟ್‌ಗಳಿಂದ ದಾಳಿ ನಡೆಸಿದ್ದಾರೆ. ಇದರಿಂದ ದಕ್ಷಿಣ ಇಸ್ರೇಲ್‌ನಲ್ಲಿ ಒಬ್ಬ ನಾಗರಿಕ ಮೃತಪಟ್ಟು 16 ಜನ ಗಾಯಗೊಂಡಿದ್ದಾರೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರು 26/11 ರೀತಿಯಲ್ಲಿ ದಾಳಿ ನಡೆಸಿದ್ದಾರೆ. ಮುಂಬೈ ದಾಳಿಗಿಂತ 50 ಪಟ್ಟು ದೊಡ್ಡ ದಾಳಿ ಇದಾಗಿದೆ. ಇಸ್ರೇಲ್‌ಗೆ ಇದು ಅನಿರೀಕ್ಷಿತ ದಾಳಿಯಾಗಿದ್ದು ಆ ದೇಶದ ಸೇನೆಯಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಇಸ್ರೇಲಿ ಸೈನ್ಯವು ದೇಶದ ದಕ್ಷಿಣ ಮತ್ತು ಮಧ್ಯ ಪ್ರದೇಶಗಳಲ್ಲಿ ಸೈರನ್‌ಗಳ ಬಗ್ಗೆ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರನ್ನು ಬಾಂಬ್ ಶೆಲ್ಟರ್‌ಗಳ ಬಳಿ ಇರುವಂತೆ ಮನವಿ ಮಾಡಿಕೊಂಡಿದೆ. ಪ್ಯಾಸ್ತೀನ್‌ ಸಶಸ್ತ್ರ ವಿಭಾಗದ ಹಮಾಸ್‌ ಗುಂಪು ಈ ದಾಳಿಯ ಹಿಂದೆ ಇರೋದಾಗಿ ಹೇಳಿಕೊಂಡಿದ್ದು, ತನ್ನ ಉಗ್ರಗಾಮಿಗಳು 5,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಉಡಾಯಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ

ಆಡಳಿತಾರೂಢ ಹಮಾಸ್ ಉಗ್ರಗಾಮಿ ಗುಂಪು (Terror group) ಯುದ್ಧದ ಆರಂಭವನ್ನು ಘೋಷಿಸುತ್ತಿದ್ದಂತೆ, ಗಾಜಾ ಪಟ್ಟಿಯಲ್ಲಿರುವ ಪ್ಯಾಲೇಸ್ತೇನಿಯನ್ ಉಗ್ರಗಾಮಿಗಳು ದಕ್ಷಿಣ ಇಸ್ರೇಲ್‌ಗೆ ಒಳನುಸುಳುವಿಕೆಯನ್ನು ಪ್ರಾರಂಭಿಸಿದರು. 20 ನಿಮಿಷಗಳ ಮೊದಲ ದಾಳಿಯಲ್ಲಿ 5,000 ಕ್ಷಿಪಣಿಗಳನ್ನು ರಾಷ್ಟ್ರಕ್ಕೆ ಉಡಾಯಿಸಿದರು. ಪ್ರತಿಕ್ರಿಯೆಯಾಗಿ, ಇಸ್ರೇಲ್ ಗಾಜಾದಲ್ಲಿನ ಗುರಿಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿತು.

Tap to resize

Latest Videos

ಇಸ್ರೇಲ್‌ ಮೇಲೆ ದಿಢೀರ್‌ ಯುದ್ಧ ಸಾರಿದ ಹಮಾಸ್‌ ಉಗ್ರರು: 5,000 ಕ್ಕೂ ಹೆಚ್ಚು ರಾಕೆಟ್‌ ಸುರಿಮಳೆ

ಹಮಾಸ್ ಭಯೋತ್ಪಾದಕ ಗುಂಪಿನ ನಾಯಕ ಯಾರು?
ಹಮಾಸ್‌ನ ಮಿಲಿಟರಿ ವಿಭಾಗದ ನಿಗೂಢ ನಾಯಕ ಮೊಹಮ್ಮದ್ ಡೀಫ್ 'ಆಪರೇಷನ್ ಅಲ್-ಅಕ್ಸಾ ಸ್ಟಾರ್ಮ್' ನ್ನು ಘೋಷಿಸಿದರು. 'ಸಹಿಸಿಕೊಂಡಿದ್ದು ಸಾಕು' ಎಂದು ಅವರು ರೆಕಾರ್ಡ್ ಮಾಡಿದ ಸಂದೇಶದಲ್ಲಿ (Message) ಹೇಳಿಕೊಂಡಿದ್ದು, ಯುದ್ಧಕ್ಕೆ ಸೇರಲು ಪ್ಯಾಲೆಸ್ತೀನಿಯರಿಗೆ ಕರೆ ನೀಡಿದರು.

