ರಾಡ್ ತುಂಡಾಗಿ 29 ಅಡಿ ಎತ್ತರದಿಂದ ಕೆಳಗೆ ಬಿದ್ದ ಸರ್ಕಸ್ ಕಲಾವಿದ: ಆಘಾತಕಾರಿ ವೀಡಿಯೋ

Published : Oct 07, 2023, 01:21 PM IST
ರಾಡ್ ತುಂಡಾಗಿ 29 ಅಡಿ ಎತ್ತರದಿಂದ ಕೆಳಗೆ ಬಿದ್ದ ಸರ್ಕಸ್ ಕಲಾವಿದ: ಆಘಾತಕಾರಿ ವೀಡಿಯೋ

ಸಾರಾಂಶ

ಸರ್ಕಸ್ ಮಾಡುತ್ತಿದ್ದ ವೇಳೆ ರಾಡ್ ಕಟ್ಟಾಗಿ ಸರ್ಕಸ್ ಕಲಾವಿದರೊಬ್ಬರು 29 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಆಘಾತಕಾರಿ ಘಟನೆ ಚೀನಾದಲ್ಲಿ ನಡೆದಿದೆ.

ಸರ್ಕಸ್ ಮಾಡುತ್ತಿದ್ದ ವೇಳೆ ರಾಡ್ ಕಟ್ಟಾಗಿ ಸರ್ಕಸ್ ಕಲಾವಿದರೊಬ್ಬರು 29 ಅಡಿ ಎತ್ತರದಿಂದ ಕೆಳಗೆ ಬಿದ್ದ ಆಘಾತಕಾರಿ ಘಟನೆ ಚೀನಾದಲ್ಲಿ ನಡೆದಿದೆ. ಸರ್ಕಸ್‌ ರೀತಿಯ ಟ್ರಪಿಜ್ ಸಾಹಸ ಪ್ರದರ್ಶನ ಎಂದು ಕರೆಯಲ್ಪಡುವ ಈ ಸಾಹಸ ಆಟದ ವೇಳೆ ಅಚಾನಕ್‌ ಆಗಿ ಕಲಾವಿದರು ನಿಂತಿದ್ದ ರಾಡೊಂದು ಕಟ್‌ ಆಗಿ ಒಬ್ಬ ಕೆಳಗೆ ಬಿದ್ದರೆ ಮತ್ತಿಬ್ಬರು ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಈ ಆಘಾತಕಾರಿ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಾರ್ಜ್ ಅಲಾರ್ಕಾನ್ ಕೆಳಗೆ ಬಿದ್ದ ಸಾಹಸ ಕಲಾವಿದ. 

29 ಅಡಿ ಎತ್ತರದಿಂದ ಕೆಳಗೆ ಬಿದ್ದ ಪರಿಣಾಮ ಕಲಾವಿದ  ಜಾರ್ಜ್ ಅಲಾರ್ಕಾನ್ ಅವರಿಗೆ ಗಂಭೀರ ಗಾಯಗಳಾಗಿವೆ. ಇವರು ಸುಮಾರು ಎಂಟು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನೋವನುಭವಿಸಿದ್ದಾರೆ. ಆಗಸ್ಟ್‌ನಲ್ಲಿ ಈ ಘಟನೆ ನಡೆದಿದ್ದು, ಅಲರ್ಕಾನ್ ಅವರು ತಮ್ಮ ಜೊತೆ ಪ್ರದರ್ಶನ ನೀಡುತ್ತಿದ್ದ ಇನ್ನಿಬ್ಬರು ಕಲಾವಿದರು ನಿಂತಿದ್ದ ರಾಡ್ ಮೇಲೆ ಕಾಲಿಟ್ಟಾಗ ಈ ಅವಘಡ ಸಂಭವಿಸಿದೆ ಎಂದು ಡೈಲಿ ಎಕ್ಸ್‌ಪ್ರೆಸ್ ಯುಎಸ್‌  ವರದಿ ಮಾಡಿದೆ. 

ಪುಟ್ಟ ಕಂದನ ಜೀವ ಉಳಿಸಲು ತನ್ನದೇ ಬೋನ್‌ಮ್ಯಾರೋ ನೀಡಿದ ವೈದ್ಯ

ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿರುವ ವೀಡಿಯೋದಲ್ಲಿ ಸೆರೆ ಆಗಿರುವಂತೆ, ಮೇಲೆ ತೂಗುತ್ತಿರುವ ಉಯ್ಯಾಲೆಯಂತಿರುವ ಜೋಕಾಲಿಯಲ್ಲಿ ಅಲರ್ಕಾನ್ ಅವರು ಸರ್ಕಸ್ ಮಾಡುತ್ತಿದ್ದಾರೆ. ಮಧ್ಯದಲ್ಲಿ ಇರುವ ರಾಡ್‌ನ ಆಚೆ ಮೂಲೆಯಲ್ಲಿ ಇಬ್ಬರೂ ಹಾಗೂ ಈಚೆ ಮೂಲೆಯಲ್ಲಿ ಒಬ್ಬರು ಕಲಾವಿದರು ನಿಂತಿದ್ದಾರೆ. ಜೋಕಾಲಿಯಲ್ಲಿ ನೇತಾಡುತ್ತಾ ಅಲರ್ಕಾನ್ ಅವರು ಈ ಕಲಾವಿದರು ನಿಂತಿದ್ದ ರಾಡ್‌ ಮೇಲೆ ಕಾಲಿರುಸುತ್ತಿದ್ದಂತೆ ಅದು ಕೊಂಡಿ ತಪ್ಪಿ ಕೆಳಗೆ ಬೀಳುತ್ತದೆ. ಜೊತೆಗೆ ರಾಡ್ ಮೇಲಿದ್ದ ಓರ್ವ ಸಮೀಪ ಕಂಬವನ್ನು ಹಿಡಿದು ನಿಲ್ಲಲು ಯಶಸ್ವಿಯಾದರೆ ಇತ್ತ ರಾಡ್‌ನ ಮತ್ತೊಂದು ಪಕ್ಕದಲ್ಲಿದ್ದ ಇಬ್ಬರು ಕಲಾವಿದರು ನೇರವಾಗಿ ಕೆಳಗಿರುವ ರಕ್ಷಣಾ ಪರದೆ ಮೇಲೆ ಬೀಳುತ್ತಾರೆ. ಆದರೆ ಅಲರ್ಕಾನ್ ಮಾತ್ರ ದುರಾದೃಷ್ಟವಶಾತ್ ಸೀದಾ ನೆಲದ ಮೇಲೆ ಹೋಗಿ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. 