ಹಮಾಸ್ ಭಯೋತ್ಪಾದಕ ಗುಂಪಿನ ಬಗ್ಗೆ ಮಾಹಿತಿ
ಹಮಾಸ್ ಪ್ಯಾಲೇಸ್ಟಿನಿಯನ್ ಸುನ್ನಿ-ಇಸ್ಲಾಮಿಕ್ ಮೂಲಭೂತವಾದಿ, ಉಗ್ರಗಾಮಿ ಮತ್ತು ರಾಷ್ಟ್ರೀಯತಾವಾದಿ ಸಂಘಟನೆಯಾಗಿದೆ. ಇದು ಸಾಮಾಜಿಕ ಸೇವಾ ವಿಭಾಗ, ದಾವಾ ಮತ್ತು ಮಿಲಿಟರಿ ವಿಭಾಗ, ಇಜ್ ಅದ್-ದಿನ್ ಅಲ್-ಕಸ್ಸಮ್ ಬ್ರಿಗೇಡ್ಸ್ ಅನ್ನು ಹೊಂದಿದೆ. ಹಮಾಸ್ ಗುಂಪು 2006 ರಲ್ಲಿ ಪ್ಯಾಲೇಸ್ಟಿನಿಯನ್ ಶಾಸಕಾಂಗ ಚುನಾವಣೆಯಲ್ಲಿ (Election) ಗೆದ್ದಿತು. 2007 ರ ಗಾಜಾ ಕದನದ ನಂತರ ಗಾಜಾ ಪಟ್ಟಿಯ ವಾಸ್ತವಿಕ ಆಡಳಿತದ ಅಧಿಕಾರವಾಯಿತು. ಇದು ಪ್ಯಾಲೇಸ್ಟಿನಿಯನ್ ರಾಷ್ಟ್ರೀಯ ಪ್ರಾಧಿಕಾರದ ಸಂಸತ್ತಿನಲ್ಲಿ ಬಹುಮತವನ್ನು ಹೊಂದಿದೆ.

ಹಮಾಸ್, ಇಸ್ರೇಲ್ ಮೇಲೆ ದಾಳಿ ಮಾಡಿದ್ದು ಯಾಕೆ?
ಗಡಿಪಾರು ಮಾಡಿದ ಹಮಾಸ್ ಕಮಾಂಡರ್ ಸಲಾಹ್ ಅರೋರಿ ಪ್ರಕಾರ ಈ ದಾಳಿಯು ಹೆಚ್ಚುತ್ತಿರುವ ಅಪರಾಧಗಳಿಗೆ ಪ್ರತಿಕ್ರಿಯೆಯಾಗಿದೆ ಎಂದಿದ್ದಾರೆ. ಹೋರಾಟಗಾರರು ಜೆರುಸಲೆಮ್‌ನಲ್ಲಿರುವ ಅಲ್-ಅಕ್ಸಾ ಮಸೀದಿಯನ್ನು ಮತ್ತು ಇಸ್ರೇಲ್ ವಶಪಡಿಸಿಕೊಂಡಿರುವ ಸಾವಿರಾರು ಪ್ಯಾಲೇಸ್ಟಿನಿಯನ್ ಕೈದಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇಸ್ರೇಲ್ ಮಹಿಳೆಯ ವಿವಸ್ತ್ರಗೊಳಿಸಿ ಹಮಾಸ್ ಉಗ್ರರ ದಾಳಿ, ಅಲ್ಲಾಹು ಅಕ್ಬರ್ ಘೋಷಣೆ!