ಮೇಲಿನಿಂದ ಬಿದ್ದಿದ್ದರಿಂದ ಮೊಣಕಾಲಿಗೆ ತೀವ್ರ ಗಾಯವಾಗಿದ್ದಲ್ಲದೇ ತಲೆಯಲ್ಲಿ ಮೂರು ಭಾಗಗಳಾಗಿದ್ದವು, ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು, 8 ದಿನಗಳ ಚಿಕಿತ್ಸೆಯ ನಂತರ ಗುಣಮುಖರಾದ ಅವರು ಸಂಪೂರ್ಣ ಗುಣವಾಗಲು ಮೂರು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಂಡಿದ್ದರು. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದರು. ಆದರೆ ಘಟನೆ ನಡೆದು 2ನೇ ವಾರ ಕೊನೆಯಾಗುವ ವೇಳೆ ನನ್ನ ಎಡಮೊಣಕಾಲು ಸಂಪೂರ್ಣವಾಗಿ ಊದುಕೊಂಡಿತ್ತು. ಆದರೆ ನನಗೆ ಯಾವುದೇ ನೋವು ಇರಲಿಲ್ಲ ನಾನು ಆರಾಮವಾಗಿ ಓಡಾಡುತ್ತಿದೆ ಎಂದು ಈ ಚೇತರಿಕೆ ನಂತರ ಈ ಕಲಾವಿದ ಹೇಳಿಕೊಂಡಿದ್ದಾರೆ. 

31 ವರ್ಷ ಶಿಕ್ಷೆಗೊಳಗಾಗಿ ಜೈಲಲ್ಲಿರುವ ಇರಾನ್‌ ಮಹಿಳಾ ಹಕ್ಕುಗಳ ಹೋರಾಟಗಾರ್ತಿಗೆ ನೊಬೆಲ್

ಆದರೆ ಗಾಯಗೊಂಡ ಮೂರು ವಾರಗಳ ನಂತರ ಮೊಣಕಾಲಿನ ಜಾಯಿಂಟ್‌ನಲ್ಲಿ ಗಾಯಗಳಿರುವುದು ಗೊತ್ತಾಯಿತು.  ಹೀಗಾಗಿ ಮತ್ತೆ ಮೂರು ತಿಂಗಳು ವಿಶ್ರಾಂತಿಗೆ ಕಳಿಸಿದರು. ಆದರೆ ಅದಕ್ಕೆ ಬೇರೇನೂ ಚಿಕಿತ್ಸೆ ನೀಡಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.  ಆದರೆ ದುಃಖದ ವಿಷಯವೆಂದರೆ ಈತ ಶೀಘ್ರವಾಗಿ ಗೂಣವಾಗುವುದಿಲ್ಲ ಎಂದು ತಿಳಿದು ಸರ್ಕಸ್ ಮ್ಯಾನೇಜ್‌ಮೆಂಟ್ ಸಂಸ್ಥೆ ಇವರನ್ನು ಕೇವಲ ಎರಡು ವಾರಗಳ ಸಂಬಳ ನೀಡಿ ತನ್ನ ಸ್ವಂತ ದೇಶ ಚಿಲಿಗೆ ಕಳುಹಿಸಿದೆ. ಇತ್ತ ಆತನ ಟಿಕೆಟ್ ಹಣಕ್ಕೂ ಸಹೋದ್ಯೋಗಿಗಳೇ ಹಣ ಸಂಗ್ರಹ ಮಾಡಬೇಕಾಯಿತು. 

ಆದರೆ ನಂತರ ಚೀನಾದಿಂದ ಚಿಲಿಗೆ ಹೋಗಿ ವೈದ್ಯರ ಬಳಿ ತಪಾಸಣೆ ಮಾಡಿದಾಗ ಮೊಣಕಾಲಿನ ಒಡಕಿಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ. ಇದರಿಂದ ಅವರು ಮತ್ತಷ್ಟು ಸಂಕಟಕ್ಕೀಡಾಗಿದ್ದಾರೆ. ಚಿಲಿಯ ಪ್ರತಿಭಾನ್ವಿತ ಸರ್ಕಸ್ ಪಟುವಾಗಿದ್ದ ಅಲರ್ಕಾನ್ ಚಿಲಿಯ ಟಾಲ್ಕಾದಿಂದ ಚೀನಾದ ಶಿಲಿನ್‌ನಲ್ಲಿರುವ ಪ್ರಸಿದ್ಧ ಹ್ಯಾಪಿ ಸರ್ಕಸ್‌ಗೆ ಸೇರಲು ನಿರ್ಧರಿಸಿದ್ದರು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!
ಯುಎಇ ಕಠಿಣ ಕಾನೂನು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಶಿಕ್ಷೆ ಪ್ರಮಾಣ ಭಾರೀ ಹೆಚ್ಚಳ!