ಒಂದು ದಿನದ ಹಿಂದೆ ಹಮಾಸ್‌, 'ಆಕ್ರಮಣವನ್ನು ಕೊನೆಗೊಳಿಸಲು ಜನರು ಒಂದು ಗೆರೆಯನ್ನು ಎಳೆಯಬೇಕಾಗಿದೆ. ಇಸ್ರೇಲ್ ಇನ್ನೂ ಪ್ಯಾಲೇಸ್ತೀನಿಯನ್ ಪ್ರದೇಶದ ಮೇಲೆ, ವಿಶೇಷವಾಗಿ ಜೆರುಸಲೆಮ್‌ನಲ್ಲಿರುವ ಅಲ್-ಅಕ್ಸಾದ ಪವಿತ್ರ ಸ್ಥಳದ ಸುತ್ತಲೂ ದೌರ್ಜನ್ಯವನ್ನು ನಡೆಸುತ್ತಿದೆ' ಎಂದು ಹೇಳಿತ್ತು. ಇಸ್ರೇಲ್ ಕಳೆದ ಮೂರು ದಶಕಗಳಲ್ಲಿ ಅಲ್ ಅಕ್ಸಾ ಮಸೀದಿ ಸಂಕೀರ್ಣದ ಮೇಲೆ ತನ್ನ ನಿಯಂತ್ರಣವನ್ನು ಬಿಗಿಗೊಳಿಸಿದೆ. ಪ್ಯಾಲೇಸ್ತೀನಿಯನ್ ಪ್ರವೇಶವನ್ನು ನಿರ್ಬಂಧಿಸಿದೆ. ಒಳಗೆ ಹಿಂಸಾತ್ಮಕ ದಾಳಿಗಳನ್ನು ನಡೆಸುತ್ತಿದೆ. 

ಅಲ್-ಅಕ್ಸಾ ಮಸೀದಿ ಕಾಂಪೌಂಡ್‌ನಲ್ಲಿ ಇಸ್ರೇಲಿ ಪಡೆಗಳು ಕಳೆದ ವಾರ ಪ್ಯಾಲೆಸ್ತೀನ್ ಮುಸ್ಲಿಮರ ಮೇಲೆ ದಾಳಿ ಮಾಡಿ, ಅಲ್ಟ್ರಾನ್ಯಾಶನಲಿಸ್ಟ್ ಯಹೂದಿ ಸಂಘಟನೆಗಳಿಗೆ ಪೊಲೀಸ್ ರಕ್ಷಣೆಯಲ್ಲಿ ಪ್ರದೇಶವನ್ನು ಪ್ರವೇಶಿಸಲು ಅವಕಾಶ ಕಲ್ಪಿಸಿತು. ಹಮಾಸ್ ಗುಂಪಿನ ದಾಳಿಗಳಿಗೆ ಪ್ರತಿಕ್ರಿಯೆಯಾಗಿ, ಇಸ್ರೇಲಿ ಸೇನೆಯು ಗಾಜಾ ಪಟ್ಟಿಯಲ್ಲಿರುವ ಹಮಾಸ್ ಸಂಘಟನೆಯ ವಿರುದ್ಧ 'ಆಪರೇಷನ್ ಐರನ್ ಸ್ವೋರ್ಡ್ಸ್'ನ್ನು ಪ್ರಾರಂಭಿಸಿತು.

ಇಸ್ರೇಲ್ ಮತ್ತು ಪ್ಯಾಲೇಸ್ತೀಯನ್‌ ಯುದ್ಧ, ಇಲ್ಲಿಯವರೆಗೆ ಯುದ್ಧದಲ್ಲಿ ಸತ್ತವರೆಷ್ಟು?
2007ರಲ್ಲಿ ಗಾಜಾದಲ್ಲಿ ಹಮಾಸ್ ಅಧಿಕಾರ ವಹಿಸಿಕೊಂಡ ನಂತರ ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳು ಹಲವಾರು ಯುದ್ಧಗಳನ್ನು ನಡೆಸಿದ್ದಾರೆ. ಈ ಹೋರಾಟವು ಈ ವರ್ಷ ಇಲ್ಲಿಯವರೆಗೆ 247 ಪ್ಯಾಲೆಸ್ಟೀನಿಯನ್ನರು, 32 ಇಸ್ರೇಲಿಗಳು ಮತ್ತು ಇಬ್ಬರು ವಿದೇಶಿ ಪ್ರಜೆಗಳ ಜೀವವನ್ನು ಬಲಿ ತೆಗೆದುಕೊಂಡಿದೆ. ಅವರು ಹೋರಾಟಗಾರರು ಮತ್ತು ನಾಗರಿಕರನ್ನು ಒಳಗೊಂಡಿರುತ್ತಾರೆ.

click me!